ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಳಿಗಾಲದಲ್ಲಿ ಕೊರೊನಾದ ಎರಡನೇ ಅಲೆ: ನೀತಿ ಆಯೋಗ ಎಚ್ಚರಿಕೆ

|
Google Oneindia Kannada News

ನವದೆಹಲಿ, ಅಕ್ಟೋಬರ್ 14: ಚಳಿಗಾಲದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗಬಹುದು ಎಂದು ನೀತಿ ಆಯೋಗ ಎಚ್ಚರಿಕೆ ನೀಡಿದೆ.

ದೇಶದಲ್ಲಿ ಚಳಿಗಾಲದಲ್ಲಿ ಕೊರೊನಾದ ಎರಡನೇ ಅಲೆ ಆರಂಭವಾಗಲಿದೆ ಎಂದು ಹೇಳಿದೆ.ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಡಾ. ಪೌಲ್ ಮಾತನಾಡಿ, ಯುರೋಪ್ ಹಾಗೂ ಅಮೆರಿಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿದ್ದು, ಎರಡನೇ ಅಲೆ ಆರಂಭವಾಗಿದೆ.

ಭಾರತದಲ್ಲಿ ಹೊಸ ಕೊರೊನಾ ಸೋಂಕಿತ ಪ್ರಕರಣಗಳ ಇಳಿಕೆ ಭಾರತದಲ್ಲಿ ಹೊಸ ಕೊರೊನಾ ಸೋಂಕಿತ ಪ್ರಕರಣಗಳ ಇಳಿಕೆ

ಉಸಿರಾಟದ ವೈರಸ್ ಚಳಿಗಾಲದಲ್ಲಿ ಅದು ಅಭಿವೃದ್ಧಿ ಹೊಂದುತ್ತದೆ. SARS-Cov-2 ಉಸಿರಾಟದ ವೈರಸ್ ಆಗಿರುವುದರಿಂದ, ಚಳಿಗಾಲದಲ್ಲಿ ಅದರ ಸಾಂಕ್ರಾಮಿಕತೆ ಹೆಚ್ಚಾಗುತ್ತದೆ . ಇನ್ಫ್ಲುಯೆನ್ಸ ವೈರಸ್‌ನ ಸಾಂಕ್ರಾಮಿಕ ರೋಗಗಳ ಅಧ್ಯಯನವು ಚಳಿಗಾಲದ ಹಂತಗಳಲ್ಲಿ ಪ್ರಕರಣಗಳು ಹೆಚ್ಚಾಗಲಿದೆ ಎಂದು ಹೇಳಿದೆ.

ಚಳಿಗಾಲದಲ್ಲಿ ಮತ್ತಷ್ಟು ಎಚ್ಚರಿಕೆಯಿಂದಿರಿ

ಚಳಿಗಾಲದಲ್ಲಿ ಮತ್ತಷ್ಟು ಎಚ್ಚರಿಕೆಯಿಂದಿರಿ

ಬೇಸಿಗೆಯಲ್ಲಿ ಅಟ್ಟಹಾಸ ಮೆರೆದಿರೋ ಕೊರೊನಾ ಚಳಿಗಾಲದಲ್ಲಿಯೂ ಬ್ಯಾಟಿಂಗ್ ಮಾಡೋಕೆ ಸಜ್ಜಾಗಿದೆ. ಹೀಗಾಗಿ ಚಳಿಗಾಲದಲ್ಲಿ ಸ್ವಲ್ಪ ಯಾಮಾರಿದರೂ ಮನೆ ಬಾಗಿಲಿಗೆ ಕೊರೊನಾ ಬರಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಚಳಿಗಾಲದಲ್ಲಿ ಕಾಯಿಲೆಗಳು ಹೆಚ್ಚು

ಚಳಿಗಾಲದಲ್ಲಿ ಕಾಯಿಲೆಗಳು ಹೆಚ್ಚು

ಚಳಿಗಾಲದಲ್ಲಿ ಶೀತ, ಕೆಮ್ಮು ಹಲವು ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚು. ಚಳಿಗಾಲದಲ್ಲಿ ವಯಸ್ಸಾದವರು ಮನೆಯಿಂದ ಹೊರ ಬಂದ್ರೆ ಜೀವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಅಕ್ಟೋಬರ್ ಅಂತ್ಯದ ವೇಳೆಗೆ 9 ಲಕ್ಷ ಕೊರೊನಾ ಪ್ರಕರಣಗಳು ಕರ್ನಾಟಕದಲ್ಲಿ ದಾಖಲಾಗೋ ಸಾಧ್ಯತೆ ಇದ್ದು, ಚಳಿಗಾಲದ ಬಗ್ಗೆ ತಜ್ಞರು ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ.

ಚಳಿಗಾಲದಲ್ಲಿ ರೋಗ ಬಹುಬೇಗ ಹರಡುತ್ತದೆ

ಚಳಿಗಾಲದಲ್ಲಿ ರೋಗ ಬಹುಬೇಗ ಹರಡುತ್ತದೆ

ಚಳಿಗಾಲದಲ್ಲಿ ಕೊರೊನಾ ವೈರಸ್ ಮಲ್ಟಿಪಲ್ ಆಗೋ ಸಾಧ್ಯತೆ ಇದೆ. ಜೊತೆಗೆ ಜನರು ಒಬ್ಬರ ಹತ್ತಿರ ಮತ್ತೊಬ್ಬರು ಇರ್ತಾರೆ. ಈ ವೇಳೆ ಸಾಮಾಜಿಕ ಅಂತರ ಕಡಿಮೆ ಆಗುತ್ತದೆ. ಹೀಗಾಗಿ ಸಾಂಕ್ರಾಮಿಕ ರೋಗಗಳು ಬಹುಬೇಗ ಹರಡುತ್ತವೆ. ಪರಿಣಾಮ ಕೊರೊನಾ ಪ್ರಕರಣಗಳ ಸಂಖ್ಯೆ ದುಪ್ಪಟ್ಟು ಆಗುತ್ತದೆ ಎಂದು ಹೇಳಿದ್ದಾರೆ.

ರೋಗ ಲಕ್ಷಣಗಳು ಕಾಣಿಸಿಕೊಳ್ಳುವ ಮೊದಲೇ ವೈರಸ್ ಹರಡುತ್ತಾರೆ

ರೋಗ ಲಕ್ಷಣಗಳು ಕಾಣಿಸಿಕೊಳ್ಳುವ ಮೊದಲೇ ವೈರಸ್ ಹರಡುತ್ತಾರೆ

ರೋಗದ ಲಕ್ಷಣಗಳು ಕಾಣಿಸಿಕೊಳ್ಳುವ 2-3 ದಿನಗಳ ಮುನ್ನವೇ ಜನರು ವೈರಸ್‌ನ್ನು ಹರಡಲು ಆರಂಭಿಸುತ್ತಾರೆ. ಕೆಲವು ವೈರಸ್‌ಗಳು ಅತಿಯಾದ ಉಷ್ಣಾಂಶದಲ್ಲಿ ಸಾಯುತ್ತವೆ ಆದರೆ ಕಡಿಮೆ ಉಷ್ಣಾಂಶದಲ್ಲಿ ಎರಡು ಪಟ್ಟು ಹೆಚ್ಚಾಗುತ್ತವೆ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ, ಗುಂಪು ಗುಂಪಾಗಿ ಓಡಾಡುವುದನ್ನು ನಿಲ್ಲಿಸಿ, ಮಾಸ್ಕ್ ಧರಿಸಿ, ಪದೇ ಪದೇ ಕೈ ತೊಳೆದುಕೊಳ್ಳಿ.

Recommended Video

Sriramulu ಎರಡು ವರುಷ ಇಂದ ಕೇಳ್ತಿದಿನಿ | Oneindia Kannada

English summary
In view of the winter season and festivities around the corner, the NITI Aayog has warned that the second peak of Covid-19 is impending over the country. Dr VK Paul, member (health) and head of the national Covid-19 task force, cautioned on Tuesday during a press briefing that India will see another storm of Covid-19 cases.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X