ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಗಳಲ್ಲಿ : ಕಾರ್ಗಿಲ್ ಹುತಾತ್ಮ ಯೋಧರಿಗೆ ನಮನ

|
Google Oneindia Kannada News

ಬೆಂಗಳೂರು, ಜುಲೈ 26 : ದೇಶಾದ್ಯಂತ 16ನೇ ಕಾರ್ಗಿಲ್‌ ವಿಜಯ ದಿವಸವನ್ನು ಭಾನುವಾರ ಆಚರಿಸಲಾಯಿತು. ಕಾರ್ಗಿಲ್ ಸಮರದಲ್ಲಿ ಹುತಾತ್ಮರಾಧ ಯೋಧರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮನ್ ಕಿ ಬಾತ್ ಮೂಲಕ ಗೌರವ ವಂದನೆ ಸಲ್ಲಿಸಿದ್ದಾರೆ.

ನವದೆಹಲಿಯ ಅಮರ್ ಜವಾನ್ ಸ್ಮಾರಕದಲ್ಲಿ ರಕ್ಷಣಾ ಸಚಿವ ಮನೋಹರ್‌ ಪರಿಕ್ಕರ್, ಮೂರು ಸೇನೆಯ ದಂಡನಾಯಕರು ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಿದರು. ದೇಶಾದ್ಯಂತ ಕಾರ್ಗಿಲ್‌ ಹುತಾತ್ಮರನ್ನು ಸ್ಮರಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. [ಮನ್ ಕಿ ಬಾತ್ ನಲ್ಲಿ ಯೋಧರಿಗೆ ಗೌರವ ಸಲ್ಲಿಸಿದ ಮೋದಿ]

'ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರ ಸೈನಿಕರಿಗೆ ಸಾವಿರ ಸಾವಿರ ಬಾರಿ ನಮಿಸುತ್ತೇನೆ. ಕಾರ್ಗಿಲ್‌ ವಿಜಯ ದಿವಸ ನಮಗೆ ಸೈನಿಕರ ಶೌರ್ಯ, ಬಲಿದಾನ ಮತ್ತು ತ್ಯಾಗದ ನೆನಪು ಮಾಡಿ ಕೊಟ್ಟಿದೆ' ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್‌ ಮಾಡಿದ್ದಾರೆ. ಕಾರ್ಗಿಲ್ ವಿಜಯ ದಿವಸದ ಚಿತ್ರಗಳು ಇಲ್ಲಿವೆ...

ಕಾರ್ಗಿಲ್ ವಿಜಯ ದಿವಸ ಆಚರಣೆ

ಕಾರ್ಗಿಲ್ ವಿಜಯ ದಿವಸ ಆಚರಣೆ

ದೇಶಾದ್ಯಂತ 16ನೇ ಕಾರ್ಗಿಲ್‌ ವಿಜಯ ದಿವಸವನ್ನು ಭಾನುವಾರ ಆಚರಿಸಲಾಯಿತು.ದೇಶಾದ್ಯಂತ ಕಾರ್ಗಿಲ್‌ ಹುತಾತ್ಮರನ್ನು ಸ್ಮರಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ನಮನ ಸಲ್ಲಿಸಿದ ರಕ್ಷಣಾ ಸಚಿವರು

ನಮನ ಸಲ್ಲಿಸಿದ ರಕ್ಷಣಾ ಸಚಿವರು

ನವದೆಹಲಿಯ ಅಮರ್ ಜವಾನ್ ಸ್ಮಾರಕದಲ್ಲಿ ರಕ್ಷಣಾ ಸಚಿವ ಮನೋಹರ್‌ ಪರಿಕ್ಕರ್, ಮೂರು ಸೇನೆಯ ದಂಡನಾಯಕರು ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಿದರು.

ಯೋಧರಿಂದ ನಮನ ಸಲ್ಲಿಕೆ

ಯೋಧರಿಂದ ನಮನ ಸಲ್ಲಿಕೆ

ನವದೆಹಲಿಯ ಅಮರ್ ಜವಾನ್ ಸ್ಮಾರಕದಲ್ಲಿ ಹುತಾತ್ಮ ಯೋಧರಿಗೆ ಗೌರವ ವಂದನೆ ಸಲ್ಲಿಸಿದ ನಂತರ ಯೋಧರು ಕಂಡು ಬಂದಿದ್ದು ಹೀಗೆ.

ನಮನ ಸಲ್ಲಿಸಿದ ಎಂಎನ್ ರೆಡ್ಡಿ

ನಮನ ಸಲ್ಲಿಸಿದ ಎಂಎನ್ ರೆಡ್ಡಿ

ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ಬೆಂಗಳೂರಿನಲ್ಲಿ ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಅವರು ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದರು.

ನರೇಂದ್ರ ಮೋದಿ ಟ್ವಿಟ್

'ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರ ಸೈನಿಕರಿಗೆ ಸಾವಿರ ಸಾವಿರ ಬಾರಿ ನಮಿಸುತ್ತೇನೆ ಎಂದು ನರೇಂದ್ರ ಮೋದಿ ಟ್ವೀಟ್‌ ಮಾಡಿದ್ದಾರೆ.

ನಮನ ಸಲ್ಲಿಸಿದ ಲೆಫ್ಟಿನೆಂಟ್ ಜನರಲ್

ನಮನ ಸಲ್ಲಿಸಿದ ಲೆಫ್ಟಿನೆಂಟ್ ಜನರಲ್

ಕಾರ್ಗಿಲ್‌ ವಿಜಯ ದಿವಸದ ಅಂಗವಾಗಿ ಲೆಫ್ಟಿನೆಂಟ್ ಜನರಲ್ ಡಿಎಸ್ ಹೂಡಾ ಅವರು ಜಮ್ಮು ಕಾಶ್ಮೀರದಲ್ಲಿ ಹುತಾತ್ಮ ಯೋಧರಿಗೆ ಗೌರವ ವಂದನೆ ಸಲ್ಲಿಸಿದರು.

ಕುಟುಂಬದವರಿಂದ ಅಂತಿಮ ನಮನ

ಕುಟುಂಬದವರಿಂದ ಅಂತಿಮ ನಮನ

ಕಾರ್ಗಿಲ್‌ ವಿಜಯ ದಿವಸದ ಅಂಗವಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಹುತಾತ್ಮ ಯೋಧರ ಕುಟುಂಬದವರು ಗೌರವ ವಂದನೆ ಸಲ್ಲಿಸಿದರು.

ಮುಖ್ಯಮಂತ್ರಿಗಳಿಂದ ನಮನ

ಮುಖ್ಯಮಂತ್ರಿಗಳಿಂದ ನಮನ

ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ಉತ್ತರಾಖಂಡ್‌ನಲ್ಲಿ ಮುಖ್ಯಮಂತ್ರಿ ಹರೀಶ್ ರಾವತ್ ಅವರು ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದರು.

English summary
Defense Minister Manohar Parrikar and Army chief General Dalbir Singh Suhag, Air Chief Marshal Arup Raha and Navy chief Admiral RK Dhowan on Sunday paid tribute to the Kargil war heroes at Amar Jawan Jyoti New Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X