ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಗಳಲ್ಲಿ: ಮೋಡದ ಮರೆಯಲ್ಲಿ ಕಾಣಿಸಿದನೇ ಸೂಪರ್ ಚಂದಿರ

|
Google Oneindia Kannada News

ಬೆಂಗಳೂರು, ಏಪ್ರಿಲ್ 08: ಕೊರೊನಾವೈರಸ್ ಕಾರ್ಮೋಡದ ನಡುವೆ ಖಗೋಳ ವಿಸ್ಮಯವೊಂದನ್ನು ವೀಕ್ಷಿಸುವ ಅವಕಾಶ ಭಾರತೀಯರಿಗೆ ಲಭಿಸಿತ್ತು. ಈ ಬಾರಿ ಹುಣ್ಣಿಮೆಯ ಚಂದಿರ ಹೆಚ್ಚು ಪ್ರಕಾಶಮಾನವಾಗಿ ಕಾಣಿಸಿಕೊಂಡಿದ್ದಾನೆ. ಬಾಲ್ಕನಿ, ಮನೆ ಮಹಡಿಯಿಂದ ಸೂಪರ್ ಪಿಂಕ್ ಚಂದ್ರನನ್ನು ನೋಡಿ ಆನಂದಿಸಿದ್ದಾರೆ. ಕೆಲವರು ಫೋಟೊ ತೆಗೆಯಲು ಸಾಧ್ಯವಾಗಿದೆ. ಕೆಲವರು ಲೈವ್ ಸ್ಟ್ರೀಮಿಂಗ್ ನೋಡಿ ಖುಷಿಪಟ್ಟಿದ್ದಾರೆ.

Recommended Video

ಸೂಪರ್ ಪಿಂಕ್ ಮೂನ್ ವಿಶೇಷತೆ ಏನು? ಯಾರಿಗೆ ಏನು ಕಾದಿದೆ?| Super Pink Moon | Oneindia kannada

ಏಪ್ರಿಲ್ ತಿಂಗಳ ಈ ಚಂದ್ರ ಹೆಚ್ಚು ಪ್ರಕಾಶಮಾನವಾಗಿ, ದೊಡ್ಡ ಗಾತ್ರದಲ್ಲಿ ಕಾಣಿಸಲಿದ್ದಾನೆ, ಜೊತೆಗೆ ಶುಕ್ರ ಗ್ರಹ ಕೂಡಾ ಹುಣ್ಣಿಮೆಯ ಆಸುಪಾಸಿನಲ್ಲೇ ಆಗಸದಲ್ಲಿ ಪ್ರಕಾಶಮಾನವಾಗಿ ಕಾಣಿಸಲಿದೆ ಎಂದು ಖಗೋಳ ವಿಜ್ಞಾನಿಗಳು ಹೇಳಿದ್ದಾರೆ. ಏಪ್ರಿಲ್ 8 ರ ಬೆಳಗ್ಗೆ 8 ಗಂಟೆಗೆ ಸೂಪರ್ ಮೂನ್ ಸ್ಪಷ್ಟವಾಗಿ ಗೋಚರಿಸಿದೆ. ಸೂರ್ಯನ ಬೆಳಕು, ಹಲವೆಡೆ ಮಳೆ ಬಿದ್ದಿದ್ದರಿಂದ ಮೋಡ ಕವಿದ ವಾತಾವರಣದಿಂದಾಗಿ ವೀಕ್ಷಣೆಗೆ ತೊಡಕಾಗಿದೆ. ಏಪ್ರಿಲ್ 7 ರ ರಾತ್ರಿ ಉತ್ತರ ಅಮೆರಿಕ ಹಾಗೂ ಇತರ ರಾಷ್ಟ್ರಗಳಲ್ಲಿ ಕೂಡ ಸೂಪರ್ ಮೂನ್ ಗೋಚರಿಸಿದೆ.

ಭಾರತದಲ್ಲಿ ಸೂಪರ್ ಮೂನ್ ಗೋಚರ, ನೋಡುವುದು ಹೇಗೆ?ಭಾರತದಲ್ಲಿ ಸೂಪರ್ ಮೂನ್ ಗೋಚರ, ನೋಡುವುದು ಹೇಗೆ?

ಏಪ್ರಿಲ್ 7 ರ ರಾತ್ರಿ ಹಾಗೂ ಏಪ್ರಿಲ್ 8 ರ ಬೆಳಗ್ಗೆ ಚಂದ್ರನು ಭೂಮಿಗೆ ಅತಿ ಸಮೀಪದಲ್ಲಿರುತ್ತಾನೆ. ಸುಮಾರು 3,56, 907 ಕಿ.ಮೀ ಹತ್ತಿರವಾಗಿರುವ ಚಂದ್ರ ದೊಡ್ಡದಾಗಿ ಕಾಣುತ್ತಾನೆ. ಬಹುತೇಕ ದಿನಗಳಲ್ಲಿ ಈ ಅಂತರ 3,84,000 ಕಿ.ಮೀ. ಇರುತ್ತದೆ. ನ್ಯಾಷನಲ್ ಏರೋನಾಟಿಕ್ಸ್ ಆಂಡ್ ಸ್ಪೇಸ್ ಆರ್ಗನೈಜೇಶನ್ (ನಾಸಾ) ಈ ಸೂಪರ್ ಮೂನ್ ಅಧ್ಯಯನ ಮುಂದುವರೆಸಿದೆ.

ಇದು ನಾಲ್ಕನೇ ಬಾರಿ ಕಾಣಿಸಿಕೊಂಡ ದೊಡ್ಡ ಚಂದ್ರ

ಇದು ನಾಲ್ಕನೇ ಬಾರಿ ಕಾಣಿಸಿಕೊಂಡ ದೊಡ್ಡ ಚಂದ್ರ

1948ರಲ್ಲಿ ಕಾಣಿಸಿಕೊಂಡಿತ್ತು ಅತಿ ದೊಡ್ಡದಾದ ಚಂದ್ರ. ಆ ನಂತರ ಈಗಲೇ ಚಂದ್ರ ಇಷ್ಟು ದೊಡ್ಡದಾಗಿ ನೋಡಲು ಸಿಗುತ್ತಿರುವುದು. ನಾಸಾ ಪ್ರಕಾರ, ಭೂಮಿಗೆ ಇಷ್ಟು ಹತ್ತಿರದಿಂದ, ಇಷ್ಟು ಪ್ರಕಾಶಮಾನವಾಗಿ ಚಂದ್ರನನ್ನು ನೋಡಲು ನವೆಂಬರ್ 25, 2034ರವರೆಗೆ ಕಾಯಬೇಕು.

ಪಿಂಕ್ ಸೂಪರ್ ಮೂನ್ ಹೆಸರೇಕೆ?

ಪಿಂಕ್ ಸೂಪರ್ ಮೂನ್ ಹೆಸರೇಕೆ?

ಪಿಂಕ್ ಸೂಪರ್ ಮೂನ್ ಹೆಸರೇಕೆ? ಉತ್ತರ ಅಮೆರಿಕದ ಪೂರ್ವಭಾಗದಲ್ಲಿ ಕಾಣಿಸಿಕೊಳ್ಳುವ ಪಿಂಕ್ ಹೂ(Phlox subulata) ನಿಂದ ಚಂದ್ರನಿಗೆ ಈ ಹೆಸರು ಬಂದಿದೆ. ಚಂದ್ರನ ಬಣ್ಣವೇನು ಬದಲಾವಣೆಯಾಗಿ ಈ ರೀತಿ ಕಾಣಿಸುವುದಿಲ್ಲ. ಪ್ರಾದೇಶಿಕ ಹಾಗೂ ವಿವಿಧ ಋತುಗಳ ಆಧಾರದ ಮೇಲೆ ಬೇರೆ ಬೇರೆ ಹೆಸರಿನಲ್ಲಿ ದೊಡ್ಡ ಗಾತ್ರದ ಚಂದ್ರನನ್ನು ಕರೆಯುವುದು ರೂಢಿಯಲ್ಲಿದೆ. Sprouting Grass Moon, the Egg Moon, and the Fish Moon ಎಂಬ ಹೆಸರುಗಳು ಚಂದಿರನಿಗೆ ಕರೆಯಲಾಗಿದೆ.

ಇಂಡಿಯಾ ಗೇಟ್ ಬಳಿ ಚಂದ್ರ

ಇಂಡಿಯಾ ಗೇಟ್ ಬಳಿ ಚಂದ್ರ

ದೆಹಲಿಯ ಇಂಡಿಯಾ ಗೇಟ್ ಬಳಿ ಏಪ್ರಿಲ್ 7 ರ ರಾತ್ರಿ ಕಂಡ ಚಂದ್ರನ ಚಿತ್ರ, ಕೃಪೆ:ಪಿಟಿಐ. Sprouting Grass Moon, the Egg Moon, and the Fish Moon ಎಂಬ ಹೆಸರುಗಳು ಚಂದಿರನಿಗೆ ಕರೆಯಲಾಗಿದೆ. ಚಂದ್ರನ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಾಸಾದ ವಿಶೇಷ ಪುಟ ನೋಡಬಹುದು

ಭಾರತದಲ್ಲಿ ಮಂಗಳವಾರ ಕಂಡ ಚಂದಿರ

ಭಾರತದಲ್ಲಿ ಏಪ್ರಿಲ್ 7 ರ ರಾತ್ರಿ 8 ಹಾಗೂ ಏಪ್ರಿಲ್ 8 ರ ಬೆಳಗ್ಗೆ 8.05 IST ಸರಿಯಾಗಿ ಪ್ರಕಾಶಮಾನವಾದ ಚಂದ್ರ ಕಾಣಬಹುದು. ಇತರೆಡೆ ಪೂರ್ವದಿಂಗತದಲ್ಲಿ ಏಪ್ರಿಲ್ 7ರ 2.08 PM EDT, 18.08GMT, 4:30 pm PDT, 23:30 UTC ಅವಧಿಯಲ್ಲಿ ನೋಡಬಹುದು.ವರ್ಚ್ಯುಯಲ್ ಟೆಲಿಸ್ಕೋಪ್, ಸ್ಲೂಶ್ ಮೂಲಕ ನೋಡಬಹುದು. ಯೂಟ್ಯೂಬಿನಲ್ಲಿ ಲೈವ್ ವೀಕ್ಷಿಸಲು ಈ ಲಿಂಕ್ ಕ್ಲಿಕ್ ಮಾಡಿ

English summary
And the wait is over. Sky watchers were being treated to one of the biggest and brightest full moons of the year on Tuesday night.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X