• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಲಂಚ, ಲಂಚ, ಲಂಚ: ಜಾಗತಿಕ ಪಟ್ಟಿಯಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ?

|

ನವದೆಹಲಿ, ನ 21: ವಿಶ್ವದ 194 ದೇಶಗಳ ಪೈಕಿ ಯಾವ ರಾಷ್ಟ್ರದಲ್ಲಿ ಲಂಚಾವತಾರ ತಾಂಡವಾಡುತ್ತಿದೆ, ಯಾವ ದೇಶದಲ್ಲಿ ಇದರ ಪ್ರಮಾಣ ಕಮ್ಮಿಯಿದೆ ಎನ್ನುವುದರ ಬಗ್ಗೆ 2020ರ ಸಾಲಿನ ಜಾಗತಿಕ ಪಟ್ಟಿಯನ್ನು ಟ್ರೇಸ್ ಸಂಸ್ಥೆ ಬಿಡುಗಡೆ ಮಾಡಿದೆ.

ಲಂಚ ನಿಗ್ರಹ ಪ್ರಮಾಣ ಸಂಯೋಜನಾ ಸಂಸ್ಥೆಯಾಗಿರುವ ಟ್ರೇಸ್ ಬಿಡುಗಡೆ ಮಾಡಿರುವ ವರದಿಯ ಪ್ರಕಾರ, ಭಾರತ ಈ ಪಟ್ಟಿಯಲ್ಲಿ 77ನೇ ಸ್ಥಾನದಲ್ಲಿದ್ದು, ಕಳೆದ ವರ್ಷ 78ನೇ ಸ್ಥಾನದಲ್ಲಿತ್ತು. ಉತ್ತರ ಕೊರಿಯಾ, ದಕ್ಷಿಣ ಸುಡಾನ್ ಮುಂತಾದ ದೇಶದಲ್ಲಿ ಲಂಚ ವಿಪರೀತವಾಗಿದೆ.

ಲಂಚ ಪ್ರಕರಣ: ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತೆ ತುಷಾರಮಣಿ ಅಮಾನತು

ವಾಣಿಜ್ಯ ಉದ್ದೇಶಗಳಲ್ಲಿ ಲಂಚದ ಪ್ರಮಾಣ ಯಾವ ಯಾವ ದೇಶದಲ್ಲಿ ಎಷ್ಟಿದೆ ಎನ್ನುವುದರ ಬಗೆಗಿನ ವರದಿ ಇದಾಗಿದೆ. ಲಂಚದ ಪ್ರಮಾಣ ಹೆಚ್ಚಾಗಿರುವ ದೇಶಗಳಲ್ಲಿ, ಉತ್ತರ ಕೊರಿಯಾ, ತುರ್ಕಮೆನಿಸ್ಥಾನ್, ದಕ್ಷಿಣ ಸುಡಾನ್, ವೆನಿಜುವೆಲ, ಎರಿಟೆರಾ ದೇಶಗಳು ಈ ಪಟ್ಟಿಯಲ್ಲಿ ಮಂಚೂಣಿಯಲ್ಲಿವೆ.

ಇನ್ನು, ಲಂಚದ ಪ್ರಮಾಣ ಕಡಿಮೆ ಇರುವ ದೇಶಗಳಲ್ಲಿ ಡೆನ್ಮಾರ್ಕ್, ನಾರ್ವೇ, ಫಿನ್ ಲ್ಯಾಂಡ್, ಸ್ವೀಡನ್, ನ್ಯೂಜಿಲ್ಯಾಂಡ್ ದೇಶಗಳು ಮೊದಲ ಸಾಲಿನಲ್ಲಿವೆ ಎಂದು ಟ್ರೇಸ್ ವರದಿಯಲ್ಲಿ ಹೇಳಲಾಗಿದೆ. 2019ರಲ್ಲಿ ಭಾರತ 48 ಅಂಕಗಳೊಂದಿಗೆ 78ನೇ ಸ್ಥಾನದಲ್ಲಿದ್ದರೆ, 2020ರಲ್ಲಿ 45 ಅಂಕಗಳೊಂದಿಗೆ 77 ನೇ ಸ್ಥಾನದಲ್ಲಿದೆ.

ನಾಲ್ಕು ಅಂಶಗಳನ್ನು ಆಧರಿಸಿ ಈ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಸರಕಾರದೊಂದಿಗಿನ ವ್ಯಾವಹಾರಿಕ ಸಂವಹನ, ಲಂಚ ವಿರೋಧಿ ತಡೆಗಟ್ಟುವಿಕೆ ಮತ್ತು ಜಾರಿ, ಸರಕಾರ ಮತ್ತು ನಾಗರಿಕ ಸೇವೆಯಲ್ಲಿ ಪಾರದರ್ಶಕತೆ ಮತ್ತು ನಾಗರಿಕ ಸಮಾಜದ ಮೇಲ್ವಿಚಾರಣೆಯ ಸಾಮರ್ಥ್ಯ, ಮಾಧ್ಯಮಗಳ ಪಾತ್ರದ ಆಧಾರದ ಮೇಲೆ ಈ ಪಟ್ಟಿ ಸಿದ್ದವಾಗಿದೆ.

ಭಾರತವು ತನ್ನ ನೆರೆಹೊರೆಯ ದೇಶಗಳಾದ ಪಾಕಿಸ್ತಾನ, ಚೀನಾ, ನೇಪಾಳ ಮತ್ತು ಬಾಂಗ್ಲಾದೇಶಗಳಿಗಿಂತ ಉತ್ತಮವಾಗಿದೆ. ಭೂತಾನ್ 37 ಅಂಕಗಳೊಂದಿಗೆ 48ನೇ ಸ್ಥಾನದಲ್ಲಿದೆ. "ವಿಶ್ವ ಬ್ಯಾಂಕ್, ವಿಶ್ವಸಂಸ್ಥೆ ಸೇರಿದಂತೆ, ಸಾರ್ವಜನಿಕ ಹಿತಾಶಕ್ತಿ ಮತ್ತು ಅಂತರಾಷ್ಟ್ರೀಯ ಕಂಪೆನಿಗಳ ಡೇಟಾ ಸಹಯೋಗದಿಂದ ಈ ಪಟ್ಟಿಯನ್ನು ಸಿದ್ದಮಾಡಲಾಗಿದೆ"ಎಂದು ಟ್ರೇಸ್ ಅಧಿಕಾರಿಗಳು ಹೇಳಿದ್ದಾರೆ.

English summary
India At 77th Position In Global Bribery Risk Rankings, Improves By One Spot.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X