ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರೀ ಕುತೂಹಲ ಮೂಡಿಸಿದ ನಡೆ: ಸಕ್ರಿಯ ರಾಜಕಾರಣಕ್ಕೆ ಪ್ರಕಾಶ್ ರೈ?

|
Google Oneindia Kannada News

ಬಿಜೆಪಿ ಅದರಲ್ಲೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಟೀಕಿಸುವಲ್ಲಿ ಮಂಚೂಣಿಯಲ್ಲಿ ಬರುವ ಬಹುಭಾಷಾ ನಟ ಪ್ರಕಾಶ್ ರಾಜ್ ಆಲಿಯಾಸ್ ಪ್ರಕಾಶ್ ರೈ. ಕರ್ನಾಟಕ ಮೂಲದವರಾಗಿದ್ದರೂ ಹೆಚ್ಚು ಹೆಸರು ಮಾಡಿದ್ದು ತೆಲುಗು ಮತ್ತು ತಮಿಳು ನಾಡಿನಲ್ಲಿ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಪ್ರಕಾಶ್ ರೈ ಸ್ಪರ್ಧಿಸಿದ್ದರು. ಪಕ್ಷೇತರರಾಗಿ ಸ್ಪರ್ಧಿಸಿದ್ದ ಪ್ರಕಾಶ್ ರೈ 28,906 ಮತಗಳನ್ನು ಪಡೆದು ಠೇವಣಿಯನ್ನು ಕಳೆದುಕೊಂಡಿದ್ದರು. ಬಿಜೆಪಿ ಈ ಕ್ಷೇತ್ರವನ್ನು ಉಳಿಸಿಕೊಂಡಿತ್ತು.

ಅಂದು ಪ್ರಧಾನಿ ಮೋದಿಯನ್ನು ಸ್ವಾಗತಿಸಿ ಈಗ ಪಂಥಾಹ್ವಾನ ನೀಡಿದ ಕೆಸಿಆರ್ಅಂದು ಪ್ರಧಾನಿ ಮೋದಿಯನ್ನು ಸ್ವಾಗತಿಸಿ ಈಗ ಪಂಥಾಹ್ವಾನ ನೀಡಿದ ಕೆಸಿಆರ್

ಸಿಎಎ, ಎನ್‌ಆರ್‌ಸಿ ಹಾಗೂ ಎನ್‌ಆರ್‌ಪಿ ವಿರೋಧಿಸಿ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸುತ್ತಿದ್ದ ಪ್ರಕಾಶ್ ರೈ, ಕಳೆದ ಕೆಲವು ತಿಂಗಳಿನಿಂದ ಅಷ್ಟೇನೂ ಬಹಿರಂಗವಾಗಿ ಹೇಳಿಕೆಯನ್ನು ನೀಡುತ್ತಿರಲಿಲ್ಲ. ತೆಲುಗು ಭಾಷಿಗರಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿರುವ ಪ್ರಕಾಶ್, ಸಕ್ರಿಯ ರಾಜಕಾರಣಕ್ಕೆ ಇಳಿಯಲಿದ್ದಾರೆ ಎನ್ನುವ ಮಾತುಗಳು ಈಗ ಕೇಳಿ ಬರಲಾರಂಭಿಸಿವೆ.

ಕಾಂಗ್ರೆಸ್ ಹೊರತಾದ ತೃತೀಯ ರಂಗ ಸ್ಥಾಪಿಸುವ ನಿಟ್ಟಿನಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜಕೀಯ ತಂತ್ರಗಾರಿಕೆ ಹಣೆಯುತ್ತಿದ್ದಾರೆ. ಇವರಿಗೆ ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಸಂಪೂರ್ಣ್ ಸಾಥ್ ನೀಡುತ್ತಿದ್ದಾರೆ. ಕೆಸಿಆರ್ ಜೊತೆ ಪ್ರಕಾಶ್ ರೈ ಕಾಣಿಸಿಕೊಂಡಿರುವುದು ಹಲವು ರಾಜಕೀಯ ಊಹಾಪೋಹಗಳಿಗೆ ನಾಂದಿ ಹಾಡಿದೆ.

ಪ್ರಧಾನಿ ಮೋದಿಯನ್ನು ಅಧಿಕಾರದಿಂದ ಓಡಿಸಲಾಗುವುದು ಎಂದ ಕೆಸಿಆರ್ಪ್ರಧಾನಿ ಮೋದಿಯನ್ನು ಅಧಿಕಾರದಿಂದ ಓಡಿಸಲಾಗುವುದು ಎಂದ ಕೆಸಿಆರ್

 ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೋರೇಶನ್ ಚುನಾವಣೆ

ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೋರೇಶನ್ ಚುನಾವಣೆ

ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೋರೇಶನ್ ಚುನಾವಣೆಯಲ್ಲಿ ಬಿಜೆಪಿ ಉತ್ತಮ ಸಾಧನೆಯನ್ನು ಮಾಡಿತ್ತು. ಇದರ ಜೊತೆಗೆ, ತೆಲಂಗಾಣದ ನಗರ ಭಾಗಗಳಲ್ಲಿ ಬಿಜೆಪಿ ತನ್ನ ಬಲವೃದ್ದನೆ ಹೆಚ್ಚಿಸಲು ಒತ್ತನ್ನು ನೀಡಲಾರಂಭಿಸಿತು. ಇದು ಮುಂದಿನ ವರ್ಷಾಂತ್ಯದಲ್ಲಿ ನಡೆಯಲಿರುವ ರಾಜ್ಯ ಅಸೆಂಬ್ಲಿ ಚುನಾವಣೆಗೆ ಬಿಜೆಪಿ ಪೂರ್ವತಯಾರಿ ಮಾಡಿಕೊಳ್ಳಲಾರಂಭಿಸಿದೆ ಎನ್ನುವ ವಿಶ್ಲೇಷಣೆಗಳ ಮಾತು ಬರಲಾರಂಭಿಸಿವೆ. ಇದು ಅಲ್ಲಿನ ಪ್ರಾದೇಶಿಕ ಪಕ್ಷಗಳಾದ ಟಿಆರ್ ಎಸ್ ಮತ್ತು ಓವೈಸಿ ಪಕ್ಷಕ್ಕೆ ಹೊಸ ತಲೆನೋವಾಗಿ ಪರಿಣಮಿಸುವ ಸಾಧ್ಯತೆಯಿದೆ. ಹಾಗಾಗಿ, ಬಿಜೆಪಿ ವಿರುದ್ದ ಪ್ರಬಲವಾದ ಒಕ್ಕೂಟ ಸ್ಥಾಪಿಸುವ ಉದ್ದೇಶವನ್ನು ಮಮತಾ ಜೊತೆ ಕೆಸಿಆರ್ ಕೂಡಾ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ.

 ಮಹಾರಾಷ್ಟ್ರದ ಸಿಎಂ ಉದ್ದವ್ ಠಾಕ್ರೆಯವರನ್ನು ಕೆಸಿಆರ್ ಮುಂಬೈನಲ್ಲಿ ಭೇಟಿ

ಮಹಾರಾಷ್ಟ್ರದ ಸಿಎಂ ಉದ್ದವ್ ಠಾಕ್ರೆಯವರನ್ನು ಕೆಸಿಆರ್ ಮುಂಬೈನಲ್ಲಿ ಭೇಟಿ

ಬಿಜೆಪಿ, ಕಾಂಗ್ರೆಸ್ ಹೊರತಾದ ಮುಖ್ಯಮಂತ್ರಿಗಳನ್ನು ಮಮತಾ ಬ್ಯಾನರ್ಜಿ ಮತ್ತು ಕೆಸಿಆರ್ ಭೇಟಿಯಾಗುತ್ತಿದ್ದಾರೆ. ಅದರಂತೇ, ಮಹಾವಿಕಾಸ್ ಅಗಾಡಿ ಒಕ್ಕೂಟದ, ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ದವ್ ಠಾಕ್ರೆಯವರನ್ನು ಕೆಸಿಆರ್ ಮುಂಬೈನಲ್ಲಿ ಭೇಟಿಯಾಗಿದ್ದಾರೆ. ಬಿಜೆಪಿ ವಿರುದ್ದ ಒಕ್ಕೂಟಕ್ಕೆ ಸೇರುವಂತೆ ಅವರನ್ನು ಒತ್ತಾಯಿಸಿದ್ದಾರೆ. ಇದಕ್ಕೆ ಶಿವಸೇನೆಯ ಸಂಪೂರ್ಣ ಸಹಮತವಿದೆ ಎನ್ನುವ ಭರವಸೆ ಠಾಕ್ರೆ ಅವರಿಂದ ಸಿಕ್ಕಿದೆ.

 ಪತ್ರಿಕಾಗೋಷ್ಠಿಯಲ್ಲಿ ನಟ ಪ್ರಕಾಶ್ ರೈ ಕೂಡಾ ಹಾಜರಿದ್ದರು

ಪತ್ರಿಕಾಗೋಷ್ಠಿಯಲ್ಲಿ ನಟ ಪ್ರಕಾಶ್ ರೈ ಕೂಡಾ ಹಾಜರಿದ್ದರು

ಉದ್ದವ್ ಠಾಕ್ರೆಯವರನ್ನು ಭೇಟಿಯಾಗುವ ವೇಳೆ ಕೆಸಿಆರ್ ಜೊತೆಗೆ ಶಿವಸೇನೆ ಮುಖಂಡ ಸಂಜಯ್ ರಾವತ್ ಕೂಡಾ ಇದ್ದರು. ಇದಾದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ನಟ ಪ್ರಕಾಶ್ ರೈ ಕೂಡಾ ಹಾಜರಿದ್ದರು. ಠಾಕ್ರೆ ಜೊತೆಗಿನ ಭೇಟಿ ಇದಾದ ನಂತರ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಜೊತೆಗೆ ಕೆ.ಚಂದ್ರಶೇಖರ ರಾವ್ ಭೇಟಿಯ ವೇಳೆಗೂ ಪ್ರಕಾಶ್ ರೈ ಹಾಜರಿದ್ದರು. ಇದು, ಬಿಜೆಪಿ ವಿರುದ್ದ ಒಕ್ಕೂಟ ಸ್ಥಾಪಿಸಲು ಕೆಸಿಆರ್ ಅವರಿಗೆ ಪ್ರಕಾಶ್ ರೈ ನೀಡುತ್ತಿರುವ ಬೆಂಬಲ ಎಂದು ವ್ಯಾಖ್ಯಾನಿಸಲಾಗುತ್ತಿದೆ.

 ಪ್ರಧಾನಿ ಮೋದಿ ಟೀಕಾಕಾರರಲ್ಲಿ ಒಬ್ಬರಾದ ಪ್ರಕಾಶ್ ರೈ

ಪ್ರಧಾನಿ ಮೋದಿ ಟೀಕಾಕಾರರಲ್ಲಿ ಒಬ್ಬರಾದ ಪ್ರಕಾಶ್ ರೈ

ಇತ್ತೀಚೆಗೆ ನಡೆದ ತೆಲುಗು ಚಿತ್ರೋದ್ಯಮದ ಕಲಾವಿದರ ಸಂಘದ ಅಧ್ಯಕ್ಷ ಚುನಾವಣೆಯಲ್ಲಿ ಪ್ರಕಾಶ್ ರೈ ಸೋಲುಂಡಿದ್ದರು. ಇನ್ನೊಂದು ಆಯಾಮದ ಪ್ರಕಾರ, ಪ್ರಕಾಶ್ ರೈ ಅವರು ಕೆಸಿಆರ್ ಮುಂಬೈಗೆ ಭೇಟಿ ನೀಡಿದ ವೇಳೆ ಚಿತ್ರೀಕರಣದಲ್ಲಿದ್ದರು. ಇಬ್ಬರೂ ಉತ್ತಮ ಸಂಬಂಧವನ್ನು ಹೊಂದಿರುವುದರಿಂದ ಜೊತೆಗೆ, ಪ್ರಧಾನಿ ಮೋದಿ ಟೀಕಾಕಾರರಲ್ಲಿ ಒಬ್ಬರಾದ ಪ್ರಕಾಶ್ ರೈ ಅವರ ಸಹಾಯವನ್ನು ಕೆಸಿಆರ್ ಪಡೆಯಬಹುದು ಮತ್ತು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲೂ ಬಹುದು ಎನ್ನುವ ಊಹಾಪೋಹದ ಮಾತುಗಳು ಕೇಳಿ ಬರುತ್ತಿವೆ.

Recommended Video

ಐಪಿಎಲ್ ಯಾವಾಗ ಶುರು ಆಗತ್ತೆ ಗೊತ್ತಾ! | Oneindia Kannada

English summary
In A Surprise Move Prakash Raj In Telangana CM KCR's Mumbai Meet With Maharashtra CM. Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X