ಚಿತ್ರಗಳಲ್ಲಿ: ಚೆನ್ನೈ ತಾರೆಯರು, ಮುಂಬೈ ನೀರೆಯರು

Posted By:
Subscribe to Oneindia Kannada

ಮುಂಬೈ, ಏ.24: ಲೋಕಸಭಾ ಚುನಾವಣೆಯ 6ನೇ ಹಂತದ ಮತದಾನ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ. ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ ಒಟ್ಟು 11 ರಾಜ್ಯಗಳ 117 ಲೋಕಸಭೆ ಕ್ಷೇತ್ರಗಳಿಗೆ ಗುರುವಾರ ಮತದಾನ ನಡೆಯುತ್ತಿದೆ. ದೇಶದೆಲ್ಲೆಡೆಯಿಂದ ಸಂಗ್ರಹಿತವಾಗಿರುವ ಚಿತ್ರಗಳು ಇಲ್ಲಿವೆ.

ಗುರುವಾರ ಮತದಾನ ಪ್ರಕ್ರಿಯೆ ಆರಂಭಗೊಳ್ಳುತ್ತಿದ್ದಂತೆ ವಿವಿಧ ಕ್ಷೇತ್ರಗಳ ಗಣ್ಯರು ಬೆಳಗ್ಗೆ 7 ಗಂಟೆಗೆ ಮತಗಟ್ಟೆಗಳಿಗೆ ತೆರಳಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಇವರಲ್ಲಿ ಸೂಪರ್ ಸ್ಟಾರ್ ರಜನಿ ಕಾಂತ್ ಪ್ರಮುಖರಾಗಿದ್ದಾರೆ., ಚೆನ್ನೈನ ಸ್ಟೆಲ್ಲಾ ಮೇರಿ ಶಾಲೆಯ ಮತಗಟ್ಟೆಗೆ ರಜನಿ ಬಂದಾಗ ಮತಯಂತ್ರವೇ ಇನ್ನೂ ಸಿದ್ಧಗೊಂಡಿರಲಿಲ್ಲವಂತೆ.

ಮತ ಚಲಾವಣೆ ಮಾಡಲು ಯಂತ್ರದ ಮುಂದೆ ನಿಂತ ರಜನಿ ಕಾದಿದ್ದೇ ಬಂತು. ಸುಮಾರೂ 10 ನಿಮಿಷಗಳ ನಂತರ ಸೂಪರ್ ಸ್ಟಾರ್ ಅವರಿಗೆ ವೋಟ್ ಮಾಡುವಂತೆ ಅಧಿಕಾರಿಗಳು ಸೂಚಿಸಿದ ಘಟನೆಯೂ ವರದಿಯಾಗಿದೆ. ಇನ್ನೊಂದೆಡೆ ಸೇಲಂಪೇಟ್ ನಲ್ಲಿ ಮತದಾನ ಮಾಡಿದ ಕಮಲ್ ಹಾಸನ್ ಅವರು ಸಮರ್ಥ ಸರ್ಕಾರದ ನಿರೀಕ್ಷೆಯಲ್ಲಿ ಮತದಾನ ಮಾಡಿದ್ದೇನೆ. ನೀವು ತಪ್ಪದೇ ಮತ ಹಾಕಿ ಎಂದಿದ್ದಾರೆ. ನಟ ಅಜಿತ್, ವಿಜಯ್, ನಟಿ ಕಮ್ ರಾಜಕಾರಣಿ ಖುಷ್ಬೂ ಮತದಾನ ಮಾಡಿದ್ದಾರೆ. ತಮಿಳುನಾಡು ಸಿಎಂ ಜಯಲಲಿತಾ ಕೂಡಾ ಮುಂಜಾನೆಯೇ ಮತದಾನ ಮಾಡಿದ್ದಾರೆ.

ಅತ್ತ ಮುಂಬೈನಲ್ಲಿ ಬೆಳ್ಳಂಬೆಳ್ಳಗೆ ಮತದಾನ ಮಾಡಿದವರಲ್ಲಿ ಅಮೀರ್ ಖಾನ್, ಜಾನ್ ಅಬ್ರಹಾಂ ಮೊದಲಿಗರು. ನಂತರ ನಟಿಮಣಿಯರದ್ದೇ ಕಾರು ಬಾರು. ಶಿಲ್ಪಾ ಶೆಟ್ಟಿ, ಪ್ರೀತಿ ಜಿಂಟಾ, ವಿದ್ಯಾ ಬಾಲನ್, ಸೋನಮ್ ಕಪೂರ್ ಮತದಾನ ಮಾಡಿದರೆ, ಗಾಯಕಿ ಶ್ರೇಯಾ ಘೋಷಾಲ್ ಮತದಾನ ಮಾಡಿ ಫೇಸ್ ಬುಕ್ ನಲ್ಲಿ ಹಾಕಿರುವ ಪೋಸ್ಟ್ ಗೆ ಬರೋಬ್ಬರಿ 1 ಲಕ್ಷಕ್ಕೂ ಮೀರಿ ಲೈಕ್ಸ್ ಬಿದ್ದಿವೆ. ಸೆಲೆಬ್ರಿಟಿಗಳು ಕೂಡಾ ತಮ್ಮ ಮತದಾನದ ಚಿತ್ರಗಳನ್ನು ಟ್ವೀಟ್ ಮಾಡುವ ಮೂಲಕ ಸಂದೇಶ ಸಾರಿದ್ದಾರೆ.

ಕಮಲ್ ಹಾಸನ್, ಗೌತಮಿ ಅವರಿಂದ ಮತದಾನ
  

ಕಮಲ್ ಹಾಸನ್, ಗೌತಮಿ ಅವರಿಂದ ಮತದಾನ

ನಟ ಕಮಲ್ ಹಾಸನ್ ಹಾಗೂ ಗೌತಮಿ ಅವರು ಚೆನ್ನೈನ ಆಳ್ವಾರ್ ಪೇಟ್ ಮತಗಟ್ಟೆಯಲ್ಲಿ ಮತದಾನ ಮಾಡಿದರು. ದೇಶದಲ್ಲಿ ಬದಲಾವಣೆ ಗಾಳಿ ಬೀಸಿದೆ. ಸಮರ್ಥ ದೇಶಕ್ಕಾಗಿ ಮತಹಾಕಿದ್ದೇನೆ ಎಂದರು

ಸೂಪರ್ ಸ್ಟಾರ್ ರಜನಿ ಕಾಯಿಸಿದ ಮತಯಂತ್ರ
  

ಸೂಪರ್ ಸ್ಟಾರ್ ರಜನಿ ಕಾಯಿಸಿದ ಮತಯಂತ್ರ

ಸೂಪರ್ ಸ್ಟಾರ್ ರಜನಿ ಕಾಂತ್ ಅವರನ್ನೇ ಕಾಯುವಂತೆ ಮಾಡಿದ ಇವಿಎಂ.. 10 ನಿಮಿಷ ಕಾದಿದ್ದ ರಜನಿ ನಂತರ ವೋಟ್ ಮಾಡಿದರು.

ನಟಿ ಕಮ್ ರಾಜಕಾರಣಿ ಖುಷ್ಬೂ ಮತದಾನ
  

ನಟಿ ಕಮ್ ರಾಜಕಾರಣಿ ಖುಷ್ಬೂ ಮತದಾನ

ಚೆನ್ನೈನಲ್ಲಿ ನಟಿ ಕಮ್ ರಾಜಕಾರಣಿ ಖುಷ್ಬೂ ಮತದಾನ ಮಾಡಿದ್ದಾರೆ.

ಶ್ರೇಯಾಘೋಷಲ್ ಮತದಾನದ ಚಿತ್ರ
  

ಶ್ರೇಯಾಘೋಷಲ್ ಮತದಾನದ ಚಿತ್ರ

ಶ್ರೇಯಾಘೋಷಲ್ ಮತದಾನದ ಚಿತ್ರ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದು 145,163 ಲೈಕ್ಸ್ 4914 ಕಾಮೆಂಟ್ಸ್ 1795 ಬಾರಿ ಷೇರ್ ಆಗಿದೆ(ಸಮಯ 12.30)

  

ಶಿಲ್ಪಾ ಶೆಟ್ಟಿ ಕುಂದ್ರಾ ಮತದಾನದ ಚಿತ್ರ

ನಟಿ, ಐಪಿಎಲ್ ತಂಡ ರಾಜಸ್ಥಾನ್ ರಾಯಲ್ಸ್ ಒಡತಿ ಶಿಲ್ಪಾ ಶೆಟ್ಟಿ ಕುಂದ್ರಾ ಮತದಾನದ ಚಿತ್ರ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ

ಕಮಲ್ ಹಾಸನ್, ಗೌತಮಿ ಅವರಿಂದ ಮತದಾನ
  

ಕಮಲ್ ಹಾಸನ್, ಗೌತಮಿ ಅವರಿಂದ ಮತದಾನ

ನಟ ಕಮಲ್ ಹಾಸನ್ ಹಾಗೂ ಗೌತಮಿ ಅವರು ಚೆನ್ನೈನ ಆಳ್ವಾರ್ ಪೇಟ್ ಮತಗಟ್ಟೆಯಲ್ಲಿ ಮತದಾನ ಮಾಡಿದರು. ದೇಶದಲ್ಲಿ ಬದಲಾವಣೆ ಗಾಳಿ ಬೀಸಿದೆ. ಸಮರ್ಥ ದೇಶಕ್ಕಾಗಿ ಮತಹಾಕಿದ್ದೇನೆ ಎಂದರು

ಚಿತ್ರಗಳಲ್ಲಿ: ಚೆನ್ನೈ ತಾರೆಯರು
  

ಚಿತ್ರಗಳಲ್ಲಿ: ಚೆನ್ನೈ ತಾರೆಯರು

ಚಿತ್ರಗಳಲ್ಲಿ: ಚೆನ್ನೈ ತಾರೆಯರು, ಮುಂಬೈ ನೀರೆಯರು

ನಟ ಸೂರ್ಯ ಅವರು ಮತಗಟ್ಟೆಯತ್ತ
  

ನಟ ಸೂರ್ಯ ಅವರು ಮತಗಟ್ಟೆಯತ್ತ

ಕಾಲು ಮುರಿತದ ನೋವಿನ ನಡುವೆಯೂ ನಟ ಸೂರ್ಯ ಅವರು ಮತಗಟ್ಟೆಯತ್ತ ಸಾಗುತ್ತಿರುವ ಚಿತ್ರ

ಸಂಜಯ್ ‌ದತ್ ಸಹೋದರಿ ಪ್ರಿಯಾದತ್
  

ಸಂಜಯ್ ‌ದತ್ ಸಹೋದರಿ ಪ್ರಿಯಾದತ್

ಬಾಲಿವುಡ್ ನಟ ಸಂಜಯ್ ‌ದತ್ ಸಹೋದರಿ ಪ್ರಿಯಾದತ್ ದಂಪತಿ ಅವರಿಂದ ಮತದಾನ

ನಟಿ ತ್ರೀಶಾ ಮತದಾನ ಮಾಡಿದ ಚಿತ್ರ
  

ನಟಿ ತ್ರೀಶಾ ಮತದಾನ ಮಾಡಿದ ಚಿತ್ರ

ಕಾಲಿವುಡ್, ಟಾಲಿವುಡ್ ನಟಿ ತ್ರೀಶಾ ಮತದಾನ ಮಾಡಿದ ಚಿತ್ರ

ಅಜಿತ್ ಕುಟುಂಬದಿಂದ ಮತದಾನ
  

ಅಜಿತ್ ಕುಟುಂಬದಿಂದ ಮತದಾನ

ನಟ ಅಜಿತ್ ಪತ್ನಿ ಶಾಲಿನಿ ಹಾಗೂ ಕುಟುಂಬದಿಂದ ಮತದಾನ

ನಟ ಪ್ರಸನ್ನ ಅವರಿಂದ ಮತದಾನ
  

ನಟ ಪ್ರಸನ್ನ ಅವರಿಂದ ಮತದಾನ

ಚೆನ್ನೈ: ನಟ ಪ್ರಸನ್ನ ಅವರಿಂದ ಮತದಾನ

ಚೆನ್ನೈ ತಾರೆ ನೀಲಿಮಾ ಮತದಾನ
  

ಚೆನ್ನೈ ತಾರೆ ನೀಲಿಮಾ ಮತದಾನ

 ಚೆನ್ನೈ ತಾರೆ ನೀಲಿಮಾ ಮತದಾನ

ನಟ ನಾಸರ್ ಅವರಿಂದ ಮತದಾನ
  

ನಟ ನಾಸರ್ ಅವರಿಂದ ಮತದಾನ

ಚೆನ್ನೈ: ನಟ ನಾಸರ್ ಅವರಿಂದ ಮತದಾನ

ನಟ ವಿಜಯ್ ಮತಗಟ್ಟೆ ಪ್ರವೇಶ
  

ನಟ ವಿಜಯ್ ಮತಗಟ್ಟೆ ಪ್ರವೇಶ

ನಟ ವಿಜಯ್ ಅವರಿಂದ ಮತಗಟ್ಟೆ ಪ್ರವೇಶ

ನಟ ಮನೋಬಲಂ ಅವರಿಂದ ಮತದಾನ
  

ನಟ ಮನೋಬಲಂ ಅವರಿಂದ ಮತದಾನ

ಹಾಸ್ಯ ನಟ ಮನೋಬಲಂ ಅವರಿಂದ ಮತದಾನ

ನಟ ವಿಜಯ್ ಅವರಿಂದ ಮತದಾನ
  

ನಟ ವಿಜಯ್ ಅವರಿಂದ ಮತದಾನ

ಚೆನ್ನೈ: ನಟ ವಿಜಯ್ ಅವರಿಂದ ಮತದಾನ

ನಟ ವಿವೇಕ್ ಮತದಾನ ಮಾಡಿದ ಚಿತ್ರ
  

ನಟ ವಿವೇಕ್ ಮತದಾನ ಮಾಡಿದ ಚಿತ್ರ

ಹಾಸ್ಯ ನಟ ವಿವೇಕ್ ಮತದಾನ ಮಾಡಿದ ಚಿತ್ರ

ನಟ ಜಯಂ ರವಿ ಅವರಿಂದ ಮತದಾನ
  

ನಟ ಜಯಂ ರವಿ ಅವರಿಂದ ಮತದಾನ

ಚೆನ್ನೈ ನಟ ಜಯಂ ರವಿ ಅವರಿಂದ ಮತದಾನ

ನಟಿ ವರಲಕ್ಷ್ಮಿ ಶರತ್ ಕುಮಾರ್
  

ನಟಿ ವರಲಕ್ಷ್ಮಿ ಶರತ್ ಕುಮಾರ್

ಚೆನ್ನೈ ನಟಿ ವರಲಕ್ಷ್ಮಿ ಶರತ್ ಕುಮಾರ್ ಅವರಿಂದ ಮತದಾನ

ಕವಿ ವೈರಮುತ್ತು ಅವರಿಂದ ಮತದಾನ
  

ಕವಿ ವೈರಮುತ್ತು ಅವರಿಂದ ಮತದಾನ

ಚೆನ್ನೈ ಕವಿ ವೈರಮುತ್ತು ಅವರಿಂದ ಮತದಾನ

ಮುಂಬೈನಲ್ಲಿ ನಟಿ ವಿದ್ಯಾ ಬಾಲನ್
  

ಮುಂಬೈನಲ್ಲಿ ನಟಿ ವಿದ್ಯಾ ಬಾಲನ್

ಮುಂಬೈನಲ್ಲಿ ನಟಿ ವಿದ್ಯಾ ಬಾಲನ್ ಅವರಿಂದ ಮತದಾನ

ಅಮೀರ್ ದಂಪತಿಯಿಂದ ಮತದಾನ
  

ಅಮೀರ್ ದಂಪತಿಯಿಂದ ಮತದಾನ

ಅಮೀರ್ ಖಾನ್ ಕಿರಣ್ ರಾವ್ ದಂಪತಿಯಿಂದ ಮತದಾನ

ಪ್ರೀತಿ ಜಿಂಟಾರಿಂದ ಮತದಾನ
  

ಪ್ರೀತಿ ಜಿಂಟಾರಿಂದ ಮತದಾನ

ದುಬೈನಿಂದ ಮುಂಬೈಗೆ ಬಂದು ಪ್ರೀತಿ ಜಿಂಟಾ ಮತದಾನ ಮಾಡಿದ್ದಾರೆ.

ಬರ್ಥ್ ಡೇ ಬಾಯ್ ಸಚಿನ್ ಮತದಾನ
  

ಬರ್ಥ್ ಡೇ ಬಾಯ್ ಸಚಿನ್ ಮತದಾನ

ಬರ್ಥ್ ಡೇ ಬಾಯ್ ಸಚಿನ್ ತೆಂಡೂಲ್ಕರ್ ಪತ್ನಿ ಅಂಜಲಿ ಅವರು ಮತದಾನ ಮಾಡಿದರು.

ನಟ ವಿಜಯ್ ಕಾಂತ್ ರಿಂದ ಮತದಾನ
  

ನಟ ವಿಜಯ್ ಕಾಂತ್ ರಿಂದ ಮತದಾನ

ನಟ ಕಮ್ ರಾಜಕಾರಣಿ ವಿಜಯ್ ಕಾಂತ್ ರಿಂದ ಮತದಾನ

ಸ್ಟಾಲಿನ್ ರಿಂದ ಮತದಾನ
  

ಸ್ಟಾಲಿನ್ ರಿಂದ ಮತದಾನ

ಚೆನ್ನೈನ ಗೋಪಾಲಾಪುರಂನಲ್ಲಿ ಡಿಎಂಕೆ ನಾಯಕ ಸ್ಟಾಲಿನ್ ಹಾಗೂ ಕರುಣಾನಿಧಿ ಮತ ಹಾಕಿದರು.

ಕರುಣಾನಿಧಿ ಅವರು ಮತಗಟ್ಟೆಯತ್ತ
  

ಕರುಣಾನಿಧಿ ಅವರು ಮತಗಟ್ಟೆಯತ್ತ

ಡಿಎಂಕೆ ಅಧಿನಾಯಕ, ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರು ಮತದಾನ ಮಾಡಿದರು.

  

ರಾಹುಲ್ ಬೋಸ್ ರಿಂದ ಟ್ವೀಟ್

ಮುಂಬೈನಲ್ಲಿ ಕಡಿಮೆ ಮತದಾನ ಆಗಿದೆ ಆದ್ರೆ, ಸೆಲಿಬ್ರಿಟಿಗಳು ಮಾತ್ರ ಎಲ್ಲರೂ ವೋಟ್ ಮಾಡಿ ಟ್ವೀಟ್ ಮಾಡಿದ್ದಾರೆ

ನಟ ಶಾರುಖ್ ಖಾನ್ ರಿಂದ ಮತದಾನ
  

ನಟ ಶಾರುಖ್ ಖಾನ್ ರಿಂದ ಮತದಾನ

ದುಬೈನಿಂದ ಬಂದ ನಟ ಶಾರುಖ್ ಖಾನ್ ರಿಂದ ಮತದಾನ ಮಾಡಿದರು.

ಅಭಿ ಐಶ್ ದಂಪತಿಯಿಂದ ಮತದಾನ
  

ಅಭಿ ಐಶ್ ದಂಪತಿಯಿಂದ ಮತದಾನ

ಮುಂಬೈನಲ್ಲಿ ಅಭಿಷೇಕ್ ಬಚ್ಚನ್, ಐಶ್ವರ್ಯ ರೈರಿಂದ ಮತದಾನ


English summary
The polling for the sixth phase of elections, which will seal the fate of several heavyweights, is underway. Here’s a look images from across the country. Bollywood, Kollywood celebrities queued up at polling booths on Thursday casted their vote for the Lok Sabha Election

Please Wait while comments are loading...