ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದಾಯದ ಭಾಷಣದಲ್ಲಿ ಮೋದಿ ಸರ್ಕಾರಕ್ಕೆ ತಿಳಿ ಹೇಳಿದ ಪ್ರಣಬ್?

ತಮ್ಮ ಅಧಿಕಾರ ಮುಕ್ತಾಯದ ಹಿಂದಿನ ದಿನ (ಜುಲೈ 24) ದೇಶವನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ. ಸಮಾಜದಲ್ಲಿ ಒಗ್ಗಟ್ಟು, ತಾಳ್ಮೆ, ಸಹಿಷ್ಣುತೆಗಳ ಬಗ್ಗೆ ಹೆಚ್ಚು ಹೇಳಿದ ಪ್ರಣಬ್.

|
Google Oneindia Kannada News

ನವದೆಹಲಿ, ಜುಲೈ 24: ದೇಶದಲ್ಲಿ ಸಹಿಷ್ಣುತೆ ಹಾಗೂ ಒಗ್ಗಟ್ಟಿದ್ದ ನಾವು ವಿಶ್ವದ ಯಾವುದೇ ಶಕ್ತಿಯನ್ನಾದರೂ ಎದುರಿಸಬಹುದು ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು, ತಮ್ಮ ರಾಷ್ಟ್ರಪತಿ ಹುದ್ದೆಯ ಕೊನೆಯ ಭಾಷಣದಲ್ಲಿ ಹೇಳಿದ್ದಾರೆ.

ತಮ್ಮ ಅಧಿಕಾರಾವಧಿಯ ಹಿಂದಿನ ದಿನವಾದ ಸೋಮವಾರ (ಜುಲೈ 24) ತಮ್ಮ ರಾಷ್ಟ್ರಪತಿಯಾಗಿ ತಮ್ಮ ಕೊನೆಯ ಭಾಷಣ ಮಾಡಿದ ಅವರು, ತಮ್ಮ ಮಾತುಗಳಲ್ಲಿ ಧರ್ಮ ಸಹಿಷ್ಣುತೆ ಹಾಗೂ ಒಗ್ಗಟ್ಟಿನ ಮಂತ್ರವನ್ನು ಪದೇ ಪದೇ ಜಾಣತನದಿಂದ ಒತ್ತಿ ಹೇಳುವ ಮೂಲಕ, ಪರೋಕ್ಷವಾಗಿ ಬಿಜೆಪಿ ಪಕ್ಷದ ಸಿದ್ಧಾಂತಗಳಲ್ಲಿ ಮಾರ್ಪಾಟು ಆಗಬೇಕೆಂಬ ಕಿವಿಮಾತು ಹೇಳಿದರು.

ನಿರ್ಗಮಿತ ರಾಷ್ಟ್ರಪತಿ ಪ್ರಣಬ್ ಮುಖರ್ಜಿಗೆ ಭಾವಪೂರ್ಣ ವಿದಾಯನಿರ್ಗಮಿತ ರಾಷ್ಟ್ರಪತಿ ಪ್ರಣಬ್ ಮುಖರ್ಜಿಗೆ ಭಾವಪೂರ್ಣ ವಿದಾಯ

ಇನ್ನುಳಿದಂತೆ, ತಮ್ಮ ಹುದ್ದೆಯಲ್ಲಿ ಸಾರ್ಥಕ ಸೇವೆ ಮಾಡಿದ ಆತ್ಮತೃಪ್ತಿಯಿದೆ ಎಂದು ಸ್ಮರಿಸಿಕೊಂಡ ಅವರು, ಈ ದೇಶಕ್ಕೆ ನಾನು ನೀಡಿದ್ದಕ್ಕಿಂತಲೂ ದೇಶವು ನನಗೆ ಹೆಚ್ಚು ನೀಡಿದೆ. ಭಾರತದ ಜನತೆಯ ಈ ಔದಾರ್ಯಕ್ಕೆ ನಾನೆಂದಿಗೂ ಚಿರಋಣಿಯಾಗಿದ್ದೇನೆ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಭಾವುಕರಾಗಿ ಮಾತನಾಡಿದರು.

ಅವರ ಭಾಷಣದ ಹೈಲೈಟ್ಸ್ ಇಲ್ಲಿವೆ...

ವೈವಿಧ್ಯತೆ ಬಗ್ಗೆ ಮೆಚ್ಚುಗೆ

ವೈವಿಧ್ಯತೆ ಬಗ್ಗೆ ಮೆಚ್ಚುಗೆ

ಭಾರತದ ಒಗ್ಗಟ್ಟಿನ ಮಂತ್ರವೇ ಜಗತ್ತು ನಮ್ಮ ವಿರುದ್ಧ ಎತ್ತುವ ಶಸ್ತ್ರಾಸ್ತ್ರಗಳನ್ನು ನಿರುಪಯುಕ್ತವನ್ನಾಗಿ ಮಾಡಬಲ್ಲದು. ಶತಮಾನಗಳಿಂದ ಇದು ಸಾಬೀತಾದ ಸತ್ಯ. ಸಹಿಷ್ಣುತೆಯಿಂದಲೇ ಭಾರತಕ್ಕೆ ಶಕ್ತಿ. ಶತಮಾನಗಳಿಂದಲೂ ಇಂಥ ಸಹಿಷ್ಣುತೆಗಳಿಂದಲೇ ನಾವು ಶಕ್ತಿಯುತ ರಾಷ್ಟ್ರವಾಗಿ ಬಂದಿದ್ದೇವೆ.

ಭಾರತದಲ್ಲಿನ ನಗರ ವೈವಿಧ್ಯತೆ, ಸಂಸ್ಕೃತಿ ವೈವಿಧ್ಯತೆಗಳೇ ಭಾರತವನ್ನು ವಿಶೇಷವನ್ನಾಗಿಸಿದೆ.

ಗಲಭೆಯಿಲ್ಲದ ಸಮಾಜ ಬೇಕು

ಗಲಭೆಯಿಲ್ಲದ ಸಮಾಜ ಬೇಕು

- ಗಲಭೆ ರಹಿತ ಸಮಾಜದಲ್ಲಿ ಮಾತ್ರ ಸಮಾಜದ ಎಲ್ಲಾ ವರ್ಗಗಳ ಜನರು ಪ್ರಜಾಪ್ರಭುತ್ವದಲ್ಲಿ ಒಗ್ಗೂಡಲು ಸಾಧ್ಯ.
- ಹಿಂಸೆ, ಗಲಭೆ ಮುಕ್ತ ಸಮಾಜವೇ ಸೌಹಾರ್ದಯುತ ಹಾಗೂ ಸುರಕ್ಷೆಯ ವಾತಾವರಣ ನೀಡಲು ಸಾಧ್ಯ.
- ಈ ದೇಶದ ಸಂಸತ್ತು ನನ್ನ ಪಾಲಿನ ದೇಗುಲವಾಗಿತ್ತು. ಭಾರತದ ಪ್ರಜೆಗಳ ಸೇವೆಯೇ ನನ್ನ ಅಭೀಪ್ಸೆಯಾಗಿತ್ತು.
- ಭಾರತದ ಇಂದಿನ ಸಮಾಜಕ್ಕೆ ಸಹಿಷ್ಣುತೆಯ ಅವಶ್ಯಕತೆಯಿದೆ.

ಬಡತನ ನಿರ್ಮೂಲನೆಗೆ ಪ್ರಯತ್ನಿಸಬೇಕು

ಬಡತನ ನಿರ್ಮೂಲನೆಗೆ ಪ್ರಯತ್ನಿಸಬೇಕು

- ನಾವು ಈ ದೇಶದ ಬಡಜನರು, ನಿರ್ಗತಿಕರಿಗೆ ಸರ್ಕಾರಿ ಯೋಜನೆಗ ಫಲ ನೇರವಾಗಿ ಲಭ್ಯವಾಗುವಂತೆ ಮಾಡಬೇಕು.
- ಬಡತನ ನಿರ್ಮೂಲನೆಗೆ ಎಲ್ಲಾ ಪ್ರಜೆಗಳು ಟೊಂಕ ಕಟ್ಟಿ ನಿಂತಾಗಲೇ ಮುಂದೆ ಎಲ್ಲರೂ ಸಂತೋಷದಿಂದ ಜೀವಿಸಲು ಸಾಧ್ಯ.

ವಿದ್ಯಾಭ್ಯಾಸದಿಂದ ಸಮಾಜ ಪುನರಾಚನೆ ಸಾಧ್ಯ

ವಿದ್ಯಾಭ್ಯಾಸದಿಂದ ಸಮಾಜ ಪುನರಾಚನೆ ಸಾಧ್ಯ

- ನಮ್ಮ ವಿದ್ಯಾ ಸಂಸ್ಥೆಗಳಲ್ಲಿ, ಚಿಂತನೆಗೆ, ಹೊಸ ಆವಿಷ್ಕಾರಗಳಿಗೆ, ವೈಜ್ಞಾನಿಕ ಆಲೋಚನೆಗಳಿಗೆ ನಾಂದಿ ಹಾಡುವಂಥ ವಿದ್ಯಾಭ್ಯಾಸವನ್ನು ನೀಡಬೇಕಿದೆ.
- ವಿದ್ಯಾಭ್ಯಾಸದಿಂದ ಬಂದ ಜ್ಞಾನದಿಂದಲೇ ಈ ಸಮಾಜವನ್ನು ಪುನಾರಚಿಸಲು ಸಾಧ್ಯ.

ಎಲ್ಲರಿಗೂ ಧನ್ಯವಾದ

ಎಲ್ಲರಿಗೂ ಧನ್ಯವಾದ

- ನನ್ನ ಮೇಲೆ ನಂಬಿಕೆ, ವಿಶ್ವಾಸಗಳನ್ನಿಟ್ಟು ನನ್ನನ್ನು ಈ ಅತ್ಯಂತ ಉನ್ನತ ಹುದ್ದೆಗೆ ನನ್ನನ್ನು ಕೂರಿಸಿದರು.
- ನನ್ನ ಮೇಲಿನ ಈ ನಂಬಿಕೆಗೂ ನಾನು ಅನಂತ ಧನ್ಯವಾದಗಳನ್ನು ಅರ್ಪಿಸಬಯಸುತ್ತೇನೆ.

ವಿಮರ್ಶೆಗಳು ಇದ್ದೇ ಇರುತ್ತವೆ

ವಿಮರ್ಶೆಗಳು ಇದ್ದೇ ಇರುತ್ತವೆ

ಐದು ವರ್ಷಗಳ ಹಿಂದೆ, ನಾನು ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ವೇಳೆ, ನಾನು ನಮ್ಮ ಸಂವಿಧಾನದ ಸಂರಕ್ಷಣೆ ಮಾಡುವ ಬಗ್ಗೆ ವಾಗ್ದಾನ ಮಾಡಿದ್ದೆ.

- ಆ ನಿಟ್ಟಿನಲ್ಲಿ ನಾನು ಯಶಸ್ವಿಯಾಗಿದ್ದೇನೆಂದು ಆತ್ಮ ಸಾಕ್ಷಿಯಾಗಿ ಹೇಳುತ್ತೇನೆ. ನನ್ನ ಕಾರ್ಯವೈಖರಿ ಬಗ್ಗೆ ಬರುವ ವಿಮರ್ಶಿಸಲಾಗುತ್ತಿದೆ. ಈಗಷ್ಟೇ ಅಲ್ಲ, ನನ್ನ ಆಡಳಿತವು ಮುಂದಿನ ಇತಿಹಾಸಕಾರರೂ ವಿಮರ್ಶಿಸುತ್ತಾರೆ.

ಒಗ್ಗಟ್ಟು, ಸಹಿಷ್ಣುತೆ ಮೇಲೆ ಭಾರತದ ಒಳಿತು

ಒಗ್ಗಟ್ಟು, ಸಹಿಷ್ಣುತೆ ಮೇಲೆ ಭಾರತದ ಒಳಿತು

- ನನ್ನ ಐವತ್ತು ವರ್ಷಗಳ ಸಾರ್ವಜನಿಕ ಜೀವನದಲ್ಲಿ ನನ್ನ ಪಾಲಿನ ಪವಿತ್ರ ಗ್ರಂಥವಾಗಿದ್ದಿದ್ದು ಭಾರತದ ಸಂವಿಧಾನ.
- ಇಡೀ ಭಾರತದ ಒಳಿತು, ಒಗ್ಗಟ್ಟು ಹಾಗೂ ಸಹಿಷ್ಣುತೆಗಳ ಮೇಲೆ ಅವಲಂಬಿತವಾಗಿದೆ.

English summary
While speaking in his last speech as President, Pranab Mukherjee stressed on unity and tolerance. He was addressing the nation on a day before the last day of his charge.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X