ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಗುಲ ನಗರಿ, ಮೋದಿ ಕ್ಷೇತ್ರ ವಾರಣಾಸಿ ಪ್ರಕ್ಷುಬ್ದ

By Mahesh
|
Google Oneindia Kannada News

ವಾರಣಾಸಿ, ಅ.6: ಪ್ರಧಾನಿ ಮೋದಿ ಅವರನ್ನು ಸಂಸತ್ತಿಗೆ ಆರಿಸಿಕೊಳಿಸಿದ ಕ್ಷೇತ್ರ, ಸಾಧು ಸಂತರ ನಗರಿ, ವಿಶ್ವದ ಅತ್ಯಂತ ಪುರಾತನ ಊರು ವಾರಣಾಸಿಯಲ್ಲಿ ಈಗ ನೀರವ ಮೌನ. ಗಣೇಶ ದೇವರನ್ನು ಮುಳುಗಿಸಲು ಹೊರಟ ಮೆರವಣಿಗೆ ಸಂದರ್ಭದಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದಂತೆ 50 ಜನರನ್ನು ಬಂಧಿಸಲಾಗಿದೆ.

ಉತ್ತರ ಪ್ರದೇಶದ ವಾರಾಣಸಿಯ ಗಂಗಾ ನದಿಯಲ್ಲಿ ಗಣೇಶ ವಿಸರ್ಜನೆ ಮಾಡುತ್ತಿದ್ದವರ ಮೇಲೆ ಪೊಲೀಸರ ದೌರ್ಜನ್ಯ ವಿರೋಧಿಸಿ ಸಾಧುಗಳು ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಪೊಲೀಸರು ಸಾಧುಗಳ ಮೇಲೆ ಲಾಠಿ ಚಾರ್ಜ್ ನಡೆಸಿದ್ದಾರೆ. ಪರಿಸ್ಥಿತಿ ಹತೋಟಿಗೆ ತರಲು ಕೋತ್ವಲಿ, ದಶಾಶ್ವಮೇಧ ಚೌಕ ಮತ್ತು ಲುಕ್ಸಾದಲ್ಲಿ ಕರ್ಫ್ಯೂ ವಿಧಿಸಲಾಗಿತ್ತು.

ಸೆ.22ರಂದು ನಡೆದಿದ್ದ ಘಟನೆ: ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುವ ವಾರಾಣಸಿ ಲೋಕಸಭೆ ಕ್ಷೇತ್ರದಲ್ಲಿ ಸೆಪ್ಟೆಂಬರ್ 22ರಂದು ಗಣೇಶ ವಿಸರ್ಜನೆ ವೇಳೆ ಸಾಧುಗಳು, ಭಕ್ತರ ಹಾಗೂ ಪೊಲೀಸರ ನಡುವೆ ಸಂಘರ್ಷ ನಡೆದಿತ್ತು.

ಪೊಲೀಸರು ಎಲ್ಲರ ಮೇಲೂ ಲಾಠಿ ಚಾರ್ಜ್ ಮಾಡಿದ್ದರು. ಪೊಲೀಸರ ದೌರ್ಜನ್ಯ ವಿರೋಧಿಸಿ ಸೋಮವಾರ ಟೌನ್​ಹಾಲ್ ಮೈದಾನದಲ್ಲಿ ನೂರಾರು ಸಾಧುಗಳು ಪ್ರತೀಕಾರ ಯಾತ್ರೆ ಹಮ್ಮಿಕೊಂಡಿದ್ದರು.ಈ ಯಾತ್ರೆ ಸಂಜೆ ವೇಳೆ ಹಿಂಸಾರೂಪ ಪಡೆದುಕೊಂಡಿತು.

English summary
As the temple town of Varanasi boiled in protests over ban on idol immersions in Ganga and lathicharge on Monday, Oct 5, nearly 50 persons were arrested on Tuesday and authorities maintained a tight vigil.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X