ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೇತಾಜಿ ಸ್ಮರಣೆ, ಅಂಡಮಾನ್ ನ ಮೂರು ದ್ವೀಪಕ್ಕೆ ಮರು ನಾಮಕರಣ

|
Google Oneindia Kannada News

ನವದೆಹಲಿ, ಡಿಸೆಂಬರ್ 25: ಸ್ವಾತಂತ್ರ್ಯ ಸೇನಾನಿ, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಸ್ಮರಣೆಯಲ್ಲಿ ಅಂಡಮಾನ್ ನಿಕೋಬಾರ್ ನ ಮೂರು ದ್ವೀಪಗಳ ಹೆಸರನ್ನು ಬದಲಾಯಿಸಿ, ಮರು ನಾಮಕರಣ ಮಾಡಲು ಕೇಂದ್ರ ಸರ್ಕಾರವು ಮುಂದಾಗಿದೆ.

ರೋಸ್ ದ್ವೀಪವನ್ನು ನೇತಾಜಿ ಸುಭಾಷ್ ಚಂದ್ರ ಬೋಸ್ ದ್ವೀಪ, ನೀಲ್ ದ್ವೀಪವನ್ನು ಶಹೀದ್ ದ್ವೀಪ ಹಾಗು ಹಾವೆಲ್ ಲಾಕ್ ದ್ವೀಪವನ್ನು ಸ್ವರಾಜ್ ದ್ವೀಪ ಎಂದು ಹೆಸರಿಸಲಾಗುತ್ತದೆ.

In tribute to Netaji Bose, 3 Andaman Nicobar islands get desi names

ಸ್ವಾತಂತ್ರ್ಯ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಪೋರ್ಟ್ ಬ್ಲೇರ್ ನಲ್ಲಿ ಪ್ರಥಮ ಬಾರಿಗೆ ತ್ರಿವರ್ಣಧ್ವಜಾರೋಹಣ ಮಾಡಿದ ಸವಿನೆನಪಿಗೆ 75 ವರ್ಷ ಸಂದಿದೆ. ಅಂಡಮಾನ್ ಸೆಲ್ಯುಲಾರ್ ಜೈಲಿನಲ್ಲಿ ಧ್ವಜಕ್ಕೆ ವಂದಿಸುತ್ತಿರುವ ದೃಶ್ಯ ಇರುವ 75 ರು ಮೌಲ್ಯದ ನಾಣ್ಯವನ್ನು ಕೇಂದ್ರ ಸರ್ಕಾರವು ಬಿಡುಗಡೆ ಮಾಡಲು ಮುಂದಾಗಿದೆ. ಈ ಕಾರ್ಯಕ್ರಮದ ಮುಂದುವರೆದ ಭಾಗವಾಗಿ ದ್ವೀಪಗಳಿಗೆ ಹೊಸ ಹೆಸರು ಸಿಗಲಿದೆ.

ಡಿಸೆಂಬರ್ 30, 1943ರಂದು ಭಾರತೀಯ ರಾಷ್ಟ್ರೀಯ ಸೇನೆ(ಐಎನ್ಎ)ಯ ಬೋಸ್ ಮೊದಲ ಬಾರಿಗೆ ಪೋರ್ಟ್‌ ಬ್ಲೇರ್ ನ ಜೈಲಿನಲ್ಲಿ ತ್ರಿವರ್ಣ ಧ್ವಜಾರೋಹಣ ನೆರವೇರಿದ್ದರು.

ಬ್ರಿಟಿಷರಿಂದ ದಾಸ್ಯದಿಂದ ಮುಕ್ತಗೊಂಡ ಭಾರತದ ಪ್ರಥಮ ಭೂ ಪ್ರದೇಶ ಎಂದು ಸ್ವಾತಂತ್ಯದ ಘೋಷಣೆ ಮಾಡಿದ್ದರು. ಎರಡನೇ ಮಹಾಯುದ್ಧದ ಸಮಯದಲ್ಲಿ ಜಪಾನ್ನಿಯರು ಈ ದ್ವೀಪವನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು.

ಡಿಸೆಂಬರ್ 30ರದು ಪೋರ್ಟ್ ಬ್ಲೇರ್ ಗೆ ಭೇಟಿ ನೀಡಲಿರುವ ಪ್ರಧಾನಿ ಮೋದಿ ಅವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

English summary
The Centre has decided to rename three islands in Andaman and Nicobar Ross Island as Netaji Subhas Chandra Bose Island, Neil Island as Shahid Dweep and Havelock Island as Swaraj Dweep.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X