ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ 2020ರಲ್ಲಿ ಕೊರೊನಾ ಕಾರಣದಿಂದ 1.60 ಲಕ್ಷ ಸಾವು

|
Google Oneindia Kannada News

ನವದೆಹಲಿ ಮೇ 26: ಕೋವಿಡ್-19 ಕಾರಣದಿಂದ 2020ರಲ್ಲಿ ದೇಶದಲ್ಲಿ ಒಟ್ಟು 1,60,618 ಮಂದಿ ಮೃತಪಟ್ಟಿದ್ದಾರೆ. ದೇಶದಲ್ಲಿ ದಾಖಲಾದ ಒಟ್ಟು 18.11 ಲಕ್ಷ ವೈದ್ಯಕೀಯ ಪ್ರಮಾಣೀಕೃತ ಸಾವುಗಳಲ್ಲಿ ಶೇ.8.9 ಪ್ರತಿಶತ ಸಾವು ಕೊರೊನಾ ಕಾರಣದಿಂದ ಸಂಭವಿಸಿದೆ.

ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ(ಆರ್ ಜಿಐ) ಕಚೇರಿ ಬುಧವಾರ ಬಿಡುಗಡೆಗೊಳಿಸಿದ ಸಾವಿನ ಕಾರಣದ ವೈದ್ಯಕೀಯ ಪ್ರಮಾಣೀಕರಣ-2020 ವರದಿಯಲ್ಲಿ ಇದು ಬಹಿರಂಗಗೊಂಡಿದೆ.

ಕಡಿಮೆಯಾಗಿಲ್ಲ ಕೊರೊನಾ: ಭಾರತದಲ್ಲಿ ಓಮಿಕ್ರಾನ್ ಬಿಎ.4, ಬಿಎ.5 ಉಪ-ತಳಿ ಪ್ರಕರಣ ಪತ್ತೆ! ಕಡಿಮೆಯಾಗಿಲ್ಲ ಕೊರೊನಾ: ಭಾರತದಲ್ಲಿ ಓಮಿಕ್ರಾನ್ ಬಿಎ.4, ಬಿಎ.5 ಉಪ-ತಳಿ ಪ್ರಕರಣ ಪತ್ತೆ!

ದೇಶದಲ್ಲಿ ಅತಿ ಹೆಚ್ಚು ಮಂದಿ ರಕ್ತಪರಿಚಲನಾ ವ್ಯವಸ್ಥೆಯ ರೋಗದಿಂದಾಗಿ ಮೃತಪಟ್ಟಿದ್ದಾರೆ. ವೈದ್ಯಕೀಯವಾಗಿ ಪ್ರಮಾಣೀಕರಿಸಿದ ಸಾವುಗಳ ಪೈಕಿ ಶೇ.32.1 ಪ್ರತಿಶತ ಸಾವುಗಳು ಈ ಕಾರಣದಿಂದ ಸಂಭವಿಸಿದೆ. 2020ರಲ್ಲಿ ದೇಶದಲ್ಲಿ ವೈದ್ಯಕೀಯವಾಗಿ ಪ್ರಮಾಣೀಕರಿಸಿದ ಸಾವುಗಳ ಪೈಕಿ ನಾಲ್ಕನೇ ಅತಿ ಹೆಚ್ಚು ಸಾವುಗಳು ಕೋವಿಡ್-19 ಕಾರಣದಿಂದ ಸಂಭವಿಸಿದೆ.

ಕೊರೊನಾ ಪ್ರಕರಣ ಹೆಚ್ಚಳ; ಭಾರತಕ್ಕೆ ತೆರಳಲು ಸೌದಿ ನಿರ್ಬಂಧ ಕೊರೊನಾ ಪ್ರಕರಣ ಹೆಚ್ಚಳ; ಭಾರತಕ್ಕೆ ತೆರಳಲು ಸೌದಿ ನಿರ್ಬಂಧ

 ಸಪ್ತ ರಾಜ್ಯಗಳಲ್ಲಿ ಎರಡನೇ ಅತಿ ಹೆಚ್ಚು ಸಾವು

ಸಪ್ತ ರಾಜ್ಯಗಳಲ್ಲಿ ಎರಡನೇ ಅತಿ ಹೆಚ್ಚು ಸಾವು

ಏಳು ರಾಜ್ಯಗಳಲ್ಲಿ ವೈದ್ಯಕೀಯವಾಗಿ ಪ್ರಮಾಣೀಕರಿಸಿದ ಸಾವುಗಳ ಪೈಕಿ ಎರಡನೇ ಅತಿ ಹೆಚ್ಚು ಸಾವುಗಳು ಕೊರೊನಾ ಕಾರಣದಿಂದ ಸಂಭವಿಸಿದೆ. ಮಹಾರಾಷ್ಟ್ರದಲ್ಲಿ ಶೇ.17.7 ಪ್ರತಿಶತ, ಮಣಿಪುರ ಶೇ. 15.7, ಉತ್ತರ ಪ್ರದೇಶ ಶೇ. 15, ಹಿಮಾಚಲ ಪ್ರದೇಶ ಶೇ. 13.5, ಆಂಧ್ರ ಪ್ರದೇಶ ಶೇ. 12, ಪಂಜಾಬ್ ಶೇ. 11.9 ಮತ್ತು ಜಾರ್ಖಂಡ್ ಶೇ. 7.6 ಪ್ರತಿಶತ ಸಾವುಗಳಿಗೆ ಕೋವಿಡ್-19 ಕಾರಣವಾಗಿದೆ.

 ಕೋವಿಡ್ ನಿಂದ 1.60 ಲಕ್ಷ ಮಂದಿ ಮರಣ

ಕೋವಿಡ್ ನಿಂದ 1.60 ಲಕ್ಷ ಮಂದಿ ಮರಣ

ವರದಿಯ ಪ್ರಕಾರ 2020ರಲ್ಲಿ ವೈದ್ಯಕೀಯವಾಗಿ ಪ್ರಮಾಣೀಕರಿಸಿದ ಕೊರೊನಾ ಸಾವಿನ ಸಂಖ್ಯೆ 1,60,618 ಇದೆ. ಆದರೆ ಇದು 2020ರಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ಘೋಷಿಸಿದ ಕೋವಿಡ್ ಸಾವಿನ ಸಂಖ್ಯೆಗಿಂತಲೂ ಹೆಚ್ಚಿದೆ. 2020ರಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ಕೋವಿಡ್ ಕಾರಣದಿಂದ ದೇಶದಲ್ಲಿ 1,48,994 ಮಂದಿ ಮೃತಪಟ್ಟಿದ್ದಾರೆ ಎಂದು ಘೋಷಿಸಿತ್ತು.

 ಭಾರತದಲ್ಲಿ 5,24,507 ಕೋವಿಡ್ ಸಾವು:

ಭಾರತದಲ್ಲಿ 5,24,507 ಕೋವಿಡ್ ಸಾವು:

ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ-ಅಂಶಗಳ ಪ್ರಕಾರ, ಕೊರೊನಾ ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ 2022ರ ಮೇ 25ರವರೆಗೆ ಭಾರತದಲ್ಲಿ 5,24,507 ಕೋವಿಡ್ ಸಾವುಗಳು ದಾಖಲಾಗಿದೆ. ಕೋವಿಡ್ ಸಾಂಕ್ರಾಮಿಕ ರೋಗ ಎಲ್ಲೆಡೆ ಹರಡಿದ ನಂತರ 2020ರಲ್ಲಿ ಮಾಹಿತಿ ಸಂಗ್ರಹಕ್ಕಾಗಿ ಸಾವಿನ ಕಾರಣದ ವೈದ್ಯಕೀಯ ಪ್ರಮಾಣೀಕರಣ-2020 ವರದಿಯಲ್ಲಿ ಪ್ರತ್ಯೇಕವಾಗಿ ಕೋವಿಡ್-19 ಕಾಲಂ ಸೇರಿಸಲಾಯಿ

 21,905 ಪ್ರಕರಣಗಳಲ್ಲಿ ವೈರಸ್ ಗುರುತಿಸಿಲ್ಲ

21,905 ಪ್ರಕರಣಗಳಲ್ಲಿ ವೈರಸ್ ಗುರುತಿಸಿಲ್ಲ

ಇದರಲ್ಲಿ ಕೋವಿಡ್ ಸಾವುಗಳನ್ನು ಎರಡು ಉಪ ಶೀರ್ಷಿಕೆಗಳ ಅಡಿಯಲ್ಲಿ ವರದಿ ಮಾಡಲಾಗಿದೆ. ಈ ಪೈಕಿ ಒಂದನ್ನು 'ವೈರಸ್ ಗುರುತಿಸಲಾಗಿದೆ' ಎಂಬ ಕೋಡ್ ಅನ್ನು 'ಪ್ರಯೋಗಾಲಯದ ಪರೀಕ್ಷೆಯಿಂದ ದೃಢೀಕರಿಸಿದ ಕೋವಿಡ್-19 ನ ರೋಗ ನಿರ್ಣಯ'ಕ್ಕೆ ನಿಗದಿಪಡಿಸಲಾಗಿದೆ. ಎರಡನೆಯದರಲ್ಲಿ 'ವೈರಸ್ ಗುರುತಿಸಲಾಗಿಲ್ಲ' ಎಂಬ ಕೋಡ್ ಅನ್ನು 'ಕೋವಿಡ್-19 ನ ಕ್ಲಿನಿಕಲ್ ಅಥವಾ ಎಪಿಡೆಮಿಯೋಲಾಜಿಕಲ್ ರೋಗನಿರ್ಣಯಕ್ಕೆ ನಿಯೋಜಿಸಲಾಗಿದೆ. ಇಲ್ಲಿ ಪ್ರಯೋಗಾಲಯದ ದೃಢೀಕರಣವು ಅನಿರ್ದಿಷ್ಟವಾಗಿದೆ ಅಥವಾ ಲಭ್ಯವಾಗಿಲ್ಲ' ಎಂದು ನಮೂದಿಸಲಾಗಿದೆ. 1,60,618 ಕೊರೊನಾ ಸಾವುಗಳ ಪೈಕಿ, 1,38,713 ಸಾವುಗಳಲ್ಲಿ ಕೋವಿಡ್ ವೈರಸ್ ಗುರುತಿಸಲಾಗಿದೆ. ಉಳಿದ 21,905 ಸಾವಿನ ಪ್ರಕರಣಗಳಲ್ಲಿ ವೈರಸ್ ಗುರುತಿಸಲಾಗಿಲ್ಲ.

 ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಕೊರೊನಾ ಸಾವು

ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಕೊರೊನಾ ಸಾವು

2020ರಲ್ಲಿ ದೇಶದಲ್ಲಿ ಸಂಭವಿಸಿದ ಕೊರೊನಾ ಸಾವುಗಳ ಪೈಕಿ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಅಂದರೆ 61,212 ಮಂದಿ ಮೃತಪಟ್ಟಿದ್ದಾರೆ. ನಂತರದ ಸ್ಥಾನದಲ್ಲಿ ಉತ್ತರ ಪ್ರದೇಶದಲ್ಲಿ 16,489 ಸಾವುಗಳು, ಕರ್ನಾಟಕದಲ್ಲಿ 15,476 ಸಾವುಗಳು, ಆಂಧ್ರ ಪ್ರದೇಶದಲ್ಲಿ 12,193 ಸಾವುಗಳು ಹಾಗೂ ದೆಹಲಿಯಲ್ಲಿ 8,744 ಸಾವುಗಳು ಸಂಭವಿಸಿದೆ. ಅರುಣಾಚಲ ಪ್ರದೇಶದಲ್ಲಿ ಹಾಗೂ ಲಕ್ಷದೀಪದಲ್ಲಿ 2020ರಲ್ಲಿ ಒಂದು ಸಾವು ಕೂಡ ಸಂಭವಿಸಿಲ್ಲ.

English summary
In 2020, Covid 2nd major killer in seven states: Registrar General of India's certified death data.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X