ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಗಳಲ್ಲಿ : ಗಲ್ಲಿ ಗಲ್ಲಿಗಳಲ್ಲಿ ನಂದಲೋಲನ ಲೀಲೆ

By Mahesh
|
Google Oneindia Kannada News

ಬೆಂಗಳೂರು, ಆ.18: ವಿಶ್ವದೆಲ್ಲೆಡೆ ಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗಿದೆ. ದೇವಸ್ಥಾನ, ಮನೆ, ಊರಿನ ಪ್ರಮುಖ ರಸ್ತೆಗಳಲ್ಲಿ, ಗಲ್ಲಿಗಲ್ಲಿಗಳಲ್ಲಿ, ಕೆಲವು ಕೃಷ್ಣಮಠಗಳಲ್ಲಿ ನಂದಲೋಲನನನ್ನು ಕೊಂಡಾಡಲಾಗಿದೆ. ಉಡುಪಿಯಲ್ಲಿ ಮಾತ್ರ ಸೌರಮಾನ ಪಂಚಾಂಗದಂತೆ ಕೃಷ್ಣನ ಹುಟ್ಟುಹಬ್ಬ ಆಚರಿಸಲಿದ್ದಾರೆ.

ಮಥುರಾ, ಪಂಡರಾಪುರ, ಗುರುವಾಯೂರು, ದ್ವಾರಕಾ ಮುಂತಾದ ಪ್ರದೇಶಗಳ ಶ್ರೀಕೃಷ್ಣ ದೇವಾಲಯಗಳಲ್ಲಿ ಸಂಭ್ರಮ, ಸಡಗರದ ಜನ್ಮಾಷ್ಟಮಿ ಹಬ್ಬದ ಆಚರಣೆ ಕಂಡು ಬಂದಿದೆ. ಮಥುರಾ ನಗರಿಯಲ್ಲಿ ಹಿಂದೂ, ಮುಸ್ಲಿಂ ಭಾವೈಕ್ಯತೆಯ ಸಂಕೇತ ಎನ್ನುವಂತೆ ಮುಸ್ಲಿಂ ಭಾಂದವರು ಭಕ್ತಿ, ಸಡಗರದಲ್ಲಿ ಕೃಷ್ಣನ ಸೇವೆಗೆ ನಿಲ್ಲುತ್ತಾರೆ.ಇದೇ ರೀತಿ ಚಿತ್ರಣ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಕಂಡು ಬಂದಿದ್ದು ಮುಸ್ಲಿಂ ಮಕ್ಕಳು ಕೂಡಾ ಕೃಷ್ಣ ವೇಷಧಾರಿಯಾಗಿ ಸ್ಪರ್ಧಿಯಲ್ಲಿ ಭಾಗವಹಿಸಿ ಗಮನ ಸೆಳೆದರು. ವಿಟ್ಲ ಪಿಂಡಿ ಆಚರಣೆಯೂ ಸೋಮವಾರ ನಡೆದಿದೆ.[ಸರ್ಕಾರದಿಂದಲೇ ಕೃಷ್ಣ ಜನ್ಮಾಷ್ಟಮಿ ಆಚರಣೆ]

'ನಾವು ಮತ್ತು ಹಿಂದೂ ಬಾಂಧವರು ಸೋದರರಂತೆ ಇರುತ್ತೇವೆ. ಕೋಮು ಗಲಭೆಗೆ ಕಾರಣರಾಗುವುದು ರಾಜಕಾರಿಣಿಗಳು. ದೇಶದ ಯಾವುದೇ ಭಾಗದಲ್ಲೂ ಕೋಮು ಗಲಭೆ ನಡೆದರೂ ನಮ್ಮ ಸಂಬಂಧದ ನಡುವೆ ಯಾವುದೇ ಒಡಕು ಉಂಟಾಗುವುದಿಲ್ಲ' ಎನ್ನುತ್ತಾರೆ ಮಥುರಾದ ಸ್ಥಳೀಯ ಮುಸ್ಲಿಂ ನಿವಾಸಿಗಳು. ಈ ಬಾರಿ ಕಾಶ್ಮೀರದ ಪಂಡಿತರನ್ನು ಒಟ್ಟು ಮಾಡಿ ಶ್ರೀನಗರದಲ್ಲಿ ಇಸ್ಕಾನ್ ಸಂಭ್ರಮಾಚರಣೆ ಸಂಭ್ರಮದ ಕೃಷ್ಣ ಜನ್ಮದಿನೋತ್ಸವದ ಚಿತ್ರಗಳು ಇಲ್ಲಿವೆ...

ಶ್ರೀನಗರದಲ್ಲಿ ಕಾಶ್ಮೀರಿ ಪಂಡಿತರ ಸಂಭ್ರಮ

ಶ್ರೀನಗರದಲ್ಲಿ ಕಾಶ್ಮೀರಿ ಪಂಡಿತರ ಸಂಭ್ರಮ

ಶ್ರೀಕೃಷ್ಣ ಜನ್ಮಾಷ್ಟಮಿದಲ್ಲಿ ಪಾಲ್ಗೊಂಡ ಕಾಶ್ಮೀರಿ ಪಂಡಿತರು, ಲಾಲ್ ಚೌಕ್ ನಲ್ಲಿ ಜನ್ಮಾಷ್ಟಮಿ ಮೆರವಣಿಗೆ ಆಯೋಜಿಸಿದ್ದ ಇಸ್ಕಾನ್, PTI Photo by S Irfan

ಮಥುರಾ ಸಂಸದೆ ಹೇಮಾಮಾಲಿನಿ ಪೂಜೆ

ಮಥುರಾ ಸಂಸದೆ ಹೇಮಾಮಾಲಿನಿ ಪೂಜೆ

ಮಥುರಾದಲ್ಲಿ ಸ್ಥಳೀಯ ಸಂಸದೆ ಹೇಮಾಮಾಲಿನಿ ಅವರು ಪೂಜೆ ಸಲ್ಲಿಸಿದರು.

ಮೊಸರು ಕುಡಿಕೆ ಒಡೆಯುವ ಆಟ

ಮೊಸರು ಕುಡಿಕೆ ಒಡೆಯುವ ಆಟ

ಮುಂಬೈನಲ್ಲಿ ಕೋರ್ಟ್ ಅನುಮತಿ ಸಿಕ್ಕಿದ ಮೇಲೇ ಚಿಣ್ಣರು ಕೂಡಾ ಮೊಸರು ಕುಡಿಕೆ ಒಡೆಯುವ ಆಟದಲ್ಲಿ ಸಂಭ್ರಮದಿಂದ ಪಾಲ್ಗೊಂಡಿದ ದೃಶ್ಯ ಕಂಡು ಬಂದಿತು. PTI Photo by Mitesh Bhuvad

ಜನ್ಮಾಷ್ಟಮಿ ಸಂಭ್ರಮದಲ್ಲಿ ಮಥುರಾ

ಜನ್ಮಾಷ್ಟಮಿ ಸಂಭ್ರಮದಲ್ಲಿ ಮಥುರಾ

ಶ್ರೀಕೃಷ್ಣನ ನಗರಿ ಮಥುರಾ ವಿದ್ಯುತ್ ಅಲಂಕಾರದಲ್ಲಿ ಕಂಗೊಳಿಸುತ್ತಿದೆ. ಮಥುರಾದಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮ ಭಾನುವಾರದಿಂದ ಆರಂಭವಾಗಿದೆ.

ನವದೆಹಲಿಯಲ್ಲಿ ಜನ್ಮಾಷ್ಟಮಿ ಸಂಭ್ರಮ

ನವದೆಹಲಿಯಲ್ಲಿ ಜನ್ಮಾಷ್ಟಮಿ ಸಂಭ್ರಮ

ನವದೆಹಲಿಯಲ್ಲಿ ಬಿರ್ಲಾ ಮಂದಿರದಲ್ಲಿ ಜನರು ಕೃಷ್ಣ ಜನ್ಮಾಷ್ಟಮಿ ಆಚರಿಸಿದರು. PTI Photo by Shahbaz Khan

ಉತ್ತರಪ್ರದೇಶದ ಸಿಎಂರಿಂದ ಪೂಜೆ

ಉತ್ತರಪ್ರದೇಶದ ಸಿಎಂರಿಂದ ಪೂಜೆ

ಲಕ್ನೋ: ಉತ್ತರಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಕೃಷ್ಣಪೂಜೆಯಲ್ಲಿ ತೊಡಗಿದ್ದಾರೆ. PTI photo by Nand kumar

ವಸುದೇವ ಹಾಗೂ ಕೃಷ್ಣನ ವೇಷ

ವಸುದೇವ ಹಾಗೂ ಕೃಷ್ಣನ ವೇಷ

ನವದೆಹಲಿಯಲ್ಲಿ ಬಾಲ ಕೃಷ್ಣನ ಹೊತ್ತ ವಸುದೇವನ ವೇಷ ಧರಿಸಿದ ಭಕ್ತ

ಕಾಶ್ಮೀರದಲ್ಲಿ ಕೃಷ್ಣನ ಅವತಾರ

ಕಾಶ್ಮೀರದಲ್ಲಿ ಕೃಷ್ಣನ ಅವತಾರ

ಕಾಶ್ಮೀರದಲ್ಲಿ ಕೃಷ್ಣನ ಅವತಾರವಾದಂತೆ ಎಲ್ಲರ ಮೊಗದಲ್ಲಿ ಸಂಭ್ರಮ ಮನೆಮಾಡಿತ್ತು. ಕೃಷ್ಣನ ವೇಷತೊಟ್ಟ ಪುಟ್ಟ ಕಂದನ ಫೋಟೋ ತೆಗೆಯುವುದೇ ಎಲ್ಲರಿಗೂ ಖುಷಿ ವಿಚಾರವಾಗಿತ್ತು.

ಜೈಪುರದಲ್ಲಿ ಕೃಷ್ಣ ವೇಷ ಸ್ಪರ್ಧೆ

ಜೈಪುರದಲ್ಲಿ ಕೃಷ್ಣ ವೇಷ ಸ್ಪರ್ಧೆ

ಜೈಪುರದಲ್ಲಿ ಕೃಷ್ಣ ವೇಷ ಸ್ಪರ್ಧೆಯಲ್ಲಿ ಪಾಲ್ಗೊಂಡಿರುವ ಚಿಣ್ಣರು

ಜಮ್ಮುವಿನಲ್ಲಿ ಕೃಷ್ಣಂ ವಂದೇ ಜಗದ್ಗುರಂ

ಜಮ್ಮುವಿನಲ್ಲಿ ಕೃಷ್ಣಂ ವಂದೇ ಜಗದ್ಗುರಂ

ಜಮ್ಮುವಿನಲ್ಲಿ ಕೃಷ್ಣಂ ವಂದೇ ಜಗದ್ಗುರಂ ಭಜನೆ ಜೋರಾಗಿ ನಡೆಯಿತು.

ನವದೆಹಲಿಯ ಬಿರ್ಲಾ ಮಂದಿರ

ನವದೆಹಲಿಯ ಬಿರ್ಲಾ ಮಂದಿರ

ದೀಪಗಳಿಂದ ಅಲಂಕಾರಗೊಂಡ ನವದೆಹಲಿಯ ಬಿರ್ಲಾ ಮಂದಿರ

ಮೊಸರು ಕುಡಿಕೆ ಒಡೆಯುವ ಸ್ಪರ್ಧೆ

ಮೊಸರು ಕುಡಿಕೆ ಒಡೆಯುವ ಸ್ಪರ್ಧೆ

ಮುಂಬೈನ ಮೊಸರು ಕುಡಿಕೆ ಒಡೆಯುವ ಸ್ಪರ್ಧೆ ಗೋವಿಂದ ಮಂಡಲ್ ನಿಂದ PTI Photo by Mitesh Bhuvad

ಢಾಕಾದಲ್ಲಿ ಕೃಷ್ಣನ ಮೆರವಣಿಗೆ

ಢಾಕಾದಲ್ಲಿ ಕೃಷ್ಣನ ಮೆರವಣಿಗೆ

ಬಾಂಗ್ಲಾದೇಶದ ಢಾಕಾದಲ್ಲಿ ಕೃಷ್ಣನ ಮೆರವಣಿಗೆ ಸಾಗಿದ್ದು ಹೀಗೆ... ಹಿಂದೂ ಭಕ್ತಾದಿಗಳು ಸಂಭ್ರಮದಿಂದ ಕೃಷ್ಣ ವೇಷಧಾರಿ ಕಂದನನ್ನು ಹೊತ್ತು ತಿರುಗಿದರು.

English summary
Whole World celebrated Krishna Janmashtami (birthday of Sri Krishna) on Sunday(Aug.17) In Srinagar Kashmiri pandits at a rally taken out by the community to mark Janamashtami, at Lal Chowck in Srinagar attracted many devotees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X