ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಫ್ಟ್ ತೆರಿಗೆ: IBM ತಲೆಗೆ 5357 ಕೋಟಿ ತೆರಿಗೆ

By Srinath
|
Google Oneindia Kannada News

income-tax-department-asks-ibm-to-pay-r-5357-cr-in-outstanding-tax
ನವದೆಹಲಿ, ನ.4: ಭಾರತದಲ್ಲಿರುವ ಸಾಫ್ಟ್ ವೇರ್ ದಿಗ್ಗಜ IBM ಕಂಪನಿಗೆ ನೋಟಿಸ್ ಜಾರಿ ಮಾಡಿರುವ ಆದಾಯ ತೆರಿಗೆ ಇಲಾಖೆಯು ಆದಾಯ ಪ್ರಮಾಣವನ್ನು ಕಡಿಮೆಯಾಗಿದೆ ಎಂದು ದಾಖಲೆಗಳಲ್ಲಿ ತೋರಿಸಿದ್ದಕ್ಕೆ 5,357 ಕೋಟಿ ರೂ ತೆರಿಗೆ ಭರ್ತಿ ಮಾಡುವಂತೆ ಸೂಚಿಸಿದೆ. ಆದರೆ ಕಂಪನಿಯು ಇಲಾಖೆಯ ಲೆಕ್ಕಾಚಾರವನ್ನು ಅಲ್ಲಗಳೆದಿದೆ.

2008-09ರ ಆರ್ಥಿಕ ವರ್ಷದಲ್ಲಿ ರಫ್ತು ಉತ್ತೇಜನಾ ಯೋಜನೆಯಡಿ IBM, ತನ್ನ ಆದಾಯ ಪ್ರಮಾಣವನ್ನು ಕಡಿಮೆಯಾಗಿ ತೋರಿಸಿದೆ. ಹಾಗಾಗಿ ಈ ಆದಾಯ ತೆರಿಗೆ ಬಾಕಿ ಮೊತ್ತವನ್ನು ಪಾವತಿಸುವಂತೆ ಇಲಾಖೆ ತಾಕೀತು ಮಾಡಿದೆ.

ಆದರೆ ಇದು ಇಲಾಖೆ ಮಂಡಿಸಿರುವ ಕರಡು ಲೆಕ್ಕಾಚಾರವಾಗಿದ್ದು, ತೆರಿಗೆ ಮೊತ್ತವನ್ನು ತಕ್ಷಣ ಪಾವತಿಸುವ ಅಗತ್ಯವಿಲ್ಲ. ಕಂಪನಿಯು ಸೂಕ್ತ ನ್ಯಾಯಾಧಿಕರಣದಲ್ಲಿ ಇಲಾಖೆಯ ಲೆಕ್ಕಾಚಾರವನ್ನು ಪ್ರಶ್ನಿಸಬಹುದಾಗಿದೆ ಎಂದು ತೆರಿಗೆ ಸಲಹಾಗಾರರು ಅಭಿಪ್ರಾಯಪಟ್ಟಿದ್ದಾರೆ.

'ತೆರಿಗೆ ಇಲಾಖೆಯ ಲೆಕ್ಕಾಚಾರವನ್ನು ತಮ್ಮ ಕಂಪನಿ ಸುತರಾಂ ಒಪ್ಪುವುದಿಲ್ಲ. ಅದನ್ನು ಸಮರ್ಥವಾಗಿ/ ನ್ಯಾಯೋಚಿತವಾಗಿ ಪ್ರಶ್ನಿಸಲಾಗುವುದು. ಹೋರಾಟ ಮುಂದುವರಿಸಲಿದ್ದೇವೆ' ಎಂದು IBM ವಕ್ತಾರರು ತಿಳಿಸಿದ್ದಾರೆ.

ಆದರೆ ಕಳೆದ ತಿಂಗಳು US Securities and Exchange Commission (SEC)ಗೆ ಸಲ್ಲಿಸಿರುವ ದಾಖಲೆಗಳಲ್ಲಿ '2013ರ ಸೆಪ್ಟೆಂಬರ್ 30 ರ ವೇಳೆಗೆ ಕಂಪನಿಯು 394 ದಶಲಕ್ಷ ಡಾಲರ್ (2,433 ಕೋಟಿ ರೂ) ಮುಂಗಡ ಆದಾಯ ತೆರಿಗೆ ಪಾವತಿಸಿದ್ದಾಗಿ ಹೇಳಿಕೊಂಡಿದೆ.

English summary
Income Tax Department asks IBM to pay Rs 5357 cr in outstanding tax. Software solutions firm IBM has been issued a tax notice by the income tax (I-T) department for under-reporting revenue from Indian operations, a claim the company contested. But An IBM spokesperson said: IBM does not agree with the tax department's claims and will aggressively defend itself through the appropriate judicial process.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X