ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಜನ್ಮದಿನಾಚರಣೆಗೆ ಸಂಭ್ರಮದ ತಯಾರಿ

By Mahesh
|
Google Oneindia Kannada News

ಬೆಂಗಳೂರು, ಆಗಸ್ಟ್ 14: 71ನೇ ಸ್ವಾತಂತ್ರ್ಯೋತ್ಸವಕ್ಕೆ ದೇಶ ಸಜ್ಜಾಗಿದೆ. ನವದೆಹಲಿಯ ಐತಿಹಾಸಿಕ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಲಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಮಂಗಳವಾರದಂದು ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ದೇಶದೆಲ್ಲೆಡೆ ಯಾವ ರೀತಿ ತಯಾರಿ ನಡೆದಿದೆ ಎಂಬುದರ ಬಗ್ಗೆ ಚಿತ್ರಣ ಇಲ್ಲಿ ನೀಡಲಾಗಿದೆ.

ಸ್ವಾತಂತ್ರ್ಯೋತ್ಸವದ ಹಿನ್ನಲೆಯಲ್ಲಿ ದೇಶದ ವಿವಿಧ ನಗರಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ನವದೆಹಲಿಯ ಕೆಂಪುಕೋಟೆ ಮತ್ತು ಅದರ ಸುತ್ತ-ಮುತ್ತಲಿನ ಪ್ರದೇಶಗಳು ಭದ್ರತಾ ಪಡೆಯ ವಶದಲ್ಲಿವೆ. ವಿವಿಧ ನಗರಗಳ ರೈಲ್ವೆ, ಬಸ್, ವಿಮಾನ ನಿಲ್ದಾಣದಲ್ಲಿ ಭದ್ರತೆ ಹೆಚ್ಚಿಸಲಾಗಿದೆ.

ಕರ್ನಾಟಕ ಸರ್ಕಾರ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಜಂಟಿಯಾಗಿ, ಬೆಂಗಳೂರಿನ ಫೀಲ್ಡ್ ಮಾರ್ಷಲ್ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಆಯೋಜಿಸುತ್ತವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಳಗ್ಗೆ 9ಗಂಟೆಗೆ ಧ್ವಜಾರೋಹಣ ನೆರವೇರಿಸಲಿದ್ದಾರೆ.

ವಿಶ್ವದ ಅತಿದೊಡ್ಡ ಗಣರಾಜ್ಯ ಭಾರತಕ್ಕೆ ಸ್ವತಂತ್ರ ಬಂದು 70 ವರ್ಷಗಳು ಕಳೆದರೂ ಬಡತನ, ನಿರುದ್ಯೋಗ, ಅನಕ್ಷರತೆ, ಭ್ರಷ್ಟಾಚಾರ, ಮಹಿಳೆ ಮಕ್ಕಳ ಮೇಲೆ ದೌರ್ಜನ್ಯದಿಂದ ಮುಕ್ತವಾಗಿಲ್ಲ. ನಕ್ಸಲರು, ಉಗ್ರರ ಜತೆ ಕಾದಾಟದ ಜತೆಗೆ ಕೋಮು ಗಲಭೆಗಳು, ರಾಜ್ಯ ವಿಭಜನೆಯ ಕೂಗು ಕಾಡುತ್ತಲೇ ಇದೆ.

ಇನ್ನೂ ಅಭಿವೃದ್ಧಿ ಶೀಲ ರಾಷ್ಟ್ರ

ಇನ್ನೂ ಅಭಿವೃದ್ಧಿ ಶೀಲ ರಾಷ್ಟ್ರ

ಸುಮಾರು 200ಕ್ಕೂ ಅಧಿಕ ವರ್ಷಗಳ ಕಾಲ ದಾಸ್ಯದಲ್ಲಿದ್ದ ಭಾರತ ರಾಜಕೀಯವಾಗಿ ಬ್ರಿಟಿಷರಿಂದ 1947ಕ್ಕೆ ಭಾರತಕ್ಕೆ ಅಧಿಕಾರ ಹಸ್ತಾಂತರಗೊಂಡರೂ, ಭಾರತ ಇನ್ನೂ ಅಭಿವೃದ್ಧಿ ಶೀಲ ರಾಷ್ಟ್ರವಾಗೇ ಉಳಿದಿದೆ. ಸಾಂಸ್ಕೃತಿಕವಾಗಿ, ನೈಸರ್ಗಿಕವಾಗಿ ಅಪಾರ ಸಂಪತ್ತು ಹೊಂದಿರುವ ರಾಷ್ಟ್ರ ಆರ್ಥಿಕವಾಗಿ ಅವನತಿ ಹಾದಿ ಹಿಡಿಯುತ್ತಿದೆ. ಮೋದಿ ಅವರ ವಿಷನ್ 2020 ಮೇಲೆ ಜನತೆ ಭರವಸೆ ಇರಿಸಲಾಗಿದೆ.

ಕೃಷಿ ಪ್ರಧಾನ ರಾಷ್ಟ್ರ

ಕೃಷಿ ಪ್ರಧಾನ ರಾಷ್ಟ್ರ

ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎನಿಸಿರುವ ದೇಶ ಇಂದಿಗೂ ಕೃಷಿ ಪ್ರಧಾನ ರಾಷ್ಟ್ರ ಎಂಬ ಹೆಗ್ಗಳಿಕೆ ಹೊಂದಿದೆ. ಅಣುಶಕ್ತಿ, ಕ್ರಿಕೆಟ್, ವಿಜ್ಞಾನ, ತಂತ್ರ ಜ್ಞಾನ ಕ್ಷೇತ್ರದಲ್ಲಿ ಭಾರತ ಮುಂಚೂಣಿಯಲ್ಲಿದೆ.

ಕಾಶ್ಮೀರದಲ್ಲಿ ಸಂಭ್ರಮ

ಕಾಶ್ಮೀರದಲ್ಲಿ ಸಂಭ್ರಮ

ಶ್ರೀನಗರ: ಕಾಶ್ಮೀರದ ಶಾಲಾ ಬಾಲಕಿಯರು ಸಂಪ್ರದಾಯಿಕ 'ರಾಫ್' ನೃತ್ಯ, ದಿರಿಸು ಧರಿಸಿ, 71ನೇ ಸ್ವಾತಂತ್ರ್ಯೋತ್ಸವ ಸಂಭ್ರಮಕ್ಕೆ ತಯಾರಿ ನಡೆಸಿದ್ದಾರೆ. ಭಕ್ಷಿ ಸ್ಟೇಡಿಯಂನಲ್ಲಿ ತಾಲೀಮು ಜೋರಾಗಿ ನಡೆದಿದೆ.

ಸಿಆರ್ ಪಿಎಫ್ ಯೋಧರು

ಸಿಆರ್ ಪಿಎಫ್ ಯೋಧರು

ಸ್ವಾತಂತ್ರ್ಯೋತ್ಸವ ಅಂಗವಾಗಿ ಸಾಹಸ ಪ್ರದರ್ಶನ ನೀಡಲು ಸಜ್ಜಾಗುತ್ತಿರುವ ಸಿ ಆರ್ ಪಿಎಫ್ ಯೋಧರು, ಭಕ್ಷಿ ಸ್ಟೇಡಿಯಂ, ಶ್ರೀನಗರ.

ತ್ರಿವರ್ಣ ವಿನ್ಯಾಸದ ಬಳೆ

ತ್ರಿವರ್ಣ ವಿನ್ಯಾಸದ ಬಳೆ

ನವದೆಹಲಿ: ಮುಸ್ಲಿಂ ಮಹಿಳೆಯರು ತ್ರಿವರ್ಣ ವಿನ್ಯಾಸವುಳ್ಳ ಬಳೆಗಳನ್ನು ಖರೀದಿಸುವಲ್ಲಿ ನಿರತರಾಗಿದ್ದಾರೆ. PTI Photo by Shahbaz Khan

ಮುಂಬೈನಲ್ಲಿ ತ್ರಿವರ್ಣದ ರಂಗು

ಮುಂಬೈನಲ್ಲಿ ತ್ರಿವರ್ಣದ ರಂಗು

ಮುಂಬೈನಲ್ಲಿ ತಾಜ್ ಮಹಲ್ ಹೋಟೆಲ್ ಕೇಸರಿ, ಬಿಳಿ, ಹಸಿರು ಬಣ್ಣದಲ್ಲಿ ಕಂಗೊಳಿಸುತ್ತಿದೆ. ಪಿಟಿಐ ಚಿತ್ರ

ನರ್ಮದಾ ನದಿ ತೀರ

ನರ್ಮದಾ ನದಿ ತೀರ

ಜಬಲ್ ಪುರ: ನರ್ಮದಾ ನದಿಯಲ್ಲಿ ತ್ರಿವರ್ಣ ಧ್ವಜ ಹಿಡಿದು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಗಿಲ್ ಹರಿ ಘಾಟ್, ಜಬಲ್ ಪುರ್.

ಆಗ್ರಾ

ಆಗ್ರಾ

ಆಗ್ರಾದ ಪ್ರೇಮಸೌಧ ತಾಜ್ ಮಹಲ್ ಗೆ ವಿಶೇಷ ಭದ್ರತೆ ಒದಗಿಸಲಾಗಿದೆ

ಭುವನೇಶ್ವರದಲ್ಲಿ

ಭುವನೇಶ್ವರದಲ್ಲಿ

ಭುವನೇಶ್ವರದಲ್ಲಿ ಸ್ವಾತಂತ್ರ್ಯೋತ್ಸವ ಸಂಭ್ರಮಕ್ಕಾಗಿ ತೆರಳುತ್ತಿರುವ ಉತ್ಸಾಹಿಗಳು.

ಬೆಂಗಳೂರಿನಲ್ಲಿ

ಬೆಂಗಳೂರಿನಲ್ಲಿ

ಬೆಂಗಳೂರಿನಲ್ಲಿ ಮಾಣೇಕ್ ಶಾ ಪರೇಡ್ ಮೈದಾನದಲ್ಲಿ ಸಕಲ ಸಿದ್ಧತೆ ಪೂರ್ಣಗೊಂಡಿದ್ದು, ಸಿದ್ದರಾಮಯ್ಯ ಅವರು ಧ್ವಜಾರೋಹಣ ಮಾಡಲಿದ್ದಾರೆ.

English summary
India gears up to celebrate its 71st Independence Day, we take a look at preparation from nook and corner of the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X