ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆಕ್ಷನ್ 377 : ಸುಪ್ರೀಂ ತೀರ್ಪಿನ ಬಳಿಕ ಸಂಭ್ರಮಾಚರಣೆ ಚಿತ್ರಗಳು

By Gururaj
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 06 : ಸಮ್ಮತಿಯ ಸಲಿಂಗಕಾಮಕ್ಕೆ ಸೆಕ್ಷನ್ 377 ಅನ್ವಯವಾಗುವುದಿಲ್ಲ. ಎಲ್ಲರಂತೆಯೇ ಸಮಾನ ಹಕ್ಕುಗಳನ್ನು ಸಲಿಂಗಕಾಮಿಗಳು ಹೊಂದಿರುತ್ತಾರೆ ಎಂದು ಸುಪ್ರೀಂಕೋರ್ಟ್‌ ಗುರುವಾರ ಐತಿಹಾಸಿಕ ತೀರ್ಪು ನೀಡಿದೆ.

ಸುಪ್ರೀಂಕೋರ್ಟ್‌ನ ಸಂವಿಧಾನಿಕ ಪೀಠ ನೀಡಿದ ತೀರ್ಪನ್ನು ಸ್ವಾಗತಿಸಿ ಬೆಂಗಳೂರು, ದೆಹಲಿ ಸೇರಿದಂತೆ ದೇಶಾದ್ಯಂತ ಸಂಲಿಗಿಗಳು ಸಂಭ್ರಮಾಚರಣೆ ನಡೆಸಿದ್ದಾರೆ. ಬ್ರಿಟಿಷರ ಕಾಲದ ಕಾನೂನಿನಿಂದ ಮುಕ್ತಿ ಸಿಕ್ಕಿತ್ತು ಎಂದು ಸಂಭ್ರಮ ಹಂಚಿಕೊಂಡಿದ್ದಾರೆ.

ಏನಿದು 377 ಸೆಕ್ಷನ್? ಎಂಥ ಸಂಭೋಗ ಅಪರಾಧವಾಗುತ್ತದೆ?ಏನಿದು 377 ಸೆಕ್ಷನ್? ಎಂಥ ಸಂಭೋಗ ಅಪರಾಧವಾಗುತ್ತದೆ?

ಸಲಿಂಗಕಾಮವನ್ನು ಅಪರಾಧ ಎಂದು ಪರಿಗಣಿಸುವ ಐಪಿಸಿ ಸೆಕ್ಷನ್ 377ರಿಂದ ಭಾರತೀಯ ಸಂವಿಧಾನದ 14ನೇ ವಿಧಿಯ ಉಲ್ಲಂಘನೆಯಾಗುತ್ತದೆ. ಸಲಿಂಗಿಗಳು ಇತರ ನಾಗರಿಕರಂತೆ ಸಮಾನವಾದ ಹಕ್ಕನ್ನು ಪಡೆದಿರುತ್ತಾರೆ ಎಂದು ಸುಪ್ರೀಂಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ.

ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠದಲ್ಲಿ ನ್ಯಾಯಮೂರ್ತಿ ರೋಹಿಂಟನ್ ಎಫ್. ನಾರಿಮನ್, ಎ.ಎಂ.ಖಾನ್ವಿಲ್ಕರ್, ಡಿ.ವೈ.ಚಂದ್ರಚೂಡ್ ಮತ್ತು ಮಲ್ಹೋತ್ರಾ ಅವರಿದ್ದರು. ದೇಶದಲ್ಲಿ ನಡೆದ ಸಂಭ್ರಮಾಚರಣೆ ಚಿತ್ರಗಳು ಇಲ್ಲಿವೆ...

ಸ್ವಾಭಾವಿಕ ಮತ್ತು ನೈಸರ್ಗಿಕ

ಸ್ವಾಭಾವಿಕ ಮತ್ತು ನೈಸರ್ಗಿಕ

ಲೈಂಗಿಕ ನಿಲುವು ಸ್ವಾಭವಿಕ ಮತ್ತು ನೈಸರ್ಗಿಕ. ಯಾರ ಮೇಲೆ ಸೆಳೆತ ಉಂಟಾಗುತ್ತದೆ ಎಂಬುದು ಅವನು ಮತ್ತು ಅವಳ ನಿಯಂತ್ರಣದಲ್ಲಿ ಇರುವುದಿಲ್ಲ. ಯಾವುದೇ ರೀತಿಯ ನಿಯಂತ್ರಣವು ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆಯಾಗುತ್ತದೆ ಎಂದು ಹೇಳಿರುವ ಸುಪ್ರೀಂಕೋರ್ಟ್ ಬಹುಕಾಲದ ಬೇಡಿಕೆಗೆ ಮನ್ನಣೆ ನೀಡಿದೆ. ಸುಪ್ರೀಂ ತೀರ್ಪಿನ ಬಳಿಕ ಬೆಂಗಳೂರಿನ ಟೌನ್ ಹಾಲ್ ಮುಂದೆ ಸಂಭ್ರಮಾಚರಣೆ ನಡೆಸಲಾಯಿತು.

ಸಲಿಂಗಕಾಮ ಅಪರಾಧವಲ್ಲ : ಸುಪ್ರೀಂ ನ್ಯಾಯಮೂರ್ತಿಗಳು ಹೇಳಿದ್ದೇನು? ಸಲಿಂಗಕಾಮ ಅಪರಾಧವಲ್ಲ : ಸುಪ್ರೀಂ ನ್ಯಾಯಮೂರ್ತಿಗಳು ಹೇಳಿದ್ದೇನು?

ಐಪಿಸಿ ಸೆಕ್ಷನ್ 377 ಹೇಳುವುದೇನು?

ಐಪಿಸಿ ಸೆಕ್ಷನ್ 377 ಹೇಳುವುದೇನು?

ಸೆಕ್ಷನ್ 377 ನಿಸರ್ಗದ ನಿಯಮಕ್ಕೆ ವಿರುದ್ಧವಾಗಿ ಪುರುಷ ಅಥವ ಮಹಿಳೆ ಅಥವ ಪ್ರಾಣಿಯ ಜೊತೆ ಲೈಂಗಿಕ ಸಂಪರ್ಕ ಭಾರತೀಯ ದಂಡ ಸಂಹಿತೆ (ಐಪಿಸಿ) 377ನೇ ಸೆಕ್ಷನ್ ಪ್ರಕಾರ ಅಪರಾಧ. ಇದಕ್ಕೆ 10 ವರ್ಷಗಳವರೆಗೆ ಸಜೆ ವಿಧಿಸಬಹುದು ಎಂದು ಹೇಳಿತ್ತು. 2001ರಿಂದ ಸೆಕ್ಷನ್ 377 ವಿರುದ್ಧ ಕಾನೂನು ಹೋರಾಟ ನಡೆದಿತ್ತು. ದೆಹಲಿಯಲ್ಲಿ ತೀರ್ಪಿನ ಬಳಿಕ ಕೇಕ್ ಕತ್ತರಿಸಿ ಸಂಭ್ರಮಾಚರಣೆ ಮಾಡಲಾಯಿತು.

ಸಲಿಂಗಿಗಳ ಮದುವೆಗೆ ಕಾನೂನು ಮಾನ್ಯತೆ ಇರುವ ದೇಶಗಳಿವು ಸಲಿಂಗಿಗಳ ಮದುವೆಗೆ ಕಾನೂನು ಮಾನ್ಯತೆ ಇರುವ ದೇಶಗಳಿವು

ಕಾನೂನು ಹೋರಾಟದ ನೆನೆಪು

ಕಾನೂನು ಹೋರಾಟದ ನೆನೆಪು

2009ರಲ್ಲಿ ದೆಹಲಿ ಹೈಕೋರ್ಟ್ ಸಲಿಂಗ ಕಾಮ ಅಪರಾಧವಲ್ಲ ಎಂದು ಹೇಳಿತ್ತು. ಆದರೆ, 2013ರಲ್ಲಿ ಸುಪ್ರೀಂಕೋರ್ಟ್ ಈ ತೀರ್ಪನ್ನು ವಜಾಗೊಳಿಸಿತ್ತು. ನಿರ್ಬಂಧ ವಾಪಸ್ ಪಡೆಯಬೇಕು ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ಮನವಿ ಮಾಡಿತ್ತು. ಮನವಿಯನ್ನು 2014ರಲ್ಲಿ ಕೋರ್ಟ್ ವಜಾ ಮಾಡಿತ್ತು.

'ವಯಸ್ಕರಿಬ್ಬರ ನಡುವೆ ಸಮ್ಮತಿಯ ಸಲಿಂಗ ಲೈಂಗಿಕ ಸಂಬಂಧ ಅಪರಾಧ ಎಂದು ಪರಿಗಣಿಸುವ 2013ರ ತೀರ್ಪನ್ನು ಮರುಪರಿಶೀಲನೆ ನಡೆಸಲು ಸುಪ್ರೀಂಕೋರ್ಟ್ ನಿರ್ಧರಿಸಿತ್ತು. ಚೆನ್ನೈನಲ್ಲಿ ಕೋರ್ಟ್ ತೀರ್ಪಿನ ಬಳಿಕ ಸಂಭ್ರಮಾಚರಣೆ ಮಾಡಲಾಯಿತು.

ಕೋರ್ಟ್ ತೀರ್ಪಿನಲ್ಲಿ ಏನಿದೆ?

ಕೋರ್ಟ್ ತೀರ್ಪಿನಲ್ಲಿ ಏನಿದೆ?

ಸಲಿಂಗಕಾಮವನ್ನು ಅಪರಾಧ ಎಂದು ಪರಿಗಣಿಸುವ ಐಪಿಸಿ ಸೆಕ್ಷನ್ 377 ಸಂವಿಧಾನದ 14ನೇ ವಿಧಿಯನ್ನು ಉಲ್ಲಂಘಿಸುತ್ತದೆ. ಸಲಿಂಗಿಗಳು ಇತರ ನಾಗರಿಕರಂತೆ ಸಮಾನ ಹಕ್ಕುಗಳನ್ನು ಹೊಂದಿರುತ್ತಾರೆ ಎಂದು ಸುಪ್ರೀಂಕೋರ್ಟ್ ಗುರುವಾರ ಹೇಳಿದೆ. ಚೆನ್ನೈನಲ್ಲಿನ ಸಂಭ್ರಮಾಚರಣೆ ಚಿತ್ರ

ಸಹಮತದ ಸಲಿಂಗಕಾಮ ಅಪರಾಧವಲ್ಲ ಎಂದ ಸುಪ್ರೀಂ ಕೋರ್ಟ್ ಸಹಮತದ ಸಲಿಂಗಕಾಮ ಅಪರಾಧವಲ್ಲ ಎಂದ ಸುಪ್ರೀಂ ಕೋರ್ಟ್

ಸಂಭ್ರಮಾಚರಣೆ ಏಕೆ?

ಸಂಭ್ರಮಾಚರಣೆ ಏಕೆ?

'ನಿಸರ್ಗ ವಿರುದ್ಧವಾದ ಲೈಂಗಿಕ ಸಂಬಂಧ ಅಪರಾಧ' ಎನ್ನುವ ಐಪಿಸಿ ಸೆಕ್ಷನ್ 377 ಅನ್ವಯ ಅಪರಾಧಿಗಳಿಗೆ ದಂಡ ಮತ್ತು ಜೈಲು ಶಿಕ್ಷೆ ವಿಧಿಸಲು ಅವಕಾಶವಿತ್ತು. ಈ ಕಾನೂನನ್ನು ಪೋಷಕರು ಎಲ್‌ಜಿಬಿಟಿ ಸಮುದಾಯದ ಶೋಷಣೆಗೆ ಬಳಸುತ್ತಿದ್ದಾರೆ ಎಂಬ ಆರೋಪವಿತ್ತು. ಆದ್ದರಿಂದ, ಇಂದಿನ ತೀರ್ಪಿನ ಬಳಿಕ ಸಂಭ್ರಮಾಚರಣೆ ನಡೆಸಲಾಗಿದೆ.

ಆದೇಶ ವಜಾ ಮಾಡಿದ್ದು ಸರಿಯೇ?

ಆದೇಶ ವಜಾ ಮಾಡಿದ್ದು ಸರಿಯೇ?

'ವಯಸ್ಕರು ಸಹಮತದಿಂದ ಸಲಿಂಗ ಕಾಮದಲ್ಲಿ ತೊಡಗುವುದನ್ನು ಅಪರಾಧ ಎನ್ನುವುದು ಸಂವಿಧಾನದ ಆಶಯಗಳ ಉಲ್ಲಂಘನೆ' ಎಂದು 2013ರಲ್ಲಿ ದೆಹಲಿ ಹೈಕೋರ್ಟ್ ನೀಡಿದ್ದ ಆದೇಶವನ್ನು ವಜಾ ಮಾಡಿದ್ದು ಸರಿಯೇ ಎನ್ನುವ ಬಗ್ಗೆ ಪರಿಶೀಲಿಸಲಾಗುತ್ತದೆ ಎಂದು ಸುಪ್ರೀಂಕೋರ್ಟ್ ಹೇಳಿತ್ತು.

English summary
Supreme Court of India on September 6, 2018 in a historical verdict said that Gay sex legal in India. LGBT community celebrates across the nation after the verdict.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X