ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೈವೋರ್ಸ್: ಐತಿಹಾಸಿಕ ತೀರ್ಪು ನೀಡಿದ ಸರ್ವೋಚ್ಚ ನ್ಯಾಯಾಲಯ

|
Google Oneindia Kannada News

ನವದೆಹಲಿ, ಅ 11: ಆಂಧ್ರಪ್ರದೇಶದ ದಂಪತಿಗಳ ವಿವಾಹ ವಿಚ್ಚೇದನ ಅರ್ಜಿಯನ್ನು ವಿಲೇವಾರಿ ಮಾಡುವ ವೇಳೆ, ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪೊಂದನ್ನು ನೀಡಿದೆ.

"ದಂಪತಿಗಳ ನಡುವೆ ಕಾರ್ಯಸಾಧುವಲ್ಲದ, ಸರಿಪಡಿಸಲಾಗದ ಮತ್ತು ಭಾವನಾತ್ಮಕ ಸಂಬಂಧಗಳು ಸತ್ತು ಹೋದಂತಹ ಸಂದರ್ಭದಲ್ಲಿ ಡೈವೋರ್ಸ್ ನೀಡಬಹುದು" ಎನ್ನುವ ರೂಲಿಂಗ್ ಅನ್ನು ಸುಪ್ರೀಂಕೋರ್ಟ್ ನೀಡಿದೆ.

ಮೆಟ್ರೋಗಾಗಿ ಮರ ಕಟಾವು: ಸುಪ್ರೀಂಕೋರ್ಟ್ ಮಧ್ಯಂತರ ತಡೆಮೆಟ್ರೋಗಾಗಿ ಮರ ಕಟಾವು: ಸುಪ್ರೀಂಕೋರ್ಟ್ ಮಧ್ಯಂತರ ತಡೆ

"ಹಿಂದೂ ವಿವಾಹ ಕಾಯ್ದೆಯ ಪ್ರಕಾರ, ಸರಿಪಡಿಸಲಾಗದ ಸಂಬಂಧ ಡೈವೋರ್ಸಿಗೆ ಕಾರಣವಾಗುವುದಿಲ್ಲ" ಎನ್ನುವ ತೀರ್ಪನ್ನು ಸುಪ್ರೀಂಕೋರ್ಟ್ ಈ ಹಿಂದೆ ನೀಡಿತ್ತು.

In A Significant Ruling Supreme Court Said, Marriage Can Be Dissolved If It Breaks Down Irretrievably

ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಎಂ ಆರ್ ಷಾ ಅವರ ನ್ಯಾಯಪೀಠ, "ಭಾರತದ ಸಂವಿಧಾನದ 142 ಆರ್ಟಿಕಲ್ ಅಡಿಯಲ್ಲಿ, ನಮ್ಮ ಅಧಿಕಾರವನ್ನು ಚಲಾಯಿಸಲು ಇದು ಸೂಕ್ತ ಪ್ರಕರಣವಾಗಿದೆ" ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

1993ರಲ್ಲಿ ಮದುವೆಯಾದ ಆಂಧ್ರಪ್ರದೇಶ ಮೂಲದ ದಂಪತಿಗಳ ನಡುವೆ ಆರಂಭದಲ್ಲೇ ಭಿನ್ನಾಭಿಪ್ರಾಯ ಉಂಟಾಗಿತ್ತು. ಪತಿ ತನ್ನ ಮೇಲೆ ದೌರ್ಜನ್ಯ ನಡೆಸುತ್ತಾನೆ ಎಂದು ಪತ್ನಿ ತವರು ಮನೆಯಲ್ಲಿ ನೆಲೆಸಿದ್ದಳು.

1999ರಲ್ಲಿ ಹೈದರಾಬಾದ್‌ನ ಕುಟುಂಬ ನ್ಯಾಯಾಲಯಕ್ಕೆ ವಿಚ್ಚೇದನ ಅರ್ಜಿಯನ್ನು ಪತಿ ಸಲ್ಲಿಸಿದ್ದರು. ಆದರೆ, ಪತಿಯಿಂದ ಡೈವೋರ್ಸ್ ಪಡೆಯಲು ಪತ್ನಿ ನಿರಾಕರಿಸಿದ್ದರಿಂದ, ನ್ಯಾಯಾಲಯ ಡೈವೋರ್ಸ್ ಗೆ ಒಪ್ಪಿಗೆ ನೀಡಲು ನಿರಾಕರಿಸಿತ್ತು.

ದಾವಣಗೆರೆಯಲ್ಲಿ ಹಂದಿ ಕಾಟ: ಹೈಕೋರ್ಟ್ ತೀರ್ಪಿಗೆ ಸುಪ್ರೀಂನಿಂದ ತಡೆದಾವಣಗೆರೆಯಲ್ಲಿ ಹಂದಿ ಕಾಟ: ಹೈಕೋರ್ಟ್ ತೀರ್ಪಿಗೆ ಸುಪ್ರೀಂನಿಂದ ತಡೆ

ಇದನ್ನು ಪ್ರಶ್ನಿಸಿ ಆಂಧ್ರಪ್ರದೇಶದ ಹೈಕೋರ್ಟ್ ನಲ್ಲಿ ಪತಿ ಮನವಿಯನ್ನು ಸಲ್ಲಿಸಿದ್ದ. ಹೈಕೋರ್ಟ್, ಕೌಟುಂಬಿಕ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದಿದ್ದರಿಂದ, ಪತಿ, ಸುಪ್ರೀಂಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

"22ವರ್ಷಗಳಿಂದ ದಂಪತಿಗಳು ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಇವರಿಬ್ಬರ ನಡುವೆ, ವೈವಾಹಿಕ ಸಂಬಂಧ ಸರಿಪಡಿಸಲಾಗದ ಹಂತಕ್ಕೆ ಹೋಗಿರುವುದರಿಂದ, ಡೈವೋರ್ಸ್ ನೀಡಲು ಒಪ್ಪಿಗೆ ನೀಡಲಾಗಿದೆ" ಎಂದು ಎರಡು ದಶಕಗಳ ಅರ್ಜಿಯೊಂದನ್ನು ಸುಪ್ರೀಂಕೋರ್ಟ್ ವಿಲೇವಾರಿ ಮಾಡಿದೆ.

English summary
In A Significant Ruling Supreme Court Said, Marriage Can Be Dissolved If It Breaks Down Irretrievably.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X