ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಸಭೆಯಲ್ಲಿ ಇಂದು; ಹವಾಮಾನ ಬದಲಾವಣೆ ಬಗ್ಗೆ ಚರ್ಚೆ

|
Google Oneindia Kannada News

ನವದೆಹಲಿ, ಡಿಸೆಂಬರ್ 21; ಲೋಕಸಭೆಯಲ್ಲಿ ಚುನಾವಣಾ ಸುಧಾರಣೆಗಳಿಗೆ ಸಂಬಂಧಿಸಿದ ಮಸೂದೆ ಚುನಾವಣಾ ಕಾನೂನುಗಳು (ತಿದ್ದುಪಡಿ) ಮಸೂದೆ, 2021ಯನ್ನು ಅಂಗೀಕಾರಗೊಳಿಸಲಾಗಿದೆ. ಪ್ರಜಾ ಪ್ರಾತಿನಿಧ್ಯ ಕಾಯ್ದೆಗೆ ತಿದ್ದುಪಡಿ ತರುವ ಮಸೂದೆಯನ್ನು ಮಂಡಿಸಲಾಗುತ್ತದೆ.

ರಾಜ್ಯಸಭೆಯ 12 ಸದಸ್ಯರ ಅಮಾನತು ವಿಚಾರ ಇನ್ನೂ ಬಗೆಹರಿದಿಲ್ಲ. ಸರ್ಕಾರ ಮತ್ತು ವಿಪಕ್ಷಗಳ ನಡುವಿನ ಮಾತುಕತೆ ವಿಫಲವಾಗಿದೆ. ಚಳಿಗಾಲದ ಅಧಿವೇಶನ ಆರಂಭಗೊಂಡ ಮೊದಲ ದಿನವೇ 12 ಸದಸ್ಯರನ್ನು ಅಮಾನತು ಮಾಡಲಾಗಿತ್ತು. ಡಿಸೆಂಬರ್ 23ರ ತನಕ ಅಧಿವೇಶನ ನಡೆಯಲಿದ್ದು, ಸದಸ್ಯರ ಅಮಾನತು ಇನ್ನೂ ವಾಪಸ್ ಪಡೆದಿಲ್ಲ.

ಲೋಕಸಭೆ: ಮತದಾರರ ಪಟ್ಟಿಗೆ 'ಆಧಾರ್' ಜೋಡಣೆ ಮಸೂದೆ ಮಂಡನೆಲೋಕಸಭೆ: ಮತದಾರರ ಪಟ್ಟಿಗೆ 'ಆಧಾರ್' ಜೋಡಣೆ ಮಸೂದೆ ಮಂಡನೆ

Parliament Winter

ಲೋಕಸಭೆಯಲ್ಲಿ ಇಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಕ್ಟ್ 1949, ಕಾಸ್ಟ್ ಅಂಡ್ ವರ್ಕ್ಸ್ ಅಕೌಂಟೆಂಟ್ಸ್ ಆಕ್ಟ್ 1959 ಮತ್ತು ಕಂಪನಿ ಸೆಕ್ರೆಟರಿ ಆಕ್ಟ್, 1980 ಅನ್ನು ತಿದ್ದುಪಡಿ ಮಾಡುವ ಮಸೂದೆಯನ್ನು ಮಂಡನೆ ಮಾಡಲಿದ್ದಾರೆ. ಹವಾಮಾನ ಬದಲಾವಣೆ ಕುರಿತು ಸಹ ಚರ್ಚೆ ನಡೆಯಲಿದೆ.

ಸಂಸತ್ ಅಧಿವೇಶನ 14ನೇ ದಿನ: ರಾಜ್ಯಸಭೆಯಲ್ಲಿ ಓಮಿಕ್ರಾನ್ ಸದ್ದು ಸಂಸತ್ ಅಧಿವೇಶನ 14ನೇ ದಿನ: ರಾಜ್ಯಸಭೆಯಲ್ಲಿ ಓಮಿಕ್ರಾನ್ ಸದ್ದು

ರಾಜ್ಯಸಭೆಯಲ್ಲಿ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಲೋಕಸಭೆಯಲ್ಲಿ ಅಂಗೀಕಾರಗೊಂಡ ಪ್ರಜಾಪ್ರತಿನಿಧಿ ಕಾಯ್ದೆ 1950 ಮತ್ತು ಪ್ರಜಾಪ್ರತಿನಿಧಿ ಕಾಯ್ದೆ 1951ಕ್ಕೆ ತಿದ್ದುಪಡಿ ತರುವ ಮಸೂದೆಯನ್ನು ಮಂಡನೆ ಮಾಡಲಿದ್ದಾರೆ.

ಸಂಸತ್‌ ಅಧಿವೇಶನ: ಸೇನಾ ಹೆಲಿಕಾಪ್ಟರ್‌ ಪತನದ ಬಗ್ಗೆ ರಾಜನಾಥ್ ಸಿಂಗ್ ವಿವರಣೆಸಂಸತ್‌ ಅಧಿವೇಶನ: ಸೇನಾ ಹೆಲಿಕಾಪ್ಟರ್‌ ಪತನದ ಬಗ್ಗೆ ರಾಜನಾಥ್ ಸಿಂಗ್ ವಿವರಣೆ

ಲೋಕಸಭೆಯಲ್ಲಿ 2021-2022ರ ಆರ್ಥಿಕ ವರ್ಷದ ಸೇವೆಗಳಿಗಾಗಿ ಹೆಚ್ಚಿನ ಮೊತ್ತಗಳ ಪಾವತಿ ಮತ್ತು ವಿನಿಯೋಗವನ್ನು ಅಧಿಕೃತಗೊಳಿಸುವ ಮಸೂದೆ ಅಂಗೀಕಾರಗೊಂಡಿದೆ. ರಾಜ್ಯಸಭೆಯಲ್ಲಿ ಇಂದು ಮಸೂದೆ ಮಂಡನೆ ಮಾಡಲಾಗುತ್ತದೆ.

English summary
The Lok Sabha passed the election laws (Amendment) bill 2021. While the Rajya Sabha gave its thumbs up to rectify errors in the narcotics drugs and psychotropic substances act.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X