ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಣಮಟ್ಟದ ಜೀವನಕ್ಕೆ ಮಂಗಳೂರು ದೇಶದಲ್ಲೇ ನಂಬರ್ ಒನ್!

|
Google Oneindia Kannada News

ಒಂದು ಕಾಲ ಇತ್ತು. ಬೆಂಗಳೂರು ಅಥವಾ ಚೆನ್ನೈನಲ್ಲಿ ನೆಲೆಸೋದು ಒಳ್ಳೆ ಆಯ್ಕೆ ಅಂದುಕೊಳ್ಳುತ್ತಿದ್ದರು. ಇದೀಗ ಹೊಸ ಅಧ್ಯಯನ ವರದಿಯೊಂದು ಬಂದಿದ್ದು, ಅದರ ಫಲಿತಾಂಶ ನೋಡಿದರೆ ಚೆನ್ನೈನೋ ಬೆಂಗಳೂರೋ ಅಂತ ವಾದ ಮಾಡುವುದೇ ವೇಸ್ಟ್ ಅನ್ನಿಸಿಬಿಡುತ್ತದೆ.

ನಂಬಿಯೋ ಕ್ವಾಲಿಟಿ ಆಫ್ ಲೈಫ್ ಇಂಡೆಕ್ಸ್ ವರದಿ ಬಿಡುಗಡೆ ಮಾಡಿದ್ದು, ಇದೀಗ ಚರ್ಚೆಯೊಳಗೆ ಮಂಗಳೂರು ಬಂದಿದೆ. ಅತ್ಯುತ್ತಮ ಜೀವನ ಸಾಗಿಸಲು ಕರ್ನಾಟಕದ ಮಂಗಳೂರು ದೇಶದಲ್ಲೇ ನಂಬರ್ ಒನ್ ಎಂಬುದನ್ನು ಅಂಕಿ-ಅಂಶಗಳು ಕೂಡ ಸಾರುತ್ತಿವೆ.

ವಿಶ್ವದ ಹಿಂಸೆಮುಕ್ತ ರಾಷ್ಟ್ರಗಳಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ?ವಿಶ್ವದ ಹಿಂಸೆಮುಕ್ತ ರಾಷ್ಟ್ರಗಳಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ?

ಜೀವನ ನಡೆಸಲು ಇಡೀ ವಿಶ್ವದಲ್ಲೇ ಅತ್ಯುತ್ತಮ ಎನಿಸುವ 189 ನಗರಗಳಲ್ಲಿ ಲಂಡನ್, ನ್ಯೂಯಾರ್ಕ್ ಹಾಗೂ ಪ್ಯಾರಿಸ್ ನಂತಹ ಹೆಸರುಗಳಿವೆ. ಅವುಗಳಲ್ಲಿ ಮಂಗಳೂರಿಗೆ 7ನೇ ಸ್ಥಾನ ಲಭಿಸಿದೆ. ಆ ಪಟ್ಟಿಯಲ್ಲಿ ಮಂಗಳೂರಿಗೆ 185.12 ಅಂಕಗಳು ಲಭಿಸಿವೆ.

ಈ ಪಟ್ಟಿಯಲ್ಲಿ ಅಂದರೆ ಗುಣಮಟ್ಟದ ಬದುಕು ನಡೆಸಬಹುದಾದ ದಕ್ಷಿಣ ಭಾರತದ ನಗರಗಳ ಪೈಕಿ ಹೈದರಾಬಾದ್, ಬೆಂಗಳೂರು ಹಾಗೂ ಕೊಯಂಬತ್ತೂರು ಕೂಡ ಇವೆ. ಆದರೆ ಈ ನಗರಗಳ ಸ್ಥಾನ ನೂರಾ ಇಪ್ಪತ್ತೈದರ ನಂತರದಲ್ಲಿದೆ. ಆದರೆ ಭಾರತದ ಮಟ್ಟಿಗೆ ಹೇಳುವುದಾದರೆ ಇವುಗಳಿಗೆ ಕ್ರಮವಾಗಿ ಮೂರು, ನಾಲ್ಕು ಹಾಗೂ ಐದನೇ ಸ್ಥಾನವಿದೆ.

ಫೇಸ್ ಬುಕ್ ನಿಂದ ಬಿಡುವು ತಗೊಂಡರೆ ಮನಸಿಗೆ ಮುದವಂತೆ!ಫೇಸ್ ಬುಕ್ ನಿಂದ ಬಿಡುವು ತಗೊಂಡರೆ ಮನಸಿಗೆ ಮುದವಂತೆ!

ದಕ್ಷಿಣ ಭಾರತ ಹೊರತುಪಡಿಸಿ ಇರುವ ಏಕೈಕ ನಗರ ಅಂದರೆ ಪುಣೆ. ಭಾರತದಲ್ಲಿ ಜೀವಿಸಲು ಯೋಗ್ಯವಾದ ಎರಡನೇ ಅತ್ಯುತ್ತಮ ನಗರ ಎಂಬ ಶ್ರೇಯ ಪುಣೆಗಿದೆ. ಅಂದಹಾಗೆ ಗುಣಮಟ್ಟದ ಜೀವನವನ್ನು ಅಳೆಯಲು ಖರೀದಿ ಶಕ್ತಿ, ಮಾಲಿನ್ಯ, ಆಸ್ತಿ ಮೌಲ್ಯ ಹಾಗೂ ಆದಾಯ ಪ್ರಮಾಣ, ಸುರಕ್ಷತೆ, ಆರೋಗ್ಯ ಕಾಳಜಿ, ಸಂಚಾರ ಸಮಯ ಹಾಗೂ ಹವಾಮಾನವನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ.

ಇನ್ನು ವಿಶ್ವದಲ್ಲೇ ಜೀವಿಸಲು ಯೋಗ್ಯವಾದ ಅತ್ಯುತ್ತಮ ನಗರದ ಪಟ್ಟಿಯಲ್ಲಿ ಮೊದಲ ಸ್ಥಾನ ನ್ಯೂಜಿಲ್ಯಾಂಡ್ ನ ರಾಜಧಾನಿ ವೆಲ್ಲಿಂಗ್ಟನ್ ಗೆ ಸಲ್ಲುತ್ತದೆ. ಆ ನಂತರದ ಸ್ಥಾನದಲ್ಲಿ ಆಸ್ಟ್ರೇಲಿಯಾದ ಕ್ಯಾನ್ ಬೆರಾ ಇದೆ.

ಭಾರತದಲ್ಲಿ ಜೀವಿಸಲು ಯೋಗ್ಯವಾದ ಅತ್ಯುತ್ತಮ ನಗರಗಳು

ಭಾರತದಲ್ಲಿ ಜೀವಿಸಲು ಯೋಗ್ಯವಾದ ಅತ್ಯುತ್ತಮ ನಗರಗಳು

1. ಮಂಗಳೂರು (ವಿಶ್ವ ಪಟ್ಟಿಯಲ್ಲಿ 25ನೇ ಸ್ಥಾನ), 2. ಕೊಯಂಬತ್ತೂರ್ (130ನೇ ಸ್ಥಾನ), 3. ಅಹ್ಮದಾಬಾದ್ (156ನೇ ಸ್ಥಾನ), 4. ಪುಣೆ (ವಿಶ್ವ ಪಟ್ಟಿಯಲ್ಲಿ 164ನೇ ಸ್ಥಾನ), 5. ಕೋಲ್ಕತ್ತಾ (166 ನೇ ಸ್ಥಾನ), 6. ಹೈದರಾಬಾದ್ (168ನೇ ಸ್ಥಾನ), 7. ಚೆನ್ನೈ (170ನೇ ಸ್ಥಾನ), 8. ಬೆಂಗಳೂರು (173ನೇ ಸ್ಥಾನ), 9. ಮುಂಬೈ (177ನೇ ಸ್ಥಾನ), 10. ಗುರ್ ಗ್ರಾಮ್ (182ನೇ ಸ್ಥಾನ), 11. ದೆಹಲಿ (185ನೇ ಸ್ಥಾನ).

ಸುರಕ್ಷತಾ ದೃಷ್ಟಿಯಿಂದ ಭಾರತದ ಅತ್ಯುತ್ತಮ ನಗರಗಳು

ಸುರಕ್ಷತಾ ದೃಷ್ಟಿಯಿಂದ ಭಾರತದ ಅತ್ಯುತ್ತಮ ನಗರಗಳು

1. ಮಂಗಳೂರು (ವಿಶ್ವ ಪಟ್ಟಿಯಲ್ಲಿ 22ನೇ ಸ್ಥಾನ), 2. ಹೈದರಾಬಾದ್ (77ನೇ ಸ್ಥಾನ), 3. ಅಹ್ಮದಾಬಾದ್ (85ನೇ ಸ್ಥಾನ), 4. ಕೊಯಂಬತ್ತೂರ್ (90ನೇ ಸ್ಥಾನ), 5. ಚೆನ್ನೈ (94ನೇ ಸ್ಥಾನ), 6. ಪುಣೆ (ವಿಶ್ವ ಪಟ್ಟಿಯಲ್ಲಿ 97ನೇ ಸ್ಥಾನ), 7. ಮುಂಬೈ (108ನೇ ಸ್ಥಾನ) 8. ಬೆಂಗಳೂರು (130ನೇ ಸ್ಥಾನ), 9. ಕೋಲ್ಕತ್ತಾ (136ನೇ ಸ್ಥಾನ), 10. ದೆಹಲಿ (162ನೇ ಸ್ಥಾನ), 11. ಗುರ್ ಗ್ರಾಮ್ (173ನೇ ಸ್ಥಾನ).

ಕಡಿಮೆ ಮಾಲಿನ್ಯದ ನಗರಗಳ ಸ್ಥಾನ ಮಾನ

ಕಡಿಮೆ ಮಾಲಿನ್ಯದ ನಗರಗಳ ಸ್ಥಾನ ಮಾನ

1. ಮಂಗಳೂರು (ವಿಶ್ವ ಪಟ್ಟಿಯಲ್ಲಿ 22ನೇ ಸ್ಥಾನ), 2. ಹೈದರಾಬಾದ್ (77ನೇ ಸ್ಥಾನ), 3. ಅಹ್ಮದಾಬಾದ್ (85ನೇ ಸ್ಥಾನ), 4. ಕೊಯಂಬತ್ತೂರ್ (90ನೇ ಸ್ಥಾನ), 5. ಚೆನ್ನೈ (94ನೇ ಸ್ಥಾನ), 6. ಪುಣೆ (ವಿಶ್ವ ಪಟ್ಟಿಯಲ್ಲಿ 97ನೇ ಸ್ಥಾನ), 7. ಮುಂಬೈ (108ನೇ ಸ್ಥಾನ) 8. ಬೆಂಗಳೂರು (130ನೇ ಸ್ಥಾನ), 9. ಕೋಲ್ಕತ್ತಾ (136ನೇ ಸ್ಥಾನ), 10. ದೆಹಲಿ (162ನೇ ಸ್ಥಾನ), 11. ಗುರ್ ಗ್ರಾಮ್ (173ನೇ ಸ್ಥಾನ).

ಉತ್ತಮ ಸಂಚಾರ ವ್ಯವಸ್ಥೆ

ಉತ್ತಮ ಸಂಚಾರ ವ್ಯವಸ್ಥೆ

1. ಮಂಗಳೂರು (ವಿಶ್ವ ಪಟ್ಟಿಯಲ್ಲಿ 70ನೇ ಸ್ಥಾನ), 2. ಅಹ್ಮದಾಬಾದ್ (125ನೇ ಸ್ಥಾನ), 3. ಹೈದರಾಬಾದ್ (138ನೇ ಸ್ಥಾನ), 4.ಗುರ್ ಗ್ರಾಮ್ (142ನೇ ಸ್ಥಾನ), 5. ಚೆನ್ನೈ (143ನೇ ಸ್ಥಾನ), 6. ಪುಣೆ (164ನೇ ಸ್ಥಾನ), 7. ಕೊಯಂಬತ್ತೂರ್ (171ನೇ ಸ್ಥಾನ), 8. ಬೆಂಗಳೂರು (176ನೇ ಸ್ಥಾನ), 9. ದೆಹಲಿ (179ನೇ ಸ್ಥಾನ), 10. ಮುಂಬೈ (187ನೇ ಸ್ಥಾನ), 11. ಕೋಲ್ಕತ್ತಾ (189ನೇ ಸ್ಥಾನ).

ಆಸ್ತಿ ಮೌಲ್ಯ ಹಾಗೂ ಆದಾಯ ಪ್ರಮಾಣ

ಆಸ್ತಿ ಮೌಲ್ಯ ಹಾಗೂ ಆದಾಯ ಪ್ರಮಾಣ

1. ಮಂಗಳೂರು (ವಿಶ್ವ ಪಟ್ಟಿಯಲ್ಲಿ 42ನೇ ಸ್ಥಾನ), 2. ಹೈದರಾಬಾದ್ (66ನೇ ಸ್ಥಾನ), 3. ಗುರ್ ಗ್ರಾಮ್ (68ನೇ ಸ್ಥಾನ), 4. ಬೆಂಗಳೂರು (75 ನೇ ಸ್ಥಾನ), 5. ಅಹ್ಮದಾಬಾದ್ (77ನೇ ಸ್ಥಾನ), 6. ಪುಣೆ (80ನೇ ಸ್ಥಾನ), 7. ಕೊಯಂಬತ್ತೂರ್ (96ನೇ ಸ್ಥಾನ) , 8. ಚೆನ್ನೈ (122ನೇ ಸ್ಥಾನ), 9. ಕೋಲ್ಕತ್ತಾ (136ನೇ ಸ್ಥಾನ), 10. ದೆಹಲಿ (151ನೇ ಸ್ಥಾನ) , 11. ಮುಂಬೈ (184ನೇ ಸ್ಥಾನ).

English summary
The Chennai vs Bengaluru debate is as old as time, and so far, the loyalists of the two cities haven’t been able to convincingly settle that one. But a new study shows we need to ditch the debate really, and move to Mangaluru instead!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X