ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊವಿಡ್ 19 ಆಕ್ಟೀವ್ ಪ್ರಕರಣ: ವಿಶ್ವದಲ್ಲಿ 5ನೇ ಸ್ಥಾನದಲ್ಲಿ ನಿಂತ ಭಾರತ

|
Google Oneindia Kannada News

ನವದೆಹಲಿ, ಮೇ 25: ಕೊರೊನಾವೈರಸ್ ಆಕ್ಟೀವ್ ಪ್ರಕರಣಗಳು ಹೆಚ್ಚಿರುವ ವಿಶ್ವದ ಟಾಪ್ 10 ದೇಶಗಳಲ್ಲಿ ಭಾರತ 5ನೇ ಸ್ಥಾನದಲ್ಲಿ ನಿಂತಿದೆ.

ಭಾರತದಲ್ಲಿ 1,37,000 ಕರೊನಾ ಸೋಂಕಿತ ಪ್ರಕರಣಗಳಿವೆ. 4 ಸಾವಿರ ಮಂದಿ ಮೃತಪಟ್ಟಿದ್ದಾರೆ. 75,700 ಆಕ್ಟೀವ್ ಪ್ರಕರಣಗಳಿವೆ.

ದೆಹಲಿ: ಏಮ್ಸ್‌ನ ಹಿರಿಯ ವೈದ್ಯರೊಬ್ಬರು ಕೊರೊನಾ ವೈರಸ್‌ಗೆ ಬಲಿದೆಹಲಿ: ಏಮ್ಸ್‌ನ ಹಿರಿಯ ವೈದ್ಯರೊಬ್ಬರು ಕೊರೊನಾ ವೈರಸ್‌ಗೆ ಬಲಿ

ಅಮೆರಿಕ, ರಷ್ಯಾ, ಬ್ರೆಜಿಲ್, ಫ್ರಾನ್ಸ್ ನಂತರದ ಸ್ಥಾನದಲ್ಲಿ ಭಾರತ ಇದೆ. ವಿಶ್ವದಾದ್ಯಂತ 28 ಲಕ್ಷಕ್ಕೂ ಹೆಚ್ಚು ಕೊರೊನಾ ವೈರಸ್ ಪ್ರಕರಣಗಳಿವೆ. ಅಮೆರಿಕ ಒಂದರಲ್ಲೇ 11 ಲಕ್ಷ ಪ್ರಕರಣಗಳಿವೆ.

In Terms Of Active COVID-19 Cases India Now Stands At Fifth Position Globally

ಲಾಕ್‌ಡೌನ್ ಸಡಿಲಗೊಳಿಸಿ ವಲಸೆ ಕಾರ್ಮಿಕರಿಗೆ ತಮ್ಮ ಊರುಗಳಿಗೆ ತೆರಳಲು ಅವಕಾಶ ಮಾಡಿಕೊಟ್ಟಿದ್ದರಿಂದ ದೇಶದಲ್ಲಿ ಕೊರೊನಾ ಮತ್ತಷ್ಟು ಹರಡಲು ಕಾರಣವಾಯಿತು. ಜೊತೆಗೆ ನವದೆಹಲಿಯಲ್ಲಿ ನಡೆದ ತಬ್ಲಿಘಿ ಜಮಾತ್ ಸಭೆಯು ಕೂಡ ದೇಶದಲ್ಲಿ ಕೊರೊನಾ ಹರಡಲು ಪ್ರಮುಖ ಕಾರಣವಾಯಿತು.

ಇಂದಿನಿಂದ ದೇಶಾದ್ಯಂತ ದೇಶೀಯ ವಿಮಾನಗಳ ಸೇವೆಯೂ ಆರಂಭಗೊಂಡಿದೆ. ತಮಿಳುನಾಡಿನಿಂದ ಮೊದಲ ವಿಮಾನ ಬೆಂಗಳೂರಿಗೆ ಆಗಮಿಸಿದೆ.

ನಿಜಾಮುದ್ದೀನ್ ಮರ್ಕಜ್‌ನಿಂದಾಗಿ ದೇಶದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಿವೆ. ಇದೊಂದು ಪ್ರಕರಣ ದೇಶದ ಜನರು ಬುದ್ಧಿ ಕಲಿಯುವಂತಾಯಿತು. ತಬ್ಲಿಘಿ ಜಮಾತ್‌ಗೆ ಹೋಗಿ ಬಂದಿದ್ದ ವ್ಯಕ್ತಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕೇಂದ್ರ ಸಚಿವ ಡಾ. ಹರ್ಷವರ್ಧನ್ ತಿಳಿಸಿದ್ದಾರೆ.

English summary
India, now stands among the world's top ten countries in terms of COVID-19 cases.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X