ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಾತಂತ್ರ್ಯ ದಿನಾಚರಣೆ: ರಾಷ್ಟ್ರಪತಿಗಳ ಪದಕ ಪುರಸ್ಕೃತರ ಪಟ್ಟಿ

|
Google Oneindia Kannada News

ನವದೆಹಲಿ, ಆಗಸ್ಟ್ 14: 2021ರ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಒಟ್ಟು 1,380 ಪೊಲೀಸ್ ಸಿಬ್ಬಂದಿಗೆ ಪದಕಗಳನ್ನು ನೀಡಲಾಗಿದೆ. ಕರ್ನಾಟಕದ ಸಿಬ್ಬಂದಿಯೂ ಸೇರಿದಂತೆ ಪದಕ ಪುರಸ್ಕೃತರ ಕಿರು ಪಟ್ಟಿ ಹಾಗೂ ವಿವರ ಇಲ್ಲಿದೆ.

ಶೌರ್ಯ ಪದಕಗಳು:
ರಾಷ್ಟ್ರಪತಿಗಳ ಪೊಲೀಸ್ ಶೌರ್ಯ ಪದಕ (ಪಿಪಿಎಂಜಿ): 02
ಪೊಲೀಸ್ ಶೌರ್ಯ ಪದಕ (ಪಿಎಂಜಿ): 628

ರಾಜ್ಯದ 19 ಪೊಲೀಸ್ ಸಿಬ್ಬಂದಿಗೆ ರಾಷ್ಟ್ರಪತಿ ಶ್ಲಾಘನೀಯ ಸೇವಾ ಪದಕ ರಾಜ್ಯದ 19 ಪೊಲೀಸ್ ಸಿಬ್ಬಂದಿಗೆ ರಾಷ್ಟ್ರಪತಿ ಶ್ಲಾಘನೀಯ ಸೇವಾ ಪದಕ

ಸೇವಾ ಪದಕಗಳು:

ವಿಶಿಷ್ಟ ಸೇವೆಗಾಗಿ ರಾಷ್ಟ್ರಪತಿಗಳ ಪೊಲೀಸ್ ಪದಕ (ಪಿಪಿಎಂ): 88

ಪ್ರತಿಭಾನ್ವಿತ ಸೇವೆಗಾಗಿ ಪೊಲೀಸ್ ಪದಕ (ಪಿಎಂ): 662

628 ಶೌರ್ಯ ಪದಕಗಳ ಪೈಕಿ ಜಮ್ಮು-ಕಾಶ್ಮೀರ ಪೊಲೀಸ್‌ ಇಲಾಖೆ ಮತ್ತು ಸಿಆರ್‌ಪಿಎಫ್‌(ಮರಣೋತ್ತರ) ತಲಾ 1 ರಾಷ್ಟ್ರಪತಿಗಳ ಪೊಲೀಸ್‌ ಶೌರ್ಯ ಪದಕ (ಪಿಪಿಎಂಜಿ) ಪಡೆದಿವೆ. ಜಮ್ಮು-ಕಾಶ್ಮೀರದಲ್ಲಿ ಶೌರ್ಯ ಕಾರ್ಯಾಚರಣೆಗಾಗಿ 398 ಸಿಬ್ಬಂದಿಗೆ, ನಕ್ಸಲ್‌ ಪೀಡಿತ ಪ್ರದೇಶಗಳಲ್ಲಿ ಶೌರ್ಯ ಕಾರ್ಯಾಚರಣೆಗಾಗಿ 155 ಸಿಬ್ಬಂದಿಗೆ ಮತ್ತು ಈಶಾನ್ಯ ವಲಯದಲ್ಲಿ ಶೌರ್ಯ ಕಾರ್ಯಾಚರಣೆಗಾಗಿ 27 ಸಿಬ್ಬಂದಿಗೆ ಶೌರ್ಯ ಪ್ರಶಸ್ತಿ (ಪಿಎಂಜಿ) ದೊರೆತಿದೆ.

Independence Day 2021: Presidents Police Medal for Distinguished Service awards list

ಶೌರ್ಯ ಪ್ರಶಸ್ತಿಗಳನ್ನು ಸ್ವೀಕರಿಸುವ ಸಿಬ್ಬಂದಿಗಳಲ್ಲಿ 256 ಸಿಬ್ಬಂದಿ ಜಮ್ಮು ಮತ್ತು ಕಾಶ್ಮೀರ ಪೊಲೀಸ್‌ ಇಲಾಖೆಗೆ ಸೇರಿದವರು, 151 ಸಿಆರ್‌ಪಿಎಫ್ ಸಿಬ್ಬಂದಿ, 23 ಮಂದಿ ಐಟಿಬಿಪಿ, ಮತ್ತು 67 ಸಿಬ್ಬಂದಿ ಒಡಿಶಾ ಪೊಲೀಸ್ ಇಲಾಖೆಯವರು, 25 ಮಂದಿ ಮಹಾರಾಷ್ಟ್ರ, 20 ಸಿಬ್ಬಂದಿ ಛತ್ತೀಸ್‌ಗಢದವರು ಮತ್ತು ಉಳಿದವರು ಇತರ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಸೇರಿದವರು.

2021ನೇ ಸಾಲಿನ ಸ್ವಾತಂತ್ರ್ಯ ದಿನದ ರಾಷ್ಟ್ರಪತಿಗಳ ಪೊಲೀಸ್‌ ವಿಶಿಷ್ಟ ಸೇವಾ ಪದಕ

ಕರ್ನಾಟಕದ ಪದಕ ಪುರಸ್ಕೃತರು

1. ಉಮೇಶ ಕುಮಾರ್, ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರು, ಸಿಐಡಿ ಆರ್ಥಿಕ ಅಪರಾಧಗಳ ವಿಭಾಗ, ಬೆಂಗಳೂರು ಕರ್ನಾಟಕ, 560001

2. ಅರುಣ್ ಚಕ್ರವರ್ತಿ ಜೆಜಿ, ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರು, ಆಂತರಿಕ ಭದ್ರತಾ ವಿಭಾಗ ಬೆಂಗಳೂರು, ಕರ್ನಾಟಕ, 560025

2021ನೇ ಸಾಲಿನ ಸ್ವಾತಂತ್ರ್ಯ ದಿನದ ಪ್ರತಿಭಾನ್ವಿತ ಸೇವಾ ಪೊಲೀಸ್ ಪದಕ

ಕರ್ನಾಟಕದ ಪದಕ ಪುರಸ್ಕೃತರು

1. ರಾಮಕೃಷ್ಣ ಪ್ರಸಾದ್ ವೇಣುಗೋಪಾಲ ಮಕರಹಳ್ಳಿ, ಕಮಾಂಡೆಂಟ್ , 3ನೇ ಬಿಎನ್ ಕೆಎಸ್‌ಆರ್‌ಪಿ ಬೆಂಗಳೂರು, ಕರ್ನಾಟಕ, 560034

2. ವೆಂಕಟೇಶ ನಾಯ್ಡು ಕೆ.ಎಸ್., ಸಹಾಯಕ ಪೊಲೀಸ್ ಆಯುಕ್ತ, ಮಲ್ಲೇಶ್ವರಂ ಬೆಂಗಳೂರು ಉತ್ತರ, ಕರ್ನಾಟಕ, 560086

3. ರವಿ ಪಾಂಡುರಂಗಪ್ಪ, ಸಹಾಯಕ ಪೊಲೀಸ್ ಆಯುಕ್ತ, ಚಿಕ್ಕಪೇಟೆ ಉಪ ವಿಭಾಗ, ಬೆಂಗಳೂರು ನಗರ, ಕರ್ನಾಟಕ, 560009

4. ನವೀನ್ ಕುಲಕರ್ಣಿ, ಉಪ ಪೊಲೀಸ್ ಅಧೀಕ್ಷಕರು, ಎಡಿಜಿಪಿ ಗುಪ್ತಚರ ಕಚೇರಿ ಬೆಂಗಳೂರು, ಕರ್ನಾಟಕ, 560001

5. ಸಿದ್ದರಾಜು ಜಿ., ಪೊಲೀಸ್ ಇನ್ಸ್‌ಪೆಕ್ಟರ್, ತಲಘಟ್ಟಪುರ ಪೊಲೀಸ್ ಠಾಣೆ, ದಕ್ಷಿಣ ವಿಭಾಗ, ಬೆಂಗಳೂರು ನಗರ, ಕರ್ನಾಟಕ, 560061

6. ದಯಾನಂದ್ ಎಂ ಜೆ, ಪೊಲೀಸ್ ಇನ್ಸ್‌ಪೆಕ್ಟರ್, ಕರ್ನಾಟಕ ಭ್ರಷ್ಟಾಚಾರ ನಿಗ್ರಹ ದಳ, ಕರ್ನಾಟಕ 560001

7. ಶ್ರೀಮತಿ ಗೀತಾ ಈಶ್ವರಪ್ಪ ಸಾವನಹಳ್ಳಿ, ಮಹಿಳಾ ಪೊಲೀಸ್ ಸಬ್‌-ಇನ್ಸ್‌ಪೆಕ್ಟರ್, ರಾಜ್ಯ ಗುಪ್ತಚರ ವಿಭಾಗ, ಬೆಂಗಳೂರು, ಕರ್ನಾಟಕ, 560001

8. ಗೋವರ್ಧನ ರಾವ್ ಡಿ ಸುಬ್ಬ ನರಸಿಂಹ, ವಿಶೇಷ ಸಹಾಯಕ ಮೀಸಲು ಪಡೆ ಸಬ್ ಇನ್ಸ್‌ಪೆಕ್ಟರ್, 3ನೇ ಬಿಎನ್ ಕೆಎಸ್‌ಆರ್‌ಪಿ ಬೆಂಗಳೂರು, ಕರ್ನಾಟಕ, 560034

9. ಮೋಹನ್‌, ಸಹಾಯಕ ಪೊಲೀಸ್ ಉಪ ನಿರೀಕ್ಷಕರು, ಸೈಬರ್ ಅಪರಾಧ ಪೊಲೀಸ್ ಠಾಣೆ, ಮಂಗಳೂರು, ಕರ್ನಾಟಕ, 575006

10. ರಾಮನಾಯಕ್, ಸಹಾಯಕ ಸಬ್‌ಇನ್ಸ್‌ಪೆಕ್ಟರ್, ವೈರ್‌ಲೆಸ್ ಎಸ್‌ಪಿ ಅವರ ಕಚೇರಿ, ನಂ1 ಕಾರ್ನರ್ ಹೌಸ್, ಎಂ ಜಿ ರಸ್ತೆ ಬೆಂಗಳೂರು, ಕರ್ನಾಟಕ, 560001

11. ಮೊಹಮ್ಮದ್ ಮುನಾವರ್ ಪಾಷಾ, ಸಿವಿಲ್ ಮುಖ್ಯ ಪೇದೆ, ಜಯನಗರ ಪೊಲೀಸ್ ಠಾಣೆ, ತುಮಕೂರು, ಕರ್ನಾಟಕ, 572102

12. ಸಂಗನಬಸು ಪರಮಣ್ಣ ಕೆರುಟಗಿ, ಮೀಸಲು ಮುಖ್ಯ ಪೇದೆ, 4ನೇ ಬಿಎನ್ ಕೆಎಸ್‌ಆರ್‌ಪಿ, ಬೆಂಗಳೂರು, ಕರ್ನಾಟಕ, 560034

13. ದಾದಾ ಅಮೀರ ಬಿ.ಎಸ್. ಸಶಸ್ತ್ರ ಮುಖ್ಯ ಪೇದೆ, ಐಜಿಪಿ ಕಚೇರಿ, ಬಳ್ಳಾರಿ ವಲಯ, ಬಳ್ಳಾರಿ, ಕರ್ನಾಟಕ, 583101

14. ವೆಂಕಟಸ್ವಾಮಿ ಸೋಮಶಂಕರ್, ಸಶಸ್ತ್ರ ಮುಖ್ಯ ಪೇದೆ, ಸಶಸ್ತ್ರ ಪೊಲೀಸ್ ತರಬೇತಿ ಶಾಲೆ, ಯಲಹಂಕ, ಬೆಂಗಳೂರು, ಕರ್ನಾಟಕ 560063

15. ರಾಜಪ್ಪ ಕುಮಾರ್, ಸಿವಿಲ್ ಮುಖ್ಯ ಪೇದೆ, ಜಿಲ್ಲಾ ಪೊಲೀಸ್ ಕಚೇರಿ, ಚಿಕ್ಕಮಗಳೂರು ಜಿಲ್ಲೆ, ಕರ್ನಾಟಕ, 577101

16. ಸಯ್ಯದ್‌ ಅಬ್ದುಲ್ ಖಾದರ್, ವಿಶೇಷ ಮೀಸಲು ಮುಖ್ಯ ಪೇದೆ, 3ನೇ ಬಿಎನ್ ಕೆಎಸ್‌ಆರ್‌ಪಿ ಬೆಂಗಳೂರು, ಕರ್ನಾಟಕ, 560034

17. ಗೋಪಾಲಪ್ಪ ದೇವೇಂದ್ರಪ್ಪ ಕೊತಬಾಗಿ, ಮುಖ್ಯ ಪೊಲೀಸ್‌ ಪೇದೆ, ಸಿಸಿಆರ್‌ಬಿ ಪೊಲೀಸ್‌ ಕಚೇರಿ ಹುಬ್ಬಳ್ಳಿ-ಧಾರವಾಡ, ಕರ್ನಾಟಕ, 580025

18. ಶಂಕರಗುಂಡ ಪಾಟೀಲ್‌, ವೃತ್ತ ನಿರೀಕ್ಷಕರು, ಕಲಬುರಗಿ ಗ್ರಾಮಾಂತರ ವೃತ್ತ ಕಲಬುರಗಿ, ಕರ್ನಾಟಕ, 585103

19. ಸಾತಪ್ಪ ಬಸವಂತ್ ಮಳಗಿ, ಮೀಸಲು ಸಬ್‌ಇನ್ಸ್‌ಪೆಕ್ಟರ್, ಕೆಎಸ್‌ಆರ್‌ಪಿ ಪಿಟಿಎಸ್ ಕಂಗ್ರಾಲಿ, ಬೆಳಗಾವಿ, ಕರ್ನಾಟಕ, 590010

ಸಿ.ಐ.ಎಸ್.ಎಫ್:

1. ಸಂತೋಷ್ ಕುಮಾರ್ ಪಿ, ಸಹಾಯಕ ಕಮಾಂಡೆಂಟ್ (ಕಾರ್ಯಕಾರಿ), ಕೆಐಒಸಿಎಲ್ ಘಟಕ, ಪಿಒ:ಪಣಂಬೂರು ನಗರ, ಮಂಗಳೂರು, ದಕ್ಷಿಣ ಕನ್ನಡ, (ಕರ್ನಾಟಕ), ಸಿಐಎಸ್ಎಫ್, 575010.

ಪ್ರತಿ ವರ್ಷ ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯ ದಿನದಂದು ಅಗ್ನಿಶಾಮಕ ಸೇವೆಗಳು, ನಾಗರಿಕ ರಕ್ಷಣೆ ಮತ್ತು ಗೃಹ ರಕ್ಷಕ ದಳದ ಸಿಬ್ಬಂದಿಗೆ ರಾಷ್ಟ್ರಪತಿ ಶೌರ್ಯ ಪದಕ ಮತ್ತು ರಾಷ್ಟ್ರಪತಿ ವಿಶಿಷ್ಟ ಸೇವಾ ಪದಕ, ಶೌರ್ಯ ಸೇವಾ ಪದಕ ಮತ್ತು ಪ್ರತಿಭಾನ್ವಿತ ಸೇವಾ ಪದಕಗಳನ್ನು ನೀಡಲಾಗುತ್ತದೆ.

2021ರ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ 86 ಸಿಬ್ಬಂದಿಗೆ ಅಗ್ನಿಶಾಮಕ ಸೇವಾ ಪದಕಗಳನ್ನು ನೀಡಲಾಗಿದೆ.

ಈ ಪೈಕಿ 26 ಸಿಬ್ಬಂದಿಗೆ ಅವರ ಶೌರ್ಯ ಹಾಗೂ ಸಾಹಸಕ್ಕಾಗಿ ಅಗ್ನಿಶಾಮಕ ಶೌರ್ಯ ಸೇವಾ ಪದಕವನ್ನು ನೀಡಲಾಗಿದೆ.

10 ಸಿಬ್ಬಂದಿಗೆ ವಿಶಿಷ್ಟ ಸೇವೆಗಾಗಿ ರಾಷ್ಟ್ರಪತಿಗಳ ಅಗ್ನಿಶಾಮಕ ವಿಶಿಷ್ಟ ಸೇವಾ ಪದಕವನ್ನು ಮತ್ತು 50 ಸಿಬ್ಬಂದಿಗೆ ಪ್ರತಿಭಾನ್ವಿತ ಸೇವೆಗಾಗಿ ಅಗ್ನಿಶಾಮಕ ಸೇವಾ ಪದಕವನ್ನು ನೀಡಲಾಗಿದೆ. ಆಯಾ ಸೇವೆಯಲ್ಲಿ ವಿಶಿಷ್ಟ ಅರ್ಹತೆ ದಾಖಲೆಗಳನ್ನು ಗುರುತಿಸಿ ಈ ಪದಕಗಳನ್ನು ನೀಡಲಾಗಿದೆ.

ಇದಲ್ಲದೆ, 2021ರ ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ 55 ಸಿಬ್ಬಂದಿಗೆ ಗೃಹ ರಕ್ಷಕ ಮತ್ತು ನಾಗರಿಕ ರಕ್ಷಣಾ ಪದಕಗಳನ್ನು ನೀಡಲಾಗಿದೆ. ಇವುಗಳಲ್ಲಿ 05 ಸಿಬ್ಬಂದಿಗೆ ವಿಶಿಷ್ಟ ಸೇವೆಗಾಗಿ ರಾಷ್ಟ್ರಪತಿಗಳ ಗೃಹರಕ್ಷಕ ದಳ ಮತ್ತು ನಾಗರಿಕ ರಕ್ಷಣಾ ಪದಕ ಹಾಗೂ 50 ಸಿಬ್ಬಂದಿಗೆ ಪ್ರತಿಭಾನ್ವಿತ ಸೇವೆಗಾಗಿ ಗೃಹರಕ್ಷಕ ದಳ ಮತ್ತು ನಾಗರಿಕ ರಕ್ಷಣಾ ಪದಕವನ್ನು ನೀಡಲಾಗಿದೆ.

ಅಗ್ನಿಶಾಮಕ ಸೇವಾ ಪದಕಗಳ ವಿಜೇತರು

ಕರ್ನಾಟಕ
* ಬಿಡದಿ ಪಾಪಯ್ಯ ಕೃಷ್ಣಪ್ಪ, ಸ್ಟೇಷನ್ ಅಧಿಕಾರಿ
* ಚಿದಾನಂದ ದಂಡಪ್ಪ ಮಾಣೆ, ಸಹಾಯಕ ಸ್ಟೇಷನ್ ಅಧಿಕಾರಿ
* ಮೀರ್ ಮಹಮ್ಮದ್ ಗೌಸ್, ಹಿರಿಯ ಫೈರ್ ಮನ್
* ಕೆ.ಆರ್ ಮಂಜುನಾಥ್, ಫೈರ್ ಮನ್ ಚಾಲಕ
* ಪ್ರಶಾಂತ್ ಕುಮಾರ್, ಫೈರ್ ಮನ್ ಚಾಲಕ

ಗೃಹ ರಕ್ಷಕ ಮತ್ತು ನಾಗರಿಕ ರಕ್ಷಣಾ ಪದಕಗಳ ವಿಜೇತರು

ಕರ್ನಾಟಕ
* ಅಜ್ಮಲ್ ಶಕೀಬ್ ಮೊಹಮ್ಮದ್, ಕಮ್ಯಾಂಡಟ್ (ಗೃಹ ರಕ್ಷಕದಳ)
* ಸುಜೇಂದ್ರ ಕುಮಾರ್ ನರೆಪ್ಪ ಸಿ, ಪ್ಲಾಟೂನ್ ಕಮ್ಯಾಂಡರ್ (ಗೃಹ ರಕ್ಷಕದಳ)
* ಜಗನ್ನಾಥ ಕರಿಯಪ್ಪ, ಪ್ಲಾಟೂನ್ ಕಮ್ಯಾಂಡರ್ (ಗೃಹ ರಕ್ಷಕದಳ)
* ನಿಂಬಣ್ಣ ಗೌಡ, ಹಿರಿಯ ಪ್ಲಾಟೂನ್ ಕಮ್ಯಾಂಡರ್ (ಗೃಹ ರಕ್ಷಕದಳ)
* ರಾಜೇಶ್ ಶಂಕರ ನಾರಾಯಣ ಮಕ್ಕಂ, ವಿಭಾಗೀಯ ವಾರ್ಡನ್ (ನಾಗರಿಕ ರಕ್ಷಣಾ ದಳ)
* ಮೋಹನ್ ಕೃಷ್ಣಪ್ಪ, ವಿಭಾಗೀಯ ವಾರ್ಡನ್ (ನಾಗರಿಕ ರಕ್ಷಣಾ ದಳ)

ಅಗ್ನಿಶಾಮಕ ಸೇವಾ ಪದಕಗಳ ಪಟ್ಟಿ ನೋಡಲು ಕ್ಲಿಕ್ ಮಾಡಿ(ಮತ್ತು ಗೃಹ ರಕ್ಷಕ ಮತ್ತು ನಾಗರಿಕ ರಕ್ಷಣಾ ಪದಕಗಳ ವಿಜೇತರ ಪಟ್ಟಿ ಇಲ್ಲಿದೆ

English summary
Independence Day 2021: President's Police Medal for Distinguished Service awards list out. A total of 1,380 Police personnel have been awarded Medals on the occasion of Independence Day, 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X