ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೇತಾಜಿ ಹುಟ್ಟುಹಬ್ಬದಂದು ರಹಸ್ಯ ಕಡತಗಳ ಕಾಣಿಕೆ

|
Google Oneindia Kannada News

ನವದೆಹಲಿ, ಜನವರಿ 23 : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನೇತಾಜಿ ಸುಭಾಷ್‌ಚಂದ್ರ ಬೋಸ್‌ ಅವರಿಗೆ ಸಂಬಂಧಿಸಿದ 100 ರಹಸ್ಯ ಡಿಜಿಟಲ್ ಕಡತ­ಗಳನ್ನು ಬಿಡುಗಡೆ ಮಾಡಿದ್ದಾರೆ. ಪ್ರತಿ ತಿಂಗಳು ನೇತಾಜಿ ಅವರಿಗೆ ಸಂಬಂಧಿಸಿದ 25 ಕಡತಗಳನ್ನು ಡಿಜಿಟಲ್‌ ರೂಪದಲ್ಲಿ ಜನರಿಗೆ ಒದಗಿಸಲಾಗುತ್ತದೆ.

ನೇತಾಜಿ ಅವರ 119ನೇ ಜನ್ಮದಿನದ ಅಂಗವಾಗಿ ಶನಿವಾರ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಬೋಸ್‌ ಅವರಿಗೆ ಸಂಬಂಧಿಸಿದ ಕಡತಗಳನ್ನು www.netajipapers.gov.in ಜಾಲತಾಣದಲ್ಲಿ ಬಿಡುಗಡೆ ಮಾಡಿದರು. [ನೇತಾಜಿ ಕುರಿತ 64 ರಹಸ್ಯ ದಾಖಲೆ ಬಹಿರಂಗ]

ನ್ಯಾಷನಲ್‌ ಆರ್ಕೈವ್ಸ್‌ ಆಫ್‌ ಇಂಡಿಯಾ (ಎನ್‌ಎಐ) ನೇತಾಜಿ ಅವರಿಗೆ ಸಂಬಂಧಿಸಿದ ಕಡತಗಳನ್ನು ಡಿಜಿಟಲ್‌ ರೂಪಕ್ಕೆ ತಂದಿದೆ. ನೇತಾಜಿ ಅವರ ಕುಟುಂಬ ಸದಸ್ಯರ ಸಮ್ಮುಖದಲ್ಲಿ ನರೇಂದ್ರ ಮೋದಿ ಅವರು ನೇತಾಜಿ ಅವರ ಕಡತಗಳಿರುವ ವೆಬ್‌ಸೈಟ್‌ಗೆ ಚಾಲನೆ ನೀಡಿದರು. [ನೇತಾಜಿ ರಹಸ್ಯ ಕಡತ ಬಿಡುಗಡೆ]

ಕೇಂದ್ರ ಸರ್ಕಾರ ನೇತಾಜಿ ಅವರಿಗೆ ಸಂಬಂಧಿಸಿದ ಕಡತಗಳನ್ನು ಬಿಡುಗಡೆ ಮಾಡಿರುವುದನ್ನು ನೇತಾಜಿ ಕುಟುಂಬ ಸದಸ್ಯರು ಸ್ವಾಗತಿಸಿದ್ದಾರೆ. ಪ್ರತಿ ತಿಂಗಳು 25 ಡಿಜಿಟಲ್ ಕಡತಗಳನ್ನು ಈ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ. ಕಡತ ಬಿಡುಗಡೆಯ ಚಿತ್ರಗಳು ಇಲ್ಲಿವೆ....

ನೇತಾಜಿ 100 ರಹಸ್ಯ ದಾಖಲೆ ಬಿಡುಗಡೆ

ನೇತಾಜಿ 100 ರಹಸ್ಯ ದಾಖಲೆ ಬಿಡುಗಡೆ

ನೇತಾಜಿ ಅವರ 119ನೇ ಜನ್ಮದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು, ಶನಿವಾರ ದೆಹಲಿಯಲ್ಲಿನ ಭಾರತದ ರಾಷ್ಟ್ರೀಯ ಪತ್ರಾಗಾರದಲ್ಲಿ (ಎನ್​ಎಐ)ನೇತಾಜಿ ಅವರಿಗೆ ಸಂಬಂಧಿಸಿದ 100 ಡಿಜಿಟಲ್ ದಾಖಲೆಗಳನ್ನು ಬಿಡುಗಡೆ ಮಾಡಿದರು.

ವೆಬ್‌ಸೈಟ್‌ನಲ್ಲಿ ದಾಖಲೆಗಳು ಲಭ್ಯವಿದೆ

ವೆಬ್‌ಸೈಟ್‌ನಲ್ಲಿ ದಾಖಲೆಗಳು ಲಭ್ಯವಿದೆ

ನೇತಾಜಿ ಅವರಿಗೆ ಸಂಬಂಧಿಸಿದ ಡಿಜಿಟಲ್ ಕಡತಗಳು www.netajipapers.gov.in ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಪ್ರತಿ ತಿಂಗಳು 25 ಕಡತಗಳನ್ನು ಜನರಿಗಾಗಿ ನ್ಯಾಷನಲ್‌ ಆರ್ಕೈವ್ಸ್‌ ಆಫ್‌ ಇಂಡಿಯಾ (ಎನ್‌ಐಎ) ಬಿಡುಗಡೆ ಮಾಡಲಿದೆ.

ಕಡತಗಳನ್ನು ವೀಕ್ಷಿಸಿದ ಪ್ರಧಾನಿ ಮೋದಿ

ಕಡತಗಳನ್ನು ವೀಕ್ಷಿಸಿದ ಪ್ರಧಾನಿ ಮೋದಿ

ಕಡತಗಳನ್ನು ಬಿಡುಗಡೆ ಮಾಡಿದ ಬಳಿಕ ಮೋದಿ ಮತ್ತು ಅವರ ಸಂಪುಟ ಸಹೋದ್ಯೋಗಿಗಳು ಕಡತಗಳನ್ನು ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ವೀಕ್ಷಿಸಿದರು. ನೇತಾಜಿ ಅವರ ಅಪರೂಪದ ಚಿತ್ರಗಳು ಕಡತಗಳಲ್ಲಿ ಸೇರಿವೆ.

ನಿರ್ಧಾರ ಸ್ವಾಗತಿಸಿದ ನೇತಾಜಿ ಕುಟುಂಬ

ನಿರ್ಧಾರ ಸ್ವಾಗತಿಸಿದ ನೇತಾಜಿ ಕುಟುಂಬ

ಕೇಂದ್ರ ಸರ್ಕಾರ ನೇತಾಜಿ ಅವರಿಗೆ ಸಂಬಂಧಿಸಿದ ಕಡತಗಳನ್ನು ಬಿಡುಗಡೆ ಮಾಡಿರುವುದನ್ನು ನೇತಾಜಿ ಕುಟುಂಬ ಸದಸ್ಯರು ಸ್ವಾಗತಿಸಿದ್ದಾರೆ. ಮೋದಿ ಅವರು ಕಡತ ಬಿಡುಗಡೆ ಬಳಿಕ ಕುಟುಂಬ ಸದಸ್ಯರೊಂದಿಗೆ ಮಾತುಕತೆ ನಡೆಸಿದರು.

ಪ್ರತಿ ತಿಂಗಳು ಕಡತ ಜನರಿಗೆ ಸಿಗಲಿದೆ

ಪ್ರತಿ ತಿಂಗಳು ಕಡತ ಜನರಿಗೆ ಸಿಗಲಿದೆ

ನ್ಯಾಷನಲ್‌ ಆರ್ಕೈವ್ಸ್‌ ಆಫ್‌ ಇಂಡಿಯಾ (ಎನ್‌ಎಐ) ನೇತಾಜಿ ಅವರ ಕಣ್ಮರೆ ಸೇರಿದಂತೆ ಇತರ ರಹಸ್ಯವನ್ನು ಒಳಗೊಂಡಿರುವ ಕಡತಗಳನ್ನು ಡಿಜಿಟಲ್‌ ಸ್ವರೂಪಕ್ಕೆ ಪರಿವರ್ತಿದೆ. ಪ್ರತಿ ತಿಂಗಳು 25 ಕಡತಗಳನ್ನು ಸಾರ್ವಜನಿಕರಿಗಾಗಿ ವೆಬ್ ಸೈಟ್ ಮೂಲಕ ಬಿಡುಗಡೆ ಮಾಡಲಾಗುತ್ತದೆ.

ನೇತಾಜಿ ಕುಟುಂಬ ಬೇಡಿಕೆ ಇಟ್ಟಿತ್ತು

ನೇತಾಜಿ ಕುಟುಂಬ ಬೇಡಿಕೆ ಇಟ್ಟಿತ್ತು

ನೇತಾಜಿ ಅವರ ಸೋದರ ಸಂಬಂಧಿಯ ಮೊಮ್ಮಗ ಸೂರ್ಯಕುಮಾರ್‌ ಬೋಸ್‌ ಅವರು ಬರ್ಲಿನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ 1945ರ ಆಗಸ್ಟ್‌ 18ರಂದು ತೈವಾನ್‌ನಿಂದ ಬೋಸ್‌ ಅವರು ಕಣ್ಮರೆಯಾಗಿರುವುದಕ್ಕೆ ಸಂಬಂಧಿಸಿದ ಮಾಹಿತಿ ಬಹಿರಂಗ ಮಾಡಬೇಕು ಎಂದು ಒತ್ತಾಯಿಸಿದ್ದರು.

English summary
Prime Minister of India Narendra Modi released digital copies of 100 declassified files related to Netaji Subhash Chandra Bose on Saturday, January 23, 2016.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X