ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download
LIVE

Independence Day 2022 Live: ಭಾರತದಲ್ಲಿ 75ನೇ ಸ್ವಾತಂತ್ರ್ಯ ಸಂಭ್ರಮ

|
Google Oneindia Kannada News

ತ್ಯಾಗ, ಬಲಿದಾನ, ನಿರಂತರ ಹೋರಾಟದ ಫಲವಾಗಿ ಭಾರತಕ್ಕೆ ಸ್ವಾತಂತ್ರ್ಯ ದಕ್ಕಿದೆ. ಸ್ವಾತಂತ್ರ್ಯ ಕೇವಲ ಒಬ್ಬರ ಸ್ವತ್ತಲ್ಲ. ಸ್ವಾತಂತ್ರ್ಯ ಎಲ್ಲರ ಹಕ್ಕು. ಎಲ್ಲರಿಗೂ ಸೇರಿದ ಈ ಸ್ವಾತಂತ್ರ್ಯ ಲಭಿಸಲು ಅನೇಕ ಮಹನೀಯರ ಕೊಡುಗೆ ಇದೆ. ಜೊತೆಗೆ ಹೋರಾಟವೂ ಸಾವಿರಾರು ಅನಾಮಧೇಯರಿಗೆ ಸೇರಿದೆ. ಹೋರಾಟದಲ್ಲಿ ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು, ವಿದ್ಯಾವಂತರು ಸೇರಿದಂತೆ ಹಲವರ ಅಂದಿನ ಪರಿಶ್ರಮ ಇಂದಿನ ಭವಿಷ್ಯ ಭಾರತವನ್ನು ರೂಪಿಸುತ್ತಿದೆ.

''ಭಾರತವು ಸ್ವಾತಂತ್ರ್ಯದ 75 ವರ್ಷಗಳನ್ನು ಪೂರೈಸುವ ಸಂದರ್ಭದಲ್ಲಿ ಅದ್ಭುತ ಮತ್ತು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ. ನನ್ನ ಪ್ರೀತಿಯ ದೇಶವಾಸಿಗಳೇ, ಇಂದು ನಾವು ದೇಶಾದ್ಯಂತ 75 ವರ್ಷಗಳ ಸ್ವಾತಂತ್ರ್ಯದ ಕುರಿತು ನಮ್ಮ ಚರ್ಚೆಯನ್ನು ಪ್ರಾರಂಭಿಸಿದ್ದೇವೆ. ನಾವು ಮುಂದಿನ ಬಾರಿ ಭೇಟಿಯಾದಾಗ, ನಮ್ಮ ಮುಂದಿನ 25 ವರ್ಷಗಳ ಪ್ರಯಾಣವು ಈಗಾಗಲೇ ಪ್ರಾರಂಭವಾಗಲಿದೆ, ಮನೆ ಮನೆಗಳಲ್ಲಿ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಿ'' ಎಂದು ಪ್ರಧಾನಿ ಮೋದಿ ಮನ್ ಕೀ ಬಾತ್ ಮೂಲಕ ದೇಶದ ಜನತೆ ಕರೆ ನೀಡಿದ್ದು, ದೇಶದೆಲ್ಲೆಡೆ ತ್ರಿವರ್ಣ ಧ್ವಜ ಹಾರಾಡುತ್ತಿದೆ.

ಆಜಾದಿ ಕಾ ಅಮೃತ್ ಮಹೋತ್ಸವವು 75 ವರ್ಷಗಳ ಸ್ವಾತಂತ್ರ್ಯದ ಹೋರಾಟ, ಸಂಸ್ಕೃತಿ ಮತ್ತು ಸಾಧನೆಗಳ ವೈಭವಯುತ ಇತಿಹಾಸವನ್ನು ಆಚರಿಸಲು ಮತ್ತು ಸ್ಮರಿಸಲು ಭಾರತ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ಮಹೋತ್ಸವವು ಭಾರತವನ್ನು ತನ್ನ ವಿಕಸನೀಯ ಪಯಣದಲ್ಲಿ ಇಲ್ಲಿಯವರೆಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಮಾತ್ರವಲ್ಲದೆ ಜನರಲ್ಲಿ ಶಕ್ತಿ ಮತ್ತು ಸಾಮರ್ಥ್ಯವನ್ನು ಉತ್ತೇಜಿಸುವ ಭಾರತ 2.0 ಅನ್ನು ಸಕ್ರಿಯಗೊಳಿಸುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆತ್ಮನಿರ್ಭರ ಭಾರತದಿಂದ ಉತ್ತೇಜಿಸಲ್ಪಟ್ಟಿದೆ.

Independence Day 2022 Live Updates in Kannada, President Draupadi Murmu, PM Modi Speech Highlights


Newest FirstOldest First
3:35 PM, 15 Aug

ಸ್ವಾತಂತ್ರ್ಯದ 75 ವರ್ಷಗಳನ್ನು ಪೂರ್ಣಗೊಳಿಸಿದ ಸಂದರ್ಭದಲ್ಲಿ ಮತ್ತು ಆಜಾದಿ ಕಾ ಅಮೃತ್ ಮಹೋತ್ಸವದ ಆಚರಣೆಯ ಭಾಗವಾಗಿ, 3 ಸೆಕ್ಟರ್ ರಾಷ್ಟ್ರೀಯ ರೈಫಲ್ಸ್: ಭಾರತೀಯ ಸೇನೆಯ ಆಶ್ರಯದಲ್ಲಿ ಮೌಂಟ್ ಹರ್ಮುಖ್ ಶಿಖರವನ್ನು ಏರಿದೆ.
3:03 PM, 15 Aug

ಐಟಿಬಿಪಿ ಯೋಧರು ಜಮ್ಮುವಿನ ಪಾಂಗಾಂಗ್ ತ್ಸೋ ತೀರದಲ್ಲಿ ಸ್ವಾತಂತ್ರ್ಯ ದಿನವನ್ನು ಆಚರಿಸಿದರು.
12:18 PM, 15 Aug

ಭಾರತದಲ್ಲಿನ ಜಪಾನ್ ರಾಯಭಾರ ಕಚೇರಿಯು ಭಾರತದ ಸ್ವಾತಂತ್ರ್ಯ ದಿನದಂದು ಭಾರತದ ರಾಷ್ಟ್ರಗೀತೆಯ ಗಾಯನ ಮತ್ತು ವಾದ್ಯಗಳ ನಿರೂಪಣೆಯನ್ನು ಪ್ರಸ್ತುತಪಡಿಸಲಾಯಿತು.
10:11 AM, 15 Aug

ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಸ್ವಾತಂತ್ರ್ಯ ದಿನದ ಶುಭಾಶಯಗಳನ್ನು ತಿಳಿಸಿದ್ದಾರೆ "ಕಳೆದ 75 ವರ್ಷಗಳಲ್ಲಿ, ಪ್ರತಿಭಾವಂತ ಭಾರತೀಯರ ಸಂಪೂರ್ಣ ಕಠಿಣ ಪರಿಶ್ರಮದಿಂದ ಭಾರತವು ವಿಜ್ಞಾನ, ಶಿಕ್ಷಣ, ಆರೋಗ್ಯ, ಮಾಹಿತಿ ತಂತ್ರಜ್ಞಾನ ಮತ್ತು ಇತರ ಕ್ಷೇತ್ರಗಳಲ್ಲಿ ಜಾಗತಿಕ ಛಾಪು ಮೂಡಿಸಿದೆ ಎಂದು ಅವರು ಬರೆದುಕೊಂಡಿದ್ದಾರೆ.
9:43 AM, 15 Aug

ರಾಜ್ಯದ ಕರಕುಶಲ ಕಾರ್ಮಿಕರಿಗೆ 50 ಸಾವಿರ ರೂಪಾಯಿ ಒದಗಿಸುವ ವಿಶೇಷ ಯೋಜನೆ ಪ್ರಾರಂಭಿಸಲಾಗುವುದು ಎಂದು ಬೊಮ್ಮಾಯಿ ಘೋಷಿಸಿದರು.
9:43 AM, 15 Aug

ಕರ್ನಾಟಕದ ಪ್ರತಿಯೊಂದು ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳನ್ನು ಕಟ್ಟುವುದಕ್ಕಾಗಿ 250 ಕೋಟಿ ರೂಪಾಯಿ ಹಣವನ್ನು ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.
9:42 AM, 15 Aug

ಭಾರತದ ಹುತಾತ್ಮ ಯೋಧರ ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರದ ಜೊತೆಗೆ ಅವರ ಮಕ್ಕಳಿಗೆ ಸರ್ಕಾರಿ ಉದ್ಯೋಗ ನೀಡಲಾಗುವುದು.
Advertisement
9:28 AM, 15 Aug

ಕರ್ನಾಟಕವು ದೇಶದಲ್ಲಿಯೇ ವೈಚಿತ್ರ್ಯಗಳನ್ನು ಹೊಂದಿರುವ ರಾಜ್ಯವಾಗಿದೆ. ಕೃಷಿ ಆಧಾರಿತ ಪ್ರದೇಶಗಳಿದ್ದು, 365 ದಿನಗಳೂ ನಮ್ಮ ರಾಜ್ಯದಲ್ಲಿ ಕೃಷಿ ಚಟುವಟಿಕೆಗಳು ನಡೆಯುತ್ತವೆ.
9:25 AM, 15 Aug

ಭಾರತದಲ್ಲಿ ಯಾವುದೇ ಕೊರತೆಯಿಲ್ಲ. ನೈಸರ್ಗಿಕ ಸಂಪನ್ಮೂಲ, ಛಲಯುಳ್ಳ ಜನ ಸಮುದಾಯ, ದುಡಿಯುವ ಮನಸ್ಥಿತಿಯುಳ್ಳ ಜನರನ್ನು ಹೊಂದಿರುವ ರಾಷ್ಟ್ರವಾಗಿದೆ.
9:25 AM, 15 Aug

ಸ್ವಾತಂತ್ರ್ಯ ಪೂರ್ವದಲ್ಲಿ ದೇಶಕ್ಕಾಗಿ ಏನು ಮಾಡುತ್ತೀರಾ ಎಂದು ಪ್ರಜೆಗಳನ್ನು ಕೇಳಿದರೆ, ಪ್ರಾಣವನ್ನೇ ಕೊಡುತ್ತೀವಿ ಎಂದು ಹೇಳುತ್ತಿದ್ದರು. ಆದರೆ ಈಗ ಪ್ರಾಣ ಕೊಡುವ ಅಗತ್ಯವಿಲ್ಲ, ದೇಶದ ಅಭಿವೃದ್ಧಿಗಾಗಿ ಪ್ರತಿಯೊಬ್ಬರು ತಮ್ಮ ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ಮಾಡಬೇಕು ಎಂದು ಸಿಎಂ ಕರೆ ನೀಡಿದರು.
9:23 AM, 15 Aug

ಈ ದೇಶವನ್ನು ಕಟ್ಟುವಲ್ಲಿ ವೈದ್ಯರು, ಇಂಜಿನಿಯರ್, ದೀನದಲಿತರು, ಕೂಲಿ ಕಾರ್ಮಿಕರು ಸೇರಿದಂತೆ ಪ್ರತಿಯೊಬ್ಬರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
9:22 AM, 15 Aug

ಪ್ರಾಣದ ಹಂಗು ತೊರೆದು ದೇಶದ ರಕ್ಷಣೆ ಮಾಡುತ್ತಿರುವ ಮಹಾನ್ ಸೈನಿಕರಿಗೆ ನನ್ನ ಪ್ರಣಾಮಗಳು. ಅದೇ ರೀತಿ ಈ ದೇಶದ ಆಂತರಿಕ ಸುರಕ್ಷತೆಯನ್ನು ನೋಡಿಕೊಳ್ಳುತ್ತಿರುವ ಪೊಲೀಸ್ ಪಡೆಗೆ ನಮ್ಮ ಪ್ರಣಾಮಗಳು.
Advertisement
9:19 AM, 15 Aug

ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರೂ, ಲಾಲ್ ಬಹದ್ದೂರ್ ಶಾಸ್ತ್ರಿ ಸೇರಿದಂತೆ ಪ್ರಾರಂಭದಲ್ಲಿ ಹಲವರು ದೇಶವನ್ನು ಆಳಿದ್ದಾರೆ. ಪ್ರತಿಯೊಬ್ಬ ನಾಯಕರು ದೇಶಕ್ಕೆ ನೀಡಿರುವ ಕೊಡುಗೆಯನ್ನು ಸ್ಮರಿಸಿಕೊಳ್ಳುವ ಕಾರ್ಯಕ್ಕೆ ಪ್ರಧಾನಿ ಮೋದಿ ನಾಂದಿ ಹಾಡಿದ್ದಾರೆ.
9:17 AM, 15 Aug

ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ಪ್ರತಿಯೊಬ್ಬರಿಗೂ ನಾನು ವಿಶೇಷ ನಮನಗಳನ್ನು ಸಲ್ಲಿಸುತ್ತೇನೆ. 75ನೇ ಸ್ವಾತಂತ್ರ್ಯ ಮಹೋತ್ಸವವನ್ನು ಆ ಅನಾಮಧೇಕ ಹೋರಾಟಗಾರರಿಗೆ ಸಮರ್ಪಣೆ ಮಾಡುತ್ತೇನೆ.
9:14 AM, 15 Aug

1824ರಲ್ಲಿ ಕನ್ನಡ ನಾಡಿನ ಕಿತ್ತೂರು ರಾಣಿ ಚೆನ್ನಮ್ಮ ಮೊದಲು ಬ್ರಿಟೀಷರಿಗೆ ಸೆಡ್ಡು ಹೊಡೆದಿದ್ದರು. ಇವರ ಜೊತೆಗೆ ಸಂಗೊಳ್ಳಿ ರಾಯಣ್ಣ, ವೀರವನಿತೆ ಮಲ್ಲಮ್ಮರನ್ನು ಯಾರೂ ಮರೆಯುವುದಕ್ಕೆ ಸಾಧ್ಯವಿಲ್ಲ.
9:13 AM, 15 Aug

ದೇಶದಲ್ಲಿ ರೈತ ಚಳುವಳಿ ಮುಂಚೂಣಿಯಲ್ಲಿದ್ದಾಗ, ನಮ್ಮ ಸಿಪಾಯಿ ದಂಗೆ ಮುಂಚೂಣಿಯಲ್ಲಿತ್ತು. ಇದಕ್ಕೂ ಪೂರ್ಣದಲ್ಲಿ ನಡೆದ ಜಲಿಯನ್ ವಾಲಾಬಾಗ್ ಅನ್ನು ಮರೆಯಲು ಸಾಧ್ಯವಿಲ್ಲ. ಈ ಅವಧಿಯಲ್ಲಿ ಭಗತ್ ಸಿಂಗ್ ಮತ್ತು ಅವರ ತಂಡ ದಂಗೆ ಎದ್ದಾಗ ಇಡೀ ದೇಶವೇ ಜಾಗೃತಿಗೊಂಡಿತ್ತು.
9:11 AM, 15 Aug

ಬ್ರಿಟೀಷರು ವ್ಯಾಪಾರಕ್ಕೆ ಬಂದು ಅಧಿಕಾರ ಆರಂಭಿಸಿದ 50 ರಿಂದ 60 ವರ್ಷಗಳಲ್ಲಿ ಭಾರತೀಯರಲ್ಲಿ ಈ ಪರಕೀಯ ಆಡಳಿತ ಮತ್ತು ಗುಲಾಮಗಿರಿಯನ್ನು ಕಿತ್ತೊಗೆಯುವ ಮನಸ್ಥಿತಿ ಹುಟ್ಟಿಕೊಂಡಿತು.
9:10 AM, 15 Aug

ಭಾರತಕ್ಕೆ ಸ್ವಾತಂತ್ರ್ಯ ಎಂಬುದು ಸುಲಭವಾಗಿ ಸಿಕ್ಕಿಲ್ಲ ಎಂಬುದು ನಿಮಗೆಲ್ಲ ಗೊತ್ತಿದೆ. 150 ವರ್ಷಗಳ ಸುದೀರ್ಘ ಹೋರಾಟದ ಇತಿಹಾಸವನ್ನು ಹೊಂದಿದೆ. ಬಹಳಷ್ಟು ಜನರ ತ್ಯಾಗ ಬಲಿದಾನದ ಜೊತೆಗೆ ಆಸ್ತಿಪಾಸ್ತಿಯನ್ನು ಕಳೆದುಕೊಂಡಿದ್ದಾರೆ.
9:09 AM, 15 Aug

ನಾಡಿನ ಜನತೆಗೆ ಸ್ವಾತಂತ್ರ್ಯ ಮಹೋತ್ಸವದ ಶುಭಾಶಯ ಕೋರಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ.
9:08 AM, 15 Aug

ಭಾರತದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆ ರಾಜ್ಯವನ್ನು ಉದ್ದೇಶಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಷಣ.
9:02 AM, 15 Aug

ಬೆಂಗಳೂರಿನ ಮಾಣಿಕ್ ಶಾ ಮೈದಾನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯಿಂದ ಧ್ವಜಾರೋಹಣ.
8:58 AM, 15 Aug

ಇಂದು ನಾವು ಎದುರಿಸುತ್ತಿರುವ ಎರಡು ದೊಡ್ಡ ಸವಾಲುಗಳು - ಭ್ರಷ್ಟಾಚಾರ ಮತ್ತು 'ಪರಿವಾರ' ಅಥವಾ ಸ್ವಜನಪಕ್ಷಪಾತ. ಭ್ರಷ್ಟಾಚಾರವು ಗೆದ್ದಲಿನಂತೆ ದೇಶವನ್ನು ಟೊಳ್ಳಾಗಿಸುತ್ತಿದೆ, ನಾವು ಅದರ ವಿರುದ್ಧ ಹೋರಾಡಬೇಕಾಗಿದೆ. ನಮ್ಮ ಸಂಸ್ಥೆಗಳ ಶಕ್ತಿಯನ್ನು ಅರಿತುಕೊಳ್ಳಲು, ಅರ್ಹತೆಯ ಆಧಾರದ ಮೇಲೆ ದೇಶವನ್ನು ಮುನ್ನಡೆಸಲು ನಾವು 'ಪರಿವಾರ'ದ ವಿರುದ್ಧ ಜಾಗೃತಿ ಮೂಡಿಸಬೇಕು ಎಂದು ಪ್ರಧಾನಿ ಮೋದಿ ಕರೆ ನೀಡಿದರು.
8:55 AM, 15 Aug

ದೇಶದಲ್ಲಿನ ಭ್ರಷ್ಟಾಚಾರದ ವಿರುದ್ಧ ನಮ್ಮೆಲ್ಲರ ಶಕ್ತಿಯಿಂದ ಹೋರಾಡಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ.
8:51 AM, 15 Aug

ದೇಶದ ಯುವಕರು ಬಾಹ್ಯಾಕಾಶದಿಂದ ಸಮುದ್ರದ ಆಳದವರೆಗಿನ ಎಲ್ಲಾ ಕ್ಷೇತ್ರಗಳಲ್ಲಿ ಸಂಶೋಧನೆಗೆ ಎಲ್ಲಾ ಬೆಂಬಲವನ್ನು ಪಡೆಯುವುದು ನಮ್ಮ ಪ್ರಯತ್ನವಾಗಿದೆ. ಅದಕ್ಕಾಗಿಯೇ ನಾವು ನಮ್ಮ ಬಾಹ್ಯಾಕಾಶ ಮಿಷನ್ ಮತ್ತು ಡೀಪ್ ಓಷನ್ ಮಿಷನ್ ಅನ್ನು ವಿಸ್ತರಿಸುತ್ತಿದ್ದೇವೆ. ನಮ್ಮ ಭವಿಷ್ಯಕ್ಕೆ ಪರಿಹಾರ ಬಾಹ್ಯಾಕಾಶ ಮತ್ತು ಸಾಗರದ ಆಳದಲ್ಲಿದೆ: ಪ್ರಧಾನಿ ಮೋದಿ
8:47 AM, 15 Aug

ಲಾಲ್ ಬಹದ್ದೂರ್ ಶಾಸ್ತ್ರಿಯವರ 'ಜೈ ಜವಾನ್, ಜೈ ಕಿಸಾನ್' ಘೋಷಣೆಯನ್ನು ನಾವು ಯಾವಾಗಲೂ ನೆನಪಿಸಿಕೊಳ್ಳುತ್ತೇವೆ. ನಂತರ, ಅಟಲ್ ಬಿಹಾರಿ ವಾಜಪೇಯಿ ಈ ಘೋಷಣೆಗೆ 'ಜೈ ವಿಜ್ಞಾನ' ಸೇರಿಸಿದರು. ಈಗ, ಅದಕ್ಕೆ 'ಜೈ ಅನುಸಂಧಾನ ಅನ್ನು ಸೇರಿಸುವ ಅವಶ್ಯಕತೆಯಿದೆ. ಆ ಮೂಲಕ ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್ ಔರ್ ಜೈ ಅನುಸಂಧಾನ ಎಂದು ಪ್ರಧಾನಿ ಮೋದಿ ಹೇಳಿದರು.
8:44 AM, 15 Aug

ಮಾತು ಮತ್ತು ನಡತೆಯಿಂದ ಮಹಿಳೆಯರ ಘನತೆಗೆ ಯಾವುದೇ ಕುಂದು ಬಾರದಂತೆ ನಾವು ನಡೆದುಕೊಳ್ಳುವುದು ತೀರಾ ಮುಖ್ಯವಾಗಿರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
8:36 AM, 15 Aug

ಪ್ರಜೆಗಳು ಆಕಾಂಕ್ಷಿಗಳಾಗಿರುವುದನ್ನು ನಾನು ನೋಡುತ್ತೇನೆ. ಮಹತ್ವಾಕಾಂಕ್ಷೆಯ ಸಮಾಜವು ಯಾವುದೇ ದೇಶಕ್ಕೆ ಆಸ್ತಿಯಾಗಿದೆ. ಇಂದು ಭಾರತದ ಪ್ರತಿಯೊಂದು ಮೂಲೆಯಲ್ಲಿ ಆಕಾಂಕ್ಷೆಗಳು ಹೆಚ್ಚಿವೆ ಎಂದು ನಾವು ಹೆಮ್ಮೆಪಡುತ್ತೇವೆ. ಪ್ರತಿಯೊಬ್ಬ ನಾಗರಿಕನು ವಿಷಯಗಳನ್ನು ಬದಲಾಯಿಸಲು ಬಯಸುತ್ತಾನೆ, ಆದರೆ ಕಾಯಲು ಸಿದ್ಧರಿಲ್ಲ. ಅವರು ವೇಗ ಮತ್ತು ಪ್ರಗತಿಯನ್ನು ಬಯಸುತ್ತಾರೆ: ಮೋದಿ
8:33 AM, 15 Aug

ಮಹಾತ್ಮಾ ಗಾಂಧೀಜಿಯವರ ಕಟ್ಟಕಡೆಯ ವ್ಯಕ್ತಿಯ ಬಗ್ಗೆ ಕಾಳಜಿ ವಹಿಸುವ ಕನಸು, ಕಟ್ಟಕಡೆಯ ವ್ಯಕ್ತಿಯನ್ನು ಸಮರ್ಥರನ್ನಾಗಿಸುವ ಅವರ ಆಕಾಂಕ್ಷೆ - ಅದಕ್ಕಾಗಿ ನಾನು ನನ್ನನ್ನು ಅರ್ಪಿಸಿಕೊಂಡಿದ್ದೇನೆ. ಆ ಎಂಟು ವರ್ಷಗಳ ಮತ್ತು ಹಲವಾರು ವರ್ಷಗಳ ಸ್ವಾತಂತ್ರ್ಯದ ಅನುಭವದ ಪರಿಣಾಮವಾಗಿ ನಾನು 75 ವರ್ಷಗಳ ಸ್ವಾತಂತ್ರ್ಯದಲ್ಲಿ ಒಂದು ಸಾಮರ್ಥ್ಯವನ್ನು ನೋಡಬಲ್ಲೆ: ಪ್ರಧಾನಿ
8:30 AM, 15 Aug

ನಾವು ಭಾರತವನ್ನು ಮೊದಲ ಸ್ಥಾನದಲ್ಲಿಡಬೇಕು, ಇದು ಅಖಂಡ ಭಾರತಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಕೆಂಪು ಕೋಟೆಯಲ್ಲಿ ಪ್ರಧಾನಿ ಮೋದಿ ಕರೆ ಕೊಟ್ಟರು.
8:22 AM, 15 Aug

ಇಂದು, ಡಿಜಿಟಲ್ ಇಂಡಿಯಾ ಉಪಕ್ರಮವನ್ನು ನಾವು ನೋಡುತ್ತಿದ್ದೇವೆ, ದೇಶದಲ್ಲಿ ಸ್ಟಾರ್ಟ್‌ಅಪ್‌ಗಳು ಬೆಳೆಯುತ್ತಿವೆ. 2 ಮತ್ತು 3ನೇ ಶ್ರೇಣಿಯ ನಗರಗಳಿಂದ ಸಾಕಷ್ಟು ಪ್ರತಿಭೆಗಳು ಬರುತ್ತಿವೆ. ನಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇಡಬೇಕು ಎಂದು ಮೋದಿ ಕರೆ ನೀಡಿದ್ದಾರೆ.
READ MORE

English summary
Independence Day 2022 Live Updates in Kannada: Check President Draupadi Murmu, PM Narendra Modi Speech Highlights, latest news on Independence day celebrations across Karnataka, India. Read On.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X