ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಿಢೀರನೆ ಕುಸಿತ ಕಂಡ ಈರುಳ್ಳಿ ಬೆಲೆ, ಈಗೆಷ್ಟಿದೆ?

|
Google Oneindia Kannada News

ನವದೆಹಲಿ, ಅಕ್ಟೋಬರ್ 3: ಏಕಾಏಕಿ ಗಗನಕ್ಕೇರಿದ್ದ ಈರುಳ್ಳಿ ಬೆಲೆ ಈಗ ಕುಸಿತ ಕಂಡಿದೆ.

ಬೆಲೆ ಏರಿಕೆ ನಿಯಂತ್ರಣಕ್ಕೆ ತರುವ ಸಲುವಾಗಿ ಕೇಂದ್ರ ಸರ್ಕಾರ ರಫ್ತು ನಿಷೇಧಿಸಿದ ಪರಿಣಾಮ ಬೆಲೆ ಕಡಿಮೆಯಾಗಿದೆ.

ಈರುಳ್ಳಿ ದರ ಹೆಚ್ಚಳ: ಫ್ಲಿಪ್‌ಕಾರ್ಟ್‌ನಲ್ಲಿ ರಿಯಾಯಿತಿ ಮಾರಾಟಈರುಳ್ಳಿ ದರ ಹೆಚ್ಚಳ: ಫ್ಲಿಪ್‌ಕಾರ್ಟ್‌ನಲ್ಲಿ ರಿಯಾಯಿತಿ ಮಾರಾಟ

ಸೆಪ್ಟೆಂಬರ್ ವರೆಗೂ ಪ್ರತಿ ಕೆಜಿ ಈರುಳ್ಳಿಯ ಬೆಲೆ ರೂ.51 ಇತ್ತು. ಇದೀಗ ಈರುಳ್ಳಿ ಬೆಲೆಯಲ್ಲಿ ಕುಸಿತ ಕಂಡು ಬಂದ ಹಿನ್ನಲೆಯಲ್ಲಿ ಗ್ರಾಹಕರ ಮುಖದಲ್ಲಿ ಸಂತಸ ಕಂಡು ಬಂದಿದೆ.

ಏಷ್ಯಾದ ಅತಿದೊಡ್ಡ ಸಗಟು ಮಾರುಕಟ್ಟೆಯಾಗಿರುವ ಮಹಾರಾಷ್ಟ್ರದಲ್ಲಿ ನಲ್ಲಿ ಈರುಳ್ಳಿ ಬೆಲೆ ಪ್ರತಿ ಕೆಜಿಗೆ ರೂ.30ಕ್ಕೆ ಇಳಿಕೆಯಾಗಿದೆ.

ಸರ್ಕಾರದಿಂದ ಈರುಳ್ಳಿ ಮಾರಾಟ; 5 ಕೆಜಿ ಮಾತ್ರ ಖರೀದಿ, ದರ 23 ರೂ.ಸರ್ಕಾರದಿಂದ ಈರುಳ್ಳಿ ಮಾರಾಟ; 5 ಕೆಜಿ ಮಾತ್ರ ಖರೀದಿ, ದರ 23 ರೂ.

ಕೇಂದ್ರ ಸರ್ಕಾರ ಕಳೆದ ಭಾನುವಾರ ಈರುಳ್ಳಿ ರಫ್ತು ನಿಷೇಧಿಸಿತ್ತು. ಜೊತೆಗೆ ಮಿತಿಗಿಂತಲೂ ಹೆಚ್ಚು ಪ್ರಮಾಣದಲ್ಲಿ ದಾಸ್ತಾನು ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಆಯಾ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿತ್ತು.

ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಇತ್ತೀಚೆಗೆ ಎದುರಾದ ಪ್ರವಾಹ ಪರಿಸ್ಥಿತಿಯಿಂದಾಗಿ ಈರುಳ್ಳಿ ಪೂರೈಕೆಯಲ್ಲಿ ಅಡಚಣೆಯುಂಟಾಗಿತ್ತು.

ಎಲ್ಲ ಬಗೆಯ ಈರುಳ್ಳಿ ರಫ್ತು ನಿಷೇಧಿಸಿದ ಕೇಂದ್ರ ಸರ್ಕಾರಎಲ್ಲ ಬಗೆಯ ಈರುಳ್ಳಿ ರಫ್ತು ನಿಷೇಧಿಸಿದ ಕೇಂದ್ರ ಸರ್ಕಾರ

ಆಗಸ್ಟ್ ತಿಂಗಳಿನಿಂದಲೂ ಈರುಳ್ಳಿ ದರದಲ್ಲಿ ಭಾರಿ ಏರಿಕೆ ಕಂಡು ಬಂದಿತ್ತು. ಕೆಲವೆಡೆ ಅಪಾರ ಪ್ರಮಾಣದಲ್ಲಿ ದಾಸ್ತಾನು ಇರಿಸಿಕೊಂಡಿದ್ದರಿಂದ ಬೆಲೆ ಹೆಚ್ಚಳವಾಗಿದೆ ಎಂದೂ ಕೂಡ ಹೇಳಲಾಗಿತ್ತು.

ಎಲ್ಲಾ ಬಗೆಯ ಈರುಳ್ಳಿ ರಫ್ತು ನಿಷೇಧ

ಎಲ್ಲಾ ಬಗೆಯ ಈರುಳ್ಳಿ ರಫ್ತು ನಿಷೇಧ

ಎಲ್ಲಾ ಬಗೆಯ ಈರುಳ್ಳಿ ರಫ್ತನ್ನು ಕೇಂದ್ರ ಸರ್ಕಾರ ನಿಷೇಧಿಸಿರುವ ಹಿನ್ನೆಲೆಯಲ್ಲಿ ಈರುಳ್ಳಿ ಬೆಲೆ ಸ್ವಲ್ಪ ಸ್ವಲ್ಪವಾಗಿಯೇ ಇಳಿಕೆ ಕಾಣುತ್ತಿದೆ.

ಈರುಳ್ಳಿಯು ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯಬೇಕು, ಇಲ್ಲಿರುವ ಬೇಡಿಕೆಗೆ ತಕ್ಕ ಹಾಗೆ ಮಾರಾಟವು ಕೂಡ ಇರಬೇಕು ಎನ್ನುವ ಕಾರಣಕ್ಕೆ ಕೇಂದ್ರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.

ರಫ್ತು-ಆಮದು ಸಂಗತಿಗಳನ್ನು ನೋಡಿಕೊಳ್ಳುವರ್ಯಾರು?

ರಫ್ತು-ಆಮದು ಸಂಗತಿಗಳನ್ನು ನೋಡಿಕೊಳ್ಳುವರ್ಯಾರು?

ಡಿಜಿಎಫ್ ಟಿಯು ವಾಣಿಜ್ಯ ಸಚಿವಾಲಯದ ಭಾಗವಾಗಿದ್ದು, ರಫ್ತು- ಆಮದು ಸಂಬಂಧಿತ ಸಂಗತಿಗಳನ್ನು ನೋಡಿಕೊಳ್ಳುತ್ತದೆ. ಸೆಪ್ಟೆಂಬರ್ ಹದಿಮೂರನೇ ತಾರೀಕು ಡಿಜಿಎಫ್ ಟಿಯಿಂದ ಕನಿಷ್ಠ ರಫ್ತು ಬೆಲೆಯನ್ನು ಎಂಟು ನೂರಾ ಐವತ್ತು ಅಮೆರಿಕನ್ ಡಾಲರ್ ಗೆ ನಿಗದಿ ಪಡಿಸಿತ್ತು. ಆ ಮೂಲಕ ರಫ್ತಿನ ಮೇಲೆ ಕಡಿವಾಣ ಬೀಳಬಹುದು ಎಂಬ ಲೆಕ್ಕಾಚಾರ ಇತ್ತು.

ಒಂದು ಸೀರೆ ಕೊಂಡ್ರೆ ಕೆಜಿ ಈರುಳ್ಳಿ ಫ್ರಿ! ಸರ್ಕಾರ ಬೀಳೋದು ಗ್ಯಾರಂಟಿ?ಒಂದು ಸೀರೆ ಕೊಂಡ್ರೆ ಕೆಜಿ ಈರುಳ್ಳಿ ಫ್ರಿ! ಸರ್ಕಾರ ಬೀಳೋದು ಗ್ಯಾರಂಟಿ?

ಒಂದು ಕೆಜಿ ಈರುಳ್ಳಿ ಬೆಲೆ 70ರೂ ತಲುಪಿತ್ತು

ಒಂದು ಕೆಜಿ ಈರುಳ್ಳಿ ಬೆಲೆ 70ರೂ ತಲುಪಿತ್ತು

ಈ ರೀತಿ ಕನಿಷ್ಠ ಬೆಲೆ ನಿಗದಿ ಮಾಡಿದರೆ ಅದಕ್ಕಿಂತ ಕಡಿಮೆ ಬೆಲೆಗೆ ರಫ್ತು ಮಾಡುವಂತಿಲ್ಲ. ದೆಹಲಿ ಹಾಗೂ ದೇಶದ ಇತರ ಭಾಗದಲ್ಲಿ ಕೇಜಿ ಈರುಳ್ಳಿ ಬೆಲೆ ಅರವತ್ತರಿಂದ ಎಂಬತ್ತು ರುಪಾಯಿವರೆಗೂ ಆಗಿತ್ತು. ಈರುಳ್ಳಿ ಬೆಳೆಯುವಂಥ ಮಹಾರಾಷ್ಟ್ರದಂಥ ರಾಜ್ಯಗಳಲ್ಲಿ ನೆರೆ ಸಮಸ್ಯೆ ಆಗಿ, ಈರುಳ್ಳಿ ಉತ್ಪಾದನೆಯಲ್ಲಿ ಕುಸಿತವಾಗಿದ್ದರಿಂದ ಈ ಸ್ಥಿತಿ ಏರ್ಪಟ್ಟಿತು ಎನ್ನಲಾಗಿದೆ.

ಒಂದು ಕೆಜಿ ಈರುಳ್ಳಿಗೆ 30 ರೂ

ಒಂದು ಕೆಜಿ ಈರುಳ್ಳಿಗೆ 30 ರೂ

ಈಗ ಒಂದು ಕೆಜಿ ಈರುಳ್ಳಿ ಬೆಲೆ 30ರೂ.ಗೆ ಇಳಿಕಯಾಗಿದೆ. ಸೆಪ್ಟೆಂಬರ್ ವರೆಗೂ ಪ್ರತಿ ಕೆಜಿ ಈರುಳ್ಳಿಯ ಬೆಲೆ ರೂ.51 ಇತ್ತು. ಇದೀಗ ಈರುಳ್ಳಿ ಬೆಲೆಯಲ್ಲಿ ಕುಸಿತ ಕಂಡು ಬಂದ ಹಿನ್ನಲೆಯಲ್ಲಿ ಗ್ರಾಹಕರ ಮುಖದಲ್ಲಿ ಸಂತಸ ಕಂಡು ಬಂದಿದೆ. ಏಷ್ಯಾದ ಅತಿದೊಡ್ಡ ಸಗಟು ಮಾರುಕಟ್ಟೆಯಾಗಿರುವ ಮಹಾರಾಷ್ಟ್ರದಲ್ಲಿ ನಲ್ಲಿ ಈರುಳ್ಳಿ ಬೆಲೆ ಪ್ರತಿ ಕೆಜಿಗೆ ರೂ.30ಕ್ಕೆ ಇಳಿಕೆಯಾಗಿದೆ.

English summary
India Banned Onion Exports Prices Slightly Come Down,after extended Monsoon downpours delayed harvests and supplies Shrivelled.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X