ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಗಳಲ್ಲಿ : ಕೋಲ್ಕತಾ, ದೆಹಲಿಯಲ್ಲಿ ದುರ್ಗಾ ಪೂಜೆ ಸಂಭ್ರಮ

By Mahesh
|
Google Oneindia Kannada News

ನವದೆಹಲಿ, ಸೆ. 29:ನವರಾತ್ರಿ, ದುರ್ಗಾಪೂಜೆ, ವಿಜಯದಶಮಿ ಸಂಭ್ರಮ ದೇಶದೆಲ್ಲೆಡೆ ಮನೆ ಮಾಡಿದೆ. ಶಕ್ತಿ, ಜ್ಞಾನ, ಜ್ಯೋತಿ ಹೀಗೆ ನಾನಾರೂಪದಲ್ಲಿ ಕಣಕಣದಲ್ಲೂ ವ್ಯಾಪಿಸಿರುವ ದೇವಿಯನ್ನು ವಿಧವಿಧ ರೂಪದಲ್ಲಿ ಪೂಜಿಸಲಾಗುತ್ತದೆ.

ಭಾರತದ ಉದ್ದಗಲದಲ್ಲಿ ನವರಾತ್ರಿ ಸಂಭ್ರಮ ಮನೆ ಮಾಡಿದೆ. ದುರ್ಗಾ ಮಾತೆ, ಕಾಳಿ ದೇವಿ, ಶಾರದೆಯ ಆರಾಧನೆ ದೇಶಾದ್ಯಂತ ನಡೆಯುತ್ತಿದೆ. ಪಶ್ಚಿಮ ಬಂಗಾಳದಲ್ಲಿ ದುರ್ಗಾ ಪೂಜೆಗೆ ವಿಶೇಷ ಸ್ಥಾನ ನೀಡಲಾಗಿದ್ದು ಹಬ್ಬದ ಸಂಭ್ರಮದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮಾಜಿ ಕ್ರಿಕೆಟರ್ ಸೌರವ್ ಗಂಗೂಲಿ, ನಟಿ ಕಾಜೋಲ್ ಸೇರಿದಂತೆ ಎಲ್ಲರೂ ಭಾಗವಹಿಸಿದ್ದಾರೆ.

ದುರ್ಗೆಯ ಅವತಾರವನ್ನು ಸಾರುವ ವಿಗ್ರಹಗಳು, ದುರ್ಗಾಮಾತೆ ಎದುರು ಭಕ್ತರ ನೃತ್ಯ, ಯುವತಿಯರಿಂದ ಹಬ್ಬಕ್ಕೆ ಹೊಸ ಮೆರುಗು, ಮೆರವಣಿಗೆ, ಭಕ್ತಿ ಗೀತೆ, ಘೋಷಣೆಗಳು ಕೇಳಿ ಬಂದಿವೆ.

ಪುರಾಣದ ಪ್ರಕಾರ ಜಗನ್ಮಾತೆ ರಾಕ್ಷಸರನ್ನು ಸಂಹಾರ ಮಾಡಲು ಒಂದೊಂದು ಅವತಾರವೆತ್ತಿ ರಾಕ್ಷಸರನ್ನು ಸಂಹರಿಸಿ ಲೋಕವನ್ನು ರಕ್ಷಿಸಿದ್ದಾಳೆ. ನವರಾತ್ರಿ ಒಂದೊಮದು ದಿನವೂ ಬಹಳ ವಿಶೇಷವಾಗಿದ್ದು ನಿಲ್ಲುತ್ತದೆ. 9 ದಿನಗಳ ಕಾಲ ಆದಿ ಶಕ್ತಿಯನ್ನು ನವ ವಿಧದಲ್ಲಿ ಪೂಜಿಸಲಾಗುತ್ತದೆ.

ಕೋಲ್ಕತಾದಲ್ಲಿ ದುರ್ಗೆ ಸನ್ನಿಧಿಯಲ್ಲಿ ಗಂಗೂಲಿ

ಕೋಲ್ಕತಾದಲ್ಲಿ ದುರ್ಗೆ ಸನ್ನಿಧಿಯಲ್ಲಿ ಗಂಗೂಲಿ

ಕೋಲ್ಕತಾದಲ್ಲಿ ಬೆಹಲಾ ನಿವಾಸಾದ್ ಬಳಿಯ ದುರ್ಗೆ ಸನ್ನಿಧಿಯಲ್ಲಿ ಮಾಜಿ ನಾಯಕ ಗಂಗೂಲಿ ಅವರು ಮಹಾ ಅಷ್ಟಮಿ ದುರ್ಗಾ ಪೂಜೆಯಲಿ ಪಾಲ್ಗೊಂಡಿದ್ದರು.

ರಾಮ್ ಲೀಲಾ ಮೈದಾನದಲ್ಲಿ

ರಾಮ್ ಲೀಲಾ ಮೈದಾನದಲ್ಲಿ

ಬಾಲಿವುಡ್ ನಟ ಮುಖೇಶ್ ರಿಷಿ ಅವರು ರಾವಣನ ಪಾತ್ರದಲ್ಲಿ ಹಾಗೂ ರಾಜಾ ಮುರಾದ್ ಅವರು ಕುಂಭಕರ್ಣನ ಪಾತ್ರದಲ್ಲಿ ರಾ ಲೀಲಾ ಮೈದಾನದಲ್ಲಿ ಕಾಣಿಸಿಕೊಂಡರು.

ರಾಮಾಯಣ ನೃತ್ಯ ವೈಭವ

ರಾಮಾಯಣ ನೃತ್ಯ ವೈಭವ

ದೆಹಲಿಯ ಐತಿಹಾಸಿಕ ಮೈದಾನದಲ್ಲಿ ರಾಮಾಯಣ ನೃತ್ಯ ವೈಭವ ಕಣ್ಮನ ಸೆಳೆಯಿತು.

ದುರ್ಗಾ ಪೂಜೆಯಲ್ಲಿ ಕಾಜೋಲ್

ದುರ್ಗಾ ಪೂಜೆಯಲ್ಲಿ ಕಾಜೋಲ್

ಕೋಲ್ಕತಾದಲ್ಲಿ ದುರ್ಗಾ ಪೂಜೆಯಲ್ಲಿ ಪಾಲ್ಗೊಂಡ ನಟಿ ಕಾಜೋಲ್

ಕುಮಾರಿ ಪೂಜಾ

ಕುಮಾರಿ ಪೂಜಾ

ಕೈಲಾಶರ್: ಕುಮಾರಿ ರೂಪದಲ್ಲಿರುವ ದುರ್ಗಾಪೂಜೆ ಸಲ್ಲಿಸಲಾಯಿತು. ತ್ರಿಪುರದ ರಾಮಕೃಷ್ಣ ಮಿಷನ್ ಗೆ ಸೇರಿದ ಗೋವಿಂದ್ ಪುರ್ ದಲ್ಲಿ ಪೂಜೆ ಆಯೋಜಿಸಲಾಗಿತ್ತು.

English summary
A priest performs worship of Goddess Durga at a community puja pandal on 'Maha Ashtami' in Kolkata this and many more pictures from New delhi Durga Puja celebration
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X