ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೊಗಾಡಿಯಾ ಭಾಷಣದ ಎಫೆಕ್ಟ್: ಮನೆ ಮಾರಿದ ಮುಸ್ಲಿಂ ವ್ಯಾಪಾರಿ

|
Google Oneindia Kannada News

ಭಾವನಗರ, ಏ 9 (ಪಿಟಿಐ) : ಹೋದಲೆಲ್ಲಾ ದ್ವೇಷ ಭಾಷಣ ಮಾಡುತ್ತಾರೆಂದು ಕರ್ನಾಟಕವೂ ಸೇರಿದಂತೆ ವಿವಿಧ ರಾಜ್ಯಗಳು ವಿಎಚ್ಪಿ ಅಂತರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್ ತೊಗಾಡಿಯಾ ಪ್ರವೇಶಕ್ಕೆ ನಿರ್ಬಂಧ ಹೇರಿದ್ದವು.

ಗುಜರಾತಿನ ಭಾವನಗರದ ಬಹುಸಂಖ್ಯಾತ ಪ್ರಾಬಲ್ಯವಿರುವ ಪ್ರದೇಶದಲ್ಲಿ ಮನೆ ಖರೀದಿಸಿದ್ದ ಮುಸ್ಲಿಂ ವ್ಯಾಪಾರಿಯೊಬ್ಬ ವಿಶ್ವ ಹಿಂದೂ ಪರಿಷತ್ ಪ್ರತಿಭಟನೆಯಿಂದಾಗಿ ಮನೆಯನ್ನೇ ಮಾರಿದ್ದಾನೆಂದು ವರದಿಯಾಗಿದೆ.

ರಾಮನಾಮ ಜಪ, ಸಂಕೀರ್ತನೆ ಮುಂತಾದವು ಇಲ್ಲಿ ನಡೆಯುತ್ತಿದ್ದರಿಂದ 55 ಲಕ್ಷ ರೂಪಾಯಿ ಕೊಟ್ಟು ಖರೀದಿಸಿದ್ದ ಮನೆಯನ್ನು, ಮುಸ್ಲಿಂ ವ್ಯಾಪಾರಿ ಜವೇರಿ ಮಾರಾಟ ಮಾಡಿ ಏರಿಯಾವನ್ನೇ ಖಾಲಿ ಮಾಡಿದ್ದಾನೆಂದು ವಿಎಚ್ಪಿ ನಗರಾಧ್ಯಕ್ಷ ಎಸ್ ಡಿ ಜಾನಿ ಹೇಳಿದ್ದಾರೆ. (ತೊಗಾಡಿಯಾಗೆ ರಾಜ್ಯ ಪ್ರವೇಶ ನಿಷಿದ್ಧ: ಜಾರ್ಜ್)

ಮುಸ್ಲಿಂ ಬೊಹ್ರಾ ಸಮುದಾಯದ ಚಿಂದಿ ವ್ಯಾಪಾರಿ ಆಲಿ ಆಸ್ಗರ್ ಜವೇರಿ ಇಲ್ಲಿ ಮನೆ ಖರೀದಿಸಿದ್ದರು, ಒಂದು ವರ್ಷದ ಹಿಂದೆ ನಗರದ ಮೇಘಾನಿ ವೃತ್ತದಲ್ಲಿ ತೊಗಾಡಿಯಾ ಭಾಷಣ ಮಾಡಿ ಹೋಗಿದ್ದರು.

ಬಹುಸಂಖ್ಯಾತ ಪ್ರಾಬಲ್ಯವಿರುವ ಪ್ರದೇಶದಲ್ಲಿ ಮುಸ್ಲಿಮರು ನೆಲೆಸಿದರೆ, ಅಂತಹ ಪ್ರದೇಶದಲ್ಲಿ ರಾಮಮಂತ್ರ ಪಠಣವಿರುವ ಭಕ್ತಿಗೀತೆಗಳನ್ನು ಲೌಡ್ ಸ್ಪೀಕರ್ ಮೂಲಕ ಹೆಚ್ಚಾಗಿ ಉಪಯೋಗಿಸಿ ಎಂದು ತೊಗಾಡಿಯಾ ಆದೇಶ ನೀಡಿದ್ದರೆಂದು ವಿಎಚ್ಪಿಪಿ ಮುಖಂಡ ಜಾನಿ ಹೇಳಿದ್ದಾರೆ. ಮುಂದೆ ಓದಿ..

ತೊಗಾಡಿಯಾ ಭಾಷಣದ ಪ್ರಭಾವ

ತೊಗಾಡಿಯಾ ಭಾಷಣದ ಪ್ರಭಾವ

ಒಂದು ವರ್ಷದ ಹಿಂದೆ ತೊಗಾಡಿಯಾ ನಗರಕ್ಕೆ ಬಂದಿದ್ದರು. ಬಹುಸಂಖ್ಯಾತರು ಜಾಸ್ತಿ ಇರುವ ಪ್ರದೇಶದಲ್ಲಿ ಮುಸ್ಲಿಮರು ಬಂದು ನೆಲೆಸಿದರೆ ಅಂತಹ ಪ್ರದೇಶದಲ್ಲಿ ಮುಸ್ಲಿಮರನ್ನು ಅವಮಾನಿಸಿ ಎಂದು ತೊಗಾಡಿಯಾ ಆದೇಶಿಸಿದ್ದರು ಎಂದು ವಿಎಚ್ಪಿ ಮುಖಂಡರು ಹೇಳಿದ್ದಾರೆ.

ಎಲ್ಲಾ ತೊಗಾಡಿಯಾ ಆದೇಶ

ಎಲ್ಲಾ ತೊಗಾಡಿಯಾ ಆದೇಶ

ತೊಗಾಡಿಯಾ ಹೇಳಿದಂತೆ, ಮುಸ್ಲಿಮರು ಖರೀದಿಸುವ ಮನೆ/ ವಾಣಿಜ್ಯ ಮಳಿಗೆಯ ಮುಂದೆ ರಾಮಜಪ ಮಾಡಿಸಿದ್ದೇವೆ. ಲೌಡ್ ಸ್ಪೀಕರ್ ಮೂಲಕ ರಾಮ ಸಂಕೀರ್ತನೆ ನಡೆಸಿದ್ದೇವೆ. ಹಾಗಾಗಿ, ಇಲ್ಲಿಂದ ಮುಸ್ಲಿಮರು ಮನೆ ತೊರೆಯುತ್ತಿದ್ದಾರೆ - ವಿಎಚ್ಪಿ ಮುಖಂಡ

ಮನೆ ಖರೀದಿಸಿದವನ ಪ್ರಕಾರ

ಮನೆ ಖರೀದಿಸಿದವನ ಪ್ರಕಾರ

ಮನೆ ಮಾರಿದ ಜವೇರಿ ಆಸ್ತಿಯನ್ನು ಖರೀದಿಸಿದ ರಿಯಲ್ ಎಸ್ಟೇಟ್ ಉದ್ಯಮಿಯ ಪ್ರಕಾರ, ಅವರಿಗೆ ಕೆಲವು ಹಿಂದೂ ಸಂಘಟನೆಗಳ ಒತ್ತಡವಿದ್ದವು. ಹಾಗಾಗಿ, ಬೇರೆ ದಾರಿಯಿಲ್ಲದೇ ಮನೆ ಮಾರಿದ್ದಾರೆಂದು ಹೇಳಿದ್ದಾರೆ.

ಮಾರುಕಟ್ಟೆ ಬೆಲೆಯಲ್ಲಿ ಖರೀದಿಸಲಾಗಿದೆ

ಮಾರುಕಟ್ಟೆ ಬೆಲೆಯಲ್ಲಿ ಖರೀದಿಸಲಾಗಿದೆ

ಒಂದು ವರ್ಷದ ಹಿಂದೆ ಜವೇರಿ 44 ಲಕ್ಷ ರೂಪಾಯಿಗೆ ಈ ಆಸ್ತಿಯನ್ನು ಖರೀದಿಸಿದ್ದರು. ನಾವು 55 ಲಕ್ಷ ರೂಪಾಯಿಗೆ ಈ ಮನೆಯನ್ನು ರಿಯಲ್ ಎಸ್ಟೇಟ್ ಮೂಲಕ ಖರೀದಿಸಿದ್ದೇವೆ ಎಂದು ಚೇತನ್ ಕುಮ್ದರ್ ಎನ್ನುವವರು ಹೇಳಿದ್ದಾರೆ.

ಮನೆ ಮಾರಿದರೂ ಬೇಸರವಿರಲಿಲ್ಲ

ಮನೆ ಮಾರಿದರೂ ಬೇಸರವಿರಲಿಲ್ಲ

ಜವೇರಿ ಮನೆ ಮಾರಿದರೂ, ಅವರಿಗೆ ಒಳ್ಳೆ ಡೀಲ್ ಗೆ ಮನೆ ಮಾರಾಟವಾಗಿದೆ. ಮನೆ ಖರೀದಿಸಿದ ನಾವು ಮತ್ತು ಮನೆ ಮಾರಾಟ ಮಾಡಿದ ಅವರೂ ಈ ಡೀಲ್ ನಿಂದ ಖುಷಿಯಾಗಿದ್ದೇವೆಂದು ಚೇತನ್ ಪಿಟಿಐಗೆ ತಿಳಿಸಿದ್ದಾರೆ.

English summary
Muslim businessman Zaveri sells his property after VHP protest based on Praveen Togadia alleged advise in Bhavnagar, Gujarat (as per PTI report)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X