ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದಲ್ಲಿ 2030ರ ಹೊತ್ತಿಗೆ ಶೇ.40ರಷ್ಟು ಮಂದಿಗೆ ಕುಡಿಯೋಕು ನೀರಿರೊಲ್ಲ

|
Google Oneindia Kannada News

ನವದೆಹಲಿ, ಜೂನ್ 21: ಸಮುದ್ರನಗರಿ ಎಂದೇ ಖ್ಯಾಯಿ ಹೊಂದಿರುವ ಚೆನ್ನೈನಲ್ಲಿ ಈಗಾಗಲೇ ಜಲಕ್ಷಾಮ ಎದುರಾಗಿದೆ. ಜನರು ದುಪ್ಪಟ್ಟು ಹಣ ನೀಡಲು ಸಿದ್ಧರಿದ್ದರೂ ಕೂಡ ನೀರುಸಿಗದಂತಹ ಪರಿಸ್ಥಿತಿ ಎದುರಿಸುತ್ತಿದ್ದಾರೆ.

2030ರ ಹೊತ್ತಿಗೆ ವೇಳೆಗೆ ಅಂತರ್ಜಲ ಬರಿದಾಡಗಲಿದೆ, 2020ರ ವೇಳೆಗೆ ಬೆಂಗಳೂರು ಕೂಡ ಇದೇ ಪರಿಸ್ಥಿತಿ ಎದುರಿಸಲಿದೆ. ನೀತಿ ಆಯೋಗ ವರದಿಯನ್ವಯ ದೆಹಲಿ, ಬೆಂಗಳೂರು, ಚೆನ್ನೈ ಮತ್ತು ಹೈದರಾಬಾದ್ ಸೇರಿ 21 ನಗರಗಳಲ್ಲಿ 2030ರ ವೇಳೆಗೆ ಅಂತರ್ಜಲ ಬರಿದಾಗಲಿದೆ. ಇದರಲ್ಲಿ 10 ಕೋಟಿ ಜನರ ಬದುಕಿದೆ ಎಂದು ತಿಳಿಸಿದೆ.

ಬೆಂಗಳೂರಿಗೆ ಲಿಂಗನಮಕ್ಕಿ ನೀರು ಹರಿಸಲು ಸರ್ಕಾರ ಯೋಜನೆಬೆಂಗಳೂರಿಗೆ ಲಿಂಗನಮಕ್ಕಿ ನೀರು ಹರಿಸಲು ಸರ್ಕಾರ ಯೋಜನೆ

ಚೆನ್ನೈನಲ್ಲಿ ಗರಿಷ್ಠ ತಾಪಮಾನ ಜೂನ್ ತಿಂಗಳಲ್ಲಿ 43.3 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ. ಕಳೆದ ವರ್ಷವೂ ಮುಂಗಾರು ಮಳೆ ಸಾಕಷ್ಟು ಪ್ರಮಾಣದಲ್ಲಿ ಆಗದ ಕಾರಣ ಚೆನ್ನೈ ಜನರು ಈಗ ಜಲಕ್ಷಾಮ ಎದುರಿಸುತ್ತಿದ್ದಾರೆ.

In India by 2030 we will have no access to drinking water

400 ವಾಟರ್‌ ಟ್ಯಾಂಕರ್‌ಗಳಲ್ಲಿ 9000 ಟ್ರಿಪ್‌ಗಳಲ್ಲಿ ಚೆನ್ನೈನಾದ್ಯಂತ ನೀರು ಸರಬರಾಜು ಮಾಡಲಾಗುತ್ತಿದೆ.2030ರ ವೇಳೆಗೆ ಭಾರತದ ಶೇ.40ರಷ್ಟು ಜನರಿಗೆ ಕುಡಿಯುವ ನೀರೂ ಇಲ್ಲದಂತಾಗಲಿದೆ ಎಂದು ವರದಿ ಹೇಳಿದೆ.

ಸಮುದ್ರ ನಗರಿ ಚೆನ್ನೈನಲ್ಲಿ ನೀರಿಗೆ ಹಾಹಾಕಾರ, ದುಪ್ಪಟ್ಟು ಹಣ ಕೊಡ್ತೀವಂದ್ರೂ ಸಿಗ್ತಿಲ್ಲ ನೀರುಸಮುದ್ರ ನಗರಿ ಚೆನ್ನೈನಲ್ಲಿ ನೀರಿಗೆ ಹಾಹಾಕಾರ, ದುಪ್ಪಟ್ಟು ಹಣ ಕೊಡ್ತೀವಂದ್ರೂ ಸಿಗ್ತಿಲ್ಲ ನೀರು

ಮಳೆ ನೀರು ಕೊಯ್ಲು ಮುಂತಾದ ಕ್ರಮಗಳನ್ನು ಅಳವಡಿಸಿಕೊಂಡು ನೀರಿನ ಸಂಗ್ರಹ ಮಾಡದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಚೆನ್ನೈನಲ್ಲಿ ಮೂರು ನದಿಗಳು, ನಾಲ್ಕು ಜಲಮೂಲಗಳು ಮತ್ತುಆರು ಕಾಡುಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ತಮಿಳುನಾಡಿನ ಬೇರೆ ನಗರಗಳಿಗೆ ಹೋಲಿಕೆ ಮಾಡಿದರೆ ಚೆನ್ನೈನಲ್ಲಿ ಉತ್ತಮ ಮಳೆಯಾಗುತ್ತದೆ. ಸರ್ಕಾರವು ಸಮುದ್ರದ ನೀರಿನಿಂದ ಉಪ್ಪಿನ ಅಂಶವನ್ನು ಬೇರ್ಪಡಿಸಿ ಆ ನೀರನ್ನು ಬಳಕೆ ಮಾಡುವ ಕುರಿತು ಯೋಜನೆ ರೂಪಿಸಲು ಮುಂದಾಗಿದೆ.

English summary
In India, by 2030 we will have no access to drinking water, according to a report by the National Institution for Transforming India the country's principal planning organisation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X