ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇ 29 ರಿಂದ ಭಾರತ, ಬಾಂಗ್ಲಾದೇಶ ರೈಲು ಮತ್ತೆ ಆರಂಭ

|
Google Oneindia Kannada News

ನವದೆಹಲಿ, ಮೇ 19: ಎರಡು ವರ್ಷಗಳ ನಂತರ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪ್ಯಾಸೆಂಜರ್ ರೈಲು ಸೇವೆ ಪುನಃ ಆರಂಭವಾಗುತ್ತಿದೆ. ಮೇ 29 ರಿಂದ ರೈಲು ಸಂಚಾರ ನಡೆಸಲಿದೆ ಎಂದು ಭಾರತೀಯ ರೈಲ್ವೆ ಹೇಳಿದೆ.

2020ರ ಮಾರ್ಚ್‌ನಲ್ಲಿ ಕೋವಿಡ್‌ 19 ಮೊದಲ ಅಲೆ ಸಂದರ್ಭದಲ್ಲಿ ಮುನ್ನೆಚ್ಚರಿಕೆಯ ಕ್ರಮವಾಗಿ ಕೋಲ್ಕತ್ತಾ ಮತ್ತು ಬಾಂಗ್ಲಾದೇಶ ನಡುವಿನ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು.

ಇದೀಗ ಉಭಯ ದೇಶಗಳ ರೈಲ್ವೆ ಸಚಿವರು ಪ್ಯಾಸೇಂಜರ್‌ ರೈಲುಗಳಿಗೆ ಹಸಿರು ನಿಶಾನೆ ತೋರುವ ಮೂಲಕ ಮತ್ತೆ ರೈಲು ಸೇವೆಗೆ ಚಾಲನೆ ನೀಡಲಿದ್ದಾರೆ. ಭಾರತೀಯ ರೈಲ್ವೆ ಗುರುವಾರ ಈ ಕುರಿತು ಅಧಿಕೃತ ಆದೇಶ ಹೊರಡಿಸಿದೆ.

India Bangladesh Passenger Train Services To Resume From May 29

ಮೇ 29ರಂದು ಬಾಂಗ್ಲಾದೇಶ ಕೋಲ್ಕತ್ತಾ-ಢಾಕಾ ಮೈತ್ರಿ ಎಕ್ಸ್‌ಪ್ರೆಸ್‌ ರೈಲನ್ನು ಭಾರತೀಯ ರೈಲ್ವೆ ಇಲಾಖೆಯಿಂದ ಕೋಲ್ಕತ್ತಾ-ಖುಲ್ನಾ ಬಂಧನ್ ಎಕ್ಸ್‌ಪ್ರೆಸ್‌ ರೈಲುಗಳು ಪುನರಾರಂಭಗೊಳ್ಳಲಿವೆ ಎಂದು ಹೇಳಿದೆ.

ಜೂನ್‌ 1ರಂದು ಎನ್‌ಜೆಪಿ-ಢಾಕಾ ಮಿಥಾಲಿ ಎಕ್ಸ್‌ಪ್ರೆಸ್‌ ಸೇವೆಗಳು ಆರಂಭವಾಗಲಿವೆ. ಬಾಂಗ್ಲಾದೇಶದ ರೈಲ್ವೆ ಸಚಿವರು ರೈಲ್ವೆ ಸೇವೆ ಪುನಾರಾರಂಭದ ದಿನ ಭಾರತಕ್ಕೆ ಬರುವ ನಿರೀಕ್ಷೆಯಿದೆ.

English summary
The train services between Kolkata and Bangladesh will resume from May 29. Train service suspended in the time of Covid-19 pandemic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X