ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಗಳಲ್ಲಿ: ಕ್ರೈಸ್ತರಿಂದ ಶುಭ ಶುಕ್ರವಾರ ಆಚರಣೆ

By Mahesh
|
Google Oneindia Kannada News

ಬೆಂಗಳೂರು, ಏ.18: ಕ್ರೈಸ್ತ ಸಮುದಾಯ ಭಯ ಭಕ್ತಿ, ಪ್ರೇಮ, ತ್ಯಾಗ ಭಾವದಿಂದ ಗುಡ್ ಫ್ರೈಡೇ ಅಥವಾ ಶುಭ ಶುಕ್ರವಾರ ಆಚರಿಸಿದ್ದಾರೆ. ಕ್ರೈಸ್ತರಿಗೆ ಬಹಳ ಪವಿತ್ರವಾದ ಈ ದಿನ ಭಾರತದೆಲ್ಲೆಡೆ ವಿವಿಧ ರೀತಿಯಲ್ಲಿ ಆಚರಿಸಿದರೂ ಕರುಣಾಮಯ ದೇವ ಯೇಸು ಕ್ರಿಸ್ತನೊಬ್ಬನೇ ನಮ್ಮೆಲ್ಲರನ್ನು ಕಾಣುವವನು ಎಂಬ ಭಾವ ಎಲ್ಲರನ್ನೂ ಸಾಮಾನ್ಯವಾಗಿ ಕಂಡು ಬರುತ್ತದೆ.

ಕ್ರೈಸ್ತರು ತಮ್ಮದೇ ಆದ ವಿಶಿಷ್ಠ ರೀತಿಯಲ್ಲಿ ಈ ದಿನವನ್ನು ಕಳೆಯುತ್ತಾರೆ. ಸಾಮಾನ್ಯವಾಗಿ ಎಲ್ಲಾ ಚರ್ಚುಗಳಲ್ಲೂ ಬೆಳಿಗ್ಗೆಯಿಂದಲೇ ಪ್ರಾರ್ಥನೆಗಳು ನಡೆಯುತ್ತವೆ. ಯೇಸು ಕ್ರಿಸ್ತ ತನ್ನ ಜೀವನವಿಡೀ ತಾನು ಸಾರಿದ ಶಾಂತಿ ಪ್ರೀತಿ ಕ್ಷಮೆಯ ಸಂದೇಶವನ್ನು ಪಾಲಿಸಿದ್ದನ್ನು ಹಾಡು, ನೃತ್ಯ,ನಾಟಕ, ಗೀತ ರೂಪಕಗಳ ಮೂಲಕ ಸಾರಲಾಗುತ್ತದೆ.

ಯೇಸು ಕ್ರಿಸ್ತ ಬಂಧನಕ್ಕೆ ಒಳಗಾಗುವುದರಿಂದ ಹಿಡಿದು ಶಿಲುಬೆಯ ಮೇಲೆ ಸಾಯುವ ತನಕದ ಘಟನೆಗಳನ್ನು 14 ಭಾಗಗಳಾಗಿ ವಿಂಗಡಿಸಿ, ಪ್ರತಿಯೊಂದು ಭಾಗವನ್ನೂ ಅವಲೋಕಿಸುತ್ತಾ, ಪ್ರಾರ್ಥಿಸುತ್ತಾ ಸಾಗುವ ಪ್ರಕ್ರಿಯೆಗೆ 'ಶಿಲುಬೆ ಹಾದಿ' ಎಂಬ ಹೆಸರಿದೆ. ಇದನ್ನು ಶುಭ ಶುಕ್ರವಾರದಂದು ವಿಶೇಷವಾಗಿ ನಡೆಸಲಾಗುತ್ತದೆ.

ಬಹುತೇಕ ಕ್ರೈಸ್ತರು ಈ ದಿನವನ್ನು ಉಪವಾಸದ ದಿನವಾಗಿಯೂ ಕಳೆಯುತ್ತಾರೆ. ಬೇಸಿಗೆಯ ಬಿರುಬಿಸಿಲಿನಲ್ಲಿ ನಡೆಯುವ ಪ್ರಾರ್ಥನೆಗಳಲ್ಲಿ ಭಾಗವಹಿಸುವ ಜನರ ದಣಿವಾರಿಸಲು ಕೆಲವರು ನಿಂಬೆರಸ, ಮಜ್ಜಿಗೆಗಳನ್ನು ಪ್ರಾರ್ಥನೆಗಳು ಮುಗಿದ ಮೇಲೆ ದೇವಾಲಯದ ಅವರಣದಲ್ಲಿ ಹಂಚುವುದನ್ನೂ ಕಾಣಬಹುದು.

ಪ್ರಾರ್ಥನೆ ಮುಗಿದ ನಂತರವೂ ಕ್ರೈಸ್ತರು ವಿಷಾದ ಭಾವದಿಂದಲೇ ಮನೆಯತ್ತ ಹೆಜ್ಜೆ ಹಾಕುತ್ತಾರೆ. ಈ ಒಂದು ಭಾವ ಭಾನುವಾರದ ಈಸ್ಟರ್ ಹಬ್ಬದ ಪ್ರಾರಂಭದ ತನಕವೂ ಮುಂದುವರಿಯುತ್ತದೆ. ಯೇಸುಕ್ರಿಸ್ತನ ಶಾಂತಿ ಪ್ರೀತಿ ಸಹನೆಯ ಸಂದೇಶದಿಂದಲೇ ಗುಡ್ ಫ್ರೈಡೇಗೆ ಜಾತಿ ಧರ್ಮ ಮೀರಿದ ಮನ್ನಣೆ ಮಹತ್ವ ಇಂದಿಗೂ ಇದೆ.

ಗುಡ್ ಫ್ರೈಡೇಗೆ ಜಾತಿ ಧರ್ಮ ಮೀರಿದ ಮನ್ನಣೆ

ಗುಡ್ ಫ್ರೈಡೇಗೆ ಜಾತಿ ಧರ್ಮ ಮೀರಿದ ಮನ್ನಣೆ

ನವದೆಹಲಿಯಲ್ಲಿ ಮಗುವೊಂದು ಯೇಸುಕ್ರಿಸ್ತನ ಪಾದಕ್ಕೆ ಮುತ್ತಿಡುತ್ತಿರುವ ಚಿತ್ರ. ಸೇಕ್ರೇಡ್ ಹಾರ್ಟ್ ಕೆಥೆಡ್ರಿಲ್ ನಿಂದ ಬಂದಿದೆ. ಚಿತ್ರ ಕೃಪೆ: ಪಿಟಿಐ

ಕೇರಳದಲ್ಲಿ ಶುಭ ಶುಕ್ರವಾರ ವಿಶಿಷ್ಟ ಅಚರಣೆ

ಕೇರಳದಲ್ಲಿ ಶುಭ ಶುಕ್ರವಾರ ವಿಶಿಷ್ಟ ಅಚರಣೆ

ಕೇರಳದಲ್ಲಿ ಶುಭ ಶುಕ್ರವಾರ ವಿಶಿಷ್ಟ ಅಚರಣೆ ಕಾಣಬಹುದಾಗಿತ್ತು. ಪರಮ ಪಿತ(ಯೇಸು ಕ್ರಿಸ್ತ) ಅನುಭವಿಸಿದ ಕಷ್ಟ ಕೋಟಲೆಯ ಚಿತ್ರಣವನ್ನು ನೀಡಲಾಗುತ್ತದೆ. ಶಿಲುಬೇಗೇರಿದ ದೃಶ್ಯ ಹೋಲಿ ಕ್ರಾಸ್ ಹೊತ್ತು ಸಾಗುವ ದೃಶ್ಯ ಅನುಕರಿಸಲಾಗುತ್ತದೆ.

ಕ್ರೈಸ್ತ ಸಮುದಾಯದಿಂದ ಶಾಂತಿ ಪ್ರಾರ್ಥನೆ

ಕ್ರೈಸ್ತ ಸಮುದಾಯದಿಂದ ಶಾಂತಿ ಪ್ರಾರ್ಥನೆ


ಕ್ರೈಸ್ತ ಸಮುದಾಯದಿಂದ ವಿಶ್ವ ಶಾಂತಿಗಾಗಿ ಎಲ್ಲೆಡೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಮಕ್ಕಳು, ವೃದ್ಧರು ಎಲ್ಲರೂ ದೇವನ ಸುತನ ಪವಿತಾತ್ಮರ ಹೃದಯದಲ್ಲಿ amen ಎಂದು ಹೇಳುತ್ತಾರೆ

 ಕೊಯಮತ್ತೂರಿನಲ್ಲಿ ಗುಡ್ ಫ್ರೈಡೇ ಆಚರಣೆ

ಕೊಯಮತ್ತೂರಿನಲ್ಲಿ ಗುಡ್ ಫ್ರೈಡೇ ಆಚರಣೆ

ಕೊಯಮತ್ತೂರಿನಲ್ಲಿ ಗುಡ್ ಫ್ರೈಡೇ ಆಚರಣೆ ಸಂದರ್ಭದಲ್ಲಿ ಉಕ್ಕಾಡಂ ಸೆಬಾಸ್ಟಿಯನ್ ಚರ್ಚ್ ನಲ್ಲಿ ಹೋಲಿ ಕ್ರಾಸ್ ಹೊತ್ತ ಕ್ರೈಸ್ತ ಧರ್ಮೀಯ ಸಾಗುತ್ತಿದ್ದಾರೆ.

English summary
Good Friday was observed with fasting and prayers in the national capital, Delhi on Friday.Good Friday marks the crucifixion of Jesus Christ and is observed by devout Christians with prayers and fasts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X