• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದೇಶವನ್ನೇ ಅಲುಗಾಡಿಸಿದ್ದ ಲೈಂಗಿಕ ದೌರ್ಜನ್ಯ ಪ್ರಕರಣಗಳು

|

ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಭಾರತದಲ್ಲಿ ತಡೆ ಇಲ್ಲದಂತೆ ಆಗಿದೆ. ಸರ್ಕಾರ ಮತ್ತು ಕಾನೂನು ಕ್ರಮಗಳು ಅತ್ಯಾಚಾರಿಗಳನ್ನು, ಕಾಮಾಂಧರನ್ನು ನಿಯಂತ್ರಣದಲ್ಲಿ ಎಡವುತ್ತಿರುವುದು ತೆರೆದಿಟ್ಟ ಸತ್ಯ.

ಕೆಲಸದ ಜಾಗದಲ್ಲಿ ಸಹ ಲೈಂಗಿಕ ದೌರ್ಜನ್ಯ ಸಾಮಾನ್ಯ ಎಂಬ ಸ್ಥಿತಿ ನಿರ್ಮಾಣವಾಗಿರುವುದು ದುರ್ದೈವವೇ ಸರಿ. ಕಾರ್ಪೋರೇಟ್ ಜಗತ್ತು ಸಹ ಲೈಂಗಿಕ ಶೋಷಣೆ ಸುತ್ತ ಗಿರಕಿ ಹೊಡೆಯುತ್ತಲಿದೆ.[ಯುವತಿಯರು ಮಾತ್ರವಲ್ಲ, ಯುವಕರೂ ಅಸುರಕ್ಷಿತ!]

ಸೋಶಿಯಲ್ ರಿಸರ್ಚ್ ನ ನಿರ್ದೇಶಕಿ ಡಾ ರಂಜನಾ ಕುಮಾರಿ ಹೇಳುವಂತೆ, ಕಂಪ್ಯೂಟರ್ ಮೂಲಕ ಅಶ್ಲೀಲ ಸಂದೇಶವನ್ನು ಸಹೋದ್ಯೋಗಿಗೆ ಕಳುಹಿಸುವುದು, ಅಶ್ಲೀಲ ಕಮೆಂಟ್ ಗಳು, ಸಂದೇಶಗಳನ್ನು ಸಹ ಲೈಂಗಿಕ ದೌರ್ಜನ್ಯ ಎಂಬ ಹೆಸರಿನಲ್ಲಿಯೇ ಪರಿಗಣನೆಗೆ ಒಳಪಡಿಸಲಾಗುವುದು ಎನ್ನುತ್ತಾರೆ.[ಹಸುವಿನ ಕರು ಮೇಲೆಯೇ ಅತ್ಯಾಚಾರ ಎಸಗಿದ!]

ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಮನೇಕಾ ಗಾಂಧಿ ಸಹ, ಈ ಬಗೆಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸೂಚನೆ ನೀಡಿದ್ದಾರೆ. 10 ಅಥವಾ ಅದಕ್ಕಿಂತ ಹೆಚ್ಚಿನ ಮಹಿಳಾ ಸಿಬ್ಬಂದಿ ಇರುವೆಡೆ ದೂರು ಪಡೆದುಕೊಳ್ಳಲು ಆಂತರಿಕ ಮಂಡಳಿಯೊಂದನ್ನು ನೇಮಕ ಮಾಡಿಕೊಳ್ಳಬೇಕು ಎಂದು 2013ರ ಕಾನೂನು ಹೇಳುತ್ತದೆ. ಲೈಂಗಿಕ ದೌರ್ಜನ್ಯದ ಹೆಸರಲ್ಲಿ ಇಡೀ ದೇಶವನ್ನೇ ನಡುಗಿಸಿದ ಕೆಲ ಪ್ರಮುಖ ಪ್ರಕರಣಗಳ ಸುತ್ತ ಒಂದು ಸುತ್ತು ಹಾಕಿಕೊಂಡು ಬರೋಣ...

 ತರುಣ್ ತೇಜ್ ಪಾಲ್ -ತೆಹಲ್ಕಾ

ತರುಣ್ ತೇಜ್ ಪಾಲ್ -ತೆಹಲ್ಕಾ

ತೆಹಲ್ಕಾ ಮ್ಯಾಗಝೀನ್ ಸ್ಥಾಪಕ ತರುಣ್ ತೇಜ್ ಪಾಲ್ ವಿರುದ್ಧ 2013ರಲ್ಲಿ ಮಹಿಳಾ ಸಿಬ್ಬಂದಿಯೊಬ್ಬರ ಮೇಲೆ ದೌರ್ಜನ್ಯ ನಡೆಸಿದ ದೂರು ದಾಖಲಾಗಿತ್ತು. ತೇಜ್ ಪಾಲ್ ವಿರುದ್ಧ ಮ್ಯಾಗಝೀನ್ ನ ಕಿರಿಯ ಸಿಬ್ಬಂದಿಯೊಬ್ಬರು ಅತ್ಯಾಚಾರ ದೂರು ದಾಖಲು ಮಾಡಿದ್ದರು.

ಆರ್.ಕೆ. ಪಚೌರಿ

ಆರ್.ಕೆ. ಪಚೌರಿ

ನೊಬೆಲ್ ಪ್ರಶಸ್ತಿ ಪುರಸ್ಕೃತ, ಮಾಜಿ ಸಚಿವ ಆರ್.ಕೆ. ಪಚೌರಿ ಅವರ ವಿರುದ್ಧ ದೆಹಲಿ ಕಾಲೇಜು ವಿದ್ಯಾರ್ಥಿಯೊಬ್ಬರು ಲೈಂಗಿಕ ದೌರ್ಜನ್ಯ ದೂರು ದಾಖಲಿಸಿದ್ದರು. ಶಕ್ತಿವರ್ಧಕ ಮತ್ತು ಸಂಪನ್ಮೂಲ ಸಂಸ್ಥೆಯ (TERI) ಮಹಾನಿರ್ದೇಶಕರಾಗಿದ್ದ ಪಚೌರಿ ಯುವತಿ ಜತೆ ಅಸಭ್ಯವಾಗಿ ವರ್ತಿಸಿದ್ದರು ಎಂದು ದೂರು ಸಲ್ಲಿಕೆಯಾಗಿತ್ತು.

ನಿವೃತ್ತ ನ್ಯಾಯಾಧೀಶ ಗಂಗೂಲಿ

ನಿವೃತ್ತ ನ್ಯಾಯಾಧೀಶ ಗಂಗೂಲಿ

66 ವರ್ಷದ ಎಕೆ ಗಂಗೂಲಿ ಮೇಲೆ ಲೈಂಗಿಕ ದೌರ್ಜನ್ಯ ದೂರು 2014ರಲ್ಲಿ ದಾಖಲಾಗಿತ್ತು. ಇದಾದ ಮೇಲೆ ಗಂಗೂಲಿ ಪಶ್ಚಿಮ ಬಂಗಾಳದ ಮಾನವ ಹಕ್ಕು ಆಯೋಗದ ಅಧಿಕಾರದಿಂದ ಕೆಳಕ್ಕೆ ಇಳಿದಿದ್ದರು.

 ಸಮಸ್ಯೆಗೆ ಸಿಕ್ಕಿಕೊಂಡ ಗ್ರೀನ್ ಪೀಸ್

ಸಮಸ್ಯೆಗೆ ಸಿಕ್ಕಿಕೊಂಡ ಗ್ರೀನ್ ಪೀಸ್

2015ರ ಆರಂಭದಲ್ಲಿ ಎನ್ ಜಿಒ ಗ್ರೀನ್ ಪೀಸ್ ಸಮಸ್ಯೆಗೆ ಸಿಕ್ಕಿಹಾಕಿಕೊಂಡಿತು. ಸಂಸ್ಥೆಯ ಉದ್ಯೋಗಿಯೊಬ್ಬರ ಮೇಲೆ ಸಹೋದ್ಯೋಗಿಗಳು ಅತ್ಯಾಚಾರದ ಆರೋಪ ಮಾಡಿದ್ದರು.

ದೂರದರ್ಶನಕ್ಕೂ ತಟ್ಟಿದ ಕಳಂಕ

ದೂರದರ್ಶನಕ್ಕೂ ತಟ್ಟಿದ ಕಳಂಕ

2015 ರಲ್ಲಿ ದೂರದರ್ಶನಕ್ಕೂ ಕಳಂಕ ಮೆತ್ತಿಕೊಂಡಿತು. ಆಕಾಶವಾಣಿಯ ಅಸಿಸ್ಟೆಂಟ್ ಡೈರೆಕ್ಟರ್ ಮೇಲೆ ವರ್ಷದಿಂದ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ದೂರು ದಾಖಲಾಗಿತ್ತು.

ಮಧ್ಯ ಪ್ರದೇಶ ನ್ಯಾಯಾಧೀಶ

ಮಧ್ಯ ಪ್ರದೇಶ ನ್ಯಾಯಾಧೀಶ

ಆಗಸ್ಟ್ 4. 2014 ರಲ್ಲಿ ಶಾಕಿಂಗ್ ನ್ಯೂಸ್ ಒಂದು ಹೊರಬಿದ್ದಿತ್ತು. ಜಿಲ್ಲಾ ಅಡಿಶನಲ್ ಮಹಿಳಾ ನ್ಯಾಯಾಧೀಶರೊಬ್ಬರು ಮಧ್ಯಪ್ರದೇಶ ಹೈ ಕೋರ್ಟ್ ನ್ಯಾಯಾಧೀಶರಿಂದ ದೌರ್ಜನ್ಯವಾಗುತ್ತಿದೆ ಎಂದು ಆರೋಪಿಸಿ ರಾಜೀನಾಮೆ ನೀಡಿದ್ದರು. ಆದರೆ ಆರೋಪ ಎದುರಿಸುತ್ತಿದ್ದ ನ್ಯಾಯಾಧೀಶ ಎಸ್ ಕೆ ಗಂಗೆಲೆ ಕ್ಲೀನ್ ಚೀಟ್ ಪಡೆದುಕೊಂಡಿದ್ದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Crime against women refuses to die down in India. Everyday, cases related to molestation, harassment and sexual assault or abuse are reported and many cases even go unreported. Sexual harassment at workplace has also become common. In the recent past, there have been numerous cases related to sexual harassment of women employees by their seniors, in the corporate sector as wells as in the government jobs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more