ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಊಟಿ ಕಡೆ ಕಾಲಿಡಬೇಡಿ, ಭಯಂಕರ ಮಳೆ

By Mahesh
|
Google Oneindia Kannada News

ಊಟಿ, ಮೇ.9: ತಮಿಳುನಾಡಿನ ಪ್ರೇಕ್ಷಣೀಯ ಸ್ಥಳ ಉದಕಮಂಡಲದಲ್ಲಿ ಭಾರಿ ಮಳೆ ಸುರಿಯುತ್ತಿದೆ. ನೀಲಗಿರೀಸ್ ಜಿಲ್ಲೆಯ ಎಸ್ಟೇಟ್ ನ ಕೂಲಿ ಕಾರ್ಮಿಕ ಮಹಿಳೆಯರಿಬ್ಬರು ಭಯಂಕರ ಮಳೆ ಹೊಡೆತಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ. ಅರಬ್ಬಿ ಕಡಲಿನಲ್ಲಿ ಉಂಟಾಗಿರುವ ಒತ್ತಡ ಮಳೆ ನೀರಾಗಿ ತಮಿಳುನಾಡನ್ನು ತಂಪಾಗಿಸುತ್ತಿದೆ. ಇದರ ಪರಿಣಾಮ ಬೆಂಗಳೂರಿಗೂ ತುಂತುರು ಮಳೆ ವರದಾನವಾಗಿದೆ.

ಕೇರಳ ಮತ್ತು ತಮಿಳುನಾಡಿನಲ್ಲಿ ಭಾರೀ ಬಿರುಗಾಳಿ ಮಳೆಯಿಂದಾಗಿ ತಲಾ ಇಬ್ಬರು ಸಾವನ್ನಪ್ಪಿದ್ದಾರೆ. ತಮಿಳುನಾಡಿನ ಪ್ರಸಿದ್ಧ ಪ್ರವಾಸಿ ತಾಣ ಊಟಿ ಬಳಿಯ ಪಂಡಲೂರಿನ ಎಸ್ಟೇಟ್ ‌ವೊಂದರಲ್ಲಿ ಬೃಹತ್ ‌ ಗಾತ್ರದ ಮರ ಧರೆಗುರುಳಿದ ಪರಿಣಾಮ ಇಬ್ಬರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೋರ್ವ ಮಹಿಳೆ ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದಲ್ಲಿ ಹಲವೆಡೆ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. ವಿವಿಧ ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿ ರಸ್ತೆಗಳು ಕಿತ್ತು ಹೋಗಿವೆ. ಅಲ್ಲದೇ ಜಲಾಶಯಗಳಲ್ಲಿ ಒಳ ಹರಿವು ಪ್ರಮಾಣ ಹೆಚ್ಚಾಗಿದೆ. ಊಟಿಯಲ್ಲಿ ಕಳೆದ ಮೂರು ದಿನಗಳಿಂದ ಎಡಬಿಡದೆ ಮಳೆ ಸುರಿಯುತ್ತಿದೆ. ಕೊಯಿಮತ್ತೂರಿನಲ್ಲೂ ಮಳೆಯಾಗುತ್ತಿದ್ದು, ಕಳೆದ 24 ಗಂಟೆ ಅವಧಿಯಲ್ಲಿ 237 ಮಿ.ಮೀ. ಮಳೆಯಾಗಿದೆ. ಮಳೆ ಚಿತ್ರಗಳು ಮುಂದಿವೆ ನೋಡಿ...

ಊಟಿ ಬಳಿಯ ಎಸ್ಟೇಟ್ ವೊಂದರಲ್ಲಿ ಇಬ್ಬರ ಸಾವು

ಊಟಿ ಬಳಿಯ ಎಸ್ಟೇಟ್ ವೊಂದರಲ್ಲಿ ಇಬ್ಬರ ಸಾವು

ತಮಿಳುನಾಡಿನ ಪ್ರೇಕ್ಷಣೀಯ ಸ್ಥಳ ಉದಕಮಂಡಲದಲ್ಲಿ ಭಾರಿ ಮಳೆ ಸುರಿಯುತ್ತಿದೆ. ನೀಲಗಿರೀಸ್ ಜಿಲ್ಲೆಯ ಎಸ್ಟೇಟ್ ನ ಕೂಲಿ ಕಾರ್ಮಿಕ ಮಹಿಳೆಯರಿಬ್ಬರು ಭಯಂಕರ ಮಳೆ ಹೊಡೆತಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ.

ಹಲವೆಡೆ ಭಾರೀ ಪ್ರಮಾಣದಲ್ಲಿ ಮಳೆ

ಹಲವೆಡೆ ಭಾರೀ ಪ್ರಮಾಣದಲ್ಲಿ ಮಳೆ

ಊಟಿ ಬಳಿಯ ಪಂಡಲೂರಿನ ಎಸ್ಟೇಟ್ ‌ವೊಂದರಲ್ಲಿ ಬೃಹತ್ ‌ ಗಾತ್ರದ ಮರ ಧರೆಗುರುಳಿದ ಪರಿಣಾಮ ಇಬ್ಬರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೋರ್ವ ಮಹಿಳೆ ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ

ಪ್ರವಾಹ ಉಂಟಾಗಿ ರಸ್ತೆಗಳು ಕಿತ್ತು ಹೋಗಿವೆ

ಪ್ರವಾಹ ಉಂಟಾಗಿ ರಸ್ತೆಗಳು ಕಿತ್ತು ಹೋಗಿವೆ

ರಾಜ್ಯದಲ್ಲಿ ಹಲವೆಡೆ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. ವಿವಿಧ ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿ ರಸ್ತೆಗಳು ಕಿತ್ತು ಹೋಗಿವೆ. ಅಲ್ಲದೇ ಜಲಾಶಯಗಳಲ್ಲಿ ಒಳ ಹರಿವು ಪ್ರಮಾಣ ಹೆಚ್ಚಾಗಿದೆ. ಊಟಿಯಲ್ಲಿ ಕಳೆದ ಮೂರು ದಿನಗಳಿಂದ ಎಡಬಿಡದೆ ಮಳೆ ಸುರಿಯುತ್ತಿದೆ.

ಕೇರಳದಲ್ಲೂ ಇಬ್ಬರ ಸಾವು

ಕೇರಳದಲ್ಲೂ ಇಬ್ಬರ ಸಾವು

ಕೇರಳ ರಾಜ್ಯದ ಹಲವೆಡೆ ವರುಣನ ಆರ್ಭಟ ಮುಂದುವರಿದಿದ್ದು ಕಳೆದೆರಡು ದಿನಗಳಿಂದ ಕುಂಭದ್ರೋಣ ಮಳೆ ಸುರಿಯುತ್ತಿದೆ. ರಾಜ್ಯದಲ್ಲಿ ಸಂಭವಿಸಿದ ವಿವಿಧ ಮಳೆ ಸಂಬಂಧಿ ಅನಾಹುತಗಳಲ್ಲಿ ಇಬ್ಬರು ಮಹಿಳೆಯರು ಬಲಿಯಾಗಿದ್ದಾರೆ.

ಕೇರಳದ ಜನಜೀವನ ಅಸ್ತವ್ಯಸ್ತ

ಕೇರಳದ ಜನಜೀವನ ಅಸ್ತವ್ಯಸ್ತ

ಕೇರಳದ ಎರ್ನಾಕುಳಂ, ಕೋಟ್ಟಯಂ, ತಿರುವನಂತಪುರ ಮತ್ತು ತ್ರಿಸ್ಸೂರು ಜಿಲ್ಲೆಗಳಲ್ಲಿ ಬುಧವಾರದಿಂದೀಚೆಗೆ ಸುರಿಯುತ್ತಿರುವ ಭಾರೀ ಮಳೆ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ.

ಅಣೆಕಟ್ಟುಗಳು ತುಂಬಿವೆ, ಭೂ ಕುಸಿತ

ಅಣೆಕಟ್ಟುಗಳು ತುಂಬಿವೆ, ಭೂ ಕುಸಿತ

ಕೇರಳದ ಬಲರಾಂಪುರಂನಲ್ಲಿ ಭೂಕುಸಿತ ಸಂಭವಿಸಿದ ಪರಿಣಾಮ ಮಹಿಳೆಯೋರ್ವರು ಸಾವನ್ನಪ್ಪಿದ್ದರೆ ಮಲಪ್ಪುರಂನಲ್ಲಿ ಬೃಹತ್ ಗಾತ್ರದ ಮರವೊಂದು ಉರುಳಿ ಇನ್ನೋರ್ವ ಮಹಿಳೆ ಸಾವನ್ನಪ್ಪಿದ್ದಾರೆ.

ತಿರುನಲ್ವೇಲಿ, ಕನ್ಯಾಕುಮಾರಿ ಜಿಲ್ಲೆಗೆ ಹೊಡೆತ

ತಿರುನಲ್ವೇಲಿ, ಕನ್ಯಾಕುಮಾರಿ ಜಿಲ್ಲೆಗೆ ಹೊಡೆತ

ಕನ್ಯಾಕುಮಾರಿ ಜಿಲ್ಲೆಯ ಕೊಲಾಚೆಲ್ ಮತ್ತು ರಾಮನಾಥಪುರಂ, ಕನ್ಯಾಕುಮಾರಿ ಜಿಲ್ಲೆ, ತಿರುನಲ್ವೇಲಿ ಜಿಲ್ಲೆಯ ತೆಂಕಸಿ, ನಾಗರ್ಕೋಯಿಲ್ ಕನ್ಯಾಕುಮಾರಿ ಜಿಲ್ಲೆಯ, ಕಡಲೂರು ಜಿಲ್ಲೆ ಯಲ್ಲಿ ಭಾರಿ ಮಳೆ.

ಮಳೆ ಇನ್ನೂ ಮುಂದುವರೆಯುವ ಸೂಚನೆ

ಮಳೆ ಇನ್ನೂ ಮುಂದುವರೆಯುವ ಸೂಚನೆ

ಪುದುಕೊಟ್ಟೈ, ತಂಜಾವೂರು, ಕರೂರ್, ತೂತುಕುಡಿ, ನಾಮಕ್ಕಲ್, ನೀಲಗಿರಿ, ಥೇಣಿ , ತಂಜಾವೂರು, ದಿಂಡಿಗಲ್, ಕೃಷ್ಣಗಿರಿ, ವಿರುಧ್ನಗರ್ ಶಿವಗಂಗಾ , ವಿಲ್ಲುಪುರಂ , ಈರೋಡ್ , ತಿರುಚ್ಚಿ, ತಂಜಾವೂರು , ಮಧುರೈ ಮಳೆ ಇನ್ನೂ ಮುಂದುವರೆಯುವ ಸೂಚನೆ ಸಿಕ್ಕಿದೆ.

ಗ್ವಾಲಿಯರ್ ನಲ್ಲಿ ಸ್ಕೂಟರ್ ಸವಾರಿ

ಗ್ವಾಲಿಯರ್ ನಲ್ಲಿ ಸ್ಕೂಟರ್ ಸವಾರಿ

ಗ್ವಾಲಿಯರ್ ನಲ್ಲಿ ಮಳೆ ನಡುವೆ ಸ್ಕೂಟರ್ ಸವಾರಿ ಚಿತ್ರ ಪಿಟಿಐ

ಕೊಚ್ಚಿಯಲ್ಲಿ ಸಂಚಾರ ಅಸ್ತವ್ಯಸ್ತ

ಕೊಚ್ಚಿಯಲ್ಲಿ ಸಂಚಾರ ಅಸ್ತವ್ಯಸ್ತ

ಕೇರಳದ ಕೊಚ್ಚಿಯಲ್ಲಿ ಭಾರಿ ಮಳೆಗೆ ಸಂಚಾರ ಅಸ್ತವ್ಯಸ್ತ,. PTI photo

ತ್ರಿಪುರದಲ್ಲಿ ಮಳೆಗೆ ಮುನ್ನ

ತ್ರಿಪುರದಲ್ಲಿ ಮಳೆಗೆ ಮುನ್ನ

ತ್ರಿಪುರದಲ್ಲಿ ಮಳೆಗೆ ಮುನ್ನ ಎದ್ದ ಭಾರಿ ದೂಳಿನ ಗಾಳಿ ಪಿಟಿಐ ಚಿತ್ರ

English summary
Two women workers were today killed at an estate in Nilgiris district in a rain-related incident even as many parts of Tamil Nadu were lashed by a downpour under the influence of a well-marked low pressure over the Arabian sea.Udhagamandalam, popularly known as Ooty, with hotels reporting thin arrivals and taxis also reporting dull business.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X