ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸತತ 14ನೇ ದಿನವೂ ಏರಿದ ಪೆಟ್ರೋಲ್ ಬೆಲೆ: ಬೆಂಗಳೂರಲ್ಲಿ ಲೀ.ಗೆ 79.4 ರೂ.

By Nayana
|
Google Oneindia Kannada News

ನವದೆಹಲಿ, ಮೇ 28: ದಿನದಿಂದ ದಿನಕ್ಕೆ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಾಗುತ್ತಿದೆ. ಸತತ 14ನೇ ದಿನವಾದ ಭಾನುವಾರ ಕೂಡ ಇಂಧನ ದರಗಳು ಏರಿಕೆಯಾಗಿವೆ. ನವದೆಹಲಿಯಲ್ಲಿ ಪೆಟ್ರೋಲ್ ದರ 78 ರೂ ದಾಟಿದೆ ಇನ್ನು ಬೆಂಗಳೂರಿನಲ್ಲಿ 79.4 ರೂ. ತಲುಪಿದೆ.ಡೀಸೆಲ್ ದರ 70.25ಕ್ಕೆ ಏರಿದೆ.

ಜೂನ್‌ 18ರಿಂದ ಸರಕು ಸಾಗಣೆ ವಾಹನಗಳ ಅನಿರ್ಧಿಷ್ಟಾವಧಿ ಮುಷ್ಕರಜೂನ್‌ 18ರಿಂದ ಸರಕು ಸಾಗಣೆ ವಾಹನಗಳ ಅನಿರ್ಧಿಷ್ಟಾವಧಿ ಮುಷ್ಕರ

ತೈಲ ಮಾರುಕಟ್ಟೆಯ ಪ್ರಮುಖ ಕಂಪನಿ ಇಂಡಿಯನ್ ಆಯಿಲ್ ಮಾಹಿತಿ ಪ್ರಕಾರ, ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್‌ಗೆ 78.12 ತಲುಪಿದೆ. ಶನಿವಾರ ಅದು 77.97 ರೂ. ಇತ್ತು. ಇನ್ನು ಡೀಸೆಲ್ ದರೆ 69.06 ರೂ.ಗೆ ರಿಕೆಯಾಗಿದೆ. ಚೆನ್ನೈನಲ್ಲೂ ಪೆಟ್ರೋಲ್ ದಾಖಳೆಯ ದರವನ್ನು ಮುಟ್ಟಿದ್ದು 81.11ರೂ ತಲುಪಿದೆ. ಕೋಲ್ಕತ್ತಾದಲ್ಲಿ 80.76ರೂ.ಗೆ ಏರಿಕೆಯಾಗಿದೆ.

In Bengaluru, Petrol price Rs79.40 per liter

ಕರ್ನಾಟದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮೇ 13ರವರೆಗೆ 19 ದಿನಗಳ ಕಾಲ ದರ ಪರಿಷ್ಕರಣೆ ಸ್ಥಗಿತಗೊಳಿಸಲಾಗಿತ್ತು. ಇದರ ಮಧ್ಯೆ ಕೇಂದ್ರ ಸರ್ಕಾರ ಅಬಕಾರಿ ಸುಂಕ, ರಾಜ್ಯಗಳು, ಸ್ಥಳೀಯ ತೆರಿಗೆಯನ್ನು ಕಡಿತ ಮಾಡಿ ಇಂಧನ ದರ ತಗ್ಗಿಸಬೇಕು ಎನ್ನುವ ಒತ್ತಡ ಸೃಷ್ಟಿಯಾಗಿದೆ. ಇದೀಗ ಕರ್ನಾಟಕದಲ್ಲಿ ಸಾರಿಗೆ ಸಂಸ್ಥೆಗಳು ನಷ್ಟ ಅನುಭವಿಸುತ್ತಿದ್ದು ಬಸ್‌ ಟಿಕೆಟ್ ದರವನ್ನು ಏರಿಸುವತ್ತ ಕ್ರಮ ಕೈಗೊಳ್ಳಲು ಚಿಂತನೆ ನಡೆಸಿದೆ.

English summary
It was consecutive fourteenth day on Sunday that fuel price increasing as Petrol price reached nearby Rs.80 per liter in Bengaluru and diesel has reached Rs.70 as well.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X