ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುಂಡಿಯ ಹಣದ ಬಣ್ಣ ಯಾವುದು, ಪಾಕ್ ನಲ್ಲಿ ಸಮಾನತೆ ಯಾವುದು?

ಟರ್ಕಿ ದೇಶ ಎಂಬ ನೆಮ್ಮದಿಯಾಗಿದ್ದ ದೇಶದಲ್ಲಿ ಈಗ ಬಾಂಬಿನ ಸದ್ದು. ಜನರ ನೆಮ್ಮದಿ ಕಲಕಿಹೋಗಿದೆ. ಅಲ್ಲಿನ ಸ್ಥಿತಿಗೆ ಅಯ್ಯೋ, ಛೇ ಅನ್ನೋದು ಬಿಟ್ಟು ಬೇರೆ ದಾರಿಯಿಲ್ಲ

|
Google Oneindia Kannada News

ಇದಕ್ಕೆ ಕಾರಣ ಭಗವಂತನೋ ಇಲ್ಲ, ಭಯ ಅಂತಲೋ ನೀವೇ ನಿರ್ಧರಿಸಿ. ಎಲ್ಲ ದೇಗುಲಗಳಲ್ಲಿ 500, 1000ದ ಹಳೇ ನೋಟುಗಳು. ಹಿಂದಿನ ಅವಧಿಗೆ ಹೋಲಿಸಿದರೆ ಸಂಗ್ರಹದಲ್ಲಿ ಅದೆಷ್ಟೋ ಪಟ್ಟು ಹೆಚ್ಚಳ. ಇದಕ್ಕೆ ಏನು ಹೇಳೋದು. 'ನಿನ್ನ ಚಿತ್ತಕ್ಕೆ ಬಂದಿದ್ದು ಎನ್ನ ಚಿತ್ತಕ್ಕೆ ಬರಲಿ' ಅನ್ನೋದು ಬಿಟ್ಟು.

ಟರ್ಕಿ ದೇಶ ಎಂಬ ನೆಮ್ಮದಿಯಾಗಿದ್ದ ದೇಶದಲ್ಲಿ ಈಗ ಬಾಂಬಿನ ಸದ್ದು. ಜನರ ನೆಮ್ಮದಿ ಕಲಕಿಹೋಗಿದೆ. ಅಲ್ಲಿನ ಸ್ಥಿತಿಗೆ ಅಯ್ಯೋ, ಛೇ ಅನ್ನೋದು ಬಿಟ್ಟು ಬೇರೆ ದಾರಿಯಿಲ್ಲ. ಇನ್ನು ಮಂಡಾವರ್ ನ ಹಳ್ಳಿಯೊಂದರ ಜನಕ್ಕೆ ಅದ್ಯಾವ ಪರಿ ಸಿಟ್ಟು ಬಂದಿದೆ ಎಂದರೆ ಚಿರತೆಯೊಂದಕ್ಕೆ ಸಾಯೋ ಬರೋ ಹಾಗೆ ಹೊಡೆದು ಕೊಂದಿದ್ದಾರೆ. ಇದು ಕಾನೂನಿನ ಪ್ರಕಾರ ಅಪರಾಧ. ಮನುಷ್ಯತ್ವವೂ ಅಲ್ಲ ಅನಿಸಲ್ವೆ?[ನೋಟು ನಿಷೇಧ : ಹುಂಡಿಯಲ್ಲಿ ಬೀಳುತ್ತಿರುವುದು ಯಾರಪ್ಪನ ದುಡ್ಡು?]

ಸಮಾನತೆ ಎಂಬ ಪದವೇ ದುಬಾರಿಯಾಗಿರುವ ದೇಶ ಪಾಕಿಸ್ತಾನ. ಅಲ್ಲಿ ಮಹಿಳೆಯರ ಸಮಾನತೆಗಾಗಿ ಹೋರಾಡುತ್ತಿರುವ ಗುಲಾಲೈ ಇಸ್ಮಾಯಿಲ್ ನ 'ಅವೇರ್ ಗರ್ಲ್ಸ್' ಸಂಸ್ಥೆಗೆ ಅಂತರರಾಷ್ಟ್ರೀಯ ಗೌರವ ಸಿಕ್ಕಿದೆ. ಆಕೆಯ ದಿಟ್ಟತನಕ್ಕೆ ಮೆಚ್ಚುಗೆ, ಹೆಮ್ಮೆ ಪಡಲೇ ಬೇಕು. ಹೋರಾಟ ನ್ಯಾಯಯುತವಾಗಿ, ಅಗತ್ಯ ಕಂಡು ಬಂದರೆ ಮಾಡುವ ವ್ಯಕ್ತಿ, ಇರುವ ದೇಶ ಯಾರು-ಯಾವುದಾದರೇನು? ಆಕೆ ಹಾಗೂ ಆ ಸಂಸ್ಥೆ ಇನ್ನೂ ಚೆನ್ನಾಗಿ ಬೆಳೆಯಲಿ.

ಈ ಎಲ್ಲದರ ಫೋಟೋ, ಪುಟ್ಟ-ಪುಟ್ಟ ಒಕ್ಕಣೆ, ಓದಿ-ನೋಡಿ, ನಿಮ್ಮ ಅಭಿಪ್ರಾಯ ತಿಳಿಸಿ.

ಭಗವಂತನೋ ಭಯ ಅಂತಾನೋ?

ಭಗವಂತನೋ ಭಯ ಅಂತಾನೋ?

ಚೆನ್ನೈನಲ್ಲಿರುವ ಕಬಾಲೀಶ್ವರ ದೇವಸ್ಥಾನಕ್ಕೆ ತುಂಬ ದೊಡ್ಡ ಹೆಸರು. ಆ ದೇಗುಲದ ಟ್ರಸ್ಟ್ ಸದಸ್ಯರು ಹುಂಡಿಯಲ್ಲಿ ಸಂಗ್ರಹವಾದ ಹಣವನ್ನು ಎಣಿಸುವ ಕಾರ್ಯದಲ್ಲಿ ಮಗ್ನರಾಗಿದ್ದರು. ಅನುಮಾನವೇ ಬೇಡ, ಇಲ್ಲೂ ಅದೇ 500, 1000 ನೋಟುಗಳೇ ನೋಟುಗಳು. ಯಾರ್ಯಾರಲ್ಲಿ ಯಾವ ಕಾಲಕ್ಕೆ, ಅದು ಹೇಗೆ ಭಕ್ತಿಯನ್ನು ಹುಟ್ಟಿಸುತ್ತಾನೋ ಭಗವಂತ ಅಥವಾ ಇದು ಕಪ್ಪು ಹಣದ ಬಗ್ಗೆ ಸರಕಾರದ ಹೊಸ ದೇವರು 'ಭಯವಂತಾ'?

ಚಿರತೆ ಬಡಿದು ಕೊಂದರಲ್ಲಾ ಮಂದಿ

ಚಿರತೆ ಬಡಿದು ಕೊಂದರಲ್ಲಾ ಮಂದಿ

ಗುರುಗ್ರಾಮ್ ಹತ್ತಿರದ ಮಂಡಾವರ್ ಎಂಬಲ್ಲಿ ಚಿರತೆ ಆಗಾಗ ಬಂದು ಹೋಗ್ತಿತ್ತು. ಜನರಿಗೋ ಭಯ. ಏನು ಮಾಡಿರಬಹುದು ಹೇಳಿ. ಊರ ಜನರೆಲ್ಲ ಸೇರಿ ಅದನ್ನು ಸಾಯೋ ಮಟ ಹೊಡೆದಿದ್ದಾರೆ. ಆ ನಂತರ ಇಗೋ ಫೋಟೋ ನೋಡಿ, ಸತ್ತ ನಾಯಿಯನ್ನು ಎಳೆದೊಯ್ಯುವ ಹಾಗೆ ದರದರ ಎಳೆದೊಯ್ದಿದ್ದಾರೆ. ವನ್ಯಪ್ರಾಣಿಗಳ ವಿಚಾರದಲ್ಲಿ ನಡೆದುಕೊಳ್ಳೋ ಬಗೆ ಖಂಡಿತಾ ಇದಲ್ಲ.

ನೆಮ್ಮದಿಯಾಗಿದ್ದ ಟರ್ಕಿಯಲ್ಲಿ ಬಾಂಬಿನ ಸದ್ದು

ನೆಮ್ಮದಿಯಾಗಿದ್ದ ಟರ್ಕಿಯಲ್ಲಿ ಬಾಂಬಿನ ಸದ್ದು

ಟರ್ಕಿ ದೇಶದ ಅದಾನಾದಲ್ಲಿ ನಡೆ ಸ್ಫೋಟದ ದೃಶ್ಯವಿದು. ಅಲ್ಲಿನ ಸರಕಾರಿ ಕಟ್ಟಡದ ಕಾರು ನಿಲ್ದಾಣದ ಪ್ರದೇಶದಲ್ಲಿ ಸ್ಫೋಟ ಸಂಭವಿಸಿದ್ದು, ಟರ್ಕಿ ದೇಶದೊಳಗೆ ಸ್ಫೋಟದ ಫೋಟೋಗಳನ್ನು ಹಂಚಿಕೊಳ್ಳುವಂತಿಲ್ಲ ಎಂದು ಅಲ್ಲಿನ ಅಧಿಕಾರಿಗಳು ನಿರ್ಬಂಧ ಹೇರಿದ್ದಾರೆ.

ಪಾಕ್ ನ ದಿಟ್ಟ ಮಹಿಳೆ ಗುಲಾಲೈ ಇಸ್ಮಾಯಿಲ್

ಪಾಕ್ ನ ದಿಟ್ಟ ಮಹಿಳೆ ಗುಲಾಲೈ ಇಸ್ಮಾಯಿಲ್

ಈಕೆ ಹೆಸರು ಗುಲಾಲೈ ಇಸ್ಮಾಯಿಲ್. ಪಾಕಿಸ್ತಾನದಲ್ಲಿ ಮಹಿಳೆಯರ ಸಮಾನತೆಗಾಗಿ ಈಕೆಯ 'ಅವೇರ್ ಗರ್ಲ್ಸ್' ಸಂಸ್ಥೆ ಕೆಲಸ ಮಾಡುತ್ತಿದೆ. ಇಂಥ ದಿಟ್ಟತನದ ಕೆಲಸವನ್ನು ಗುರುತಿಸಿದ ಜಾಕ್ವೆಸ್ ಚಿರಾಕ್ ಫೌಂಡೇಷನ್ ನವರು ಪ್ರಶಸ್ತಿ ನೀಡಿದ್ದಾರೆ. ಅದನ್ನು ಪ್ಯಾರಿಸ್ ನಲ್ಲಿ ಸ್ವೀಕರಿಸಿದ ನಂತರ ಆತ್ಮವಿಶ್ವಾಸದ ನಗೆಯೊಂದನ್ನು ಬೀರಿದ ಗುಲಾಲೈ ಇಸ್ಮಾಯಿಲ್ ಕ್ಯಾಮೆರಾ ಕಣ್ಣಿಗೆ ಕಂಡಿದ್ದು ಹೀಗೆ.

ಮಹಾತ್ಮನೆನಿಸಿದ ಗಾಂಧಿ

ಮಹಾತ್ಮನೆನಿಸಿದ ಗಾಂಧಿ

ಮಹಾತ್ಮನೆನಿಸಿದ ಗಾಂಧಿಯ ಪುತ್ಥಳಿಯಿದು. ಇರೋದು ದೆಹಲಿಯ ಸಂಸತ್ ಭವನದಲ್ಲಿ. ಅದರ ಮೇಲೆ ಕುಳಿತಿರುವ ಈ ಎರಡು ಗಿಳಿಗಳು ಸಂಭಾಷಣೆಯಲ್ಲಿ ತೊಡಗಿರುವಂತಿವೆ. 'ಏನೇ ಹೇಳು ಗಾಂಧಿ ತಾತಾ ಪುತ್ಥಳಿ ಹೊರಗೆ ಇದ್ದದ್ದೇ ಒಳ್ಳೇದಾಯಿತು. ಸಂಸತ್ ನ ಒಳಗೆ ಇದ್ದಿದ್ದರೆ ಈ ಸ್ಥಿತಿಯಲ್ಲೂ ತುಂಬ ಬೇಜಾರಾಗ್ತಿದ್ದರು' ಅನ್ನುವಂತಿದೆ ಅಲ್ಲವೇ?

English summary
500, 1000 note commonly find in temple hundi counting, blast in Turkey and other events represnting through PTI pictures.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X