ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದೊಳಗೆ ಭಾರತೀಯ ವಲಸಿಗರು ಅಕ್ರಮವಾಗಿ ಪ್ರವೇಶಿಸುವುದು ಹೇಗೆ ಗೊತ್ತೇ?

|
Google Oneindia Kannada News

ನವದೆಹಲಿ, ಜೂನ್ 19: ಅಮೆರಿಕಕ್ಕೆ ತೆರಳಿ ಅಲ್ಲಿನ ಪೌರತ್ವ ಪಡೆದು ಅಲ್ಲಿಯೇ ಕಾಯಂ ಆಗಿ ನೆಲೆಸಿರುವ ಭಾರತೀಯರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿದೆ. ವಿವಿಧ ವೀಸಾದಡಿ ಅಲ್ಲಿ ನೆಲೆಸಿರುವವರೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅದರ ನಡುವೆ ಲಕ್ಷಾಂತರ ಮಂದಿ ಭಾರತೀಯರು ಅಮೆರಿಕದೊಳಗೆ ಅಕ್ರಮವಾಗಿ ಪ್ರವೇಶಿಸಿದ್ದಾರೆ.

2016ರಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಚುನಾವಣಾ ಪ್ರಚಾರದ ವೇಳೆ ದೇಶದಲ್ಲಿನ 'ಲಕ್ಷಾಂತರ ಅಕ್ರಮ ಏಲಿಯನ್'ಗಳನ್ನು ಹೊರಹಾಕಲು ನೀಡಿದ್ದ ಭರವಸೆಯನ್ನು ಈಡೇರಿಸುವ ಸಲುವಾಗಿ ಅಕ್ರಮ ವಲಸಿಗರನ್ನು ಮುಂದಿನ ವಾರದಿಂದ ಗಡಿಪಾರು ಮಾಡಲು ಆರಂಭಿಸುವುದಾಗಿ ಹೇಳಿದ್ದರು.

ಅನಧಿಕೃತ ನಿವಾಸಿಗಳನ್ನು ಅಮೆರಿಕದಿಂದ ಹೊರಹಾಕಲು ನಿರ್ಧರಿಸಿರುವ ಟ್ರಂಪ್ ಆಡಳಿತ ನಡೆಯಿಂದ ಭಾರತದಿಂದ ಅಕ್ರಮವಾಗಿ ಬಂದು ನೆಲೆಸಿರುವ ಲಕ್ಷಾಂತರ ಭಾರತೀಯರು ತೊಂದರೆಗೆ ಸಿಲುಕಲಿದ್ದಾರೆ.

ಅಮೆರಿಕದ ಮರುಭೂಮಿಯಲ್ಲಿ ಭಾರತದ ಬಾಲಕಿಯ ಜೀವ ಸುಟ್ಟ ಬಿಸಿಲು ಅಮೆರಿಕದ ಮರುಭೂಮಿಯಲ್ಲಿ ಭಾರತದ ಬಾಲಕಿಯ ಜೀವ ಸುಟ್ಟ ಬಿಸಿಲು

ಕೆಲವು ದಿನಗಳ ಹಿಂದಷ್ಟೇ ಮೆಕ್ಸಿಕೋ ಮೂಲಕ ಅರಿಜೋನಾ ಮರಳುಗಾಡಿಗೆ ಬಂದು ಅಲ್ಲಿಂದ ಅಮೆರಿಕ ಪ್ರವೇಶಿಸಲು ತೆರಳಿದ್ದ ಕುಟುಂಬವೊಂದರ ಆರು ವರ್ಷದ ಮಗು ಗುರುಪ್ರೀತ್ ಕೌರ್ ಬಿಸಿಲ ತಾಪ ತಾಳಲಾರದೆ ಮೃತಪಟ್ಟಿದ್ದು ಸುದ್ದಿಯಾಗಿತ್ತು.

ಭಾರತೀಯ ವಲಸಿಗರ ಸಂಖ್ಯೆ ಹೆಚ್ಚಳ

ಭಾರತೀಯ ವಲಸಿಗರ ಸಂಖ್ಯೆ ಹೆಚ್ಚಳ

ಪ್ಯೂ ಸಂಶೋಧನಾ ಕೇಂದ್ರದ ಅಧ್ಯಯನದ ಪ್ರಕಾರ ಅಮೆರಿಕದಲ್ಲಿ 2017ರ ವೇಳೆಗೆ ಒಂದು ಕೋಟಿ ಅನಧಿಕೃತ ವಲಸಿಗರು ಇದ್ದರು. ಅವರಲ್ಲಿ ಸುಮಾರು 15 ಲಕ್ಷ ಏಷ್ಯನ್ನರಿದ್ದಾರೆ.

ಅಮೆರಿಕ ಮೂಲದ ಮತ್ತೊಂದು ಸಂಸ್ಥೆಯ ಅಧ್ಯಯನದ ಪ್ರಕಾರ 2010ರಿಂದ ಅಕ್ರಮ ವಲಸಿಗ ಭಾರತೀಯರ ಸಂಖ್ಯೆ ಶೇ 72ರಷ್ಟು ಹೆಚ್ಚಾಗಿದ್ದು, 6.3 ಲಕ್ಷದಷ್ಟು ಭಾರತೀಯರಿದ್ದಾರೆ.

2018ರಲ್ಲಿ ಸುಮಾರು 9 ಸಾವಿರ ಭಾರತೀಯ ರಾಷ್ಟ್ರೀಯರನ್ನು ಅಮರಿಕ-ಮೆಕ್ಸಿಕೋ ಗಡಿಯಲ್ಲಿ ಅಕ್ರಮ ಪ್ರವೇಶದ ವೇಳೆ ಬಂಧಿಸಲಾಗಿದೆ. 2007ರಲ್ಲಿ ಈ ಸಂಖ್ಯೆ 76ರಷ್ಟಿದ್ದರೆ, 2017ರಲ್ಲಿ 3,000 ಇತ್ತು.

ಟ್ರಂಪ್ ಸರ್ಕಾರದ ಹೊಸ ಎಚ್1ಬಿ ವೀಸಾ ನೀತಿಯಲ್ಲೇನಿದೆ?ಟ್ರಂಪ್ ಸರ್ಕಾರದ ಹೊಸ ಎಚ್1ಬಿ ವೀಸಾ ನೀತಿಯಲ್ಲೇನಿದೆ?

ವಲಸಿಗರಿಗೆ ನೆರವಾಗುವ ಸಂಸ್ಥೆಗಳೇ ಇವೆ

ವಲಸಿಗರಿಗೆ ನೆರವಾಗುವ ಸಂಸ್ಥೆಗಳೇ ಇವೆ

'ಡಾಂಕಿ ಫ್ಲೈಟ್' (ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ತೆರಳುವುದಕ್ಕೆ ಇರುವ ಪಂಜಾಬ್ ನಾಣ್ಣುಡಿ) ಮೂಲಕ ಭಾರತೀಯರು ಅಮೆರಿಕ ಹಾಗೂ ಯುರೋಪ್‌ಗಳಿಗೂ ತಲೆಮರೆಸಿಕೊಂಡು ಪ್ರವೇಶಿಸುವ ಮಾರ್ಗಗಳನ್ನು ಕಂಡುಕೊಂಡಿರುತ್ತಾರೆ. ತಾವು ಅಕ್ರಮವಾಗಿ ವಲಸೆ ಹೋಗಬೇಕಿರುವ ದೇಶದ ಪಕ್ಕದ ದೇಶಕ್ಕೆ ಪ್ರವಾಸಿ ವೀಸಾ ಪಡೆದುಕೊಳ್ಳಲು ಭಾರಿ ಮೊತ್ತದ ಹಣವನ್ನು ವೀಸಾ ಸಂಸ್ಥೆಗೆ ನೀಡುತ್ತಾರೆ. ಅಲ್ಲಿಂದ ಅವರ ಉದ್ದೇಶಿತ ಪ್ರಯಾಣ ಆರಂಭವಾಗುತ್ತದೆ.

ಈ ಸಂಸ್ಥೆಗಳು ಗಡಿಯ ಮೂಲಕ ದೇಶದೊಳಗೆ ಪ್ರವೇಶಿಸಲು ನೆರವಾಗುವ ಮಾನವ ಕಳ್ಳಸಾಗಣೆದಾರರು, ತಮ್ಮ ಗಡಿಪಾರಿನಿಂದ ತಪ್ಪಿಸಿಕೊಳ್ಳಲು ನೆರವಾಗುವ ಕಾನೂನಿನ ಲೋಪಗಳ ಕುರಿತಾದ ಸಲಹೆಗಳು ಮುಂತಾದ ಸೇವೆಗಳನ್ನೂ ನೀಡುತ್ತವೆ.

ದಟ್ಟಾರಣ್ಯದ ಅಪಾಯಕಾರಿ ದಾರಿ

ದಟ್ಟಾರಣ್ಯದ ಅಪಾಯಕಾರಿ ದಾರಿ

ಭಾರತೀಯರು ಹಾಗೂ ಸುಮಾರು 180 ದೇಶಗಳಿಗೆ ಉಚಿತವಾಗಿ ವೀಸಾ ಒದಗಿಸುವ ಈಕ್ವೆಡಾರ್ ದೇಶವು ಅಕ್ರಮ ವಲಸಿಗರ ಸಾಮಾನ್ಯ ಮಾರ್ಗವಾಗಿದೆ. ದಕ್ಷಿಣ ಅಮೆರಿಕದ ದೇಶದಿಂದ ವಲಸಿಗರು ಸಾವಿರಾರು ಕಿಮೀ ಸಾಗಬೇಕು. ಪನಾಮಾ ಮತ್ತು ಕೊಲಂಬಿಯಾ ನಡುವೆ ಇರುವ ಸುಮಾರು 100 ಕಿಮೀ ಉದ್ದದ ದಟ್ಟಾರಣ್ಯದ ನಡುವೆ ಸಾಗಬೇಕು. ಅಲ್ಲಿ ರಸ್ತೆಯೂ ಇಲ್ಲ, ಸರ್ಕಾರದ ಅಸ್ತಿತ್ವವೂ ಇಲ್ಲ.

ಇದನ್ನು ಜಗತ್ತಿನ ಅತ್ಯಂತ ಅಪಾಯಕಾರಿ ಪ್ರದೇಶಗಳಲ್ಲಿ ಒಂದು ಎಂದೇ ಪರಿಗಣಿಸಲಾಗಿದೆ. ಇದನ್ನು ಮಾದಕ ದ್ರವ್ಯ ಕಳ್ಳಸಾಗಣೆದಾರರು, ಗೆರಿಲ್ಲಾ ದಾಳಿಕೋರರು ಹೆಚ್ಚು ಬಳಸುತ್ತಾರೆ. ಅಪಹರಣ ಮತ್ತು ಹಲ್ಲೆ ಈ ಪ್ರದೇಶದಲ್ಲಿ ಸರ್ವೇ ಸಾಮಾನ್ಯ. ಅದರ ಜತೆಗೆ ಇಲ್ಲಿನ ಭೌಗೋಳಿಕ ಪರಿಸರ ಮತ್ತು ಕಾಡುಪ್ರಾಣಿಗಳ ಅಸ್ತಿತ್ವವೂ ಅಪಾಯ ತಂದೊಡ್ಡುತ್ತವೆ.

ಈ ಎಲ್ಲ ಸಂಕಷ್ಟಗಳನ್ನು ದಾಟಿ ಹೆಚ್ಚಿನ ವಲಸಿಗರು ತಮ್ಮ ಅಂತಿಮ ಗುರಿಯನ್ನು ತಲುಪುವುದೇ ಇಲ್ಲ. ಅಥವಾ ಹಾಗೆ ಮಾಡಿದರೂ ಗಡಿಪಾರಾಗುತ್ತಾರೆ. ಜತೆಗೆ ಈ ಹೋರಾಟದಲ್ಲಿ ತಮ್ಮ ಜೀವನದ ಎಲ್ಲ ಸಂಪಾದನೆಯನ್ನು ಕಳೆದುಕೊಳ್ಳುತ್ತಾರೆ.

ಭಾರತದ ಟೆಕ್ಕಿಗೆ ಎಚ್1ಬಿ ನಿರಾಕರಣೆ, ಟ್ರಂಪ್ ಸರ್ಕಾರ ವಿರುದ್ಧ ದಾವೆ ಭಾರತದ ಟೆಕ್ಕಿಗೆ ಎಚ್1ಬಿ ನಿರಾಕರಣೆ, ಟ್ರಂಪ್ ಸರ್ಕಾರ ವಿರುದ್ಧ ದಾವೆ

ಅಕ್ರಮ ವಲಸಿಗರ ಸಂಖ್ಯೆ ಹೆಚ್ಚಳ

ಅಕ್ರಮ ವಲಸಿಗರ ಸಂಖ್ಯೆ ಹೆಚ್ಚಳ

ಹೆಚ್ಚಿನ ವಲಸಿಗರು ಮೆಕ್ಸಿಕೋ-ಅಮೆರಿಕ ಗಡಿ ಮೂಲಕ ಪ್ರವೇಶಿಸುವಾಗ ಸಿಕ್ಕಿಬೀಳುತ್ತಾರೆ. ಸೆಂಟ್ರಲ್ ಅಮೆರಿಕದ ರಾಜಕೀಯ ಅಸ್ಥಿರತೆ ಮತ್ತು ಪ್ರಾದೇಶಿಕ ಹಿಂಸಾಚಾರವಿರುವ ಗ್ವಾಟೆಮಾಲ, ಹೊಂಡುರಸ್ ಮತ್ತು ಎಲ್ ಸಾಲ್ವಡೋರ್ ಮೂಲಕ ಒಳನುಗ್ಗುತ್ತಾರೆ.

ಇತರೆ ಖಂಡಗಳಿಂದ ಗಡಿ ಮೂಲಕ ಬಂದು ಬಂಧಿತರಾಗುವ ವಲಸಿಗರ ಸಂಖ್ಯೆ ಕಳೆದ ವರ್ಷಕ್ಕೆ ಹೋಲಿಸಿದರೆ ದುಪ್ಪಟ್ಟಾಗಿದೆ. ಹಾಗೆಯೇ ಇತ್ತೀಚಿನ ದಿನಗಳಲ್ಲಿ ಪುರುಷರ ಬದಲು ಮಕ್ಕಳು ಮತ್ತು ಮಹಿಳೆಯರನ್ನು ಒಳಗೊಂಡ ಕುಟುಂಬಗಳೇ ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಹೋಗುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

English summary
Millions of Indian illegal immigrants may face deportation after President Donald Trump administration would start deporting unauthorised immigrants from the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X