ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download
LIVE

Independence Day Celebrations 2020 Live Updates: ಭಾರತಕ್ಕೆ ಶೀಘ್ರ ತ್ರಿವಳಿ ಕೊರೊನಾ ಲಸಿಕೆ: ಮೋದಿ ಭರವಸೆ

|
Google Oneindia Kannada News

ನವದೆಹಲಿ, ಆಗಸ್ಟ್ 15: ಭಾರತಕ್ಕೆ ಸ್ವಾತಂತ್ರ್ಯ ಬಂದು 73 ವರ್ಷ ಕಳೆದಿದೆ. ಈ ಬಾರಿ 74ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಗುತ್ತಿದೆ.

ಸ್ವಾತಂತ್ರ್ಯ ದಿನಾಚರಣೆ ಈ ಬಾರಿ ಕೊವಿಡ್ 19 ರೋಗದಿಂದಾಗಿ ಕಳೆಗುಂದಿದೆ. ಸಾರ್ವಜನಿಕರು ಗುಂಪು ಸೇರದೇ ಆಚರಣೆ ನಡೆಯುತ್ತಿರುವುದು ಇದೇ ಮೊದಲು. ಕೆಂಪು ಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತ್ರಿವರ್ಣ ಧ್ವಜ ಹಾರಿಸಲಿದ್ದಾರೆ. ಆದರೆ, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೀಮಿತ ಸಂಖ್ಯೆಯಲ್ಲಿ ಮಾತ್ರ ಜನರನ್ನು ಈ ಕಾರ್ಯಕ್ರಮಕ್ಕೆ ಸೇರಿಸಲಾಗುತ್ತದೆ.

ಪ್ರಧಾನಿ ಧ್ವಜ ಹಾರಿಸಿದ ಬಳಿಕ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡುತ್ತಾರೆ. ಅದರ ನೇರ ಪ್ರಸಾರದ ವ್ಯವಸ್ಥೆ ಮಾತ್ರ ಇರುತ್ತದೆ. ಹಾಗೆಯೇ, ಮಿಲಿಟರಿ ಬ್ಯಾಂಡ್​ಗಳ ಪ್ರದರ್ಶನವನ್ನು ಮುಂಚಿತವಾಗಿಯೇ ಮಾಡಿ ಅದರ ಚಿತ್ರೀಕರಣ ಮಾಡಲಾಗುತ್ತಿದ್ದು, ಆ. 15ರಂದು ಅದರ ಪ್ರಸಾರವಾಗಲಿದೆ.

74th Independence Day Celebrations 2020 Live Updates, News In Kannada

ಕೆಂಪು ಕೋಟೆಯಲ್ಲಿ ನಡೆಯುವ ಧ್ವಜಾರೋಹಣ ಸಮಾರಂಭದಲ್ಲಿ ಸೇನಾ ಪಡೆಗಳ ಪಥಸಂಚಲನ, ಬ್ಯಾಂಡ್ ವಾದನ ಇತ್ಯಾದಿ ಕಾರ್ಯಕ್ರಮಗಳು ಇರುತ್ತವೆ.

ಈ ವರ್ಷದ ಸ್ವಾತಂತ್ರ್ಯೋತ್ಸವದ ಧ್ಯೇಯವಾಕ್ಯ ಸ್ವಾವಲಂಬಿ ಭಾರತ ಎಂದು ಇರಲಿದೆ. ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ವರ್ಷ 9 ಗಂಟೆ ನಂತರ ಕಾರ್ಯಕ್ರಮವಿರುತ್ತದೆ.

ಧ್ವಜಾರೋಹಣ, ಪೊಲೀಸರಿಂದ ಗೌರವ ಸಲ್ಲಿಕೆ, ಮುಖ್ಯಮಂತ್ರಿಗಳ ಭಾಷಣ ಮತ್ತು ನಂತರ ಕೊನೆಯಲ್ಲಿ ರಾಷ್ಟ್ರಗೀತೆಯಿರುತ್ತದೆ. ಸ್ವಾತಂತ್ರ್ಯದಿನದ ಕ್ಷಣಕ್ಷಣದ ಮಾಹಿತಿ ಒನ್‌ ಇಂಡಿಯಾದಲ್ಲಿ ಲಭ್ಯವಾಗಲಿದೆ.

Newest FirstOldest First
11:05 AM, 15 Aug

ಉತ್ತರ ಪ್ರದೇಶ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಲಕ್ನೋದಲ್ಲಿ ಧ್ವಜಾರೋಹಣ ಮಾಡಿದರು.
11:04 AM, 15 Aug

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಧ್ವಜಾರೋಹಣ ನೆರವೇರಿಸಿದರು.
11:03 AM, 15 Aug

ಛತ್ತೀಸ್‌ಗಢ: ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಸ್ವಜಾರೋಹಣ ಮಾಡಿದರು
11:02 AM, 15 Aug

ಅತ್ತರಿ-ವಾಗಾ ಗಡಿಯಲ್ಲಿ ಐಟಿಬಿಪಿ ಮುಖ್ಯಸ್ಥ ಎಸ್‌ಎಸ್‌ ದೇಸ್ವಾಲ್ ಧ್ವಜಾರೋಹಣ ನೆರವೇರಿಸಿದರು.
10:59 AM, 15 Aug

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಧ್ವಜಾರೋಹಣ ಮಾಡಿದರು
8:58 AM, 15 Aug

ಗಡಿಯಲ್ಲಿ 1 ಲಕ್ಷ ಎನ್‌ಸಿಸಿ ಕೆಡೆಟ್‌ಗಳನ್ನು ನಿಯೋಜನೆ ಮಾಡಲಾಗುತ್ತದೆ, ಅದರಲ್ಲಿ ಹೆಣ್ಣುಮಕ್ಕಳಿಗೆ ಹೆಚ್ಚು ಆಧ್ಯತೆ ನೀಡಲಾಗುತ್ತದೆ-ಮೋದಿ
8:53 AM, 15 Aug

ಸ್ವಾವಲಂಬಿ ಭಾರತಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ 100 ಕ್ಕೂ ಹೆಚ್ಚು ರಕ್ಷಣಾ ವಸ್ತುಗಳ ಆಮದನ್ನು ನಿಲ್ಲಿಸಿದ್ದೇವೆ-ಮೋದಿ
Advertisement
8:51 AM, 15 Aug

ಕೊವಿಡ್ 19 ಸಂದರ್ಭದಲ್ಲಿ ಸಹಾಯ ಮಾಡಿದ ನೆರೆಯ ರಾಷ್ಟ್ರಗಳಿಗೆ ಮೋಧಿ ಅಭಿನಂದನೆ ಸಲ್ಲಿಸಿದರು
8:46 AM, 15 Aug

ಎಲ್‌ಎಸಿಯಿಂದ ಎಲ್‌ಒಸಿವರೆಗೆ ನಮ್ಮ ರಾಷ್ಟ್ರೀಯ ಭದ್ರತೆಗೆ ತೊಂದರೆ ಮಾಡಲು ಹೊರಟವರಿಗೆ ನಮ್ಮ ಯೋಧರು ಉತ್ತಮ ಉತ್ತರ ನೀಡಿದ್ದಾರೆ.
8:44 AM, 15 Aug

ಆತಂಕವಾದವಿರಲಿ, ವಿಸ್ತಾರವಾದವಿರಲಿ ಭಾರತವು ಒಗ್ಗಟ್ಟಿನಿಂದ ಹೋರಾಡುತ್ತಿದೆ-ಮೋದಿ
8:42 AM, 15 Aug

ದೇಶದ ಹಲವಾರು ನಗರದಲ್ಲಿ ಮಾಲಿನ್ಯವನ್ನು ಕಡಿಮೆ ಮಾಡಲು ಯೋಜನೆ ರೂಪಿಸಲಾಗುತ್ತಿದೆ-ಮೋದಿ
8:40 AM, 15 Aug

ಲಡಾಖ್‌ನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಲಾಗಿದೆ, ಲಡಾಖ್ ಜನರ ಬಹು ವರ್ಷಗಳ ಕನಸನ್ನು ನಾವು ನನಸು ಮಾಡಿದ್ದೇವೆ, ಇನ್ನು ಅಭಿವೃದ್ಧಿಯ ಅವಶ್ಯಕತೆ ಇದೆ-ಮೋದಿ
Advertisement
8:39 AM, 15 Aug

ಜಮ್ಮು ಕಾಶ್ಮೀರಲ್ಲಿ ಮತ್ತೆ ಚುನಾವಣೆ ನಡೆಯಲಿದೆ, ಜಮ್ಮು ಕಾಶ್ಮೀರಲ್ಲಿ 370ನೇ ವಿಧಿ ನಿಷೇಧಿಸಿ ಒಂದು ವರ್ಷ ಕಳೆದಿದೆ.
8:34 AM, 15 Aug

ಭಾರತದಲ್ಲಿ ಮೂರು ಕಂಪನಿಗಳು ಕೊವಿಡ್ ಲಸಿಕೆಯನ್ನು ವಿವಿಧ ಹಂತಗಳಲ್ಲಿ ಪರೀಕ್ಷೆ ನಡೆಸುತ್ತಿವೆ
8:32 AM, 15 Aug

ಇವತ್ತಿನಿಂದ ನ್ಯಾಷನಲ್ ಡಿಜಿಟಲ್ ಹೆಲ್ತ್ ಮಿಷನ್ ಆರಂಭಿಸುತ್ತಿದ್ದೇವೆ. ಇದು ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನೇ ಮಾಡಲಿದೆ-ಮೋದಿ
8:31 AM, 15 Aug

ಕೊರೊನಾ ಸಂದರ್ಭದಲ್ಲಿ ಒಂದು ಲ್ಯಾಬ್‌ನಿಂದ 1400 ಲ್ಯಾಬ್‌ಗಳ ನಿರ್ಮಾಣ, 300 ಪರೀಕ್ಷೆಗಳಿಂದ 7 ಲಕ್ಷ ಪರೀಕ್ಷೆಗಳು ನಡೆಯುತ್ತಿವೆ- ಮೋದಿ
8:30 AM, 15 Aug

ರಾಷ್ಟ್ರೀಯ ಶಿಕ್ಷಣ ನೀತಿಯು ವಿದ್ಯಾರ್ಥಿಗಳನ್ನು ತಮ್ಮ ಸಂಸ್ಕೃತಿಯಲ್ಲಿ ಬೇರೂರುವಂತೆ ಮಾಡುತ್ತದೆ. ಆದರೆ ಅವರನ್ನು ಜಾಗತಿಕ ನಾಗರಿಕರನ್ನಾಗಿ ಮಾಡುತ್ತೆ-ಮೋದಿ
8:27 AM, 15 Aug

ಕಳೆದ ತಿಂಗಳು ಭೀಮ್ ಹಾಗೂ ಯುಪಿಐ ಅಡಿ 3 ಲಕ್ಷ ಕೋಟಿ ವ್ಯವಹಾರ ನಡೆದಿದೆ-ಮೋದಿ
8:27 AM, 15 Aug

ಪ್ರತಿ ಹಳ್ಳಿ ಹಳ್ಳಿಗೂ ಆಪ್ಟಿಕಲ್ ಫೈಬರ್ ಸಂಪರ್ಕ ನೀಡಲಾಗುತ್ತದೆ-ಮೋದಿ
8:21 AM, 15 Aug

ಆಧುನಿಕ ಭಾರತ ನಿರ್ಮಾಣದಲ್ಲಿ ದೇಶದ ಶಿಕ್ಷಣಕ್ಕೆ ಹೆಚ್ಚು ಪ್ರಾಮುಖ್ಯತೆ ಇದೆ, ರಾಷ್ಟ್ರೀಯ ಶಿಕ್ಷಣ ನೀತಿ ಎಲ್ಲಾ ವಿದ್ಯಾರ್ಥಿಗಳನ್ನು ಒಂದುಗೂಡಿಸುತ್ತದೆ ಒಂದೇ ರೀತಿಯ ಶಿಕ್ಷಣ ಪಡೆಯುತ್ತಾರೆ- ಮೋದಿ
8:19 AM, 15 Aug

ಮಧ್ಯಮ ವರ್ಗದವರ ಹಣವನ್ನು ಸುರಕ್ಷಿತವಾಗಿಸುವ ನಿಟ್ಟಿನಲ್ಲಿ ಕೋ-ಆಪರೇಟಿವ್ ಬ್ಯಾಂಕ್‌ಗಳನ್ನು ಆರ್‌ಬಿಐ ಜೊತೆ ಜೋಡಣೆ ಮಾಡಲಾಗಿದೆ-ಮೋದಿ
8:16 AM, 15 Aug

ಮನೆಗೆ ನೀರು ತಲುಪಿಸುವ ಯೋಜನೆ ಜಲ ಜೀವನ್ ಮಿಷನ್ ನಿಂದ 2 ಕೋಟಿ ಮನೆಗೆ ನೀರು ತಲುಪಿಸುವ ಕಾರ್ಯವನ್ನು ನಾವು ಮಾಡಿದ್ದೇವೆ.-ಮೋದಿ
8:12 AM, 15 Aug

ವಿಕಾಸದ ಈ ಯಾತ್ರೆಯಲ್ಲಿ ಸಮಾಜದಲ್ಲಿ ಜನರು ಹಿಂದೆ ಉಳಿದುಬಿಡುತ್ತಿದ್ದಾರೆ, ಬಡತನದಿಂದಾಗಿ ಮುಂದೆ ಬರಲು ಸಾಧ್ಯವಾಗುತ್ತಿಲ್ಲ. ಆತ್ಮ ನಿರ್ಭರ ಭಾರತವನ್ನಾಗಿಸಬೇಕು, ಹಿಂದುಳಿದ 110 ಜಿಲ್ಲೆಗಳನ್ನು ಗುರುತಿಸಿದ್ದು, ಅವುಗಳನ್ನು ಮುನ್ನಡೆಸುವ ಕುರಿತು ಆಲೋಚಿಸಲಾಗಿದೆ-ಮೋದಿ
8:07 AM, 15 Aug

ಸಾಮರ್ಥ್ಯ ಮೂಲಂ ಸ್ವಾತಂತ್ರಂ, ಶ್ರಮ ಮೂಲಂಚ ವೈಭವಂ, ಯಾವುದೇ ಸಮಾಜದ ಸ್ವಾತಂತ್ರ್ಯ ಅವರ ಸಾಮರ್ಥ್ಯವಾಗಿರುತ್ತೆ, ಶ್ರಮವೇ ಅವರ ಉತ್ತಮ ಜೀವನಕ್ಕೆ ಕಾರಣವಾಗಿರುತ್ತದೆ-ಮೋದಿ
8:02 AM, 15 Aug

ಕೊರೊನಾ, ಭೂಕಂಪ, ಪ್ರವಾಹ ಏನೇ ಬರಲಿ ಜನರು ಆತ್ಮ ವಿಶ್ವಾಸವನ್ನು ಬಿಟ್ಟಿಲ್ಲ, ಗಟ್ಟಿ ಮನಸ್ಸಿನಿಂದ ಮುನ್ನುಗ್ಗಿದ್ದಾರೆ-ಮೋದಿ
8:01 AM, 15 Aug

ಮೇಕ್ ಇನ್ ಇಂಡಿಯಾ ಜೊತೆಗೆ ಮೇಕ್‌ ಫಾರ್ ವರ್ಲ್ಡ್ ಘೋಷವಾಖ್ಯದೊಂದಿಗೆ ಮುನ್ನುಗ್ಗಬೇಕಿದೆ-ಮೋದಿ
7:59 AM, 15 Aug

ರಾಷ್ಟ್ರೀಯ ಶಿಕ್ಷಣ ನೀತಿ, ಒಂದು ದೇಶ ಒಂದು ರೇಷನ್ ಕಾರ್ಡ್ ಯಾವುದೇ ಇರಲಿ ಪರಿವರ್ತನೆಯ ಕಾಲಘಟ್ಟವನ್ನು ವಿಶ್ವ ನೋಡುತ್ತಿದೆ- ಮೋದಿ
7:58 AM, 15 Aug

ವೋಕಲ್ ಫಾರ್ ಲೋಕಲ್ ಎನ್ನುವುದು ದೇಶದ ಮಂತ್ರವಾಗಿರಬೇಕು-ಮೋದಿ
7:57 AM, 15 Aug

ಕೊರೊನಾ ಸಂಕಟದ ಸಮಯದಲ್ಲಿ ಕೆಲವು ವಸ್ತುಗಳ ಅವಶ್ಯಕತೆ ಇತ್ತು, ವಿಶ್ವದಿಂದ ತರಿಸಿಕೊಳ್ಳುವ ಅಗತ್ಯವಿತ್ತು. ಆದರೆ ಸಿಗುತ್ತಿರಲಿಲ್ಲ. ಆದರೆ ಉದ್ಯಮಿಗಳು ಮನಸ್ಸು ಮಾಡಿ ಎನ್‌ 95 ಮಾಸ್ಕ್ ತಯಾರಿಕೆಯಿಂದ ಹಿಡಿದು ಸಾಕಷ್ಟು ಕೆಲಸವನ್ನು ಮಾಡಿವೆ. ಬೇರೆ ದೇಶಗಳಿಗೆ ರಫ್ತನ್ನು ಕೂಡ ಮಾಡಿದ್ದೇವೆ-ಮೋದಿ
7:55 AM, 15 Aug

ಕೇವಲ ಆಮದು ಕಡಿಮೆ ಮಾಡುವುದು ಮಾತ್ರ ಆತ್ಮ ನಿರ್ಭರವಲ್ಲ, ನಮ್ಮ ದೇಶೀಯ ವಸ್ತುಗಳನ್ನು ಮಾರ್ಕೆಟಿಂಗ್ ಮಾಡುವುದು, ಕೌಶಲ್ಯವನ್ನು ಹೆಚ್ಚಿಸುವುದು ಕೂಡ ಪ್ರಮುಖವಾಗಿದೆ-ಮೋದಿ
READ MORE

English summary
Independence Day 2020: Check out the 74th Independence Day celebrations news, images, videos and updates in kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X