ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಗಳಲ್ಲಿ ನೋಡಿ ಗುರು ಪೂರ್ಣಿಮಾ ಹಬ್ಬದ ಆಚರಣೆ

By Mahesh
|
Google Oneindia Kannada News

ಆಷಾಢ ಶುದ್ಧ ಹುಣ್ಣಿಮೆಯ ದಿನವಾದ ಇಂದು ಗುರು ಪೂರ್ಣಿಮಾ ಹಬ್ಬವಾಗಿದ್ದು, ದೇಶದೆಲ್ಲೆಡೆ ಜಾತಿ, ಮತ, ಪಂಥಗಳ ಭೇದವಿಲ್ಲದೆ ಸಂಭ್ರಮಾಚರಣೆ

ಬೌದ್ಧ ಧರ್ಮಗುರು ಗೌತಮ ಬುದ್ಧ ಹಾಗೂ ಮಹಾಭಾರತದ ಕರ್ತೃ ವೇದವ್ಯಾಸ ಮಹರ್ಷಿ ಇಬ್ಬರು ಇದೇ ದಿನದಂದು ಜನಿಸಿರುವುದು ವಿಶೇಷ

ಯಾರಿಂದಲೂ ಅಪಹರಿಸಲಾಗದ ಸಂಪತ್ತಾದ 'ವಿದ್ಯೆ' ಯನ್ನು ಧಾರೆ ಎರೆಯುವ ಸಮಾಜಕ್ಕೆ ಮಾದರಿ ವ್ಯಕ್ತಿಗಳನ್ನು ರೂಪಿಸುವ ಕಿಂಗ್ ಮೇಕರ್ ಗಳಾದ ಗುರುಗಳಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕರು ಟ್ವಿಟ್ಟರ್ ನಲ್ಲಿ ವಂದನೆ ಸಲ್ಲಿಸಿದ್ದಾರೆ...

ಈ ದಿನದಂದು ಹಲವೆಡೆ ಗುರುಕೃಪೆ, ಆಶೀರ್ವಾದ ಬೇಡಿ ಗುರುಗಳೇ ಪ್ರತ್ಯಕ್ಷ ದೈವ ಎಂದು ಪೂಜಿಸುವುದನ್ನು ಕಾಣಬಹುದು.
ಗುರು ಪೂರ್ಣಿಮಾ ದಿನದಂದು ಸನ್ಮಾರ್ಗ ತೋರಿದ ಆಧ್ಯಾತ್ಮಿಕ ಹಾಗೂ ಶೈಕ್ಷಣಿಕ ಗುರುಗಳನ್ನು ವಂದಿಸಲಾಗುತ್ತದೆ.

ಅಜ್ಞಾನ, ಅಂಧಕಾರವನ್ನು ಹೋಗಲಾಡಿಸಿ ಜ್ಞಾನದ ಬೆಳಕನ್ನು ನೀಡುವವನು 'ಗುರು' ಎನಿಸಿಕೊಳ್ಳುತ್ತಾನೆ. ವಿದ್ಯಾ ಸಂಸ್ಥೆಗಳ ಹಳೆಯ ವಿದ್ಯಾರ್ಥಿಗಳು ತಮ್ಮ ಶಿಕ್ಷಕರನ್ನು ಭೇಟಿ ಆಗಿ ಅವರಿಗೆ ಕಾಣಿಕೆಗಳನ್ನು ಅರ್ಪಿಸಿ ತಮ್ಮ ಕೃತಜ್ಞತೆಗಳನ್ನು ಸಲ್ಲಿಸುತ್ತಾರೆ.

ಗುರು ಪೂರ್ಣಿಮಾ ಹಬ್ಬ

ಗುರು ಪೂರ್ಣಿಮಾ ಹಬ್ಬ

ಆಷಾಢ ಶುದ್ಧ ಹುಣ್ಣಿಮೆಯ ದಿನವಾದ ಇಂದು ಗುರು ಪೂರ್ಣಿಮಾ ಹಬ್ಬವಾಗಿದ್ದು, ದೇಶದೆಲ್ಲೆಡೆ ಜಾತಿ, ಮತ, ಪಂಥಗಳ ಭೇದವಿಲ್ಲದೆ ಸಂಭ್ರಮಾಚರಣೆ ಭಾರತದೆಲ್ಲೆಡೆ ಕಂಡು ಬಂದಿದೆ.

ಬೌದ್ಧ ಧರ್ಮಗುರು ಗೌತಮ ಬುದ್ಧ ಹಾಗೂ ಮಹಾಭಾರತದ ಕರ್ತೃ ವೇದವ್ಯಾಸ ಮಹರ್ಷಿ ಇಬ್ಬರು ಇದೇ ದಿನದಂದು ಜನಿಸಿರುವುದು ವಿಶೇಷ

ಗೋರಖ್ ಪುರದಲ್ಲಿ ಯೋಗಿ ಅವರಿಂದ ನಮನ

ಗೋರಖ್ ಪುರದಲ್ಲಿ ಯೋಗಿ ಅವರಿಂದ ನಮನ

ಗೋರಖ್ ಪುರ: ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಗುರುಪೂರ್ಣಿಮಾ ವಿಶೇಷ ಪೂಜೆ ಸಲ್ಲಿಸಿದರು.

ಗುರುವಿಗೆ ಪುಷ್ಪನಮನ, ಅಭಿಷೇಕ

ಗುರುವಿಗೆ ಪುಷ್ಪನಮನ, ಅಭಿಷೇಕ

ಸೂರತ್ : ಗುರುಕುಲ್ ನ ವಿದ್ಯಾರ್ಥಿಗಳು ಗುರುವಿಗೆ ಪುಷ್ಪನಮನ, ಅಭಿಷೇಕ ಸಲ್ಲಿಸಿದರು.

ಗುರು ಪೂರ್ಣಿಮಾ ಹಬ್ಬ ಆಚರಣೆ

ಗುರು ಪೂರ್ಣಿಮಾ ಹಬ್ಬ ಆಚರಣೆ

ಹೌರಾ: ಭಕ್ತಾದಿಗಳು ಬೇಲೂರು ಮಠದಲ್ಲಿ ಗುರು ಪೂರ್ಣಿಮಾ ಹಬ್ಬ ಆಚರಣೆಗಾಗಿ ಸಾಲು ಗಟ್ಟಿ ನಿಂತಿರುವ ದೃಶ್ಯ. ಪಿಟಿಐ

English summary
In Pictures : Guru Purnima being Celebrated today(July 27) across India. Guru Purnima is a festival dedicated to spiritual and academic teachers. PM Narendra Modi, AICC vice President Rahul gandhi greeted.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X