ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರದಿಂದ ಜಾಹೀರಾತಿಗಾಗಿ ಮೂರೂವರೆ ವರ್ಷದಲ್ಲಿ 3755 ಕೋಟಿ ಖರ್ಚು

|
Google Oneindia Kannada News

ಈ ವರ್ಷದ ಅಕ್ಟೋಬರ್ ವರೆಗೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಮೂರೂವರೆ ವರ್ಷದ ಅವಧಿಯಲ್ಲಿ 3755 ಕೋಟಿ ರುಪಾಯಿ ಖರ್ಚು ಮಾಡಿದೆ ಎಂಬ ಸಂಗತಿ ಶುಕ್ರವಾರ ಮಾಹಿತಿ ಹಕ್ಕು ಕಾಯ್ದೆ ಅಡಿ ಹಾಕಿದ ಅರ್ಜಿಯೊಂದಕ್ಕೆ ನೀಡಿದ ಉತ್ತರದಿಂದ ಬಯಲಾಗಿದೆ.

ಏಪ್ರಿಲ್ 2014ರಿಂದ ಅಕ್ಟೋಬರ್ 2017ರವರೆಗೆ ವಿದ್ಯುನ್ಮಾನ ಮಾಧ್ಯಮ, ಮುದ್ರಣ ಮಾಧ್ಯಮ ಹಾಗೂ ಪ್ರಚಾರಕ್ಕಾಗಿ 37 ಕೋಟಿ ರುಪಾಯಿ ಖರ್ಚು ಮಾಡಲಾಗಿದೆ ಎಂದು ಮಾಹಿತಿ ಹಾಗೂ ಪ್ರಸಾರ ಸಚಿವಾಲಯವು ಮಾಹಿತಿ ಹಕ್ಕು ಕಾಯ್ದೆ ಅಡಿ ಕೇಳಿದ ಪ್ರಶ್ನೆಗೆ ಉತ್ತರಿಸಲಾಗಿದೆ.

ಕುರ್ಚಿಗಲ್ಲ, ನನ್ನ ಕಾಳಜಿ ಏನಿದ್ದರೂ ರೈತರ ಮೇಲೆ: ನರೇಂದ್ರ ಮೋದಿಕುರ್ಚಿಗಲ್ಲ, ನನ್ನ ಕಾಳಜಿ ಏನಿದ್ದರೂ ರೈತರ ಮೇಲೆ: ನರೇಂದ್ರ ಮೋದಿ

ಗ್ರೇಟರ್ ನೋಯ್ಡಾ ಮೂಲದ ಸಾಮಾಜಿಕ ಕಾರ್ಯಕರ್ತ ರಾಮ್ ವೀರ್ ತನ್ವರ್ ಮಾಹಿತಿ ಹಕ್ಕು ಕಾಯ್ದೆ ಅಡಿ ಅನ್ವಯ ಹಾಕಿದ್ದ ಅರ್ಜಿಗೆ ಉತ್ತರ ನೀಡಲಾಗಿದೆ. ಮಾಹಿತಿ ಅನ್ವಯ, ಎಲೆಕ್ಟ್ರಾನಿಕ್ ಮಾಧ್ಯಮದ ಜಾಹೀರಾತು- ಸಮುದಾಯ ರೇಡಿಯೋ, ಡಿಜಿಟಲ್ ಸಿನಿಮಾ, ದೂರದರ್ಶನ, ಇಂಟರ್ ನೆಟ್, ಎಸ್ಸೆಮ್ಮೆಸ್ ಮತ್ತು ಟಿ.ವಿಯಲ್ಲಿನದು ಎಲ್ಲ ಸೇರಿ 1656 ಕೋಟಿ ರುಪಾಯಿಯನ್ನು ಕೇಂದ್ರ ಸರಕಾರ ಖರ್ಚು ಮಾಡಿದೆ.

Narendra Modi

ಮುದ್ರಣ ಮಾಧ್ಯಮದ ಜಾಹೀರಾತಿಗಾಗಿ ಕೇಂದ್ರ ಸರಕಾರ 1698 ಕೋಟಿ ವೆಚ್ಚ ಮಾಡಿದೆ. ಹೋರ್ಡಿಂಗ್, ಪೋಸ್ಟರ್, ಬುಕ್ ಲೆಟ್ ಮತ್ತು ಕ್ಯಾಲೆಂಡರ್ ಸೇರಿ ಹೊರಾಂಗಣ ಜಾಹೀರಾತುಗಳಿಗಾಗಿ ಕೇಂದ್ರ ಸರಕಾರ 399 ಕೋಟಿ ರುಪಾಯಿಯನ್ನು ವೆಚ್ಚ ಮಾಡಿರುವುದಾಗಿ ಆರ್ ಟಿಐ ಬಯಲು ಮಾಡಿದೆ.

2017ರಲ್ಲಿ ಅತೀ ಹೆಚ್ಚು ಟ್ವೀಟ್, 2ನೇ ಸ್ಥಾನದಲ್ಲಿ ಮೋದಿ2017ರಲ್ಲಿ ಅತೀ ಹೆಚ್ಚು ಟ್ವೀಟ್, 2ನೇ ಸ್ಥಾನದಲ್ಲಿ ಮೋದಿ

ವಾರ್ಷಿಕವಾಗಿ ಜಾಹೀರಾತಿಗಾಗಿ ಮೀಸಲಿಟ್ಟ ಮೊತ್ತಕ್ಕಿಂತ ಹೆಚ್ಚಿನದನ್ನು ಸಚಿವಾಲಯದಿಂದ ಮಹತ್ವಾಕಾಂಕ್ಷೆ ಯೋಜನೆಗಾಗಿ ವೆಚ್ಚ ಮಾಡಲಾಗಿದೆ. ಆದರೆ ಮಾಲಿನ್ಯ ತಡೆಗಾಗಿ ಕಳೆದ ಮೂರು ವರ್ಷದಲ್ಲಿ ಒಟ್ಟಾರೆಯಾಗಿ 56.8 ಕೋಟಿ ರುಪಾಯಿ ಖರ್ಚು ಮಾಡಲಾಗಿದೆ.

ನರೇಂದ್ರ ಮೋದಿ ಅವರನ್ನು ಒಳಗೊಂಡ ಜಾಹೀರಾತುಗಳಿಗಾಗಿ ಜೂನ್ 1, 2014 ಹಾಗೂ ಆಗಸ್ಟ್ 31, 2016ರ ಮಧ್ಯೆ 1100 ಕೋಟಿ ರುಪಾಯಿ ವೆಚ್ಚ ಮಾಡಲಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪ್ರತಿ ತಿಂಗಳು ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮದ ಪತ್ರಿಕೆಗಳ ಜಾಹೀರಾತಿಗಾಗಿ 8.5 ಕೋಟಿ ರುಪಾಯಿ ವೆಚ್ಚ ಮಾಡಲಾಗಿದೆ.

English summary
The Modi government has spent a whopping nearly Rs 3,755 crore in three and half years on its publicity till October this year, an RTI revealed on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X