• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೋವಿಡ್ ಭೀತಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ; ಮಾರ್ಗಸೂಚಿ ಪ್ರಕಟ

|

ನವದೆಹಲಿ, ಜುಲೈ 24 : ಭಾರತದಲ್ಲಿ ಕೊರೊನಾ ವೈರಸ್ ಸೋಂಕಿನ ಭೀತಿಯ ನಡುವೆಯೇ ಸ್ವಾತಂತ್ರ್ಯ ದಿನಾಚರಣೆ ಬಂದಿದೆ. ಹೆಚ್ಚು ಜನರು ಸೇರದಂತೆ ಮಾರ್ಗಸೂಚಿ ನಿಯಮಗಳನ್ನು ಪಾಲನೆ ಮಾಡುತ್ತಲೇ ಸ್ವಾತಂತ್ರ್ಯ ದಿಚಾರಣೆಯನ್ನು ಆಚರಣೆ ಮಾಡಬೇಕಿದೆ.

   40 ಸಾವಿರ ಸೈನಿಕರಿಗೆ ಶಸ್ತ್ರಾಸ್ತ್ರ ಕೊಟ್ಟು ಕಳುಹಿಸಿದ ಚೀನಾ | Oneindia Kannada

   ಕೇಂದ್ರ ಗೃಹ ಸಚಿವಾಲಯ ಶುಕ್ರವಾರ ಸ್ವಾತಂತ್ರ್ಯ ದಿನಾಚರಣೆಗೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ರಾಜ್ಯ, ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಹೇಗೆ ಆಚರಣೆ ಮಾಡಬೇಕು? ಎಂದು ಸೂಚನೆಗಳನ್ನು ನೀಡಲಾಗಿದೆ.

   ಸ್ವಾತಂತ್ರ ದಿನಾಚರಣೆ, ವಿಡಿಯೋ ಮೂಲಕ ಉಗ್ರ ಝಾಕೀರ್ ಬೆದರಿಕೆ

   ಎಲ್ಲಾ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಈ ಕುರಿತು ಗೃಹ ಸಚಿವಾಲಯ ಪತ್ರವನ್ನು ಬರೆದಿದೆ. ಕೇಂದ್ರ ನೀಡಿರುವ ಮಾರ್ಗಸೂಚಿಗಳು ಪಾಲನೆಯಾಗುವಂತೆ ಎಚ್ಚರ ವಹಿಸಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ.

   ಸ್ವಾತಂತ್ರ್ಯ ದಿನಾಚರಣೆ ದಿನ ಕೆಂಪುಕೋಟೆಗೆ ಮಕ್ಕಳ ಪ್ರವೇಶ ಇಲ್ಲ

   ಹೆಚ್ಚು ಜನರು ಸೇರುವುದನ್ನು ತಡೆಯಬೇಕು, ತಂತ್ರಜ್ಞಾನವನ್ನು ಹೆಚ್ಚಾಗಿ ಬಳಕೆ ಮಾಡಬೇಕು. ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಲು ಅಗತ್ಯ ವ್ಯವಸ್ಥೆ ಮಾಡಬೇಕು ಎಂದು ಮಾರ್ಗಸೂಚಿಯಲ್ಲಿ ಸೂಚನೆಗಳನ್ನು ಕೊಡಲಾಗಿದೆ.

   ದೊರೆಸ್ವಾಮಿ ನಕಲಿ ಸ್ವಾತಂತ್ರ್ಯ ಹೋರಾಟಗಾರ ಎಂದು ಪುನರುಚ್ಚರಿಸಿದ ಯತ್ನಾಳ್

   ರಾಜ್ಯಮಟ್ಟದಲ್ಲಿ

   ರಾಜ್ಯಮಟ್ಟದಲ್ಲಿ

   * ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಬೆಳಗ್ಗೆ 9 ಗಂಟೆ ಬಳಿಕ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ನಡೆಯಬೇಕು. ರಾಷ್ಟ್ರಗೀತೆ ಹಾಡುವುದು, ಧ್ವಜಾರೋಹಣ, ಪೊಲೀಸರು/ಸಶಸ್ತ್ರ ಪಡೆಗಳಿಂದ ಗೌರವವಂದನೆ ಸ್ವೀಕಾರ ಮುಖ್ಯಮಂತ್ರಿಗಳ ಭಾಷಣ, ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಗಿಯಬೇಕು.

   * ಹೆಚ್ಚು ಜನರು ಸೇರದಂತೆ ಎಚ್ಚರ ವಹಿಸಬೇಕು. ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಕಾಪಾಡಬೇಕು. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು.

   * ಕೊರೊನಾ ವಾರಿಯರ್ಸ್‌ ಆದ ಡಾಕ್ಟರ್, ನರ್ಸ್, ಪೌರ ಕಾರ್ಮಿಕರಿಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಬೇಕು. ಅವರು ಕಾರ್ಯಗಳನ್ನು ಶ್ಲಾಘಿಸಬೇಕು. ಕೊರೊನಾ ವೈರಸ್ ಸೋಂಕಿನಿಂದ ಗುಣಮುಖರಾದ ಕೆಲವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಬಹುದು.

   ಜಿಲ್ಲಾ ಮಟ್ಟದ ಕಾರ್ಯಕ್ರಮ ಹೇಗಿರಬೇಕು?

   ಜಿಲ್ಲಾ ಮಟ್ಟದ ಕಾರ್ಯಕ್ರಮ ಹೇಗಿರಬೇಕು?

   * ಜಿಲ್ಲಾ ಮಟ್ಟದಲ್ಲಿಯೂ ಬೆಳಗ್ಗೆ 9ರ ಬಳಿಕ ಕಾರ್ಯಕ್ರಮ ನಡೆಯಬೇಕು. ಜಿಲ್ಲಾಧಿಕಾರಿ/ಸಚಿವರು ಧ್ವಜಾರೋಹಣ ಮಾಡುವುದು. ರಾಷ್ಟ್ರಗೀತೆ ಹಾಡಬೇಕು. ಪೊಲೀಸ್/ಹೋಂ ಗಾರ್ಡ್/ಎನ್‌ಸಿಸಿಯಿಂದ ಗೌರವವಂದನೆ ಸ್ವೀಕಾರ. ಭಾಷಣ ರಾಷ್ಟ್ರಗೀತೆ ಜೊತೆ ಕಾರ್ಯಕ್ರಮ ಮುಕ್ತಾಯ.

   * ಎಲ್ಲರೂ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಪಾಡಬೇಕು. ಹೆಚ್ಚು ಜನರು ಸೇರಬಾರದು. ಮಾಸ್ಕ್ ಧರಿಸುವುದು ಕಡ್ಡಾಯ.

   * ಕೋವಿಡ್‌ನಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಕೊರೊನಾ ವಾರಿಯರ್ಸ್ ಸೇವೆಯನ್ನು ಶ್ಲಾಘಿಸಬೇಕು. ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು. ಕೊರೊನಾದಿಂದ ಗುಣಮುಖರಾದ ಕೆಲವರನ್ನು ಸಹ ಆಹ್ವಾನಿಸಬಹುದಾಗಿದೆ.

   ತಾಲೂಕು ಮಟ್ಟದಲ್ಲಿನ ಕಾರ್ಯಕ್ರಮ

   ತಾಲೂಕು ಮಟ್ಟದಲ್ಲಿನ ಕಾರ್ಯಕ್ರಮ

   * ತಾಲೂಕು ಮಟ್ಟದಲ್ಲಿಯೂ ಬೆಳಗ್ಗೆ 9 ಗಂಟೆ ಬಳಿಕ ಕಾರ್ಯಕ್ರಮ ನಡೆಯಬೇಕು. ರಾಷ್ಟ್ರಗೀತೆಯಿದಿಗೆ ಕಾರ್ಯಕ್ರಮ ಆರಂಭ. ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್/ ಸಚಿವರಿಂದ ಧ್ವಜಾರೋಹಣ. ಸ್ವಾತಂತ್ರ್ಯ ದಿನಾಚರಣೆ ಬಗ್ಗೆ ಭಾಷಣ, ರಾಷ್ಟ್ರಗೀತೆ ಜೊತೆ ಕಾರ್ಯಕ್ರಮ ಮುಕ್ತಾಯ.

   * ಹೆಚ್ಚು ಜನರು ಸೇರಬಾರದು ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು ಕಡ್ಡಾಯ. ಕೊರೊನಾ ವಾರಿಯರ್ಸ್‌ಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಬೇಕು ಅವರ ಸೇವೆ ಶ್ಲಾಘಿಸಬೇಕು. ಕೊರೊನಾದಿಂದ ಗುಣಮುಖರಾದವರನ್ನು ಆಹ್ವಾನಿಸಬಹುದು.

   ಗ್ರಾಮ ಮಟ್ಟದಲ್ಲಿ ಕಾರ್ಯಕ್ರಮ

   ಗ್ರಾಮ ಮಟ್ಟದಲ್ಲಿ ಕಾರ್ಯಕ್ರಮ

   * ಗ್ರಾಮೀಣ ಮಟ್ಟದಲ್ಲಿನ ಕಾರ್ಯಕ್ರಮಗಳಲ್ಲಿ ಗ್ರಾಮ ಪಂಚಾಯಿತಿಯ ಮುಖ್ಯಸ್ಥರು ಧ್ವಜಾರೋಹಣ ಮಾಡಬೇಕು. ಹೆಚ್ಚು ಜನರು ಸೇರದಂತೆ ಎಚ್ಚರವನ್ನು ವಹಿಸಬೇಕು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಆರಂಭ, ಅಂತ್ಯಗೊಳ್ಳಬೇಕು.

   * ಮಾಸ್ಕ್ ಬಳಕೆ ಕಡ್ಡಾಯ. ಗ್ರಾಮೀಣ ಮಟ್ಟದಲ್ಲಿ ಲಭ್ಯವಿರುವ ಕೊರೊನಾ ವಾರಿಯರ್ಸ್, ಆರೋಗ್ಯ ಸಹಾಯಕರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು.

   English summary
   Ministry of Home Affairs (MHA) issues advisory for Independence Day celebrations. Ask all govt offices, states, Governors etc to avoid congregation of public and use technology for the celebrations.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X