ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜೆಟ್ 2021: ಭಾರತೀಯ ಬಾಹ್ಯಾಕಾಶ ಇಲಾಖೆಗೆ ಭರ್ಜರಿ ಅನುದಾನ

|
Google Oneindia Kannada News

ನವದೆಹಲಿ, ಫೆಬ್ರವರಿ 01: ಕೇಂದ್ರ ಬಾಹ್ಯಾಕಾಶ ಇಲಾಖೆಗೆ ಕೇಂದ್ರ ಸರ್ಕಾರ ಈ ಬಾರಿ ಭರ್ಜರಿ ಸಿಹಿಸುದ್ದಿ: ನೀಡಿದೆ. ಕಳೆದ ಬಾರಿಗಿಂತ ಸುಮಾರು 4,500 ಕೋಟಿ ಹೆಚ್ಚುವರಿ ಅನುದಾನವನ್ನು ಈ ಬಾರಿ ಬಜೆಟ್‌ನಲ್ಲಿ ನೀಡಲಾಗಿದೆ.

ಒಟ್ಟಾರೆ ಬಾಹ್ಯಾಕಾಶ ಇಲಾಖೆಗೆ 13,949 ಕೋಟಿ ನೀಡಲಾಗಿದ್ದು, ಅದರಲ್ಲಿ 8,228 ಕೋಟಿ ರೂ.ಇಲಾಖೆಗೆ ಸಂಪೂರ್ಣ ಅಭಿವೃದ್ಧಿ ಮೊತ್ತವೇ ಆಗಿರಲಿದೆ.ಈ ಬಾರಿಯ ಬಜೆಟ್‌ನಲ್ಲಿ 4,449 ಕೋಟಿ ರೂ ಅಧಿಕ ಹಣ ನೀಡಲಾಗಿದೆ.

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದ ಐತಿಹಾಸಿಕ ಬಜೆಟ್ ಮಂಡನೆ!ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದ ಐತಿಹಾಸಿಕ ಬಜೆಟ್ ಮಂಡನೆ!

ಇದರಲ್ಲಿ ಹೊಸದಾಗಿ ಆರಂಭಿಸಿರುವ ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್‌ಗೆ 700 ಕೋಟಿ ರೂ, ನೀಡಲಾಗಿದೆ.ಈ ಹೊಸ ಸಾರ್ವಜನಿಕ ಸ್ವಾಮ್ಯದ ಉದ್ದಿಮೆಯು ಪಿಎಸ್‌ಎಲ್‌ವಿ ಸಿಎಸ್ 51 ಉಡಾವಣಾ ವಾಹನದಲ್ಲಿ ಬ್ರೆಜಿಲ್‌ನ ಅಮೆಜೋನಿಯಾ ಹಾಗೂ ಭಾರತದ ಇತರೆ ಸಣ್ಣ ಉಪಗ್ರಹಗಳನ್ನು ಕರೆದೊಯ್ಯಲಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

In 2021 Budget Department Of Space Allocated Rs 13,949 Crore

ಕಳೆದ ವರ್ಷ ಬಾಹ್ಯಾಕಾಶ ಇಲಾಖೆಗೆ 13479 ಕೋಟಿ ರೂ. ನೀಡಿದ್ದರು. ಪರ್ಯಾಲೋಚನೆ ಬಳಿಕ ಅದನ್ನು 9500 ಕೋಟಿಗೆ ಇಳಿಸಲಾಗಿತ್ತು. 2019-20ರಲ್ಲಿ ಇದು 13017.61ಕೋಟಿಯಾಗಿತ್ತು.

ಭಾರತದ ಮೊದಲ ಗಗನಯಾನ 2021ರ ಡಿಸೆಂಬರ್‌ನಲ್ಲಿ ನಡೆಯಲಿದೆ ಎಂದು ಇದೇ ಸಂದರ್ಭದಲ್ಲಿ ಘೋಷಿಸಿದ್ದಾರೆ.ಇದು ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆಯಬೇಕಿತ್ತು ಆದರೆ ಕೊರೊನಾದಿಂದಾಗಿ ಮುಂದೂಡಲಾಗಿತ್ತು.

English summary
After A Steep cut last year, the Department of space has been alloted Rs 13,949 crore in this Budget.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X