ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಳೆದ ವಾರದ ಪ್ರಮುಖ ಸುದ್ದಿಗಳ ಹಿನ್ನೋಟ

By Mahesh
|
Google Oneindia Kannada News

ಬೆಂಗಳೂರು, ಸೆ.16: ಕಳೆದವಾರ ಸೆ. 8 ರಿಂದ ಸೆ.14 ರವರೆಗೂ ನಡೆದ ಪ್ರಮುಖ ಘಟನಾವಳಿಗಳ ಸಂಗ್ರಹವನ್ನು ಒನ್ ಇಂಡಿಯಾ ಕನ್ನಡ ನಿಮ್ಮ ಮುಂದಿಡುತ್ತಿದೆ. ರಾಜ್ಯ, ದೇಶ, ವಿದೇಶಗಳಲ್ಲಿನ ಪ್ರಮುಖ ಸುದ್ದಿಗಳು ಇಂತಿವೆ:

* 2020ರ ಒಲಿಂಪಿಕ್ಸ್ ಕ್ರೀಡಾಕೂಟ ಆಯೋಜಿಸುವ ಅವಕಾಶ ಜಪಾನ್ನಿನ ಟೋಕಿಯೊ ನಗರಕ್ಕೆ ಸಿಕ್ಕಿದೆ.
* ಬಿಜೆಪಿ ತನ್ನ ಅಧಿಕೃತ ಅಭ್ಯರ್ಥಿಯಾಗಿ ನರೇಂದ್ರ ಮೋದಿ ಅವರನ್ನು ಆಯ್ಕೆ ಮಾಡಿದೆ.
* ದೆಹಲಿ ಗ್ಯಾಂಗ್ ರೇಪ್ ಪ್ರಕರಣ ತೀರ್ಪು ಪ್ರಕಟವಾಗಿದ್ದು, ನಾಲ್ವರು ಆರೋಪಿಗಳಿಗೂ ಗಲ್ಲು ಶಿಕ್ಷೆ ವಿಧಿಸಲಾಗಿದೆ.
* ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಶ್ರೀಶಾಂತ್ ಗ್ಯಾಂಗ್ ಗೆಬಿಸಿಸಿಐ ನಿಷೇಧ ಹೇರಿದೆ.
* ಮುಜಾಫರ್ ನಗರ ಹೊತ್ತು ಉರಿದಿದ್ದು, ಶಾಂತಿ ಮರು ಸ್ಥಾಪನೆಗೆ ಯೋಧರು ಶ್ರಮಿಸಿದ್ದಾರೆ.
* ಕರ್ನಾಟಕದಲ್ಲಿ ಜೆಡಿಎಸ್ ಗೆ ಹೊಸ ರಾಜ್ಯಾಧ್ಯಕ್ಷರಾಗಿ ಎ. ಕೃಷ್ಣಪ್ಪ ಆಯ್ಕೆಯಾಗಿದ್ದಾರೆ.
* ಅಣ್ಣಾ ಹಜಾರೆ ಮತ್ತೊಮ್ಮೆ ಅಮರಣಾಂತ ಉಪವಾಸ ಕೈಗೊಳ್ಳುವ ಬೆದರಿಕೆ ಒಡ್ಡಿದ್ದಾರೆ.. ಇವೆ ಮುಂತಾದ ಸುದ್ದಿಗಳನ್ನು ತಪ್ಪದೇ ನೋಡಿ..

ಪ್ರಧಾನಿ ಅಭ್ಯರ್ಥಿಯಾಗಿ ಮೋದಿ

ಪ್ರಧಾನಿ ಅಭ್ಯರ್ಥಿಯಾಗಿ ಮೋದಿ

ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಮುಂಬರುವ ಲೋಕಸಭಾ ಚುನಾವಣೆಗಾಗಿ ಬಿಜೆಪಿ ಪಕ್ಷದ ಪ್ರಧಾನಿ ಅಭ್ಯರ್ಥಿಯನ್ನಾಗಿ ಸೆ.13 ರಂದು ಘೋಷಿಸಿದೆ.ವಿವರ ಇಲ್ಲಿದೆ

ಜೆಡಿಎಸ್ ಗೆ ಹೊಸ ಸಾರಥಿ

ಜೆಡಿಎಸ್ ಗೆ ಹೊಸ ಸಾರಥಿ

ಮಾಜಿ ಮುಖ್ಯಮಂತ್ರಿ ಎಸೆಂ ಕೃಷ್ಣ ಅವರ ಸರ್ಕಾರದಲ್ಲಿ ಸಮಾಜ ಕಲ್ಯಾಣ ಸಚಿವರಾಗಿದ್ದರು. ಯಾದವ ಸಮುದಾಯದ ಪ್ರಭಾವಿ ನಾಯಕರಾಗಿದ್ದಾರೆ. ಕೆ.ಆರ್ ಪುರಂನಲ್ಲಿ ಕಾಂಗ್ರೆಸ್ ಟಿಕೆಟ್ ಸಿಕ್ಕಿರಲಿಲ್ಲ.

ಜೆಡಿಎಸ್ ಟಿಕೆಟ್ ಪಡೆದು ಹಿರಿಯೂರು ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. 1985ರಲ್ಲಿ ವರ್ತೂರು ವಿಧಾನಸಭೆಯಿಂದ ಶಾಸಕರಾಗಿ ಆಯ್ಕೆಯಾಗಿದ್ದರು.

ಪಕ್ಷವನ್ನು ಮುನ್ನಡೆಸುವ ಸಂಘಟನಾ ಚತುರ, ಸಂಪನ್ಮೂಲ ಒಗ್ಗೂಡಿಸುವಿಕೆ ಆಧಾರದ ಮೇಲೆ ಕಾಂಗ್ರೆಸ್ ನ ಪ್ರಭಾವಿ ನಾಯಕರಾಗಿದ್ದ ಎ ಕೃಷ್ಣಪ್ಪ ಅವರಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಪಟ್ಟ ಒಲಿದು ಬಂದಿದೆ. ವಿವರ ಇಲ್ಲಿ ಓದಿ

ಟೋಕಿಯೋಗೆ ಅವಕಾಶ

ಟೋಕಿಯೋಗೆ ಅವಕಾಶ

2020ರ ಒಲಿಂಪಿಕ್ಸ್ ಮಹಾ ಕ್ರೀಡಾಕೂಟ ಆಯೋಜನೆ ಮಾಡುವ ಅವಕಾಶವನ್ನು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಅಸೋಸಿಯೇಷನ್ಸ್ ನೀಡಿದೆ. ಟೋಕಿಯೋಗೆ ಪೈಪೋಟಿ ನೀಡಿದ್ದ ಇಸ್ತಾನ್ ಬುಲ್ ಗೆ ಕಡಿಮೆ ಮತಗಳು ಬಂದು ಎರಡನೇ ಸ್ಥಾನಕ್ಕೆ ಕುಸಿಯಿತು

ಮುಝಾಫರ್ ನಗರ

ಮುಝಾಫರ್ ನಗರ

ಉತ್ತರಪ್ರದೇಶದ ಮುಝಾಫರ್ ನಗರದ ಕೋಮು ಗಲಭೆಗೆ 40ಕ್ಕೂ ಅಧಿಕ ಜನ ಬಲಿಯಾಗಿದ್ದು, ಕೆಲವೆಡೆ ಕರ್ಫ್ಯೂ ಮುಂದುವರೆದಿದೆ. ಶಾಂತಿ ಮರು ಸ್ಥಾಪನೆಗೆ ಯೋಧರು ಶ್ರಮಿಸಿದ್ದಾರೆ.

ಕಣಿವೆ ರಾಜ್ಯದಲ್ಲಿ

ಕಣಿವೆ ರಾಜ್ಯದಲ್ಲಿ

ಕಾಶ್ಮೀರದ ಶೋಪಿಯಾನ್ ನಗರದಲ್ಲಿ ಭದ್ರತಾ ಪಡೆಗಳು ನಾಲ್ವರ ಮೇಲೆ ಗುಂಡು ಹಾರಿಸಿದ ಪರಿಣಾಮ ಉಂಟಾದ ಗಲಭೆ ಮಿತಿ ಮೀರಿದ ಪರಿಣಾಮ ಕರ್ಫ್ಯೂ ಮುಂದುವರೆದಿದ್ದು, ಪರಿಸ್ಥಿತಿ ಇನ್ನೂ ಸುಧಾರಣೆ ಕಂಡಿಲ್ಲ

ಸ್ಪಾಟ್ ಫಿಕ್ಸಿಂಗ್ ಅಪರಾಧಿಗಳು

ಸ್ಪಾಟ್ ಫಿಕ್ಸಿಂಗ್ ಅಪರಾಧಿಗಳು

ಸ್ಪಾಟ್ ಫಿಕ್ಸಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಆರೋಪ ಹೊತ್ತಿದ್ದ ಅಜಿತ್ ಚಂಡಿಲ, ಶ್ರೀಶಾಂತ್ ಸೇರಿದಂತೆ ನಾಲ್ವರಿಗೆ ಬಿಸಿಸಿಐ ಆಜೀವ ನಿಷೇಧ ಹೇರಿದೆ

ದೆಹಲಿ ಅತ್ಯಾಚಾರ ಪ್ರಕರಣ

ದೆಹಲಿ ಅತ್ಯಾಚಾರ ಪ್ರಕರಣ

ನಾಲ್ವರು ತಪ್ಪಿತಸ್ಥರಿಗೆ ದೆಹಲಿ ಕೋರ್ಟ್ ಗಲ್ಲುಶಿಕ್ಷೆ ವಿಧಿಸಿ ಸೆ.13ರಂದು ಮಹತ್ವದ ತೀರ್ಪು ನೀಡಿದೆ.

ಬಿಜೆಪಿಗೆ ಶೂಟರ್

ಬಿಜೆಪಿಗೆ ಶೂಟರ್

ಭಾರತದ ಶೂಟರ್ 2004ರ ಒಲಿಂಪಿಕ್ ಪದಕ ವಿಜೇತ ರಾಜವರ್ಧನ್ ಸಿಂಗ್ ರಾಥೋರ್ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.

ಬೂಕರ್ ಪಟ್ಟಿಗೆ ಝಂಪಾ

ಬೂಕರ್ ಪಟ್ಟಿಗೆ ಝಂಪಾ

ಭಾರತೀಯ ಮೂಲದ ಅಮೆರಿಕದ ಲೇಖಕಿ ಝಂಪಾ ಲಹಿರಿ ಅವರು ಮ್ಯಾನ್ ಬುಕರ್ ಪ್ರಶಸ್ತಿ ಪಟ್ಟಿಗೆ ನೋಂದಾಯಿತರಾಗಿದ್ದಾರೆ. 1960ರ ದಶಕದಲ್ಲಿ ಕೋಲ್ಕತ್ತಾದಲ್ಲಿ ನಡೆದ ಸೋದರರ ಕಥೆ ಆಧರಿಸಿರುವ ದಿ ಲೋ ಲ್ಯಾಂಡ್ ಕೃತಿ ಪ್ರಶಸ್ತಿಗಾಗಿ ಸ್ಪರ್ಧಿಸಿದೆ.

ಕೇದಾರನಾಥ ದರ್ಶನ

ಕೇದಾರನಾಥ ದರ್ಶನ

ಸುಮಾರು 86 ದಿನಗಳ ನಂತರ ಪ್ರವಾಹ ಪೀಡಿತವಾಗಿದ್ದ ಉತ್ತರಾಖಂಡ್ ರಾಜ್ಯದ ಕೇದಾರನಾಥ ನ ದರ್ಶನ ಭಾಗ್ಯ ಭಕ್ತರಿಗೆ ಸಿಕ್ಕಿದೆ.

ಯಾಸಿನ್ ಬಾಯ್ಬಿಟ್ಟ ಸತ್ಯಗಳು

ಯಾಸಿನ್ ಬಾಯ್ಬಿಟ್ಟ ಸತ್ಯಗಳು

ಇಂಡಿಯನ್ ಮುಜಾಹಿದೀನ್ ಉಗ್ರ ಸಂಘಟನೆಯ ಯಾಸಿನ್ ಭಟ್ಕಳ ಅನೇಕ ಸತ್ಯಗಳನ್ನು ಹೊರಹಾಕಿದ್ದು, ಅದರಲ್ಲಿ ಪ್ರಮುಖವಾಗಿ ಬೆಂಗಳೂರಿನಲ್ಲಿ ನಡೆದ ಚಿನ್ನಸ್ವಾಮಿ ಕ್ರೀಡಾಂಗಣ ಬಳಿಯ ಸ್ಫೋಟಗಳ ರುವಾರಿ ತಾನೇ ಎಂದು ತಪ್ಪಿಕೊಂಡಿದ್ದಾನೆ.

9/11 ದಾಳಿ ಸ್ಮರಣೆ

9/11 ದಾಳಿ ಸ್ಮರಣೆ

ಅಮೆರಿಕದ ವರ್ಲ್ಡ್ ಟ್ರೇಡ್ ಸೆಂಟರ್ ಮೇಲಿನ 9/11 ಉಗ್ರರ ದಾಳಿಯ ಸ್ಮರಣೆ ಅಂಗವಾಗಿ 8.46 ರ ಸಮಯಕ್ಕೆ ಮೌನಾಚರಣೆ ಮಾಡಲಾಯಿತು.

ರಾಹುಲ್ ಪೆದ್ದು ಹೇಳಿಕೆ

ರಾಹುಲ್ ಪೆದ್ದು ಹೇಳಿಕೆ

ಪೂರ್ತಿ ರೊಟ್ಟಿ ತಿನ್ನಿ, 100 ದಿನ ಕೆಲಸ ಮಾಡಿ, ಕಾಂಗ್ರೆಸ್ ಗೆ ಮತ ಹಾಕಿ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಯಿತು.

ಕೋಲ್ಕತ್ತಾ ದುರಂತ

ಕೋಲ್ಕತ್ತಾ ದುರಂತ

ಕೋಲ್ಕತ್ತಾದ ಕ್ರೈಸ್ಟ್ ಚರ್ಚ್ ಶಾಲೆಯ ವಿದ್ಯಾರ್ಥಿನಿಯೊಬ್ಬಳನ್ನು ಹಿರಿಯ ವಿದ್ಯಾರ್ಥಿಗಳು ಶೌಚಾಲಾಯದಲ್ಲಿ ಕೂಡಿ ಹಾಕಿದ್ದರು. ವಿದ್ಯಾರ್ಥಿನಿ ಸಾವನ್ನಪ್ಪಿದ್ದು, ಶಾಲೆಯ ಮುಖ್ಯ ಶಿಕ್ಷಿಕಿಯನ್ನು ಪೊಲೀಸರು ಬಂಧಿಸಿದ್ದರು.

ನಿರ್ಭಯಾ ಕೇಸ್

ನಿರ್ಭಯಾ ಕೇಸ್

ದೆಹಲಿ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊರ ಬಂದ ತೀರ್ಪನ್ನು ಇಡೀ ದೇಶ ಸ್ವಾಗತಿಸಿತು. ಅಪರಾಧಿಗಳ ಪರ ವಕೀಲ ಎಪಿ ಸಿಂಗ್ ಹೇಳಿಕೆಗಳು ಚರ್ಚೆಗೆ ಗ್ರಾಸವಾಯಿತು. ಅಪರಾಧಿಗಳು ಕ್ಷಮಾದಾನ ಬೇಕು ಎಂದು ಮನವಿ ಸಲ್ಲಿಸಲು ಮುಂದಾಗುವ ಸುದ್ದಿಯೂ ಸಾರ್ವಜನಿಕವಾಗಿ ಖಂಡನೆಗೆ ಗುರಿಯಾಯಿತು.

ಅಣ್ಣಾ ಹಜಾರೆ

ಅಣ್ಣಾ ಹಜಾರೆ

ನ್ಯೂಯಾರ್ಕ್ ಪ್ರವಾಸ ಮುಗಿಸಿದ ಮೇಲೆ ಹಲವು ದಿನಗಳ ನಂತರ ಮತ್ತೊಮ್ಮೆ ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಘೋಷಿಸಿದರು. ಭ್ರಷ್ಟಾಚಾರಿ ನಿಗ್ರಹ ಮಸೂದೆಗಾಗಿ ಆಗ್ರಹಿಸಿದ್ದಾರೆ.

ಒಡಿಶಾದಲ್ಲಿ ರಕ್ತಪಾತ

ಒಡಿಶಾದಲ್ಲಿ ರಕ್ತಪಾತ

ಒಡಿಶಾದಲ್ಲಿ ನಡೆದ ಭೀಕರ ಗುಂಡಿನ ಕಾಳಗದಲ್ಲಿ 14 ಮಾವೋವಾದಿಗಳನ್ನು ಪೊಲೀಸರು ಗುಂಡಿಕ್ಕಿ ಕೊಂದರು.

ಸುಷ್ಮಾ ಹೇಳಿಕೆ

ಸುಷ್ಮಾ ಹೇಳಿಕೆ

ಮೋದಿ ಅವರ ಆಯ್ಕೆ ಬಗ್ಗೆ ಗೊಂದಲ ಉಂಟಾಗಿ ಬಿಜೆಪಿ ಇಬ್ಭಾಗವಾಗಿದೆ ಎಂದು ಹಬ್ಬಿದ ಸುದ್ದಿಗಳನ್ನು ಅಲ್ಲಗೆಳೆದ ಹಿರಿಯ ನಾಯಕಿ ಸುಷ್ಮಾ ಸ್ವರಾಜ್, 'ಅಡ್ವಾಣಿ ಅವರು ಮೋದಿ ಪರ ಇದ್ದಾರೆ. ಮೋದಿ ಆಯ್ಕೆ ಒಮ್ಮತ. ಪಕ್ಷ ಒಡೆಯುವ ಬಗ್ಗೆ ಸುದ್ದಿ ಹಬ್ಬಿಸಬೇಡಿ' ಎಂದರು.

English summary
This week witnessed some very important and crucial judgements. OneIndia brings to you all the events from September 8 to September 14 in pictures.Narendra Modi is named as the PM candidate for BJP was the prime news.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X