• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗ್ರಾಚ್ಯುಟಿ ಮಿತಿ ಏರಿಕೆ ಆದೇಶ ಇನ್ನಷ್ಟು ವಲಯಕ್ಕೆ ವಿಸ್ತರಣೆ

|

ನವದೆಹಲಿ, ಮಾರ್ಚ್ 08: ಗ್ರಾಚ್ಯುಟಿ ತಿದ್ದುಪಡಿ ಮಸೂದೆ 2017ಕ್ಕೆ ಸಂಸತ್ತಿನಲ್ಲಿ ಅಂಗೀಕಾರ ಸಿಕ್ಕಿದ ಬಳಿಕ ಸರ್ಕಾರ ಹೊರಡಿಸಿದ್ದ ಆದೇಶದ ಲಾಭವು ಇನ್ನಷ್ಟು ಕಾರ್ಮಿಕ ವಲಯಗಳಿಗೆ ವಿಸ್ತರಣೆಯಾಗಲಿದೆ ಎಂದು ಕಾರ್ಮಿಕ ಇಲಾಖೆ ತಿಳಿಸಿದೆ.

ಸದರಿ ಆದೇಶದಂತೆ, ಉದ್ಯೋಗಿಗಳಿಗೆ 20 ಲಕ್ಷ ರೂ.ವರೆಗೂ ತೆರಿಗೆ ಮುಕ್ತ ಗ್ರಾಚ್ಯುಟಿ ಪಡೆಯಲು ಅರ್ಹರಾಗಲಿದ್ದಾರೆ. ಕೇಂದ್ರ ಕಾರ್ಮಿಕ ಇಲಾಖೆ, ಮಾರ್ಚ್ 5 ರಂದು ಈ ಕುರಿತು ಆದೇಶ ಹೊರಡಿಸಿದ್ದು, ಪೇಮೆಂಟ್ ಆಫ್ ಗ್ರಾಚ್ಯುಟಿ ಕಾಯಿದೆ ವ್ಯಾಪ್ತಿಗೆ ಬಾರದ ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳ ನೌಕರರಿಗೆ ಇದರ ಲಾಭ ದೊರೆಯಲಿದೆ. ಕೇಂದ್ರ ಸರ್ಕಾರಿ ನೌಕರರ ರೀತಿಯಲ್ಲಿಯೇ ಸಂಘಟಿತ ವಲಯದ ಕಾರ್ಮಿಕರಿಗೂ 20 ಲಕ್ಷ ರೂ. ವರೆಗೂ ತೆರಿಗೆ ಮುಕ್ತವಾಗಿ ಸಿಗಲಿದೆ.

ಗ್ರಾಚ್ಯುಟಿ ಎಂದರೇನು? ಗ್ರಾಚ್ಯುಟಿ ಲೆಕ್ಕ ಹಾಕುವುದು ಹೇಗೆ?

ಸೆಕ್ಷನ್ 10 (10) ಪ್ರಕಾರ, 0 ಅಥವಾ ಅದಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ನೇಮಕ ಮಾಡುವ ಸಂಸ್ಥೆಯಲ್ಲಿ ಕನಿಷ್ಟ ಐದು ವರ್ಷಗಳ ನಿರಂತರ, ಸಂಪೂರ್ಣ-ಸಮಯದ ಉದ್ಯೋಗದ ಮಾಡಿದವರು ಅರ್ಹತೆ ಹೊಂದಿರುತ್ತಾರೆ.

ಸದ್ಯ ಐದು ಅಥವಾ ಅದಕ್ಕಿಂತ ಹೆಚ್ಚು ಸೇವಾ ಅವಧಿ ಹೊಂದಿರುವ ಉದ್ಯೋಗಿಗಳು ಉದ್ಯೋಗ ತೊರೆದಾಗ, ನಿವೃತ್ತಿ ಹೊಂದಿದಾಗ 10 ಲಕ್ಷ ರೂ. ವರೆಗೂ ತೆರಿಗೆ ಮುಕ್ತವಾಗಿ ಗ್ರಾಚ್ಯುಟಿ ಗಳಿಸಬಹುದಾಗಿತ್ತು. 7ನೇ ವೇತನ ಆಯೋಗದ ವರದಿಯನ್ನು ಜಾರಿಗೊಳಿಸಿದ ಬಳಿಕ,ಸಂಘಟಿತ ವಲಯದ ಕೇಂದ್ರ ಸರ್ಕಾರಿ ನೌಕರರಿಗೆ ಗ್ರಾಚ್ಯುಟಿ ಮೊತ್ತದ ಮಿತಿಯನ್ನು 20 ಲಕ್ಷ ರೂ.ಗೆ ಏರಿಸಲಾಗಿದೆ.

ಗ್ರಾಚ್ಯುಟಿ ಪಡೆದ ಬಳಿಕ ಉದ್ಯೋಗ ತೊರೆಯಬಹುದಾಗಿದೆ

ಗ್ರಾಚ್ಯುಟಿ ಪಡೆದ ಬಳಿಕ ಉದ್ಯೋಗ ತೊರೆಯಬಹುದಾಗಿದೆ

ಉದ್ಯೋಗದಾತರಿಂದ ಉದ್ಯೋಗಿಗಳಿಗೆ ಸಿಗುವ ಕೊಡುಗೆಗಳಲ್ಲಿ ಗ್ರಾಚುಟಿ ಕೂಡಾ ಒಂದಾಗಿದೆ. ಗ್ರಾಚುಟಿ ಅಧಿನಿಯಮದ ಪ್ರಕಾರ ಉದ್ಯೋಗಿ ನಿವೃತ್ತಿ ಹೊಂದಿದ 1 ತಿಂಗಳ ಒಳಗಾಗಿ ಕಡ್ಡಾಯವಾಗಿ ಗ್ರಾಚ್ಯುಟಿ ಹಣವನ್ನು ಪಾವತಿಸಬೇಕಾಗುತ್ತದೆ. ಉದ್ಯೋಗಿ ತನ್ನ ವೃತ್ತಿ ಬದುಕಿನಲ್ಲಿ ಹಲವಾರು ಬಾರಿ ಉದ್ಯೋಗ ಬದಲಾಯಿಸಬೇಕಾಗುತ್ತದೆ. ಗ್ರಾಚುಟಿ ಪಡೆದು ಉದ್ಯೋಗ ತೊರೆಯಬಹುದಾಗಿದೆ.

ಎಲ್ಲಾ ಸ್ತರ, ವಲಯದ ಕಾರ್ಮಿಕರಿಗೂ ಸೌಲಭ್ಯ

ಎಲ್ಲಾ ಸ್ತರ, ವಲಯದ ಕಾರ್ಮಿಕರಿಗೂ ಸೌಲಭ್ಯ

ಗಣಿ, ತೈಲಕ್ಷೇತ್ರ, ಫ್ಯಾಕ್ಟರಿ, ಬಂದರು, ರೈಲ್ವೇ ಕಂಪನಿಗಳು ಮೊದಲಾದ ಕಡೆಗಳಲ್ಲಿ ಕಾರ್ಯನಿರ್ವಹಿಸುವವರಿಗೆ ಅನುಕೂಲ ಒದಗಿಸಲು ಗ್ರಾಚುಟಿ ಪಾವತಿ ಕಾಯ್ದೆ 1972 ನ್ನು ಜಾರಿಗೆ ತರಲಾಗಿದೆ. ಗ್ರಾಚ್ಯುಟಿ ಅಧಿನಿಯಮ 1972ರ ಪ್ರಕಾರ ಉದ್ಯೋಗಿಯ ಹೆಸರು ಸೇರ್ಪಡೆಗೊಂಡಿದ್ದರೆ, ನಿಮ್ಮ ಔದ್ಯೋಗಿಕ ಅನುಭವದ ಜತೆ ಲೆಕ್ಕ ಹಾಕಿ ಗ್ರಾಚ್ಯುಟಿ ನೀಡಲಾಗುತ್ತದೆ.

UAN -ಹಳೆ ಭವಿಷ್ಯನಿಧಿ ಖಾತೆಗಳ ವಿಲೀನ ಈಗ ಸಾಧ್ಯ, ಹೇಗೆ?

ಅಲ್ಪಾವಧಿ ಗುತ್ತಿಗೆ ನೌಕರರಿಗೆ ಸೌಲಭ್ಯ ಲಭ್ಯವಿಲ್ಲ

ಅಲ್ಪಾವಧಿ ಗುತ್ತಿಗೆ ನೌಕರರಿಗೆ ಸೌಲಭ್ಯ ಲಭ್ಯವಿಲ್ಲ

ನಿಶ್ಚಿತ ಅವಧಿಯ ಗುತ್ತಿಗೆ ನೌಕರರಿಗೆ ಗ್ರಾಚ್ಯುಟಿ ಸೌಲಭ್ಯ ಸಿಗಲಿದೆ. ಆದರೆ, ಇತರೆ ಅಲ್ಪಾವಧಿ ಗುತ್ತಿಗೆ ನೌಕರರಿಗೆ ಈ ಸೌಲಭ್ಯ ಸಿಗುವುದಿಲ್ಲ. ಆದರೆ, ಐದು ವರ್ಷ ಅವಧಿಯ ಉದ್ಯೋಗವನ್ನು ಪೂರ್ಣಗೊಳಿಸಿದ ನೌಕರರಿಗೆ ಗ್ರಾಚ್ಯುಟಿ ಪಾವತಿ ಕಾಯ್ದೆ 1972ರ ಅನ್ವಯ ಗ್ರಾಚ್ಯುಟಿ ಸಿಗಬೇಕಾಗುತ್ತದೆ.

ಕನಿಷ್ಟ 5 ವರ್ಷ ಕೆಲಸ ಮಾಡಿದಲ್ಲಿ ಗ್ರಾಚ್ಯುಟಿ

ಕನಿಷ್ಟ 5 ವರ್ಷ ಕೆಲಸ ಮಾಡಿದಲ್ಲಿ ಗ್ರಾಚ್ಯುಟಿ

ಕಾಯ್ದೆ ನಿಯಮದಂತೆ, 10 ಅಥವಾ ಅದಕ್ಕಿಂತ ಹೆಚ್ಚು ಮಂದಿ ಕೆಲಸ ಮಾಡುವ ಸಂಸ್ಥೆಗಳಲ್ಲಿನ ಕಾರ್ಮಿಕರು ಕನಿಷ್ಟ 5 ವರ್ಷ ಕೆಲಸ ಮಾಡಿದಲ್ಲಿ ಗ್ರಾಚ್ಯುಟಿ ಪಡೆಯಲು ಅರ್ಹರಾಗಿರುತ್ತಾರೆ. ಸೇವೆಯನ್ನು ಮಾಡುವ ಪ್ರತಿ ವರ್ಷಕ್ಕೆ 15 ದಿನಗಳ ವೇತನವನ್ನು ಗ್ರಾಚುಟಿ ಎಂದು ಲೆಕ್ಕಹಾಕಲಾಗುವುದು. 2010 ರಲ್ಲಿ ಗ್ರಾಚುಟಿ ಗರಿಷ್ಟ ಮೊತ್ತವನ್ನು 10 ಲಕ್ಷ ರೂ. ನಿಗದಿ ಮಾಡಲಾಗಿತ್ತು. ಈಗ ಈ ಮೊತ್ತ 20ಲಕ್ಷ ರು ಗೇರಿದೆ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The labour ministry said Thursday that the income tax exemption limit on gratuity has been doubled to Rs 20 lakh from the existing Rs 10 lakh, a move that will benefit employees who are not covered by the Payment of Gratuity Act, 1972.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more