ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮ್ಯೂಸಿಯಂಗೆ 'ನೆಹರೂ ಕೋಟ್' ತೊಟ್ಟ ಮೋದಿ ಪ್ರತಿಮೆ

By Mahesh
|
Google Oneindia Kannada News

ನವದೆಹಲಿ, ಮಾರ್ಚ್ 17: ವಿಶ್ವದ ಪ್ರಭಾವಿ ನಾಯಕರಲ್ಲಿ ಒಬ್ಬರಾಗಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಮೇಣದ ಪ್ರತಿಮೆ ನಿರ್ಮಾಣ ಕಾರ್ಯ ಆರಂಭವಾಗಿದೆ.ಮೇಡಂ ಟುಸಾಡ್ಸ್ ಮ್ಯೂಸಿಯಂನ ತಜ್ಞರು, ಮೋದಿ ಅವರ ಅಳತೆ ತೆಗೆದುಕೊಂಡಿದ್ದಾರೆ.

ಲಂಡನ್ ಸೇರಿದಂತೆ ಸಿಂಗಪುರ, ಹಾಂಗ್ ಕಾಂಗ್ ಹಾಗೂ ಬ್ಯಾಂಕಾಕಿನಲ್ಲಿರುವ ಮೇಡಂ ಟುಸಾಡ್ಸ್ ಮೇಣದ ಪ್ರತಿಮೆ ಮ್ಯೂಸಿಯಂಗಳಲ್ಲಿ ನರೇಂದ್ರ ಮೋದಿ ಅವರ ಪ್ರತಿಮೆ ಅನಾವರಣಗೊಳ್ಳಲಿದೆ. ಜಾಗತಿಕ ಗಣ್ಯರ ಸಾಲಿನಲ್ಲಿ ಮೋದಿ ಪ್ರತಿಮೆ ನಿಲ್ಲಿಸಲಾಗುತ್ತದೆ. [ಸಚಿನ್ ಮೇಣದ ಪ್ರತಿಮೆ ಅನಾವರಣ]

ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ ಅವರು, ಮೂರ್ನಾಲ್ಕು ಬಾರಿ ಮೇಡಂ ಟುಸಾಡ್ಸ್ ಮ್ಯೂಸಿಯಂಗೆ ಭೇಟಿ ನೀಡಿದ್ದೇನೆ. ಗಣ್ಯರ ಪ್ರತಿಮೆ ಜತೆ ಭಾವಚಿತ್ರ ತೆಗೆಸಿಕೊಂಡಿದ್ದೇನೆ. [ಮೈಸೂರಿನಲ್ಲಿ ಸಂಗೀತ ವಾದ್ಯಗಳ ಮೇಡಂ ತೌಸಡ್ಸ್]

ಆದರೆ, ವಿಶ್ವದ ಗಣ್ಯಾತಿಗಣ್ಯರ ಜತೆ ನನ್ನನ್ನು ಹೋಲಿಸಿಕೊಳ್ಳುವುದು ಇರಿಸುಮುರಿಸಿನ ಸಂಗತಿ. ಮ್ಯೂಸಿಯಂನ ಕಲಾವಿದರ ಶ್ರದ್ಧೆ, ವೃತ್ತಿಪರತೆ ಮತ್ತು ಕೌಶಲ್ಯ ನನ್ನ ಗಮನ ಸೆಳೆಯಿತು. ಸಾರ್ವಜನಿಕ ಅಭಿಪ್ರಾಯದ ಮೇರೆಗೆ ನನ್ನ ಪ್ರತಿಮೆ ಸ್ಥಾಪನೆ ನಿರ್ಧಾರ ಮಾಡಲಾಗಿದೆ ಎಂಬುದು ನಿರಾಳದ ಸಂಗತಿ ಎಂದಿದ್ದಾರೆ.

ಮೋದಿ ಅವರ ಪ್ರತಿಮೆಯಲ್ಲಿ ನೆಹರೂ ಜಾಕೆಟ್

ಮೋದಿ ಅವರ ಪ್ರತಿಮೆಯಲ್ಲಿ ನೆಹರೂ ಜಾಕೆಟ್

ಸಾಂಪ್ರದಾಯಿಕ ಕುರ್ತಾ ಧರಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಮೆಯಲ್ಲಿ ನೆಹರೂ ಜಾಕೆಟ್ ಧರಿಸಿದ್ದು ನಮಸ್ತೆ ಮಾಡುತ್ತಿರುವ ಭಂಗಿಯಲ್ಲಿ ಪ್ರತಿಮೆ ಇರಲಿದೆ ಎಂದು ಟುಸಾಡ್ಸ್ ಮ್ಯೂಸಿಯಂನ ಅಧಿಕಾರಿಗಳು ತಿಳಿಸಿದ್ದಾರೆ.

ಸ್ಮೈಲ್ ಪ್ಲೀಸ್ ಮಿಸ್ಟರ್ ಮೋದಿ ಎಂದ ತಜ್ಞರು

ಸ್ಮೈಲ್ ಪ್ಲೀಸ್ ಮಿಸ್ಟರ್ ಮೋದಿ ಎಂದ ತಜ್ಞರು

ಮೋದಿ ಅವರ ಮುಖ, ತಲೆ, ಹಲ್ಲು, ದೇಹದ ಸುತ್ತಳತೆ ಎಲ್ಲದರ ಅಳತೆ ತೆಗೆದುಕೊಂಡು ಸ್ಮೈಲ್ ಪ್ಲೀಸ್ ಮಿಸ್ಟರ್ ಮೋದಿ ಎಂದ ತಜ್ಞರು

ಒಂದು ಪ್ರತಿಮೆ ನಿರ್ಮಾಣದ ಅವಧಿ

ಒಂದು ಪ್ರತಿಮೆ ನಿರ್ಮಾಣದ ಅವಧಿ

ಒಂದು ಪ್ರತಿಮೆ ನಿರ್ಮಾಣದ ಅವಧಿ ಸುಮಾರು 4 ತಿಂಗಳು ಎಂದು ಅಂದಾಜಿಸಲಾಗಿದೆ. ಪ್ರತಿಮೆಯೊಂದಕ್ಕೆ ಸುಮಾರು 1.5 ಲಕ್ಷ ಪೌಂಡ್(1.42 ಕೋಟಿ ರು) ವೆಚ್ಚವಾಗಲಿದೆ. ಮೋದಿ ಅವರ ಪ್ರತಿಮೆ ಏಪ್ರಿಲ್ ತಿಂಗಳ ಅಂತ್ಯಕ್ಕೆ ಸಿದ್ಧವಾಗಲಿದ್ದು, ಮೊದಲಿಗೆ ಯಾವುದಾದರೂ ಒಂದು ಮ್ಯೂಸಿಯಂನಲ್ಲಿ ಪ್ರಧಾನಿ ಮೋದಿ ಅನಾವರಣ ಮಾಡಲಿದ್ದಾರೆ.

ನಾಲ್ಕು ಮ್ಯೂಸಿಯಂಗಳಲ್ಲೂ ಮೋದಿ ಪ್ರತಿಮೆ

ನಾಲ್ಕು ಮ್ಯೂಸಿಯಂಗಳಲ್ಲೂ ಮೋದಿ ಪ್ರತಿಮೆ

ಜಾಗತಿಕ ಗಣ್ಯರ ಪ್ರತಿಮೆಗಳಿರುವ ಮೇಡಂ ಟುಸಾಡ್ಸ್ ಅವರ ಮೇಣದ ಪ್ರತಿಮೆ ಮ್ಯೂಸಿಯಂ ಲಂಡನ್, ಸಿಂಗಾಪುರ, ಬ್ಯಾಂಕಾಕ್ ಮತ್ತು ಹಾಂಗ್​ಕಾಂಗ್​ನಲ್ಲಿದೆ. ಈಗ ಮೋದಿ ಅವರ ಪ್ರತಿಮೆ ಈ ಎಲ್ಲಾ ಮ್ಯೂಸಿಯಂಗಳಲ್ಲಿ ಸ್ಥಾಪಿಸಲು ಸಂತಸವಾಗುತ್ತಿದೆ ಎಂದು ಮ್ಯೂಸಿಯಂನ ವಕ್ತಾರ ಕೀರನ್ ಲ್ಯಾನ್ಸಿನಿ ಹೇಳಿದ್ದಾರೆ.

ದೇಹದ ಸುತ್ತಳತೆ ಜೊತೆಗೆ ಹಸ್ತದ ಅಚ್ಚು

ದೇಹದ ಸುತ್ತಳತೆ ಜೊತೆಗೆ ಹಸ್ತದ ಅಚ್ಚು

ಪ್ರತಿಮೆ ನಿರ್ಮಾಣಕ್ಕಾಗಿ ದೇಹದ ಸುತ್ತಳತೆ ಜೊತೆಗೆ ಹಸ್ತದ ಅಚ್ಚು ನೀಡಿದ ಮೋದಿ ಅವರು ಅದರ ಪ್ರತಿಯೊಂದಿಗೆ ಫೋಟೋ ತೆಗೆಸಿಕೊಂಡರು.

ಟೈಮ್ ಮ್ಯಾಗಜಿನ್ ಪ್ರಭಾವಿ ನಾಯಕ ಮೋದಿ

ಟೈಮ್ ಮ್ಯಾಗಜಿನ್ ಪ್ರಭಾವಿ ನಾಯಕ ಮೋದಿ

ನರೇಂದ್ರ ಮೋದಿ ವಿಶ್ವದ ಪ್ರಮುಖ ರಾಜಕೀಯ ಮುಖಂಡರ ಪೈಕಿ ಒಬ್ಬರೆನಿಸಿದ್ದಾರೆ. ಟೈಮ್ ಮ್ಯಾಗಜಿನ್​ನ 2015 ಹಾಗೂ 2016ರಲ್ಲಿ ಸತತವಾಗಿ ಟಾಪ್ 10 ಪಟ್ಟಿಯಲ್ಲಿ ಮೋದಿ ಸ್ಥಾನ ಪಡೆದಿದ್ದಾರೆ. ಸಾಮಾಜಿಕ ಜಾಲ ತಾಣ ಟ್ವಿಟರ್​ನಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ನಂತರ ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿರುವ ಜನಪ್ರಿಯ ವ್ಯಕ್ತಿ ಮೋದಿ.

English summary
Earlier this year, a team of famous Madame Tussauds had visited prime minister Narendra Modi to take measurements for his wax statue, which is expected to be unveiled in April this year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X