ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಹ್ಮಪುತ್ರ ನದಿ ನಾಡಲ್ಲಿ ಪ್ರವಾಹಕ್ಕೆ ಜನಜೀವನ ತತ್ತರ

By Mahesh
|
Google Oneindia Kannada News

ಗುವಾಹಟಿ, ಜೂ.27: ಅಸ್ಸಾಂನಲ್ಲಿ ಕುಂಭದ್ರೋಣ ಮಳೆ, ಫ್ಲಾಶ್ ಫ್ಲಡ್ ಗೆ ಜನತೆ ತತ್ತರ. ಅನೇಕ ಕಡೆ ಭೂ ಕುಸಿತದ ಪರಿಣಾಮ ಬ್ರಹ್ಮಪುತ್ರ ನದಿ ನಾಡಿನಲ್ಲಿ ಜನ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಭಾರಿ ಮಳೆ ಗಾಳಿಗೆ ಸಿಲುಕಿ 7 ಜನ ಸಾವನ್ನಪ್ಪಿದ್ದರೆ, 33ಕ್ಕೂ ಅಧಿಕ ಗ್ರಾಮದ ಜನತೆ ಕಂಗಾಲಾಗಿದ್ದಾರೆ. ಈಶಾನ್ಯ ರಾಜ್ಯಗಳ ಮಳೆಯ ಚಿತ್ರಗಳು ಇಲ್ಲಿವೆ.

ಮುಖ್ಯಮಂತ್ರಿ ತರುಣ್ ಗೊಗಾಯ್ ಅವರ ನಿವಾಸಕ್ಕೆ ಸಮೀಪದಲ್ಲೇ ಪ್ರವಾಹ ಹಾದು ಹೋಗಿದೆ. ಕಳೆದ 15 ಗಂಟೆಗಳಿಂದ ಸತತವಾಗಿ ಮಳೆ ಸುರಿಯುತ್ತಿದ್ದು, ರಾಜ್ ಘರ್, ತರುಣ್ ನಗರ್ ಪ್ರದೇಶದಲ್ಲಿ ಭಾರಿ ಮಳೆಯಿಂದ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯವಾಗಿತ್ತು. ನಂತರ ವಿದ್ಯುತ್ ಬರುತ್ತಿದ್ದಂತೆ ನಾಲ್ವರು ವ್ಯಕ್ತಿಗಳು ವಿದ್ಯುತ್ ಸಂಪರ್ಕಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ. [2013ರಲ್ಲಿ ಪ್ರಕೃತಿ ವಿಕೋಪಕ್ಕೆ ನಲುಗಿದ ಅಸ್ಸಾಂ]

ಅರುಣಾಚಲ ಪ್ರದೇಶದಲ್ಲಿ ಕಳೆದ 3 ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಅಲ್ಲಿನ ಸುತ್ತಮುತ್ತಲಿನ ಗ್ರಾಮಗಳಾದ ಲಕ್ಷ್ಮಿಪುರ, ದರ್ರಂಗ್, ಸೋನಿಪುರ, ಉದಲ್‌ಪುರಿಯಲ್ಲಿ ಪ್ರವಾಹ ಪ್ರಾರಂಭವಾಗಿದೆ. ಸರ್ಕಾರಿ ಕಚೇರಿಗಳು ಬಂದ್ ಆಗಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ.

ಅಸ್ಸಾಂನ ಜೀವನದಿ ಬ್ರಹ್ಮಪುತ್ರಾ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಜೋಹ್ರಾತ್ ನಿಮತಿಘಾಟ್ ಪ್ರದೇಶದಲ್ಲಿ ಹೆಚ್ಚಿನ ಆರ್ಭಟ ಕಂಡು ಬಂದಿದೆ. ಅಸ್ಸಾಂ ರಾಜ್ಯ ಪ್ರಕೃತಿ ವಿಕೋಪ ನಿರ್ವಹಣೆ ಪ್ರಾಧಿಕಾರ(ASDMA) ಮಾಹಿತಿ ಪ್ರಕಾರ ಧೆಮಾಜಿ, ನಾಗಾಂವ್ ಜಿಲ್ಲೆಗಳ 33 ಗ್ರಾಮಗಳ 10,000 ಜನರು ಕಳೆದ 24 ಗಂಟೆಗಳಲ್ಲಿ ಪ್ರವಾಹಕ್ಕೆ ಸಿಲುಕಿದ್ದಾರೆ.

ಬ್ರಹ್ಮಪುತ್ರ ಅಪಾಯ ಮಟ್ಟ ಮೀರಿದೆ

ಬ್ರಹ್ಮಪುತ್ರ ಅಪಾಯ ಮಟ್ಟ ಮೀರಿದೆ

ಬ್ರಹ್ಮಪುತ್ರ ನದಿಯು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದ್ದು, ಸುತ್ತಮುತ್ತಲಿನ ಗ್ರಾಮಗಳಲ್ಲಿ ಪ್ರವಾಹ ಭೀತಿ ಶುರುವಾಗಿದೆ. ರಾಷ್ಟ್ರೀಯ ಹೆದ್ದಾರಿಯೂ ಸೇರಿದಂತೆ ತೇಜ್‌ಪುರ, ಧೇಮ್‌ಜಿ, ಲಕ್ಷ್ಮೀಪುರ ಸೇರಿದಂತೆ ಇನ್ನೂ 15 ಗ್ರಾಮಗಳ ಸಂಪರ್ಕ ಖಡಿತಗೊಂಡಿದೆ. ನೆರೆ ಪೀಡಿತ ಪ್ರದೇಶಗಳಲ್ಲಿ ಒಂದಾದ ಮಾರಿಗಾಂವ್‌ನಲ್ಲಿ ರಕ್ಷಣಾ ಕಾರ್ಯಾಚರಣೆ ಪ್ರಾರಂಭವಾಗಿದ್ದು, ಭದ್ರತಾ ಸಿಬ್ಬಂದಿಗಳು ಜನರನ್ನು ಸುರಕ್ಷಿತ ಸ್ಥಳಗಳಿಗೆ ಕೊಂಡೊಯ್ಯುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ.

ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ

ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ

ನೆರೆ ಸಂತ್ರಸ್ಥರಿಗೆ ಪ್ರಥಮ ಚಿಕಿತ್ಸೆ ಹಾಗೂ ಆಹಾರ ವ್ಯವಸ್ಥೆ ಮಾಡುವ ಕಾರ್ಯದಲ್ಲಿ ರಕ್ಷಣಾ ಪಡೆಗಳು ತೊಡಗಿವೆ. ಭದ್ರತಾ ಪಡೆಗಳೊಂದಿಗೆ ಸ್ಥಳೀಯ ಸಂಘ ಸಂಸ್ಥೆಗಳು ಕೈಜೋಡಿಸಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಾಯಕವಾಗಿವೆ. ಅಲ್ಲದೆ ಅಧಿಕಾರಿಗಳಿಗೆ ಗ್ರಾಮಗಳ ಕುರಿತು ಮಾಹಿತಿ ನೀಡುತ್ತಿವೆ.

ಚಿತ್ರದಲ್ಲಿ ಶುಕ್ರವಾರ ಮಳೆಯ ನಡುವೆ ಶಾಲೆಗೆ ತೆರಳುತ್ತಿರುವ ವಿದ್ಯಾರ್ಥಿನಿಯರು. ಚಿತ್ರ ಕೃಪೆ: ಪಿಟಿಐ

ಕಾಮಾಕ್ಯ ದೇಗುಲದ ಭಕ್ತರು

ಕಾಮಾಕ್ಯ ದೇಗುಲದ ಭಕ್ತರು

ಅಸ್ಸಾಂನ ನಿಲಾಚಲ್ ಬೆಟ್ಟದ ಕಾಮಾಕ್ಯ ದೇಗುಲದಲ್ಲಿ ನಡೆಯುವ ಅಂಬುಬಾಸಿ ಮೇಳಕ್ಕಾಗಿ ಬಂದಿರುವ ಭಕ್ತರಿಗೆ ರಕ್ಷಣೆ ಒದಗಿಸುತ್ತಿರುವ ಯೋಧರು. PTI Photo

ಸಂಚಾರಕ್ಕೆ ರಬ್ಬರ್ ಬೋಟ್ ಬಳಕೆ

ಸಂಚಾರಕ್ಕೆ ರಬ್ಬರ್ ಬೋಟ್ ಬಳಕೆ

ಗುವಾಹಟಿಯಲ್ಲಿ ಸಂಚಾರಕ್ಕೆ ರಬ್ಬರ್ ಬೋಟ್ ಬಳಕೆ ಮಾಡಿಕೊಳ್ಳುವಂತೆ ಜಿಲ್ಲಾಡಳಿತ ಸೂಚಿಸಿದೆ. PTI Photo

ಇಂಥ ಭೀಕರ ಪ್ರವಾಹವನ್ನು ನೋಡೇ ಇಲ್ಲ

ಇಂಥ ಭೀಕರ ಪ್ರವಾಹವನ್ನು ನೋಡೇ ಇಲ್ಲ ಎಂದು ಟ್ವೀಟ್ ಮಾಡಿರುವ ಗುವಾಹಟಿ ಜನ

English summary
Flash floods ravaged Guwahati and four districts in Assam, killing seven persons, including three in landslides in the Koinadhana area close to chief minister Tarun Gogoi's residence in the state capital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X