ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರ್ತಿಕ ಮಾಸ: ತಿರುಪತಿ ಪದ್ಮಾವತಿ ಬ್ರಹ್ಮೋತ್ಸವ

By Mahesh
|
Google Oneindia Kannada News

ತಿರುಮಲ, ಡಿ.5: ಕಾರ್ತಿಕ ಮಾಸ ಶಿವ ಹಾಗೂ ವಿಷ್ಣು ಆರಾಧನೆ ಜತೆಗೆ ತಿಮ್ಮಪ್ಪನ ಮಡದಿ ಪದ್ಮಾವತಿ ಅಮ್ಮನವರ ಹೆಸರಿನಲ್ಲಿ ಬ್ರಹ್ಮೋತ್ಸವ ಕಾರ್ಯಕ್ರಮ ಕೂಡಾ ವಿಜೃಂಭಣೆಯಿಂದ ನಡೆಸಲಾಗುತ್ತದೆ. ಒಂಭತ್ತು ದಿನಗಳ ಕಾಲ ನಡೆಯುವ ಈ ಉತ್ಸವದ ಸಂದರ್ಭದಲ್ಲಿ ನಾಡಿನ ಅನೇಕ ವಿದ್ವಾಂಸರು, ದಾನಿಗಳನ್ನು ತಿರುಮಲ ತಿರುಪತಿ ದೇವಸ್ಥಾನಂ ಸಮಿತಿ ಸನ್ಮಾನಿಸುತ್ತದೆ.

ಧ್ವಜಾರೋಹಣದ ಮೂಲಕ ಬ್ರಹ್ಮೋತ್ಸವಕ್ಕೆ ಚಾಲನೆ ನೀಡಲಾಗುತ್ತದೆ. ಗಜರಾಜನ ಅಚ್ಚಿರುವ ಹಳದಿ ವಸ್ತ್ರಧಾರಿಯಾಗಿ ಅಮ್ಮ ಪದ್ಮಾವತಿ ಭಕ್ತರಿಗೆ ದರ್ಶನ ನೀಡುತ್ತಾಳೆ. ಧ್ವಜ ಸ್ತಂಭದಲ್ಲಿ ಚಿನ್ನ ಪತಾಕೆಗಳು ಹಾರಾಡುತ್ತದೆ. ವೃಶ್ಚಿಕ ಲಗ್ನದಲ್ಲಿ ಜರುಗುವ ಈ ಶುಭ ಕಾರ್ಯಕ್ಕೆ ವೈದಿಕ ಮಂತ್ರಗಳ ಹಿಮ್ಮೇಳ ಇರುತ್ತದೆ.

ಕಾರ್ತಿಕ ಮಾಸದಲ್ಲಿ ಸೋಮವಾರಗಳಂದು ಶಿವನನ್ನು ವಿಶೇಷ ರೀತಿಯಲ್ಲಿ ಪೂಜಿಸಲಾಗುತ್ತದೆ. ರಾಹುಕಾಲದಲ್ಲಿ ಶಿವನನ್ನು ಪೂಜಿಸಿದರೆ, ವಿಶೇಷವಾದ ಪುಣ್ಯ ಬರುವುದು ಎಂಬ ನಂಬಿಕೆಯಿದೆ. ಜತೆಗೆ ಎಲ್ಲೆಡೆ ಲಕ್ಷದೀಪೋತ್ಸವ, ತೆಪ್ಪೋತ್ಸವಗಳು ಸಂಭ್ರಮದಿಂದ ನಡೆಯುತ್ತದೆ.

ತಿರುಮಲ ತಿರುಪತಿ ದೇವಸ್ಥಾನದಲ್ಲೂ ಕೂಡಾ ಕಾರ್ತಿಕ ಮಾಸದಲ್ಲಿ ದೀಪೋತ್ಸವ ಕಾರ್ಯಕ್ರಮ ವಿಶೇಷವಾಗಿ ಆಚರಿಸಲಾಗುತ್ತದೆ. ಪ್ರದೋಷ ಪೂಜೆ ಜತೆ ದೀಪೋತ್ಸವ ಈ ತಿಂಗಳ ವಿಶೇಷವಾಗಿದೆ. ತಿರುಪತಿಯ ದೀಪೋತ್ಸವದ ಚಿತ್ರಗಳು ಇಲ್ಲಿ ನೋಡಿರುತ್ತೀರಿ.

ಉಳಿದಂತೆ, ಕಾರ್ತಿಕ ಮಾಸದಲ್ಲಿ 5 ನೇ ಸೋಮವಾರ ಬಂದರೆ, ತಲಕಾಡಿನಲ್ಲಿ ಪಂಚಲಿಂಗ ದರ್ಶನವಾಗುವುದು. ಕಾರ್ತಿಕ ಮಾಸದಲ್ಲಿ ಶಿವನನ್ನು ಪೂಜಿಸಿ, ದಾನ, ಧರ್ಮ ದೀಪಾರ್ಚನೆ ಉಪಪಾಸ ವ್ರತಗಳು ಮಾಡಿದರೆ ಜನ್ಮಜನ್ಮಾಂತರದ ಪಾಪಗಳು ಪರಿಹಾರವಾಗುವುದು ಎಂದು ಶಿವಪುರಾಣದಲ್ಲಿ ಇದೆ. ಕಾರ್ತಿಕ ಮಾಸದ ಅಮಾವಾಸ್ಯೆ ದಿನ ಶಿವ ಮತ್ತು ವಿಷ್ಣು ದೇವಾಲಯದಲ್ಲಿ ಲಕ್ಷ ದೀಪೋತ್ಸವ ನಡೆಯುತ್ತದೆ. ಕಾರ್ತಿಕ ಬ್ರಹ್ಮೋತ್ಸವದ ಚಿತ್ರಗಳು ಮುಂದಿದೆ ನೋಡಿ...

ಕಾರ್ತಿಕ ಮಾಸ ಬಹಳ ಶ್ರೇಷ್ಠ

ಕಾರ್ತಿಕ ಮಾಸ ಬಹಳ ಶ್ರೇಷ್ಠ

ಕಾರ್ತಿಕ ಮಾಸವು ಬಹಳ ಶ್ರೇಷ್ಠ ಮಾಸವಾಗಿದೆ. ಈ ತಿಂಗಳನ್ನು ಶಿವನ ಮಾಸ ಎಂದೂ ಕರೆಯುತ್ತಾರೆ. ಈ ಮಾಸದಲ್ಲಿ ಪ್ರತಿಯೊಂದು ದಿನವೂ ವಿಶೇಷದಿಂದ ಕೂಡಿದೆ. ಈ ಮಾಸದಲ್ಲಿ ಶಿವನನ್ನು ಅವನ ಬೇರೆ ಬೇರೆ ನಾಮಗಳಿಂದ ಸಾಂಕೇತಿಕವಾಗಿ ಆರಾಧಿಸುತ್ತಾರೆ.

ವಿವಿಧ ಆಚರಣೆಗಳು

ವಿವಿಧ ಆಚರಣೆಗಳು

ಈ ತಿಂಗಳು ಜ್ಞಾನಾರಾಧನೆಗೂ ಮತ್ತು ಮಂತ್ರಾ ದೀಕ್ಷಾ ಸ್ವೀಕಾರಕ್ಕೂ ಪ್ರಶಸ್ತವಾದದ್ದು. ಈ ಮಾಸದಲ್ಲಿ ನಾರಾಯಣನು ತನ್ನ ನಿದ್ರಾ ಮುದ್ರೆಯನ್ನು ಬಿಟ್ಟು ಎಚ್ಚರಿಕೆಹೊಂದುವ ಮುದ್ರೆಯನ್ನು ಭಕ್ತರಿಗೆ ತೋರಿಸುವನು ಎಂಬ ಪ್ರತೀತಿ ಇದೆ.

ಕಾರ್ತಿಕ ಮಾಸ

ಕಾರ್ತಿಕ ಮಾಸ

ಬಲಿಪಾಡ್ಯಮಿ- ಗರುಡ ಪಂಚಮಿ ಯಾಜ್ಞ ವಲ್ಕ್ಯ ಜಯಂತಿ- ಉತ್ಥಾನ ದ್ವಾದಶಿ- ಚಂದ್ರ ಜಯಂತಿ- ಪಂಚಲಿಂಗ ದರ್ಶನ, ಲಕ್ಷ ದೀಪೋತ್ಸವ ಎಲ್ಲಕ್ಕೂ ಕಾರ್ತಿಕ ಮಾಸ ಪ್ರಸಿದ್ದಿ. ಜತೆಗೆ ವಾರ್ಷಿಕ ಬ್ರಹ್ಮೋತ್ಸವ ನಡೆಯುತ್ತದೆ

ಅಮ್ಮ ಪದ್ಮಾವತಿ

ಅಮ್ಮ ಪದ್ಮಾವತಿ

ಗಜರಾಜನ ಅಚ್ಚಿರುವ ಹಳದಿ ವಸ್ತ್ರಧಾರಿಯಾಗಿ ಅಮ್ಮ ಪದ್ಮಾವತಿ ಭಕ್ತರಿಗೆ ದರ್ಶನ ನೀಡುತ್ತಾಳೆ.

ಪವಿತ್ರ ಸ್ನಾನ

ಪವಿತ್ರ ಸ್ನಾನ

ಕಾರ್ತಿಕ ಮಾಸದ ಹಿನ್ನೆಲೆಯಲ್ಲಿ ಭಕ್ತಾದಿಗಳು ತಿರುಪತಿಯಲ್ಲಿ ಹುಣ್ಣಿಮೆ ಹಾಗೂ ಸೋಮವಾರ ದಿನಗಳಂದು ಪವಿತ್ರ ಸ್ನಾನ ಕೂಡಾ ಕೈಗೊಳ್ಳುತ್ತಾರೆ. ಆಂಧ್ರಪದೇಶದಲ್ಲಿನ ರಾಜಕೀಯ ಸ್ಥಿತ್ಯಂತರ, ಬಂದ್ ನಡುವೆಯೂ ಭಕ್ತಾದಿಗಳು ಎಂದಿನಂತೆ ದೇಗುಲಕ್ಕೆ ಭೇಟಿ ನೀಡುತ್ತಿದ್ದಾರೆ.

English summary
Sri Padmavathi Ammavari annual Karthika brahmotsavam: Dwajarohanam was performed in the famous temple of Sri Padmavathi Ammavari Temple, signalling the commencement of the nine-day annual Karthika brahmotsavam of Goddess Padmavathi
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X