ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

JIMEX- 2020: ಭಾರತ ಹಾಗೂ ಜಪಾನ್ ನೌಕಾಪಡೆಯಿಂದ ಜಂಟಿ ತಾಲೀಮು

By ಅನಿಲ್ ಆಚಾರ್
|
Google Oneindia Kannada News

ಭಾರತೀಯ ನೌಕಾ ಸೇನೆ ಹಾಗೂ ಜಪಾನೀಸ್ ಮೆರಿಟೈಮ್ ಸೆಲ್ಫ್ ಡಿಫೆನ್ಸ್ ಫೋರ್ಸ್ (JMSDF) ಹಡಗುಗಳು ಸೇರಿ JIMEX- 2020ರಲ್ಲಿ ಜಂಟಿ ಕಾರ್ಯಾಚರಣೆ ನಡೆಸಿದವು. ಇದು ಭಾರತ- ಜಪಾನ್ ಮೆರಿಟೈಮ್ ದ್ವಿಪಕ್ಷೀಯ ತಾಲೀಮಿನ ನಾಲ್ಕನೇ ಅವರಣಿಕೆ ಆಗಿದೆ. ಸೆಪ್ಟೆಂಬರ್ 26ನೇ ತಾರೀಕಿನಿಂದ ಉತ್ತರ ಅರೇಬಿಯನ್ ಸಮುದ್ರದಲ್ಲಿ ಆರಂಭವಾದ ಈ ತಾಲೀಮು 28ನೇ ತಾರೀಕಿನ ತನಕ ನಡೆಯಲಿದೆ.

ನಾಲ್ಕನೇ ಅವತರಣಿಕೆಯ ಭಾರತ- ಜಪಾನ್ ಮೆರಿಟೈಮ್ ದ್ವಿಪಕ್ಷೀಯ ತಾಲೀಮು, JIMEX ಎರಡು ವರ್ಷಕ್ಕೊಮ್ಮೆ ನಡೆಯುತ್ತದೆ. ಭಾರತೀಯ ನೌಕಾ ಪಡೆ ಹಾಗೂ ಜಪಾನೀಸ್ ಮೆರಿಟೈಮ್ ಸೆಲ್ಫ್ ಡಿಫೆನ್ಸ್ ಫೋರ್ಸ್ ಎರಡೂ ಸೇರಿ ಉತ್ತರ ಅರೇಬಿಯನ್ ಸಮುದ್ರದಲ್ಲಿ ಸೆಪ್ಟೆಂಬರ್ 26ರಿಂದ ಈ ತಾಲೀಮು ನಡೆಸುತ್ತಿವೆ.

JIMEX ಸರಣಿ ತಾಲೀಮು ಆರಂಭವಾದದ್ದು ಜನವರಿ 2012ರಲ್ಲಿ. ಮುಖ್ಯವಾಗಿ ನೌಕಾ ಭದ್ರತೆ ಸಹಕಾರವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಇದು ಆರಂಭಿಸಲಾಯಿತು. ಕೊನೆಯದಾಗಿ JIMEX ನಡೆದಿದ್ದು 2018ರ ಅಕ್ಟೋಬರ್ ನಲ್ಲಿ, ಭಾರತದ ವಿಶಾಖಪಟ್ಟಣದಲ್ಲಿ. ಕಳೆದ ಕೆಲ ವರ್ಷದಿಂದ ಭಾರತ ಮತ್ತು ಜಪಾನ್ ಮಧ್ಯೆ ನೌಕಾ ಭದ್ರತೆಯ ಸಹಕಾರ ವೃದ್ಧಿಸುತ್ತಾ ಬಂದಿದೆ.

India And Japan naval exercise JIMEX 2020 In North Arabian Sea

JIMEX- 20ಯಲ್ಲಿ ಅತ್ಯಾಧುನಿಕ ತಾಲೀಮಿನ ಮೂಲಕ ಎರಡೂ ದೇಶಗಳ ಸಾಮರ್ಥ್ಯ ಅರಿಯಲು ನೆರವಾಗುತ್ತದೆ. ಹೆಲಿಕಾಪ್ಟರ್ ಕಾರ್ಯಾಚರಣೆ, ಅಸ್ತ್ರಗಳ ಸಿಡಿತ ಹಾಗೂ ಸಬ್ ಮರೀನ್ ತಡೆ, ವಾಯು ಯುದ್ಧ ತಾಲೀಮು ಇತ್ಯಾದಿಗಳನ್ನು ಎರಡೂ ದೇಶಗಳು ಮಾಡಿದವು.

ಕೊರೊನಾ ಹಿನ್ನೆಲೆಯಲ್ಲಿ "ನಾನಾ ಕಾಂಟ್ಯಾಕ್ಟ್ ಅಟ್ ಸೀ ಓನ್ಲಿ ಫಾರ್ಮಾಟ್"ನಲ್ಲಿ ತಾಲೀಮು ನಡೆದಿದೆ. ಸ್ವದೇಶಿ ನಿರ್ಮಿತ ಸ್ಟೆಲ್ತ್ ವಿಧ್ವಂಸಕ ಚೆನ್ನೈ, ಟೆಗ್ ಕ್ಲಾಸ್ ಫ್ರಿಗೆಟ್ ತರ್ಕಶ್ ಮತ್ತು ಫ್ಲೀಟ್ ಟ್ಯಾಂಕರ್ ದೀಪಕ್ ಇವುಗಳೆಲ್ಲ ರೇರ್ ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್ ಅವರ ನೇತೃತ್ವದಲ್ಲಿ ಪಾಲ್ಗೊಂಡವು.

ಇನ್ನು ಜಪಾನ್ ನ JMSDF ಹಡಗು ಕಾಗ, ಇಜುಮೋ ಕ್ಲಾಸ್ ಹೆಲಿಕಾಪ್ಟರ್ ವಿಧ್ವಂಸಕ ಮತ್ತು ಇಕಝುಚಿ ಇತ್ಯಾದಿಗಳು ರೇರ್ ಅಡ್ಮಿರಲ್ ಕೊನೊ ಯಸುಷಿಂಗೆ ನೇತೃತ್ವದಲ್ಲಿ ಪಾಲ್ಗೊಂಡವು. ಇದರ ಜತೆಗೆ ಪಿ8ಐ ದೂರಗಾಮಿ ಮೆರಿಟೈಮ್ ಬೆಂಗಾವಲು ವಿಮಾನ, ಇಟೆಗ್ರಲ್ ಹೆಲಿಕಾಪ್ಟರ್ ಗಳು ಮತ್ತು ಯುದ್ಧ ವಿಮಾನಗಳು ಸಹ ಪಾಲ್ಗೊಂಡವು.

JIMEX 20 ಮೂಲಕ ಎರಡು ದೇಶಗಳ ಮಧ್ಯೆ ಪರಸ್ಪರ ಸಹಕಾರ ಹಾಗೂ ವಿಶ್ವಾಸ ವೃದ್ಧಿಗೆ ಅನುಕೂಲ ಆಗಲಿದೆ. ಎರಡೂ ದೇಶಗಳ ಮಧ್ಯೆ ದೀರ್ಘಕಾಲದ ಸ್ನೇಹವನ್ನು ಮತ್ತಷ್ಟು ಬಲಪಡಿಸುತ್ತದೆ.

English summary
JIMEX 2020: Indian Navy and Japanese Maritime Self-Defense Force (JMSDF) joint excercise in North Arabian sea between September 26 to 28, 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X