ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹತ್ವ ಆದೇಶ ನೀಡಿದ ಮೋದಿಗೆ ಟ್ವಿಟ್ಟರಲ್ಲಿ ಬಹುಪರಾಕ್!

|
Google Oneindia Kannada News

Recommended Video

ನರೇಂದ್ರ ಮೋದಿ ಇಟ್ಟರು ಮಹತ್ವದ ನಡೆ

ನವದೆಹಲಿ, ಮೇ 31: ಪ್ರಧಾನಿಯಾಗಿ ಎರಡನೇ ಬಾರಿಗೆ ಅಧಿಕಾರ ಸ್ವೀಕರಿಸಿದ ನಂತರ ಮೋದಿ ನೇತೃತ್ವದಲ್ಲಿ ಶುಕ್ರವಾರದಂದು ಮೊಟ್ಟ ಮೊದಲ ಸಚಿವ ಸಂಪುಟ ಸಭೆ ನಡೆಸಲಾಯಿತು. ಪ್ರಧಾನ ಮಂತ್ರಿ ಸ್ಕಾಲರ್​ಶಿಪ್ ಯೋಜನೆಯಲ್ಲಿ ಮಹತ್ವದ ಬದಲಾವಣೆಯನ್ನು ಮೋದಿ ಘೋಷಿಸಿದ್ದಾರೆ.

ರಾಷ್ಟ್ರೀಯ ರಕ್ಷಣಾ ನಿಧಿ ಅಡಿಯಲ್ಲಿ ವಿದ್ಯಾರ್ಥಿವೇತನ ಯೋಜನೆಯಲ್ಲಿ ವಿದ್ಯಾರ್ಥಿಗಳಿಗೆ ಸಿಗುತ್ತಿದ್ದ ವಿದ್ಯಾರ್ಥಿವೇತನ ಹೆಚ್ಚಳ ಮಾಡಿ ಆದೇಶ ನೀಡಲಾಗಿದೆ.

In its first decision, Modi Cabinet hikes scholarship amount for martyrs kin

ಪ್ರಧಾನಿಯಾದ ಬಳಿಕ ಮೊದಲ ಮಹತ್ವದ ನಿರ್ಧಾರ ಪ್ರಕಟಿಸಿದ ಮೋದಿಪ್ರಧಾನಿಯಾದ ಬಳಿಕ ಮೊದಲ ಮಹತ್ವದ ನಿರ್ಧಾರ ಪ್ರಕಟಿಸಿದ ಮೋದಿ

ರಾಷ್ಟ್ರೀಯ ರಕ್ಷಣಾ ನಿಧಿಯಿಂದ ಪ್ರಧಾನ ಮಂತ್ರಿ ಸ್ಕಾಲರ್​ಶಿಪ್​ ಯೋಜನೆಯಡಿಯಲ್ಲಿ ಸೇನೆ, ಅರೆಸೇನಾ ಪಡೆ ಮತ್ತು ರೈಲ್ವೆ ರಕ್ಷಣಾ ದಳ ಹುತಾತ್ಮ ಯೋಧರ ಅಥವಾ ನಿವೃತ್ತ ಯೋಧರ ಮಕ್ಕಳು ಮತ್ತು ವಿಧವೆಯರ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಪ್ರಧಾನಿ ಮೋದಿ ಅವರು ಇಂದು ಹೊರಡಿಸಿರುವ ಆದೇಶದಂತೆ, ಬಾಲಕರಿಗೆ ಪ್ರತಿ ತಿಂಗಳು ಸಿಗುತ್ತಿದ್ದ 2,000 ರು ಬದಲು 2,500 ರು ಗಳಿಗೆ ಮತ್ತು ಬಾಲಕಿಯರಿಗೆ 2,250 ರು ನಿಂದ 3,000 ರು ನೀಡಲಾಗುತ್ತದೆ.

ಈ ಯೋಜನೆಯನ್ನು ಎಲ್ಲಾ ರಾಜ್ಯಗಳ ಪೊಲೀಸ್ ಸೇವೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಉಗ್ರ ಅಥವಾ ನಕ್ಸಲ್​ದಾಳಿಯಲ್ಲಿ ಹುತಾತ್ಮರಾದವರ ಮಕ್ಕಳಿಗೆ ವಾರ್ಷಿಕ 500 ರೂ. ವಿದ್ಯಾರ್ಥಿ ವೇತನ ನೀಡಲು ನಿರ್ಧರಿಸಲಾಗಿದೆ.

ಕೊಟ್ಟ ಮಾತಿನಂತೆ ಮೋದಿ ಇಟ್ಟ ಮೊದಲ ಹೆಜ್ಜೆ 'ಜಲ್ ಶಕ್ತಿ' ಸಚಿವಾಲಯ ಸೃಷ್ಟಿಕೊಟ್ಟ ಮಾತಿನಂತೆ ಮೋದಿ ಇಟ್ಟ ಮೊದಲ ಹೆಜ್ಜೆ 'ಜಲ್ ಶಕ್ತಿ' ಸಚಿವಾಲಯ ಸೃಷ್ಟಿ

'ನಮ್ಮ ಸರ್ಕಾರದ ಮೊದಲ ನಿರ್ಧಾರವನ್ನು ದೇಶವನ್ನು ರಕ್ಷಣೆ ಮಾಡುತ್ತಿರುವವರಿಗೆ ಅರ್ಪಿಸಿದ್ದೇವೆ' ಎಂದು ಪ್ರಧಾನಿ ಮೋದಿ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.


ಮಹಾತ್ಮರು, ಹುತಾತ್ಮರನ್ನು ಸದಾ ಸ್ಮರಿಸುವ ಮೋದಿ ಎಂದು ಟ್ವೀಟ್

ನವ ಭಾರತದ ಪ್ರಗತಿಯನ್ನು ಇನ್ನು ತಡೆಯಲು ಸಾಧ್ಯವಿಲ್ಲ, ಜೈ ಜವಾನ್, ಜೈ ಕಿಶಾನ್ ಎಂದು ಮೋದಿ ಹೊಗಳಿದ ಟ್ವೀಟ್ ಗಳು ಬಂದಿವೆ.

English summary
In the first cabinet meeting after assuming charge as the Prime Minister for the second time, Narendra Modi on Friday approved a major change in the 'Prime Minister's Scholarship Scheme' under the National Defence Fund.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X