ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಮ್ಮು ಕಡಿಮೆಯಾಯ್ತೆ? ತೃತೀಯ ರಂಗದ ಕತೆ ಏನು?

|
Google Oneindia Kannada News

ನವದೆಹಲಿ , ಏ: 5: ಭಾನುವಾರ ನವದೆಹಲಿಯಲ್ಲಿ ರಾಷ್ಟ್ರದ ಎಲ್ಲ ಮುಖ್ಯಮಂತ್ರಿಗಳು ಒಂದೆಡೆ ಸೇರಿದ್ದರು. ದೆಹಲಿಯ ವಿಜ್ಞಾನ ಭವನದಲ್ಲಿ ಮುಖ್ಯಮಂತ್ರಿಗಳು ಹಾಗೂ ನ್ಯಾಯಮೂರ್ತಿಗಳ ಜಂಟಿ ಸಮಾವೇಶ ಭಾನುವಾರ ನಡೆಯುತು. ಪ್ರಧಾನಿ ನರೇಂದ್ರ ಮೋದಿ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದರು.

ದೇಶದ ನ್ಯಾಯಾಂಗ ವ್ಯವಸ್ಥೆಯ ಇನ್ನಷ್ಟು ಭದ್ರವಾಗಬೇಕು. ನ್ಯಾಯಮೂರ್ತಿಗಳ ಮೇಲೆ ಜನರು ಅಪಾರ ವಿಶ್ವಾಸ ಮತ್ತು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅದಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳಬೇಕು ಎಂದು ತಿಳಿಸಿದರು.

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು, ದೆಹಲಿ ಸಿಎಂ ಕೇಜ್ರಿವಾಲ್ ಸೇರಿದಂತೆ ಎಲ್ಲ ರಾಜ್ಯದ ಮುಖ್ಯಮಂತ್ರಿಗಳು ಮತ್ತು ಕಾನೂನು ಸಚಿವರು ಪಾಲ್ಗೊಂಡಿದ್ದರು.(ಪಿಟಿಐ ಚಿತ್ರಗಳು)

ಸಾಹೆಬ್ರೆ ನಮ್ಮ ಕತೆ ಏನು?

ಸಾಹೆಬ್ರೆ ನಮ್ಮ ಕತೆ ಏನು?

ಸಿಎಂ ಸಿದ್ದರಾಮಯ್ಯ ಜತೆ ಸಭೆಗೆ ದೆಹಲಿಗೆ ತೆರಳಿದ್ದ ಕಾನೂನು ಸಚಿವ ಜಯಚಂದ್ರ ಸಭೆಯಲ್ಲಿನ ನಡವಳಿಕೆಗಳನ್ನು ಆಲಿಸಿದರು. ಮೊನ್ನೆಯಷ್ಟೇ ಬೆಂಗಳೂರಲ್ಲಿ ಬಿಜೆಪಿ ಕಾರ್ಯಕಾರಣಿ ಮಾಡಿ ಈಗ ಸಿಎಂ ಗಳ ಸಭೆ ಮಾಡಿದ್ದಾರೆ. ಬಿಜೆಪಿಯವರ ಲೆಕ್ಕಾವಾರಾನೇ ಅರ್ಥ ಆಗ್ತಿಲ್ಲ ಅಂದಂಗಿತ್ತು ಜಯಚಂದ್ರ.

ನೀರಿಗೆ ತಕರಾರಿಲ್ಲ ಬಿಡಿ!

ನೀರಿಗೆ ತಕರಾರಿಲ್ಲ ಬಿಡಿ!

ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ತಮಿಳುನಾಡು ಸಿಎಂ ಪನ್ನೀರ್ ಸೆಲ್ವಂ ಉಭಯಕುಶಲೋಪರಿ. ಕರ್ನಾಟಕದ ಮೇಕೆದಾಟು ಯೋಜನೆಗೆ ನಿಮ್ಮದೆಂತೋ ತಕರಾರಂತೆ, ನಮ್ಮದೇನಿಲ್ಲ ಎಂದು ನಾಯ್ಡು ಹೇಳಿದ್ದು ಯಾರಿಗೂ ಕೇಳಲಿಲ್ಲ!

ಅಭಿವೃದ್ಧಿಗೆ ಕೈ ಜೋಡಿಸೋಣ

ಅಭಿವೃದ್ಧಿಗೆ ಕೈ ಜೋಡಿಸೋಣ

ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಮತ್ತು ಉತ್ತರಾಖಾಂಡ್ ಮುಖ್ಯಮಂತ್ರಿ ಹರೀಶ್ ರಾವತ್ ಬಿಗಿಅಪ್ಪುಗೆ ದೇಶದ ಅಭಿವೃದ್ಧಿಗೆ ಒಟ್ಟಾಗಿ ಹೆಜ್ಜೆ ಹಾಕೋಣ ಎಂಬಂತೆ ತೋರಿತು.

ಕೆಮ್ಮು ಕಡಿಮೆಯಾಯಿತೆ?

ಕೆಮ್ಮು ಕಡಿಮೆಯಾಯಿತೆ?

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರಿಂದ ಪ್ರಧಾನಿ ನರೇಂದ್ರ ಮೋದಿಗೆ ಹಸ್ತ ಲಾಘವ. ನರೇಂದ್ರ ಮೋದಿ ಸಲಹೆ ಮೇರೆಗೆ ಬೆಂಗಳೂರಿಗೆ ಆಗಮಿಸಿ ಕೇಜ್ರಿವಾಲ್ ಬಹುದಿನದಿಂದ ಕಾಡುತ್ತಿದ್ದ ಕೆಮ್ಮಿಗೆ ಚಿಕಿತ್ಸೆ ಪಡೆದು ಹಿಂದಿರುಗಿದ್ದರು.

ನಿಮ್ಮ ನಿಮ್ಮ ರಾಜ್ಯದಲ್ಲಿ ಏನಾಗ್ತಿದೆ?

ನಿಮ್ಮ ನಿಮ್ಮ ರಾಜ್ಯದಲ್ಲಿ ಏನಾಗ್ತಿದೆ?

ಅಸ್ಸಾಂ ಸಿಎಂ ತರುಣ್ ಗೋಗೊಯ್, ಉತ್ತರಾಖಾಂಡ್ ಸಿಎಂ ಹರೀಶ್ ರಾವತ್ ಮತ್ತು ಬಿಹಾರ ಸಿಎಂ ನಿತೀಶ್ ಕುಮಾರ್ ತಮ್ಮ ತಮ್ಮ ರಾಜ್ಯದಲ್ಲಿ ಏನೆನಾಗ್ತಿದೆ ಎಂಬುದನ್ನು ಪರಸ್ಪರ ಹಂಚಿಕೊಂಡಂತೆ ಕಂಡುಬಂತು.

ತೃತೀಯ ರಂಗದ್ದು ಏನ್ ಕತೆ?

ತೃತೀಯ ರಂಗದ್ದು ಏನ್ ಕತೆ?

ಬಿಹಾರದ ಮುಖ್ಯಂತ್ರಿ ನಿತಿಶ್ ಕುಮಾರ್ ಅವರ ಜತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಎಲ್ಲಿಗೆ ಬಂತು ನಿಮ್ಮ ತೃತೀಯ ರಂಗದ ಕತೆ? ಅಂದಂತೆ ಭಾಸವಾದ ಚಿತ್ರ.

English summary
Prime Minister Narendra Modi on Sunday addressed a joint conference of chief justices of high courts and chief ministers at Vigyan Bhavan New Delhi. where he said that the judiciary should be both powerful and perfect.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X