ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜುಲೈ ಕೋವಿಡ್‌ ಲಸಿಕೆ ಗುರಿ ತಲುಪಿದ ಭಾರತ ಆಗಸ್ಟ್‌ನ 25 ಕೋಟಿ ಗುರಿ ತಪ್ಪುತ್ತಾ?

|
Google Oneindia Kannada News

ನವದೆಹಲಿ, ಆ.02: ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯಾ ನಿಗದಿಪಡಿಸಿದಂತೆ ಜುಲೈನಲ್ಲಿ ಭಾರತವು 13.5 ಕೋಟಿ ಲಸಿಕೆಗಳ ಗುರಿಯನ್ನು ಸಾಧಿಸಿದೆ. ಜುಲೈನಲ್ಲಿ 13,45,82,577 ಡೋಸ್‌ ಕೋವಿಡ್‌ ಲಸಿಕೆ ಗಳನ್ನು ನೀಡಲಾಗಿದೆ. ಅಂದರೆ, ದಿನಕ್ಕೆ ಸರಾಸರಿ 43,41,373 ಡೋಸ್‌ಗಳನ್ನು ನೀಡಲಾಗಿದೆ. ಅಂದರೆ, ದಿನಕ್ಕೆ ಸರಾಸರಿ 43,41,373 ಡೋಸ್‌ ಕೋವಿಡ್‌ ಲಸಿಕೆಗಳನ್ನು ನೀಡಲಾಗಿದೆ. ಹೀಗಾಗಿ ಜೂನ್‌ನ 11,96,69,381 ಡೋಸ್‌ನ ಲಸಿಕೆ ನೀಡಿಕೆ ವಿರುದ್ದ ಈ ಜುಲೈನಲ್ಲಿ ಶೇ.12.5 ಹೆಚ್ಚಳವಾಗಿದೆ.

ಮೇ 30 ರಂದು ಕೇಂದ್ರವು 11,95,70,000 ಕೋವಿಡ್ ಲಸಿಕೆ ಡೋಸ್‌ಗಳನ್ನು ಜೂನ್‌ನಲ್ಲಿ ಪೂರೈಸಲಾಗುವುದು ಎಂದು ದೇಶಕ್ಕೆ ಭರವಸೆ ನೀಡಿತ್ತು. ಜೂನ್‌ನಲ್ಲಿ ಒಟ್ಟು ಕೋವಿಡ್‌ ಲಸಿಕೆ ಪೂರೈಕೆಗಳು ಕಡಿಮೆಯಾಗಿದ್ದು, 11.46 ಕೋಟಿ ಡೋಸ್‌ಗಳು, ಗುರಿಗಿಂತ ಹೆಚ್ಚಾಗಿತ್ತು. ಆದರೆ ನಿರೀಕ್ಷೆಯಂತೆ ಕೋವಿಡ್‌ ಲಸಿಕೆಯ ಗುರಿಯನ್ನು ಸಾಧಿಸಲಾಯಿತು. ಮೇ ತಿಂಗಳಲ್ಲಿ ದೇಶದ ಎಲ್ಲ ವಯಸ್ಕ ವ್ಯಕ್ತಿಗಳಿಗೆ ಅಥವಾ 2011 ರ ಜನಗಣತಿಯ ಪ್ರಕಾರ 94.02 ಕೋಟಿ ಭಾರತೀಯರಿಗೆ ಲಸಿಕೆ ಹಾಕುವಿಕೆಯನ್ನು ಪ್ರಾರಂಭಿಸಿದಾಗಿನಿಂದ ಶೇ.96 ರಷ್ಟು ಅಂದರೆ ಬಾರೀ ಕೋವಿಡ್‌ ಲಸಿಕೆ ನೀಡಿಕೆ ಪ್ರಮಾಣ ಏರಿಕೆಯನ್ನು ಜೂನ್ ತಿಂಗಳಲ್ಲಿ ತಲುಪಲಾಗಿದೆ. ಮೇ ತಿಂಗಳಿನಲ್ಲಿ 6,10,57,003 ಕೋವಿಡ್‌ ಲಸಿಕೆ ಡೋಸ್‌ಗಳನ್ನು ನೀಡಲಾಯಿತು ಅಥವಾ ದಿನಕ್ಕೆ ಸರಾಸರಿ 19,69,580 ಲಸಿಕೆ ನೀಡಲಾಯಿತು.

ಕೋವಿಡ್‌ 3 ನೇ ಅಲೆ ಭೀತಿ: 11 ವಾರಗಳ ಕುಸಿತದ ನಂತರ ದೇಶದಲ್ಲಿ ಪ್ರಕರಣಗಳು ಶೇ.7.5 ಏರಿಕೆಕೋವಿಡ್‌ 3 ನೇ ಅಲೆ ಭೀತಿ: 11 ವಾರಗಳ ಕುಸಿತದ ನಂತರ ದೇಶದಲ್ಲಿ ಪ್ರಕರಣಗಳು ಶೇ.7.5 ಏರಿಕೆ

197 ದಿನಗಳ ಕೋವಿಡ್‌ ಲಸಿಕೆ ಅಭಿಯಾನದ ನಂತರ, 47,02,98,596 ಕೋಟಿ ಅಥವಾ ವಯಸ್ಕರಲ್ಲಿ ಶೇ.50 ರಷ್ಟು ಮಂದಿಗೆ ಕೋವಿಡ್‌ ಲಸಿಕೆಯನ್ನು ನೀಡಲಾಗಿದೆ. ಇಲ್ಲಿಯವರೆಗೆ ಲಸಿಕೆ ಹಾಕಿದ 50% ವಯಸ್ಕರಲ್ಲಿ, 39% ವ್ಯಕ್ತಿಗಳು ಲಸಿಕೆಯ ಮೊದಲ ಡೋಸ್ ಪಡೆದಿದ್ದರೆ 11% ಮಂದಿ ಸಂಪೂರ್ಣವಾಗಿ ಲಸಿಕೆ ಪಡೆದಿದ್ದಾರೆ. 2011 ರ ಜನಗಣತಿಯ ಪ್ರಕಾರ 136.13 ಕೋಟಿಯ ಒಟ್ಟಾರೆ ಭಾರತೀಯ ಜನಸಂಖ್ಯೆಯಲ್ಲಿ, 34.55% ವ್ಯಕ್ತಿಗಳು ಇಲ್ಲಿಯವರೆಗೆ ಕೋವಿಡ್ ಲಸಿಕೆಗಳನ್ನು ಪಡೆದಿದ್ದಾರೆ. ಆ ಪೈಕಿ 27% ಗೆ ಮೊದಲ ಡೋಸ್‌ ಲಸಿಕೆ ಹಾಕಲಾಗಿದೆ. 7.6% ಜನರಿಗೆ ಎರಡೂ ಕೋವಿಡ್‌ ಡೋಸ್‌ಗಳನ್ನು ಪಡೆದಿದ್ದಾರೆ.

 ಇನ್ನು ನಡೆಯಬೇಕಿದೆ ಬಹು ದೊಡ್ಡ ಕಾರ್ಯ

ಇನ್ನು ನಡೆಯಬೇಕಿದೆ ಬಹು ದೊಡ್ಡ ಕಾರ್ಯ

ಪ್ರಸ್ತುತ ಭಾರತದಲ್ಲಿ ಕೋವಿಡ್‌ ಲಸಿಕೆ ನೀಡಲಾಗಿರುವ ದತ್ತಾಂಶವನ್ನು ಅವಲೋಕಿಸಿದಾಗ, ದೇಶದ ಒಟ್ಟು 94.02 ಕೋಟಿ ವಯಸ್ಕ ಜನಸಂಖ್ಯೆಯಲ್ಲಿ 46.99 ಕೋಟಿ ಮಂದಿ ಇನ್ನೂ ಕೂಡಾ ಕೋವಿಡ್‌ ಲಸಿಕೆಯನ್ನು ಪಡೆದುಕೊಂಡಿಲ್ಲ. ಇದಲ್ಲದೆ, ಇಲ್ಲಿಯವರೆಗೆ ನೀಡಲಾದ 47 ಕೋಟಿ ಲಸಿಕೆಗಳಲ್ಲಿ, 36.68 ಕೋಟಿ ಜನರು ಮೊದಲ ಡೋಸ್ ಮಾತ್ರ ಪಡೆದಿದ್ದಾರೆ. ಸಂಪೂರ್ಣವಾಗಿ ಕೋವಿಡ್‌ ಲಸಿಕೆ ಪಡೆದ ಜನರಿಗಿಂತ ಈ ಒಂದು ಡೋಸ್‌ ಲಸಿಕೆ ಪಡೆದವರು ಹೆಚ್ಚು ಕೋವಿಡ್‌ ಸೋಂಕಿಗೆ ಒಳಗಾಗುತ್ತಾರೆ ಎಂದು ಹೇಳಲಾಗಿದೆ. ಒಟ್ಟು 136.13 ಕೋಟಿ ಜನಸಂಖ್ಯೆಯ ಪೈಕಿ, ದೇಶವು ಇನ್ನೂ 89.1 ಕೋಟಿ ಲಸಿಕೆ ಹಾಕದ ಜನರನ್ನು ಹೊಂದಿದೆ. ಅಂದರೆ ಕೋವಿಡ್-ಸೂಕ್ತ ನಡವಳಿಕೆಯನ್ನು ಅನುಸರಿಸದಿದ್ದರೆ ಮೂರನೇ ಅಲೆಯು ಹೆಚ್ಚು ದೊಡ್ಡ ಜನಸಂಖ್ಯೆಯು ವೈರಸ್‌ಗೆ ಗುರಿಯಾಗುವ ಅಪಾಯವನ್ನು ತಂದೊಡ್ಡುತ್ತದೆ.

'ಕ್ಷುಲ್ಲಕ ರಾಜಕೀಯ': ಕೋವಿಡ್ ಲಸಿಕೆ ಪೂರೈಕೆ ವಿಚಾರದಲ್ಲಿ ಆರೋಗ್ಯ ಸಚಿವ vs ರಾಹುಲ್ ಗಾಂಧಿ'ಕ್ಷುಲ್ಲಕ ರಾಜಕೀಯ': ಕೋವಿಡ್ ಲಸಿಕೆ ಪೂರೈಕೆ ವಿಚಾರದಲ್ಲಿ ಆರೋಗ್ಯ ಸಚಿವ vs ರಾಹುಲ್ ಗಾಂಧಿ

 ಕೋವಿಡ್‌ ಲಸಿಕೆ ಪ್ರಕ್ರಿಯೆ ತ್ವರಿತವಾಗಿ ಹೆಚ್ಚಳ ಅಗತ್ಯ

ಕೋವಿಡ್‌ ಲಸಿಕೆ ಪ್ರಕ್ರಿಯೆ ತ್ವರಿತವಾಗಿ ಹೆಚ್ಚಳ ಅಗತ್ಯ

ಭಾರತದ ಒಟ್ಟಾರೆ ಕೋವಿಡ್‌ ಲಸಿಕೆ ಪ್ರಕ್ರಿಯೆಯು ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಎರಡನೇ ಕೋವಿಡ್‌ ಅಲೆಯಲ್ಲಿ ಅತ್ಯಂತ ನಿಧಾನಗತಿಯ ವೇಗವನ್ನು ದಾಖಲಿಸಿದೆ. ಕೇರಳ, ಮಹಾರಾಷ್ಟ್ರ ಮತ್ತು ಈಶಾನ್ಯ ರಾಜ್ಯಗಳಲ್ಲಿ ಹೆಚ್ಚುತ್ತಿರುವ ಪ್ರಕರಣಗಳು ಮತ್ತು ಅನೇಕ ರಾಜ್ಯಗಳಲ್ಲಿ ಕೋವಿಡ್‌ನ ಏರಿಳಿತವು ಮೂರನೇ ಅಲೆ ಶೀಘ್ರವೇ ಉಂಟಾಗಬಹುದು ಎಂಬ ಸೂಚನೆ ನೀಡಿದೆ. ಕೇರಳ, ಮಹಾರಾಷ್ಟ್ರ, ಅಸ್ಸಾಂ, ತಮಿಳುನಾಡು, ಕರ್ನಾಟಕ, ಮಿಜೋರಾಂ ಮತ್ತು ಮಣಿಪುರ ಸೇರಿದಂತೆ ಹೆಚ್ಚಿನ ಕೋವಿಡ್‌ ಪ್ರಕರಣಗಳು ಹೊಂದಿರುವ 10 ರಾಜ್ಯಗಳಿಗೆ ಸರ್ಕಾರವು ಎಚ್ಚರಿಕೆ ನೀಡಿದೆ. ಈ 10 ರಾಜ್ಯಗಳ ನಲವತ್ತಾರು ಜಿಲ್ಲೆಗಳು 10%ಕ್ಕಿಂತ ಹೆಚ್ಚಿನ ಕೋವಿಡ್‌ ಪಾಕಿವಿಟಿ ದರವನ್ನು ಹೊಂದಿದೆ.

ಮೇ ಮತ್ತು ಜೂನ್‌ನಲ್ಲಿ ದೇಶವು ಲಸಿಕೆಯ ವೇಗವನ್ನು ಹೆಚ್ಚಿಸಿದ್ದರೂ, ದಿನಕ್ಕೆ ಸರಾಸರಿ ಲಸಿಕೆ ನೀಡಿಕೆ ಇನ್ನೂ ಕಡಿಮೆಯಾಗಿದೆ, ದಿನಕ್ಕೆ 23.87 ಲಕ್ಷ ಕೋವಿಡ್‌ ಲಸಿಕೆ ನೀಡಲಾಗಿದೆ. ದಿನನಿತ್ಯದ ಸರಾಸರಿ ಪ್ರಕಾರ, ಇಡೀ ವಯಸ್ಕ ಜನಸಂಖ್ಯೆಗೆ ಕನಿಷ್ಠ ಒಂದು ಡೋಸ್ ಕೋವಿಡ್ ಲಸಿಕೆಯೊಂದಿಗೆ ಲಸಿಕೆ ಹಾಕಲು ದೇಶವು ಇನ್ನೂ 56 ವಾರಗಳು ಅಥವಾ 13 ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ.

 ಮೂರನೇ ಕೋವಿಡ್‌ ಅಲೆಯ ಬಗ್ಗೆ ಎಚ್ಚರಿಕೆ

ಮೂರನೇ ಕೋವಿಡ್‌ ಅಲೆಯ ಬಗ್ಗೆ ಎಚ್ಚರಿಕೆ

ಏಮ್ಸ್ ನಿರ್ದೇಶಕ ರಣದೀಪ್ ಗುಲೇರಿಯಾ ಮತ್ತು ಇತರ ಆರೋಗ್ಯ ತಜ್ಞರು ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಮೂರನೇ ಕೋವಿಡ್‌ ಅಲೆಯ ಬಗ್ಗೆ ಎಚ್ಚರಿಕೆ ಈಗಾಗಲೇ ನೀಡಿದ್ದಾರೆ. ಅವಧಿಗೂ ಮುನ್ನ ಸಾಧ್ಯವಾದಷ್ಟು ಜನರಿಗೆ ಲಸಿಕೆ ಹಾಕುವಂತೆ ಸಲಹೆ ನೀಡಿದ್ದರು. ಆದರೆ ಕೋವಿಡ್-ಸೂಕ್ತ ನಡವಳಿಕೆಯ ಅನುಪಸ್ಥಿತಿಯು ಈ ತಿಂಗಳಿಗೆ ಮೂರನೇ ಕೋವಿಡ್ ಅಲೆಯ ಸಾಧ್ಯತೆಯನ್ನು ಹೆಚ್ಚಿಸಿದೆ. ಈಗಾಗಲೇ ದೇಶದಲ್ಲಿ ಕೋವಿಡ್‌ ಪ್ರಕರಣಗಳು ಏರಿಕೆ ಕಂಡಿದೆ. ಜೂನ್ ಮತ್ತು ಜುಲೈನಲ್ಲಿ ಲಸಿಕೆಯ ದೈನಂದಿನ ಮತ್ತು ಮಾಸಿಕ ವೇಗದಲ್ಲಿ ಕ್ರಮೇಣ ಹೆಚ್ಚಳದೊಂದಿಗೆ ಭಾರತವು ಮೇ ತಿಂಗಳಿನಿಂದ ಲಸಿಕೆ ಪ್ರಕ್ರಿಯೆಯನ್ನು ವೇಗಗೊಳಿಸಲು ಪ್ರಯತ್ನಿಸಿತು. ಆದರೆ ಇದು ಭಾರತದಲ್ಲಿ ಬಳಸಲಾಗುವ ಎರಡು ಮುಖ್ಯ ಲಸಿಕೆಗಳ ತಯಾರಕರ ಸೀಮಿತ ಉತ್ಪಾದನಾ ಸಾಮರ್ಥ್ಯದಿಂದಾಗಿ ಸಾಧ್ಯವಾಗಲಿಲ್ಲ. ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (SII) ನಿಂದ ಕೋವಿಶೀಲ್ಡ್ ಮತ್ತು ಭಾರತ್ ಬಯೋಟೆಕ್‌ನಿಂದ ಕೋವಾಕ್ಸಿನ್ ಭಾರತದಲ್ಲಿ ಮೊದಲು ಚಾಲ್ತಿಗೆ ಬಂದ ಲಸಿಕೆಗಳಾಗಿದೆ. ಬಳಿಕ ಈಗ ಭಾರತವು ರಷ್ಯಾದ ಸ್ಪುಟ್ನಿಕ್-ವಿ ಲಸಿಕೆಯನ್ನು ಆಮದು ಮಾಡಿಕೊಳ್ಳುತ್ತಿದೆ. ಆದರೆ ಸದ್ಯಕ್ಕೆ ಇದು ಸೀಮಿತವಾಗಿ ಮಾತ್ರ ಲಭಿಸುತ್ತಿದೆ. ಭಾರತವು ಎರಡು ಡೋಸ್‌ ಕೋವಿಡ್ ಲಸಿಕೆಗಳನ್ನು ನೀಡುತ್ತಿದೆ.

'ಅಲೆಮಾರಿಗಳು, ನಿರ್ಗತಿಕರಿಗೆ ಕೋವಿಡ್‌ ಲಸಿಕೆ ನೀಡಲು ಆದ್ಯತೆ ನೀಡಿ': ರಾಜ್ಯಗಳಿಗೆ ಕೇಂದ್ರ ಸೂಚನೆ'ಅಲೆಮಾರಿಗಳು, ನಿರ್ಗತಿಕರಿಗೆ ಕೋವಿಡ್‌ ಲಸಿಕೆ ನೀಡಲು ಆದ್ಯತೆ ನೀಡಿ': ರಾಜ್ಯಗಳಿಗೆ ಕೇಂದ್ರ ಸೂಚನೆ

 ಆಗಸ್ಟ್‌ನ ಕೋವಿಡ್‌ ಲಸಿಕೆಯ 25 ಕೋಟಿ ಗುರಿ ತಲುಪುತ್ತಾ ಭಾರತ?

ಆಗಸ್ಟ್‌ನ ಕೋವಿಡ್‌ ಲಸಿಕೆಯ 25 ಕೋಟಿ ಗುರಿ ತಲುಪುತ್ತಾ ಭಾರತ?

ಭಾರತವು ಆಗಸ್ಟ್‌ನಲ್ಲಿ ನಿಗದಿಯಾಗಿದ್ದ ಗುರಿಯನ್ನು ತಪ್ಪಿಸಿಕೊಳ್ಳಲಿದೆ. ನ್ಯಾಷನಲ್ ಟೆಕ್ನಿಕಲ್ ಅಡ್ವೈಸರಿ ಗ್ರೂಪ್ ಆನ್ ಇಮ್ಯುನೈಸೇಶನ್ (NTAGI) ಅಡಿಯಲ್ಲಿ ಕೋವಿಡ್ -19 ವರ್ಕಿಂಗ್ ಗ್ರೂಪ್‌ನ ಅಧ್ಯಕ್ಷ ಡಾ. ಎನ್‌ ಕೆ ಅರೋರಾ ಮೇ 31 ರಂದು, ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವುದರೊಂದಿಗೆ ಆಗಸ್ಟ್‌ನಲ್ಲಿ ಸುಮಾರು 25 ಕೋಟಿ ಲಸಿಕೆ ಡೋಸ್‌ಗಳನ್ನು ಪೂರೈಸುವ ಸಾಧ್ಯತೆಯಿದೆ ಎಂದು ಹೇಳಿದ್ದರು. ಜೂನ್ ಅಂತ್ಯದ ವೇಳೆಗೆ ಎಸ್‌ಐಐ ಉತ್ಪಾದನಾ ಸಾಮರ್ಥ್ಯವನ್ನು ಕೋವಿಶೀಲ್ಡ್‌ನ 10-12 ಕೋಟಿ ಡೋಸ್‌ಗಳಿಗೆ ಹೆಚ್ಚಿಸಿದೆ. ಭಾರತ್ ಬಯೋಟೆಕ್ ತನ್ನ ಕೊವಾಕ್ಸಿನ್ ಪೂರೈಕೆಯನ್ನು ಜುಲೈ ಅಂತ್ಯದ ವೇಳೆಗೆ ಅದೇ ಮಟ್ಟಕ್ಕೆ ಹೆಚ್ಚಿಸುವ ಭರವಸೆ ನೀಡಿದೆ. ಈ ಎರಡು ಲಸಿಕೆಗಳ ಹೊರತಾಗಿ, ಭಾರತವು ಇತರ ಉತ್ಪಾದಕರಿಂದ ಮತ್ತು ರಷ್ಯಾದಿಂದ ಸ್ಪುಟ್ನಿಕ್-ವಿ ಪೂರೈಕೆಯನ್ನು ಪಡೆಯುತ್ತದೆ ಎಂದು ಅರೋರಾ ದೃಢಪಡಿಸಿದ್ದರು. ಹಾಗೆಯೇ ಪ್ರತಿದಿನ ಒಂದು ಕೋಟಿ ಜನರಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿತ್ತು.

ಡಾ ವಿ ಕೆ ಪೌಲ್ ಪ್ರಕಾರ, ಆಗಸ್ಟ್‌ನಲ್ಲಿ ಸುಮಾರು 15 ಕೋಟಿ ಲಸಿಕೆಗಳನ್ನು ನಿರೀಕ್ಷಿಸಲಾಗಿದೆ, ಇದು ಭಾರತವು ಒಮ್ಮೆ ಅಂದಾಜಿಸಿದ್ದಕ್ಕಿಂತ ಕಡಿಮೆ ಕೋವಿಡ್‌ ಲಸಿಕೆ ಅಂದಾಜು ಆಗಿದೆ. ಆರೋಗ್ಯ ಸಚಿವಾಲಯದ ಪ್ರಕಾರ, ಜುಲೈನಲ್ಲಿ ದೇಶವು 2.5 ಕೋಟಿ ಡೋಸ್ ಕೋವಾಕ್ಸಿನ್ ಅನ್ನು ಪಡೆದುಕೊಂಡಿದೆ ಮತ್ತು ಆಗಸ್ಟ್‌ನಲ್ಲಿ ಇದು 3.5 ಕೋಟಿ ದೊರಯುತ್ತದೆ ಎಂದು ನಿರೀಕ್ಷಿಸಲಾಗಿದೆ. ಆದರೆ ಜುಲೈನಿಂದ ಕೋವಾಕ್ಸಿನ್ ಆರು ಕೋಟಿ ಲಸಿಕೆ ಪ್ರಮಾಣವನ್ನು ಪೂರೈಸುತ್ತದೆ ಎಂದು ಅಂದಾಜಿಸಲಾಗಿದೆ.

ಆದ್ದರಿಂದ, ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ ಭಾರತದ ಸರ್ಕಾರದ ಪ್ರಮಾಣಪತ್ರದ ಪ್ರಕಾರ ಕೊವಾಕ್ಸಿನ್ ತಿಂಗಳಿಗೆ ಸುಮಾರು 10-12 ಕೋಟಿ ಡೋಸ್‌ಗಳನ್ನು ಪೂರೈಸುವಲ್ಲಿ ವಿಫಲವಾಗಿದ್ದರಿಂದ ಸುಮಾರು 25 ಕೋಟಿ ಭಾರತೀಯರಿಗೆ ಲಸಿಕೆ ಹಾಕುವ ಹಿಂದಿನ ಆಗಸ್ಟ್‌ನ ಗುರಿಯನ್ನು ತಗ್ಗಿಸುವುದಲ್ಲದೆ, ಜುಲೈ ವೇಳೆಗೆ 51.6 ಕೋಟಿ ವ್ಯಕ್ತಿಗಳಿಗೆ ಲಸಿಕೆ ಹಾಕುವ ಗುರಿಯನ್ನು ತಪ್ಪಿ ಹೋಗುವ ಸಾಧ್ಯತೆಯಿದೆ ಎನ್ನಲಾಗಿದೆ.

(ಒನ್‌ಇಂಡಿಯಾ ಸುದ್ದಿ)

English summary
India Achieves July Covid Vaccination Target But to Miss 25 Crore-Mark Initially Set for August says Data.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X