ಆತ ಬೆಂಕಿಗೆ ಆಹುತಿ ಆಗುವರೆಗೂ ಜನ ವಿಡಿಯೋ ಮಾಡ್ತಿದ್ದರು!

Posted By:
Subscribe to Oneindia Kannada

ಬೀಡ್ (ಮಹಾರಾಷ್ಟ್ರ), ಮೇ 12: ಎರಡು ಬೈಕುಗಳು ಡಿಕ್ಕಿ ಹೊಡೆದ ಪರಿಣಾಮ ಒಂದು ಬೈಕಿನ ಸವಾರನೊಬ್ಬನಿಗೆ ಬೆಂಕಿ ಹೊತ್ತಿಕೊಂಡು ರಸ್ತೆಯಲ್ಲಿ ಬಿದ್ದಿದ್ದರೂ ಅದನ್ನು ಕಂಡೂ ಕಾಣದ ಹಾಗೆ ಸಾಗಿದ ಜನ ಅಮಾನವೀಯತೆ ಪ್ರದರ್ಶಿಸಿದ್ದಾರೆ.

ಈ ಘಟನೆ ನಡೆದಿರುವುದು ಗುರುವಾರದಂದು. ಬೀಡ್ ಜಿಲ್ಲೆಯ ಕಡೆಯಿಂದ ಸಾಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗವಾಗಿ ಸಾಗಿಬಂದ ಎರಡು ಪ್ರತ್ಯೇಕ ಬೈಕುಗಳು ಡಿಕ್ಕಿ ಹೊಡೆದುಕೊಂಡವು. ಆಗ, ಒಬ್ಬ ಬೈಕಿನ ಸವಾರ ದೂರಕ್ಕೆ ಹೋಗಿ ಬಿದ್ದರೆ, ಮತ್ತೊಬ್ಬ ಎರಡೂ ಬೈಕುಗಳ ಅವಶೇಷಗಳಡಿ ಸಿಲುಕಿ ಪ್ರಜ್ಞಾಹೀನನಾಗಿಬಿಟ್ಟ. ತಲೆಗೆ ಪೆಟ್ಟಾಗಿದ್ದರಿಂದ ಆತನಿಗೆ ಪ್ರಜ್ಞೆ ಹೊರಟುಹೋಗಿತ್ತು.

In Shocking Video, Burning Man Didn't Stop Traffic On Maharashtra Highway

ಅರೆಕ್ಷಣದಲ್ಲಿ ಆತನ ಮೇಲೆ ಬಿದ್ದ ಬೈಕುಗಳಲ್ಲಿ ಒಂದಕ್ಕೆ ಬೆಂಕಿ ಹೊತ್ತಿಕೊಂಡಿತು. ನೋಡನೋಡುತ್ತಿದ್ದಂತೆ ಆ ಬೆಂಕಿ ಆತನಿಗೂ ಆವರಿಸಿ ಆತನನ್ನು ಸುಡಲಾರಂಭಿಸಿತು. ಮೊದಲೇ ಪ್ರಜ್ಞೆ ಕಳೆದುಕೊಂಡಿದ್ದ ಆತ ಕೂಗುವ ಸ್ಥಿತಿಯಲ್ಲೂ ಇರಲಿಲ್ಲ.

ಆದರೆ, ಇದನ್ನು ನೋಡಿಕೊಂಡೇ ತಮ್ಮವಾಹನಗಳಲ್ಲಿ ಓಡಾಡುತ್ತಿದ್ದ ಪ್ರಯಾಣಿಕರಲ್ಲಿ ಯಾರೊಬ್ಬರೂ ಈತನ ಸಹಾಯಕ್ಕೆ ಬರಲಿಲ್ಲ. ಆ ಬೆಂಕಿ ಆತನ ಇಡೀ ದೇಹವನ್ನು ವ್ಯಾಪಿಸಿಕೊಂಡು ಆ ಬೈಕುಗಳ ಜತೆಗೆ ಆತನನ್ನೂ ಆಹುತಿ ತೆಗೆದುಕೊಂಡಿತು.

ಈ ಇಡೀ ಘಟನೆಯನ್ನು ಕೇವಲ ನೋಡುತ್ತಲೇ ಮುನ್ನಡೆದರೆ, ಇನ್ನೂ ಕೆಲವರು ಈ ಘಟನೆಯನ್ನು ವಿಡಿಯೋ ಮಾಡುತ್ತಾ ತಮ್ಮಲ್ಲಿನ ವಿಕೃತ ಭಾವವನ್ನು ಅನಾವರಣಗೊಳಿಸಿದರು.

ಅಪಘಾತದಲ್ಲಿ ದೂರಕ್ಕೆ ಹಾರಿಹೋಗಿದ್ದ ಮತ್ತೊಬ್ಬ ಬೈಕ್ ಸವಾರ ಶುಕ್ರವಾರ ಆಸ್ಪತ್ರೆಯಲ್ಲಿ ನಿಧನನಾಗಿದ್ದಾನೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A man is engulfed in flames on the highway as cars, two-wheelers and people go past without stopping to help, in a horrific video that appears to have been taken by one of many thoughtless bystanders at the spot.
Please Wait while comments are loading...