ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಂಗನಾ ಝಲಕ್, ಸ್ಮೃತಿ ಇರಾನಿ ಸ್ಕೂಟರ್ ಸವಾರಿ-ಇನ್ನಷ್ಟು ಸುದ್ದಿಗಳು

|
Google Oneindia Kannada News

ನವದೆಹಲಿ, ಆಗಸ್ಟ್, 24: ರಿಯೋ ಒಲಿಂಪಿಕ್ಸ್ ನಲ್ಲಿ ಕಂಚು ಗೆದ್ದ ಸಾಕ್ಷಿ ಮಲಿಕ್ ಅವರನ್ನು 'ಬೇಟಿ ಬಚಾವೋ ಬೇಟಿ ಪಢಾವೋ' ಯೋಜನೆಗೆ ರಾಯಭಾರಿಯನ್ನಾಗಿ ಹರಿಯಾಣ ಸರ್ಕಾರ ಘೋಷಿಸಿ ಗೌರವ ಸೂಚನೆ ಮಾಡಿದೆ.

ಒಲಿಂಪಿಕ್ಸ್ ನಲ್ಲಿ ಭಾರತದ ಪತಾಕೆ ಹಾರಿಸಿ ಕುಸ್ತಿಯಲ್ಲಿ ಕಂಚಿನ ಪದಕ ಪಡೆದು ತವರಿಗೆ ಹಿಂದಿರುಗಿದ ಸಾಕ್ಷಿ ಮಲ್ಲಿಕ್ ಅವರಿಗೆ ಸ್ವಾಗತ, ಸನ್ಮಾನ ಸಿಕ್ಕಿತು. ಸಾಕ್ಷಿ ತವರು ಬಹದ್ದೂರ್ ಗಡ್ ನಲ್ಲಿ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆಂಧ್ರ ಪ್ರದೇಶ ಸರ್ಕಾರದಿಂದ ಒಲಿಂಪಿಕ್ಸ್ ಬೆಳ್ಳಿ ಪದಕ ಸಾಧಕಿ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಅವರಿಗೆ ಸನ್ಮಾನ ಮಾಡಲಾಯಿತು.[ಬೆಳ್ಳಿ ಪದಕ ಗೆದ್ದ ಪಿವಿ ಸಿಂಧು ಈಗ 13 ಕೋಟಿ ರು ಒಡತಿ]

ಪಶ್ಚಿಮ ಬಂಗಾಳ, ಅಲಹಾಬಾದ್ ನಲ್ಲಿ ಮಳೆ ಆರ್ಭಟ, ಮುಂಬೈನಲ್ಲಿ ನಡೆದ ಫ್ಯಾಷನ್ ಕಾರ್ಯಕ್ರಮದಲ್ಲಿ ಹೆಜ್ಜೆ ಹಾಕಿದ ಬಾಲಿವುಡ್ ತಾರೆ ಕಂಗನಾ ರಣಾವತ್, ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಪಾಲ್ಗೊಂಡ ಪ್ರಧಾನಿ ನರೇಂದ್ರ ಮೋದಿ, ಹಣಕಾಸು ಸಚಿವ ಅರುಣ್ ಜೇಟ್ಲಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ... ಇನ್ನಷ್ಟು ಸುದ್ದಿಗಳುಚಿತ್ರಗಳಲ್ಲಿ( ಪಿಟಿಐ ಚಿತ್ರಗಳು)

ಸಾಧಕಿ ಸಾಕ್ಷಿ

ಸಾಧಕಿ ಸಾಕ್ಷಿ

ರಿಯೋ ಒಲಿಂಪಿಕ್ಸ್ ನಲ್ಲಿ ಕಂಚು ಗೆದ್ದು ತವರಿಗೆ ಹಿಂದಿರುಗಿದ ಸಾಕ್ಷಿ ಮಲಿಕ್ ಗೆ ಹರ್ಯಾಣ ಸರ್ಕಾರದಿಂದ ಸನ್ಮಾನ.

ನಿನ್ನಂತ ಮಗಳು ಇಲ್ಲ

ನಿನ್ನಂತ ಮಗಳು ಇಲ್ಲ

ತವರಿಗೆ ಆಗಮಿಸಿದ ಕುಸ್ತಿಪಟು ಸಾಕ್ಷಿ ಮಲ್ಲಿಕ್ ಅವರನ್ನು ಅಪ್ಪಿ ಮುದ್ದಾಡಿದ ಸಾಕ್ಷಿ ಪಾಲಕರು. ಮಕ್ಕಳ ಸಾಧನೆ ಯಾವ ತಂದೆ-ತಾಯಿಗೆ ಖುಷಿ ನೀಡುವುದಿಲ್ಲ ಹೇಳಿ.

 ಕಂಗನಾ ಝಲಕ್

ಕಂಗನಾ ಝಲಕ್

ಮುಂಬೈನಲ್ಲಿ ನಡೆದ ಫ್ಯಾಷನ್ ಕಾರ್ಯಕ್ರಮದಲ್ಲಿ ಹೆಜ್ಜೆ ಹಾಕಿದ ಬಾಲಿವುಡ್ ತಾರೆ ಕಂಗನಾ ರಣಾವತ್ ಕಂಡಿದ್ದು ಹೀಗೆ.

 ಸಿಂಧುಗೆ ಸನ್ಮಾನ

ಸಿಂಧುಗೆ ಸನ್ಮಾನ

ಒಲಿಂಪಿಕ್ಸ್ ಬೆಳ್ಳಿ ಪದಕ ಸಾಧಕಿ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಅವರನ್ನು ಆಂಧ್ರ ಪ್ರದೇಶ ಸರ್ಕಾರದಿಂದ ಸನ್ಮಾನಿಸಲಾಯಿತು.

 ಗೌರವ ವಂದನೆ

ಗೌರವ ವಂದನೆ

ಮಾನ್ಸೂನ್ ಅಧಿವೇಶನ ಆರಂಭಕ್ಕೂ ಮುನ್ನ ಪೊಲೀಸ್ ಸಿಬ್ಬಂದಿಯಿಂದ ಗೌರವ ವಂದನೆ ಸ್ವೀಕರಿಸಿದ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ವೀರಭದ್ರ ಸಿಂಗ್.

 ಮಳೆ ಆರ್ಭಟ

ಮಳೆ ಆರ್ಭಟ

ಪಶ್ಚಿಮ ಬಂಗಾಳದಲ್ಲಿ ಮಳೆ ಆರ್ಭಟ ಮುಂದುವರಿದಿದ್ದು ನದಿಗಳು ತುಂಬಿ ಹರಿಯುತ್ತಿವೆ.

 ಇದೇನು ಚರ್ಚೆ?

ಇದೇನು ಚರ್ಚೆ?

ನವದೆಹಲಿಯಲ್ಲಿ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಪಾಲ್ಗೊಂಡ ಪ್ರಧಾನಿ ನರೇಂದ್ರ ಮೋದಿ, ಹಣಕಾಸು ಸಚಿವ ಅರುಣ್ ಜೇಟ್ಲಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ.

 ಇರಾನಿ ಸವಾರಿ

ಇರಾನಿ ಸವಾರಿ

ಗೌರಿಬಿದನೂರಿನ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಕೇಂದ್ರ ಜವಳಿ ಸಚಿವೆ ಸ್ಮೃತಿ ಇರಾನಿ ಸ್ಕೂಟರ್ ಸವಾರಿ.

English summary
INews in Pics: A rousing state reception was accorded by the Haryana government to the Olympic bronze medallist Sakshi Malik after she arrived this morning from Rio de Janeiro.Villagers carry their belongings as they wade through the flooded area in Birbhum, West Bengal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X