ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶಕ್ಕೆ ರಂಗು ಚೆಲ್ಲಿದ ಬಣ್ಣದ ಹಬ್ಬದ ಸಂಭ್ರಮ

By Mahesh
|
Google Oneindia Kannada News

ಬೆಂಗಳೂರು, ಮಾ.5: ದೇಶದೆಲ್ಲೆಡೆ ಬಣ್ಣದ ಹಬ್ಬದ ಸಂಭ್ರಮ ಮುಗಿಲು ಮುಟ್ಟಿದೆ. ಜಾತಿ ಧರ್ಮದ ಸಂಕೋಲೆ ಬೇಲಿ ಕಳಚಿ ಹೋಳಿ ಹಬ್ಬವನ್ನು ಪ್ರತಿಯೊಬ್ಬರೂ ಭಾರತದಲ್ಲಿ ಆಚರಿಸಿದ್ದಾರೆ. ವಸಂತ ಮಾಸದ ಹುಣ್ಣಿಮೆಯ ಹೋಳಿದಿನದಂದು ಅಬಾಲವೃದ್ಧರಾದಿಯಾಗಿ ಎಲ್ಲರೂ ಸಂಭ್ರಮ ಸಡಗರದಿಂದ ಈ ಹಬ್ಬವನ್ನು ಆಚರಿಸಿದ್ದು ಕಂಡು ಬಂದಿದೆ.ವಿಶೇಷವಾಗಿ ಬೃಂದಾವನದಲ್ಲಿ ವಿಧವೆಯರು ಶ್ರೀಕೃಷ್ಣನ ಸ್ಮರಿಸಿ ಆಚರಿಸಿದ ಹೋಳಿ ವಿಶಿಷ್ಟವಾಗಿತ್ತು.

'ಕಾಮಣ್ಣನ ಮಕ್ಕಳು ಕಳ್ಳ ಸೂಳೆ ಮಕ್ಕಳು' ಎಂದು ಹಾಡುತ್ತ, ತಮ್ಮಟೆಯನ್ನು ಬಾರಿಸುತ್ತ ಓಣಿ ತುಂಬ ಓಡಾಡಿ, ಜನರಿಂದ ವಂತಿಗೆ ವಸೂಲಿ ಮಾಡಿ, ಕೈಗೆ ಸಿಕ್ಕ ಕಟ್ಟಿಗೆ ಪೇರಿಸಿ, ಒಂದು ಪುರಾಣ ಕಥೆಯ ಪ್ರಕಾರ ಹಿರಣ್ಯಕಶಿಪುವಿನ ತಂಗಿ 'ಹೋಲಿಕಾ'ನ ಪ್ರತಿಕೃತಿಯನ್ನು ಅಥವಾ ಕಾಮನ ಪ್ರತಿಕೃತಿಯನ್ನು ದಹಿಸಿ, ನಂತರ ಇಡೀ ದಿನ ಓಕುಳಿ ಆಡುವ ಸಂಪ್ರದಾಯ ಈಗಲೂ ಅನೇಕ ಕಡೆ ಚಾಲ್ತಿಯಲ್ಲಿದೆ. ಗ್ಯಾಲರಿ : ರಂಗು ರಂಗಿನ ಹಬ್ಬದ ಸಂಭ್ರಮ

ಅದರೆ, ನಗರ ಪ್ರದೇಶಗಳಲ್ಲಿ ಹೆಚ್ಚೆಚ್ಚು ಸಾವಯವ ಬಣ್ಣಗಳ ಬಳಕೆ, ನೀರಿನ ಬಳಕೆ ಕಡಿಮೆ ಮಾಡುವುದರ ಬಗ್ಗೆ ಜನರು ಗಮನ ಹರಿಸಿದ್ದಾರೆ. ಆದರೆ, ಸಂಭ್ರಮಕ್ಕೇನು ಕಡಿಮೆಯಾಗಿಲ್ಲ.

ಮನೆ, ವಠಾರ, ಗಲ್ಲಿ, ಬೀದಿ, ಕಾಲೋನಿ, ನಗರ, ತಾಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರ ಅಷ್ಟೇ ಏಕೆ ಇಡೀ ವಿಶ್ವದ ಸದಸ್ಯರನ್ನು ಒಂದುಗೂಡಿಸುವ ಕಲರ್ ಫುಲ್ ಹಬ್ಬವಾಗಿ ಹೋಳಿ ಗುರುತಿಸಿಕೊಂಡಿದೆ. ವರ್ಷದಿಂದ ವರ್ಷಕ್ಕೆ ವಿದೇಶಿಯರು ರಂಗು ರಂಗಿನ ಹಬ್ಬದಲ್ಲಿ ಪಾಲ್ಗೊಂಡು ಬಣ್ಣದೋಕುಳಿಯಲ್ಲಿ ಮಿಂದೇಳುತ್ತಿದ್ದಾರೆ.ಬಣ್ಣದ ಹಬ್ಬದ ರಂಗಿನ ಚಿತ್ರ ಸಂಪುಟ ನಿಮ್ಮ ಮುಂದಿದೆ...

ಹೋಳಿ ಸಂಭ್ರಮದ ಆಚರಣೆ ಚಿತ್ರಗಳು

ಹೋಳಿ ಸಂಭ್ರಮದ ಆಚರಣೆ ಚಿತ್ರಗಳು

ಎಲ್ಲರಂತೆ ಬಾಳಲು ವಿಧವೆಯರಿಗೂ ಹಕ್ಕಿದೆ. ಶ್ರೀಕೃಷ್ಣನ ಆರಾಧನೆಯಲ್ಲಿ ಅವರಿಗೆ ಸಿಗುವ ಸಂತೋಷ ಕಂಡು ನಮಗೂ ಸಂತಸ, ಉತ್ಸಾಹ ಹೆಚ್ಚಿದೆ ಎಂದು ಸುಲಭ ಇಂಟರ್ ನ್ಯಾಷನಲ್ ಸಂಸ್ಥೆ ಸ್ಥಾಪಕ ಸುಲಭ್ ಬಿಂದೇಶ್ವರ್ ಪಾಠಕ್ ಹೇಳಿದ್ದಾರೆ.

ಮುಂಬೈನಲ್ಲಿ ಹಾಡು ಕುಣಿತ ರಂಗೋ ರಂಗು

ಮುಂಬೈನಲ್ಲಿ ಹಾಡು ಕುಣಿತ ರಂಗೋ ರಂಗು

ಮುಂಬೈನಲ್ಲಿ ಹಾಡು ಕುಣಿತ ರಂಗೋ ರಂಗು ಆರಂಭವಾಗಿದೆ. ನಾಲ್ಕು ದಿನ ಹಬ್ಬದ ವಾತಾವರಣ ಕಳೆಕಟ್ಟಲಿದೆ. ಚಿತ್ರ: ಪಿಟಿಐ

ವೃಂದಾವನದಲ್ಲಿ ಕೃಷ್ಣಭಕ್ತೆಯರು

ವೃಂದಾವನದಲ್ಲಿ ಕೃಷ್ಣಭಕ್ತೆಯರು

ಗಂಡನನ್ನು ಕಳೆದುಕೊಂಡು ಪರಿತ್ಯಕ್ತರಾದ ಈ ಅಬಲೆಯರಿಗೆ ಕೃಷ್ಣ ಪರಮಾತ್ಮನ ಆರಾಧನೆ ಮಾನಸಿಕ ನೆಮ್ಮದಿ, ಶಾಂತಿ ತರುವುದರಲ್ಲಿ ಆಶ್ಚರ್ಯವಿಲ್ಲ. ಮನೆಯಲ್ಲಿ ವಿಧವೆಯರನ್ನು ಇರಿಸಿಕೊಳ್ಳುವುದು ಅಶುಭ ಎಂಬ ಕೆಟ್ಟ ಸಂಪ್ರದಾಯ ಇಂದಿಗೂ ಭಾರತದ ಹಲವೆಡೆ ಜಾರಿಯಲ್ಲಿರುವುದು ದುರಂತ ಸತ್ಯ.

ಮಹಾ ನಿರ್ವಾಣಿ ಅಖಾರದಲ್ಲಿ

ಮಹಾ ನಿರ್ವಾಣಿ ಅಖಾರದಲ್ಲಿ

ವಾರಣಾಸಿ: ಮಹಾ ನಿರ್ವಾಣಿ ಅಖಾರದಲ್ಲಿ ಸಾಧುಗಳ ಜೊತೆ ಸಾರ್ವಜನಿಕರು ಹೋಳಿ ಸಂಭ್ರಮದಲ್ಲಿ ಮುಳುಗಿದರು

ಬೋಧ ಗಯಾದಲ್ಲಿ ಬಾಲ ಭಿಕ್ಷುಗಳು

ಬೋಧ ಗಯಾದಲ್ಲಿ ಬಾಲ ಭಿಕ್ಷುಗಳು

ಬೋಧ ಗಯಾದಲ್ಲಿ ಬಾಲ ಭಿಕ್ಷುಗಳು ಹೋಳಿ ಹಬ್ಬದ ಸಂಭ್ರಮಾಚರಣೆಯಲ್ಲಿ ತೊಡಗಿರುವ ದೃಶ್ಯ. ಚಿತ್ರ: ಪಿಟಿಐ

ಬೃಂದಾವನದ ವಿಧವೆಯರಿಗೆ ಸಹಾಯ ಹಸ್ತ

ಬೃಂದಾವನದ ವಿಧವೆಯರಿಗೆ ಸಹಾಯ ಹಸ್ತ

ಎಲ್ಲಾ ಕಟ್ಟುಪಾಡು, ನೀತಿ ನಿಯಮಗಳನ್ನು ಮೀರಿ ಗೊಲ್ಲನ ಕರೆಗೆ ಓಗೊಟ್ಟು ಬಂದಿರುವ ವಿಧವೆಯರಿಗೆ ಬೃಂದಾವನದ ಸುಲಭ ಇಂಟರ್ ನ್ಯಾಷನಲ್ ಸಂಸ್ಥೆ ಸಹಾಯ ಹಸ್ತ ಚಾಚಿದೆ. ಬಡವ, ನಿರ್ಗತಿಕ ವಿಧವೆಯ ಪಾಲಿಗೆ ಆಶಾಕಿರಣವಾಗಿರುವ ಸಂಸ್ಥೆ, ಆಹಾರ, ವೈದ್ಯಕೀಯ ನೆರವು ನೀಡುತ್ತಿದೆ. ಸರ್ಕಾರದ ನೆರವು ಸಿಕ್ಕಿರುವುದರಿಂದ ತಾತ್ಕಾಲಿಕ ಆಶ್ರಯ ತಾಣಗಳನ್ನು ನಿರ್ಮಿಸಲಾಗಿದೆ.

ವಿದೇಶಿ ಪ್ರವಾಸಿಗರ ಸಂಭ್ರಮ

ವಿದೇಶಿ ಪ್ರವಾಸಿಗರ ಸಂಭ್ರಮ

ವಸಂತ ಉತ್ಸವ 2013 ಅಂಗವಾಗಿ ವಿದೇಶಿ ಪ್ರವಾಸಿಗರ ಸಂಭ್ರಮ ಪಿಟಿಐ ಚಿತ್ರ

English summary
Grand celebrations were held in many parts of the country on the occasion of Holi. Many foreigners too enthusiastically took part in the celebrations. Widows of Vrindavan came out in the open and celebrated mass Holi, something unheard and unseen in the traditional town of Vrindavan in Uttar Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X