ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನಕ್ಷರಸ್ಥ ಮೋದಿಯ ಕಿರುಚಿತ್ರದಿಂದ ಮಕ್ಕಳು ಏನು ಕಲಿಯಲು ಸಾಧ್ಯ? ಕಾಂಗ್ರೆಸ್ ಮುಖಂಡ

|
Google Oneindia Kannada News

ಮುಂಬೈ, ಸೆ 14: ಮಕ್ಕಳ ವಿದ್ಯಾಭ್ಯಾಸದಲ್ಲಿ ರಾಜಕೀಯ ನುಸುಳಬಾರದು, ಅದರಲ್ಲೂ ಅನಕ್ಷರಸ್ಥರಾಗಿರುವ ಪ್ರಧಾನಿ ಮೋದಿಯವರ ಕಿರುಚಿತ್ರದಿಂದ ಮಕ್ಕಳು ಏನನ್ನು ಕಲಿಯಲು ಸಾಧ್ಯ ಎನ್ನುವ ಹೇಳಿಕೆಯನ್ನು ಮಹಾರಾಷ್ಟ್ರ ಕಾಂಗ್ರೆಸ್ ಘಟಕದ ಮುಖ್ಯಸ್ಥ ಸಂಜಯ್ ನಿರುಪಮ್ ನೀಡಿದ್ದಾರೆ.

ಚಾಯ್ ಮಾರುವವನು ಎಂದು ಖುದ್ದು ಪ್ರಧಾನಿಗಳೇ ಹೇಳಿದ್ದಾರೆ, ಶೈಕ್ಷಣಿಕವಾಗಿ ಅವರು ಏನು ಪದವಿಯನ್ನು ಪಡೆದಿದ್ದಾರೆ ಎನ್ನುವ ಖಚಿತ ಮಾಹಿತಿಯಿಲ್ಲದೇ, ಮಕ್ಕಳಿಗೆ ತೋರಿಸುವ ಕಿರುಚಿತ್ರದಲ್ಲಿ ಏನು ನ್ಯಾಯ ಒದಗಿಸಲು ಸಾಧ್ಯ ಎಂದು ನಿರುಪಮ್ ನೀಡಿರುವ ಹೇಳಿಕೆ ವ್ಯಾಪಕ ಚರ್ಚೆಗೆ ಒಳಗಾಗಿದೆ.

125ಕೋಟಿ ಜನರನ್ನು ಪ್ರತಿನಿಧಿಸುವ ಮಾನಸಿಕ ಸ್ಥಿಮಿತವಿಲ್ಲದ ವ್ಯಕ್ತಿಯೊಬ್ಬರು ನಮ್ಮ ಪ್ರಧಾನಿಯಾಗಿರುವುದು ದುರಂತ ಎನ್ನುವ ವಿವಾದಕಾರಿ ಹೇಳಿಕೆ ನೀಡಿ, ಸ್ವಪಕ್ಷೀಯರಿಂದಲೇ ಟೀಕೆಗೆ ಗುರಿಯಾಗಿದ್ದ ಸಂಜಯ್ ನಿರುಪಮ್, ಮಹಾರಾಷ್ಟ್ರ ಶಾಲೆಗಳಲ್ಲಿ ಮೋದಿ ಜೀವನ ಚರಿತ್ರೆ ಆಧಾರಿತ ಕಿರುಚಿತ್ರವನ್ನು ಪ್ರದರ್ಶಿಸಲು ರಾಜ್ಯ ಸರ್ಕಾರ ಮುಂದಾರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಸೇರಲು 4 ಷರತ್ತು ಹಾಕಿದ ರಮೇಶ್ ಜಾರಕಿಹೊಳಿ!ಬಿಜೆಪಿ ಸೇರಲು 4 ಷರತ್ತು ಹಾಕಿದ ರಮೇಶ್ ಜಾರಕಿಹೊಳಿ!

ರಾಜಕೀಯ ಮಾಡುವುದಕ್ಕೂ ಒಂದು ರೀತಿನೀತಿ ಇರುತ್ತದೆ ಅಂದಿರುವ ನಿರುಪಮ್ ಅವರ ಟ್ವೀಟ್, ಮಕ್ಕಳಿಗೆ ಕಿರುಚಿತ್ರ ತೋರಿಸುವಷ್ಟರ ಮಟ್ಟಿಗೆ ಮೋದಿಯವರು ಲೆವೆಲ್ ಹೊಂದಿಲ್ಲ ಎನ್ನುವಂತಿದೆ. ಬಿಜೆಪಿ ಮತ್ತು ಮೋದಿ/ಅಮಿತ್ ಶಾ ಬಗ್ಗೆ ನಿರುಪಮ್ ವಿವಾದಕಾರಿ ಹೇಳಿಕೆ ನೀಡುವುದು ಇದೇನು ಮೊದಲಲ್ಲ.

ಪ್ರಧಾನಿ ಮೋದಿ ಹತ್ಯೆಗೆ ವಿಷಯಕ್ಕೆ ಸಂಬಂಧಪಟ್ಟಂತೆ, ವಿವಾದಕಾರಿ ಹೇಳಿಕೆ ನೀಡಿದ್ದ ಸಂಜಯ್ ನಿರುಪಮ್, ಜನಪ್ರಿಯತೆ ಕುಸಿದಾಗ ಹತ್ಯೆ ಯೋಜನೆಯ ಸುಳ್ಳುಸುದ್ದಿ ಸೃಷ್ಟಿಯಾಗುತ್ತದೆ ಎಂದು ಹೇಳಿದ್ದರು. ಮೋದಿಯನ್ನು ಅನ್ ಪಡ್ ಗವಾರ್ ಎಂದ ನಿರುಪಮ್, ಮುಂದೆ ಓದಿ..

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜೀವನ ಆಧರಿಸಿದ ಕಿರುಚಿತ್ರ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜೀವನ ಆಧರಿಸಿದ ಕಿರುಚಿತ್ರ

ಮಹಾರಾಷ್ಟ್ರ ಸರಕಾರದ ಶಾಲೆಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜೀವನ ಆಧರಿಸಿದ ಕಿರುಚಿತ್ರ ಪ್ರದರ್ಶಿಸಲು ದೇವೇಂದ್ರ ಫಡ್ನವೀಸ್ ಸರಕಾರ ನಿರ್ಧರಿಸಿತ್ತು. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಸಂಜಯ್ ನಿರುಪಮ್, ಚಿತ್ರವನ್ನು ಬಲವಂತವಾಗಿ ಪ್ರದರ್ಶಿಸಬಾರದು. ಮೋದಿಯಂತಯ ಅನಕ್ಷರಸ್ಥ ಮತ್ತು ಅಶಿಸ್ತಿನ ಮನುಷ್ಯನಿಂದ ಮಕ್ಕಳು ಏನನ್ನು ಕಲಿಯಲು ಸಾಧ್ಯ ಎಂದು ಹೇಳಿದ್ದಾರೆ.

ಮೋದಿಯಿಂದ ಅಂಗನಾಡಿ ಕಾರ್ಯಕರ್ತೆಯರಿಗೆ 'ದೀಪಾವಳಿ ಗಿಫ್ಟ್'ಮೋದಿಯಿಂದ ಅಂಗನಾಡಿ ಕಾರ್ಯಕರ್ತೆಯರಿಗೆ 'ದೀಪಾವಳಿ ಗಿಫ್ಟ್'

Array

ಪ್ರಧಾನಿ ವಿರುದ್ದ ನಾನು ಬಳಸಿರುವ ಪದದಲ್ಲಿ ಯಾವುದೇ ತಪ್ಪಿಲ್ಲ

ಇದು ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಮೋದಿ ಏನು ದೇವರಲ್ಲ. ಪ್ರಧಾನಿ ವಿರುದ್ದ ನಾನು ಬಳಸಿರುವ ಪದದಲ್ಲಿ ಯಾವುದೇ ತಪ್ಪಿಲ್ಲ ಎಂದು ಸಂಜಯ್ ನಿರುಪಮ್ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಮೋದಿ ಕುರಿತು ಒಂದು ಸಾಕ್ಷ್ಯ ಚಿತ್ರವಿದ್ದು, ಅದನ್ನು ಶಾಲೆಗಳಲ್ಲಿ ಬಲವಂತವಾಗಿ ಪ್ರದರ್ಶಿಸಲಾಗುತ್ತಿದೆ. ಮೋದಿ ಒಬ್ಬ ಅನ್ಪಡ್ ಗವಾರ್, ಆ ವ್ಯಕ್ತಿಯ ಜೀವನದಿಂದ ಶಾಲಾ- ಕಾಲೇಜ್ ವಿದ್ಯಾರ್ಥಿಗಳಿಗೆ ಏನು ಲಾಭ? ಎಂದು ಸಂಜಯ್ ನಿರುಪಮ್ ಪ್ರಶ್ನಿಸಿದ್ದಾರೆ.

ಮೋದಿ ಹತ್ಯೆ ಸಂಚನ್ನು 'ಹಾಸ್ಯಾಸ್ಪದ' ಎಂದವರಿಗೆ ಫಡ್ನವಿಸ್ ತರಾಟೆಮೋದಿ ಹತ್ಯೆ ಸಂಚನ್ನು 'ಹಾಸ್ಯಾಸ್ಪದ' ಎಂದವರಿಗೆ ಫಡ್ನವಿಸ್ ತರಾಟೆ

ಮತ್ತೊಬ್ಬ ಮಾನಸಿಕ ಅಸ್ವಸ್ಥರಿಂದ ಮೋದಿ ವಿರುದ್ದದ ಹೇಳಿಕೆ

ಸಂಜಯ್ ನಿರುಪಮ್ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ಮಹಾರಾಷ್ಟ್ರ ಬಿಜೆಪಿ ಘಟಕ, ಮೋದಿ ಅವರ ಬಗ್ಗೆ ಕೀಳು ಮಟ್ಟದ ಹೇಳಿಕೆ ನೀಡಿರುವ ನಿರುಪಮ್ ಗೆ ತಲೆಕೆಟ್ಟಿದೆ. ಮತ್ತೊಬ್ಬ ಮಾನಸಿಕ ಅಸ್ವಸ್ಥರಿಂದ ಮೋದಿ ವಿರುದ್ದದ ಹೇಳಿಕೆ ಹೊರಬಿದ್ದಿದೆ. ಪ್ರಧಾನಿ ಮೋದಿ ದೇಶದ 125 ಕೋಟಿ ಜನರಿಂದ ಆಯ್ಕೆಗೊಂಡಿದ್ದಾರೆ. ಅವರೆಲ್ಲ ಅನಕ್ಷರಸ್ಥರಾಗಲಿ, ಅನಾಗರಿಕರಾಗಲಿ ಅಲ್ಲ ಎಂದು ಬಿಜೆಪಿ ರಾಜ್ಯ ಘಟಕ ತಿರುಗೇಟು ನೀಡಿದೆ.

ಜನಪ್ರಿಯತೆ ಕುಗ್ಗಿದಾಗ ಇಂತಹ ಸುದ್ದಿ ಸೃಷ್ಟಿಯಾಗುತ್ತದೆ

ಜನಪ್ರಿಯತೆ ಕುಗ್ಗಿದಾಗ ಇಂತಹ ಸುದ್ದಿ ಸೃಷ್ಟಿಯಾಗುತ್ತದೆ

ಈ ಹಿಂದೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಯ ರೀತಿಯಲ್ಲಿ ಮೋದಿಯನ್ನೂ ಕೊಲ್ಲಲು ಸಂಚು ರೂಪಿಸಲಾಗಿತ್ತು ಪುಣೆ ಪೊಲೀಸರ ಆರೋಪದ ಬಗ್ಗೆ ಅನುಮಾನ ವ್ಯಕ್ತ ಪಡಿಸಿದ್ದ ಸಂಜಯ್ ನಿರುಪಮ್, ಜನಪ್ರಿಯತೆ ಕುಗ್ಗಿದಾಗ ಇಂತಹ ಸುದ್ದಿ ಸೃಷ್ಟಿಯಾಗುತ್ತದೆ. ಈ ರೀತಿಯ ಕಥೆಗಳನ್ನು ಹುಟ್ಟುಹಾಕುವುದು ಮೋದಿಗೇನು ಹೊಸದಲ್ಲ. ಇದೊಂದು ಸಂಪೂರ್ಣ ಕಟ್ಟುಕಥೆ ಎನ್ನುವ ಹೇಳಿಕೆಯನ್ನು ನಿರುಪಮ್ ನೀಡಿದ್ದರು.

ದೆಹಲಿ ವಿವಿ ಯಾಕೆ ಮೋದಿಯವರ ಶೈಕ್ಷಣಿಕ ವಿಚಾರವನ್ನು ಬಹಿರಂಗಪಡಿಸುತ್ತಿಲ್ಲ

ದೆಹಲಿ ವಿವಿ ಯಾಕೆ ಮೋದಿಯವರ ಶೈಕ್ಷಣಿಕ ವಿಚಾರವನ್ನು ಬಹಿರಂಗಪಡಿಸುತ್ತಿಲ್ಲ

ಮೋದಿಯವರೇ ಆ ವಿಶ್ವವಿದ್ಯಾಲಯದ ಪದವೀಧರರು ಎಂದು ಹೇಳಿದ ಮೇಲೂ, ದೆಹಲಿ ವಿಶ್ವವಿದ್ಯಾಲಯ ಇನ್ನೂ ಯಾಕೆ ಮೋದಿಯವರ ಶೈಕ್ಷಣಿಕ ವಿಚಾರವನ್ನು ಬಹಿರಂಗಪಡಿಸುತ್ತಿಲ್ಲ ಎಂದು ಪ್ರಶ್ನಿಸಿರುವ ನಿರುಪಮ್, ದೇಶದ ಪ್ರಧಾನಿಯೊಬ್ಬರು ಎಷ್ಟು ಓದಿದ್ದಾರೆ ಎನ್ನುವ ಅರಿವು ದೇಶದ ನಾಗರೀಕನಿಗೆ ತಿಳಿಯದೇ ಇರುವುದು ಬಹುದೊಡ್ಡ ದುರಂತ ಅಲ್ಲದೇ ಇನ್ನೇನು ಎಂದು ಮೋದಿ ವಿರುದ್ದ ಅನ್ಪಡ್ ಗವಾರ್ ಹೇಳಿಕೆಯನ್ನು ಸಂಜಯ್ ನಿರುಪಮ್ ಸಮರ್ಥಿಸಿಕೊಂಡಿದ್ದಾರೆ.

English summary
Congress Maharasthra unit chief Sanjay Nirupam triggers controversy after calling Prime Minister Narendra Modi 'illiterate'. BJP says Mumbai Congress chief is mentally deranged. Triggering a controversy, Sanjay Nirupam called Narendra Modi "illiterate", while criticising the state government's decision to screen a short film on the PM's life at schools in Maharashtra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X